ಮಿಥುನ ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮಿಥುನ ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ನೋಡೋಣ ಅಗಸ್ಟ್ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಏನು ಫಲ ಸಿಗುತ್ತಿದೆ ಏನು ಪ್ರಯೋಜನ ಇದೆ ಏನು ಲಾಭ ಇದೆ ಯಾವ ಎಚ್ಚರಿಕೆ ಇದೆ ಎನ್ನುವ ವಿಚಾರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಸಂಚಿಕೆಯನ್ನು ಸಂಪೂರ್ಣವಾಗಿ ಓದಿ ಮಿಥುನ ರಾಶಿಯ ಜನ್ಮ ನಕ್ಷತ್ರಗಳು ಮೃಗಶಿರ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ ಆರಿದ್ರ ನಕ್ಷತ್ರದ ನಾಲ್ಕು ಚರಣಗಳು ಪುನರ್ವಸು ನಕ್ಷತ್ರದ ಮೂರು ಚರಣಗಳು ಸೇರಿ ಆಗಿರುವಂತಹ ಮಿಥುನ ರಾಶಿಯಾಗಿದೆ

ಮಿಥುನ ರಾಶಿಗೆ ಮಿತ್ರ ರಾಶಿಗಳು ಮೇಷ ಸಿಂಹ ತುಲಾ ಕನ್ಯಾ ರಾಶಿ ಆದರೆ ಕಟಕ ರಾಶಿ ಶತ್ರುರಾಶಿಯಾಗಿದೆ ಮಿಥುನ ರಾಶಿಯವರು ಕರುಣಾಮಯಿಗಳು ದಯಾಮಣಿ ಗಳು ಸಹಾಯ ಮಾಡುವಂತಹ ಮನಸ್ಥಿತಿ ಇರುವವರು ಇಂತಹ ಮಿಥುನ ರಾಶಿಯವರಿಗೆ ಈ ಅಗಸ್ಟ್ ತಿಂಗಳಲ್ಲಿ ಇವರಿಗೆ ಒಂದು ಜವಾಬ್ದಾರಿ ಇರುತ್ತದೆ ಕೆಲವೊಂದಿಷ್ಟು ಜನರಿಗೆ ಮನೆಯ ಜವಾಬ್ದಾರಿ ಕೆಲವೊಂದಿಷ್ಟು ಜನರಿಗೆ ಸಮಾಜದ ಜವಾಬ್ದಾರಿ ಕೆಲವೊಂದಿಷ್ಟು ಜನರಿಗೆ ಸಂಸ್ಥೆಯ ಜವಾಬ್ದಾರಿ ಈ ರೀತಿಯಾಗಿ ಒಂದಿಲ್ಲೊಂದು ಮುಖ್ಯವಾದ ಹುದ್ದೆಯಲ್ಲಿ ಇರುತ್ತಾರೆ ನೀವು ಅತ್ಯಂತ ಮುಖ್ಯವಾದ ವ್ಯವಸ್ಥೆಯಲ್ಲಿ ಇರುತ್ತೀರ ನಿಮ್ಮದೇ ಆದಂತಹ ಒಂದಿಷ್ಟು ಕಮಿಟ್ಮೆಂಟ್ ಇರುತ್ತವೆ

ನಿಮ್ಮದೇ ಆಗಿರುವಂತಹ ಕೆಲಸಗಳು ಇರುತ್ತವೆ ಇಂತಹ ಜವಾಬ್ದಾರಿಯನ್ನು ನಾನು ಸಮರ್ಥ ವಾಗಿ ಎದುರಿಸಬೇಕು ಸರಿಯಾಗಿ ಯಶಸ್ವಿಯಾಗಿ ತೆಗೆದುಕೊಂಡು ಹೋಗಬೇಕು ಅನ್ನುವುದು ನಿಮ್ಮ ಧ್ಯೇಯ ಆಗಿರುತ್ತದೆ ಅವರವರ ಸ್ಥಾನಕ್ಕೆ ತಕ್ಕಂತೆ ಅವರಿಗೆ ಅವರದೇ ಆದಂತ ಜವಾಬ್ದಾರಿ ಇರುತ್ತದೆ ಆದರೆ ಆ ಜವಾಬ್ದಾರಿಯನ್ನು ನೀವು ಬಹಳ ಯಶಸ್ವಿಯಾಗಿ ನಿರ್ವಹಿಸುತ್ತೀರಾ ನೀವು ಮಾಡುವಂತ ಕೆಲಸ ಕಾರ್ಯಗಳಲ್ಲಿ ನಿಮ್ಮ ಯೋಜನೆಗಳಲ್ಲಿ ನಿಮ್ಮಪ್ಲಾನ್ ಪ್ರಕಾರ ನಿಮಗೆ ಸಕ್ಸಸ್ ಸಿಗುತ್ತದೆ ಇದೊಂದು ಒಳ್ಳೆಯ ಫಲ ಅಂತ ಹೇಳಬಹುದು ಹಣಕಾಸಿಗೆ ಯಾವುದೇ ತೊಂದರೆ ಇಲ್ಲ ಯಾವುದಾದರೂ

ಒಂದು ರೂಪದಲ್ಲಿ ದುಡ್ಡು ಬರುತ್ತಾ ಇರುತ್ತದೆ ನಿಮ್ಮ ದುಡಿಮೆಗೆ ತಕ್ಕ ಫಲ ಸಿಗುತ್ತದೆ ನಿಮ್ಮ ಕುಟುಂಬದಲ್ಲಿ ಬಹಳಷ್ಟು ಶಾಂತಿ ನೆಮ್ಮದಿ ಕಂಡುಬರುತ್ತದೆ ಸಂಸಾರದಲ್ಲಿ ಸಾಮರಸ್ಯ ಇರುತ್ತದೆ ಒಬ್ಬರ ಕಷ್ಟ ಒಬ್ಬರು ಅರಿತುಕೊಂಡು ನಡೆಯುತ್ತೀರಾ ಪ್ರೇಮಿಗಳು ಕೂಡ ತುಂಬಾ ಹೊಂದಾಣಿಕೆಯಿಂದ ಜೀವನ ಮಾಡುತ್ತೀರಾ ವಿಶೇಷವಾಗಿ ವಿದ್ಯಾರ್ಥಿಗಳಿಗೆ ನೀವು ಪ್ರಯತ್ನ ಪಟ್ಟರೆ ಖಂಡಿತ ಒಳ್ಳೆಯ ಫಲ ಸಿಗುತ್ತದೆ ದೊಡ್ಡ ಯಶಸ್ಸು ಸಿಗುವ ಸಾಧ್ಯತೆ ಇರುತ್ತದೆ ರಿಸರ್ಚ್ ಮಾಡುತ್ತಾ ಇರುವವರೆಗೂ ಕೂಡ ತುಂಬಾ ಒಳ್ಳೆಯ ಫಲ ಸಿಗುತ್ತದೆ ಜೊತೆಗೆ ಬೇಡದೆ ಇರುವಂತಹ ಯಾವುದೇ ಕೆಲಸಕ್ಕೂ ಕೈ ಹಾಕಬಾರದು

ನಿಮಗೆ ಅವಶ್ಯಕತೆ ಇರುವ ಕೆಲಸಕ್ಕೆ ಮಾತ್ರ ನಿಮ್ಮ ಚಿತ್ತ ಇರಬೇಕು ನೀವು ಯಾವುದೇ ಹುದ್ದೆಯಲ್ಲಿರಿ ಯಾವುದೇ ಕೆಲಸದಲ್ಲಿರಿ ನಿಮ್ಮ ಗಮನವನ್ನು ಕೇಂದ್ರೀಕರಿಸಿ ಇಟ್ಟುಕೊಳ್ಳಿ ಇದರಿಂದ ಒಳ್ಳೆಯದಾಗುತ್ತದೆ ಕೆಲವೊಂದಿಷ್ಟು ಅನವಶ್ಯಕವಾಗಿರುವ ವಿಷಯಗಳಿಗೆ ತಲೆಹಾಕಲು ಹೋಗಬಾರದು ನಿಮ್ಮದಲ್ಲದ ತಪ್ಪಿಗೆ ನೀವು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಜನಗಳ ವಿಷಯದಲ್ಲಿ ಹಾಗೂ ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಬಹು ಎಚ್ಚರಿಕೆಯಿಂದ ಹೆಜ್ಜೆ ಇಡಿ

ಇದರಿಂದ ನಿಮ್ಮ ಜೀವನದಲ್ಲಿ ಬಹಳ ಯಶಸ್ಸನ್ನು ಕಾಣುತ್ತೀರಾ ಜೊತೆಗೆ ರಿಸ್ಕ್ ಆಗಿರುವ ಕೆಲಸಗಳು ವ್ಯವಹಾರಗಳು ವ್ಯಾಪಾರಗಳನ್ನು ಮಾಡಬೇಡಿ ಸಾಹಸಮಯವಾಗಿರುವಂತಹ ಕೆಲಸಗಳು ಇಂತಹ ಕೆಲಸಗಳನ್ನು ಮಾಡಬೇಡಿ ಶಕ್ತಿಯನ್ನು ಮೀರಿ ದುಡ್ಡನ್ನು ಹಾಕುವುದಕ್ಕೆ ಹೋಗಬೇಡಿ ಹಾಗೆ ಮಾಡಿದಾಗ ಮಾತ್ರ ನೀವು ಸುರಕ್ಷಿತವಾಗಿರುತ್ತೀರಿ ಇದನ್ನು ಎಚ್ಚರಿಕೆ ರೀತಿಯಲ್ಲಿ ತೆಗೆದುಕೊಳ್ಳಿ ಉತ್ತಮ ಆದಾಯ ಇದ್ದರೂ ಕೂಡ ಹಣಕಾಸಿನ ವಿಚಾರದಲ್ಲಿ ಲಂಗು ಲಗಾಮಿ ಇಲ್ಲದೆ ಖರ್ಚಾಗುತ್ತಿದೆ ಹಾಗಾಗಿ ಇದಕ್ಕೆ ಸಾಧ್ಯವಾದಷ್ಟು ಕಡಿವಾಣ ಹಾಕಬೇಕು ಅವಶ್ಯಕತೆ ಎಷ್ಟಿದೆಯೋ ಅಷ್ಟು ಖರ್ಚು ಮಾಡಿ ಅನವಶ್ಯಕ ಖರ್ಚು

ಬೇಡ ಭೋಗದ ವಸ್ತುಗಳ ಖರೀದಿ ಬೇಡ ಸಾಲ ಸೂಲ ಮಾಡಿ ಇಂತಹ ವಸ್ತುಗಳನ್ನು ಖರೀದಿ ಮಾಡಬೇಡಿ ಇದಕ್ಕೆ ಕಡಿವಾಣ ಹಾಕಿದ್ದೆ ಆದರೆ ಖಂಡಿತ ಒಳ್ಳೆಯ ರಿಸಲ್ಟ್ ಸಿಗುತ್ತದೆ ಹಾಗೆ ನಿಮ್ಮ ಪತಿ ಅಥವಾ ನಿಮ್ಮ ಪತ್ನಿಯ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಅನುಕೂಲತೆಗಳು ಕಂಡುಬರುತ್ತವೆ ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ಹೋಗುವಂತ ಸಾಧ್ಯತೆ ಇದೆ ಆದಾಯಕ್ಕೆ ತಕ್ಕಂತೆ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ವಾಹನ ವ್ಯಾಪಾರ ವಹಿವಾಟು ಮಾಡುವವರಿಗೆ ವಿಶೇಷವಾಗಿ ಹೂಡಿಕೆ ಮಾಡುವವರಿಗೆ ಬಹಳಷ್ಟು ಅನುಕೂಲತೆಗಳು ಕಂಡುಬರುತ್ತವೆ ಸರ್ಕಾರಿ ಹಾಗೂ ಅರೆ ಸರ್ಕಾರಿ ಯಲ್ಲಿ ಇರುವಂತಹ ವ್ಯಕ್ತಿಗಳು ಇವರಿಗೆ ಜವಾಬ್ದಾರಿ ಸಿಕ್ಕಾಪಟ್ಟೆ ಇರುತ್ತದೆ ಜನ ನೀವು ತಪ್ಪು ಮಾಡುವುದನ್ನು ಕಾಯ್ತಾ ಇರ್ತಾರೆ ಹಾಗಾಗಿ

ನಿಮ್ಮ ಕೆಲಸದ ಕಡೆ ಹೆಚ್ಚು ಗಮನವನ್ನು ಕೊಟ್ಟು ನಿಮ್ಮ ಕೆಲಸ ಮಾಡಿ ಇದರಿಂದ ಒಳ್ಳೆಯ ಫಲ ನಿಮ್ಮದಾಗುತ್ತದೆ ಹಾಗೆ ಉದ್ಯೋಗದ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ ರಾಜಕಾರಣಿಗಳಿಗೆ ಬಹಳ ಉತ್ತಮವಾದ ಫಲ ಕಂಡುಬರುತ್ತದೆ ಒಟ್ಟಾರೆಯಾಗಿ ನಿಮಗೆ ಒಳ್ಳೆಯ ಫಲ ಇದೆ ಆದರೆ ಒಂದಿಷ್ಟು ಎಚ್ಚರಿಕೆಗಳು ಕೂಡ ಇದೆ ಈ ಎಚ್ಚರಿಕೆಗಳಿಗೆ ಪರಿಹಾರ ಏನೆಂದರೆ ಈ ತಿಂಗಳಲ್ಲಿ ಅಶ್ವತವೃಕ್ಷಕ್ಕೆ ಪ್ರದಕ್ಷಣೆ ಹಾಕುವಂತಹ ಪ್ರಯತ್ನ ಮಾಡಿ ಬಹಳ ಮುಖ್ಯವಾಗಿ ಮಾಡುವಂಥದ್ದು ಏನೆಂದರೆ ಆಂಜನೇಯ ಸ್ತೋತ್ರವನ್ನು ಪಠಣ ಮಾಡುವಂತದ್ದು ಶಿವ ಸಹಸ್ರನಾಮವನ್ನು ಪಠಣ ಮಾಡುವಂಥ ಪ್ರಯತ್ನ ಮಾಡಿ ಜೊತೆಗೆ ಪಶು ಪಕ್ಷಿಗಳಿಗೆ ಅನ್ನ ಆಹಾರವನ್ನು ನೀಡಿ ಇದರಿಂದ ಖಂಡಿತವಾಗಿ ನಿಮ್ಮ ಜೀವನದಲ್ಲಿ ಯಶಸ್ಸು ಸುಖ ಸಮೃದ್ಧಿ ನೆಮ್ಮದಿ ನೆಲೆಸುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment