ನಾವು ಈ ಲೇಖನದಲ್ಲಿ ಮನೆಯ ಮುಖ್ಯ ದ್ವಾರದ ಹತ್ತಿರ ಈ ವಸ್ತುಗಳನ್ನು ಇಟ್ಟರೆ ಬಡತನ ಖಚಿತ ಎಂಬ ಮಾಹಿತಿಯ ಬಗ್ಗೆ ತಿಳಿಯೋಣ . ಮನೆಯ ಮುಖ್ಯ ದ್ವಾರದ ಹತ್ತಿರ ಈ ವಸ್ತುಗಳನ್ನು ಇಡಲೇ ಬಾರದು. ಇಟ್ಟರೆ ವಾಸ್ತುದೋಷ ಉಂಟಾಗುತ್ತದೆ , ಎಂಬ ಕುತೂಹಲಕಾರಿ ವಿಷಯಗಳನ್ನು ನಾವು ಈ ಲೇಖನದಲ್ಲಿ ನೋಡೊಣ .
ಮನೆ ಮುಖ್ಯ ದ್ವಾರದ ಬಗ್ಗೆ ಯಾವ ವಸ್ತುಗಳನ್ನು ಇಡುವುದರಿಂದ , ವಾಸ್ತುದೋಷ ಉಂಟಾಗುತ್ತದೆ ಅಂತ
ಹೇಳಬಹುದು .
ಪ್ರತಿಯೊಬ್ಬರ ಜೀವನದಲ್ಲೂ ಕೆಲವೊಂದು ಆಸೆಗಳು ಇದ್ದೇ ಇರುತ್ತದೆ . ಅದರಂತೆ ಜೀವನದಲ್ಲಿ ಖುಷಿಯಾಗಿ ಇರೋದಕ್ಕೆ ಏನೆಲ್ಲ ಪ್ರಯತ್ನ ಮಾಡುತ್ತೇವೆ. ಪ್ರತಿಯೊಬ್ಬರಿಗೂ ತಾವು ವಾಸಿಸುವ ಮನೆ ಹೀಗೆ ಇರಬೇಕು , ಅಂತ ನೂರಾರು ಕನಸುಗಳು ಇರುತ್ತವೆ . ತಾವು ವಾಸಿಸುವ ಮನೆ ಸ್ವಂತದ್ದೇ ಆಗಿರಲಿ ಬಾಡಿಗೆಯದೇ ಆಗಿರಲಿ ಆ ಮನೆಯಲ್ಲಿ ಸುಖ ಶಾಂತಿಯಿಂದ ಇರೋದಕ್ಕೆ ಎಲ್ಲರೂ ಬಯಸುತ್ತಾರೆ .
ಮುಖ್ಯ ದ್ವಾರವು ಮನೆಯ ಮುಖ್ಯ ಅಂಗವಾಗಿರುತ್ತದೆ .ಇಡೀ ಮನೆಯ ಸುಖ ಶಾಂತಿ ನೆಮ್ಮದಿ ಮನೆಯ ಮುಖ್ಯ ದ್ವಾರಕ್ಕೂ ಸಂಬಂಧಪಟ್ಟಿರುತ್ತದೆ .ಅದು ಹೇಗೆ ಅಂತೀರಾ ನಾವು ದಿನಕ್ಕೆ 10 ಬಾರಿ ಮನೆಯಿಂದ ಒಳಗೆ ಹೊರಗೆ ಓಡಾಡುತ್ತಾ ಇರ್ತೀವಿ. ಆಗ ಕೆಲವೊಂದು ನಕಾರಾತ್ಮಕ ಶಕ್ತಿಗಳು ನಮ್ಮ ಮನೆಯನ್ನ ಪ್ರವೇಶ ಮಾಡ ಬಹುದು . ಅಲ್ಲದೆ ಮನೆಯ ಅಶಾಂತಿಗೂ ಕಾರಣವಾಗಬಹುದು . ಮನೆಯಲ್ಲಿ ಸದಾ ಕಿತ್ತಾಟ ವೈ ಮನಸ್ಸಿಗೆ ಏನೋ ಕಿರಿಕಿರಿ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹಾಗಾದ್ರೆ ಮುಖ್ಯ ದ್ವಾರದ ಬಳಿ ನಾವು ಏನೆಲ್ಲ ಮಾಡಿದರೆ, ಇಂತಹ ತೊಂದರೆಗಳಿಂದ ದೂರ ಇರಬಹುದು ಅಂತ ನೋಡೋಣ . ಮೊದಲಿಗೆ ನಿಮ್ಮ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಏಕೆಂದರೆ ನಮ್ಮ ಮನೆಯ ಸುತ್ತಲೂ ಋಣಾತ್ಮಕ ಮತ್ತು ಧನಾತ್ಮಕ ಶಕ್ತಿ ಇರುತ್ತದೆ . ಇವುಗಳನ್ನು ಬದಲಾಯಿಸುವುದಕ್ಕೆ ಆಗುವುದಿಲ್ಲ .ನಾವು ಮನೆಯ ಹೊರಗೆ ಒಳಗೆ ಓಡಾಡುವುದರಿಂದ ಈ ಋಣಾತ್ಮಕ ಶಕ್ತಿಗಳು ಹಾಗೂ ಧನಾತ್ಮಕ ಶಕ್ತಿಗಳು ನಮ್ಮ ಮನೆಯನ್ನು ಪ್ರವೇಶ ಮಾಡುತ್ತದೆ .
ಆದ್ದರಿಂದ ನಮ್ಮ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ,.ನಿಮ್ಮ ಭಾಗ್ಯದ ಉದಯ ಆಗುತ್ತದೆ . ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಒಂದು ವೇಳೆ ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಕಪ್ಪು ಬಣ್ಣ ಹಚ್ಚಿದರೆ ನಿಮ್ಮ ಭಾಗ್ಯ ಉದಯ ವಾಗುವುದಿಲ್ಲ . ಮನೆಗೆ ಬರುವ ಖುಷಿ ಬರದಂತೆ ವಾಪಸ್ ಹೋಗುತ್ತದೆ .ಆದ್ದರಿಂದ ಮನೆಯ ಮುಖ್ಯ ದ್ವಾರಕ್ಕೆ ಯಾವುದೇ ಕಾರಣಕ್ಕೂ ಕಪ್ಪು ಬಣ್ಣವನ್ನು ಹಚ್ಚಬಾರದು . ಅಲ್ಲದೇ ಮನೆಯ ಮುಖ್ಯ ದ್ವಾರವು ತುಂಬಾ ಪ್ರಕಾಶ ಮಾನವಾಗಿರಬೇಕು .
ಅಂದರೆ ಮನೆಯ ಮುಂದೆ ಸೂರ್ಯನ ಬೆಳಕು ಚೆನ್ನಾಗಿ ಬೀಳುತ್ತಾ ಇರಬೇಕು .ಹೀಗೆ ಸೂರ್ಯನ ಕಿರಣಗಳು ಮನೆಯನ್ನು ಪ್ರವೇಶ ಮಾಡುವಂತೆ ಇರಬೇಕು .ಸೂರ್ಯನ ಕಿರಣಗಳು ಮನೆಯನ್ನು ಪ್ರವೇಶ ಮಾಡುವುದರಿಂದ ಮನೆಯಲ್ಲಿ ಯಾವುದೇ ತರಹದ ರೋಗ – ರುಜಿನಗಳು ನಮ್ಮ ಹತ್ತಿರಕ್ಕೂ ಕೂಡ ಸುಳಿಯುವುದಿಲ್ಲ . ಅಲ್ಲದೆ ಮನೆಗೆ ಋಣಾತ್ಮಕ ಶಕ್ತಿಗಳು ಕೂಡ ಪ್ರವೇಶ ಮಾಡುವುದಿಲ್ಲ .ಮನೆಯ ಮುಖ್ಯ ದ್ವಾರಕ್ಕೆ ಬಿಳಿಯ ಬಣ್ಣದ ಬಲ್ಬ್ ಗಳನ್ನು ಮಾತ್ರ ಹಾಕಬೇಕು .
ಬಣ್ಣ ಬಣ್ಣದ ಬಲ್ಬ್ ಳನ್ನು ಹಾಕಬಾರದು. ಹಾಕಿದರೆ ಮನೆ ಮುಖ್ಯ ದ್ವಾರದಿಂದ ದುಷ್ಟಶಕ್ತಿಗಳು ಪ್ರವೇಶ ಮಾಡುತ್ತವೆ. ಅಲ್ಲದೇ ಮನೆಯಲ್ಲಿ ಹಣದ ಅರಿವು ಕೂಡ ಕಡಿಮೆಯಾಗುತ್ತದೆ . ಪ್ರತಿ ದಿನ ಸ್ನಾನ ಮಾಡಿದ ನಂತರ ಮನೆಯ ಮುಖ್ಯದ್ವಾರದ ಹೊಸ್ತಿಲಿನ ಪೂಜೆಯನ್ನು ಮಾಡಬೇಕು . ಅಂದರೆ ಹೊಸ್ತಿಲನ್ನು ಶುದ್ಧವಾದ ನೀರಿನಿಂದ ತೊಳೆದು ಅದಕ್ಕೆ ಅರಿಶಿನ ಕುಂಕುಮ ಹಚ್ಚಿ ಗೆಜ್ಜೆ ವಸ್ತ್ರ ಹೂವನ್ನು ಧರಿಸಿ ಗಂಧದ ಕಡ್ಡಿಯಿಂದ ಬೆಳಗಬೇಕು .ಹೀಗೆ ಪ್ರತಿದಿನ ಮಾಡುವುದರಿಂದ ಲಕ್ಷ್ಮಿ ಕೃಪೆಗೆ ಒಳಗಾಗುತ್ತೀರಿ ,
ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ನಿಮ್ಮ ಮನೆಯ ಮುಖ್ಯದ್ವಾರದ ಎದುರು ತುಳಸಿ ಗಿಡವನ್ನು ಇಡಬೇಕು . ಅಂದರೆ ತುಳಿಸಿ ವಿಷ್ಣು ಪ್ರಿಯೆ ಕೃಷ್ಣನ ಮಡದಿ .ಹೀಗಾಗಿ ತುಳಸಿಯ ಮದುವೆಯನ್ನು ನಾವು ಕಾರ್ತಿಕ ಮಾಸದಲ್ಲಿ ಮನೆ ಮನೆಯಲ್ಲಿ ಮಾಡುತ್ತೇವೆ. ವೈಜ್ಞಾನಿಕವಾಗಿ ಹೇಳಬೇಕು ಎಂದರೆ ತುಳಸಿ ದಿನದ 24 ಗಂಟೆಯೂ ಕೂಡ ತುಳಸಿ, ಆಮ್ಲಜನಕವನ್ನು ನೀಡುತ್ತದೆ .ಇದರಿಂದ ಮನೆಯ ಸುತ್ತಮುತ್ತಲಿನ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗಿರುತ್ತದೆ .
ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಹತ್ತಿರ ಕೂಡ ಬರುವುದಿಲ್ಲ .ಯಾವ ಮನೆಯಲ್ಲಿ ತುಳಸಿ ಪೂಜೆ ಪ್ರತಿನಿತ್ಯ ಮಾಡಲಾಗುತ್ತೆ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ .ಮನೆಯಲ್ಲಿ ಕಷ್ಟಗಳಿಗೆ ಜಾಗವೇ ಇರುವುದಿಲ್ಲ ಎಂದು ಹೇಳಲಾಗಿದೆ .ಬೆಳಿಗ್ಗೆ ಎದ್ದ ತಕ್ಷಣ ಮನೆಯ ಸ್ತ್ರೀ ಆಗಿರಲಿ ಅಥವಾ ಮನೆಯ ಯಜಮಾನ ಆಗಿರಲಿ ಮನೆಯ ಮುಖ್ಯದ್ವಾರ ತೆಗೆದು ನಂತರ ಅದಕ್ಕೆ ನಮಸ್ಕಾರವನ್ನು ಮಾಡಿ .ಒಂದು ಲೋಟ ನೀರಿಗೆ ಸ್ವಲ್ಪ ಅರಿಶಿನ ಪುಡಿ ಸೇರಿಸಿ ಹೊಸ್ತಿಲನ್ನು ತೊಳೆಯಬೇಕು .
ಸ್ನಾನ ಮಾಡದೆ ಇದ್ದ ತಕ್ಷಣ ಮಾಡಬೇಕು . ಹೀಗೆ ಮಾಡುವುದರಿಂದ ಎಷ್ಟೋ ವರ್ಷಗಳಿಂದ ಕಾಡುತ್ತಿದ್ದ ನಿಮ್ಮ ಕಷ್ಟಗಳು ಕಡಿಮೆಯಾಗುತ್ತಾ ಬರುತ್ತದೆ .ಅಲ್ಲದೆ ಮನೆಯಲ್ಲಿ ಹಣದ ಅರಿವು ಹೆಚ್ಚಾಗುತ್ತದೆ. ಮನೆಯ ಮುಖ್ಯದ್ವಾರದ ಮುಂದೆ ಪ್ರತಿದಿನ ರಂಗೋಲಿಯನ್ನು ಬಿಡಿಸಬೇಕು .ರಂಗೋಲಿ ಹಾಕುವುದಕ್ಕೆ ಬರದೇ ಇರುವವರು ಸ್ವಸ್ತಿಕ್ ಚಿಹ್ನೆಯನ್ನು ಬಳಸಿದರೆ ಇನ್ನೂ ಒಳ್ಳೆಯದು. ನಮ್ಮ ಹಿರಿಯರು ಹಿಂದೆ ಮನೆಯ ಮುಂದೆ ಗುಡಿಸಿ ಸಾರಿಸಿ ರಂಗೋಲಿ ಹಾಕಿದ ಮೇಲೆ ಮನೆಯಿಂದ ಹೊರಡುತ್ತಿದ್ದರು .
ಇದರಿಂದ ಹೊರಗಡೆ ಹೋಗುವ ನಿಮಗೆ ಯಾವುದೇ ರೀತಿಯ ಅಡೆತಡೆಗಳು ಬರದೆ ಸುರಕ್ಷಿತವಾಗಿ ಬಂದು ಮನೆಯನ್ನ ತಲುಪುತ್ತೀರಿ ಎಂಬ ಒಂದು ನಂಬಿಕೆ ಇತ್ತು .ಪ್ರತಿದಿನ ಮನೆಯ ಮುಂದೆ ರಂಗೋಲಿ ಹಾಕುವುದರಿಂದ ನಿಮ್ಮ ಮನೆಯಲ್ಲಿರುವ ಎಲ್ಲಾ ಕಷ್ಟಗಳು ನಿವಾರಣೆ ಆಗುವುದಲ್ಲದೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ .ಇದನ್ನ 40 ದಿನಗಳ ಕಾಲ ನಿರಂತರವಾಗಿ ಮಾಡಿದರೆ ನಿಮಗೆ ಗೊತ್ತಿಲ್ಲದ ರೀತಿ ನಿಮ್ಮ ಮನೆಯಲ್ಲಿ ಬದಲಾವಣೆಗಳು ಆಗುತ್ತದೆ.
ಇನ್ನು ನಿಮ್ಮ ಮನೆಯ ಮುಖ್ಯ ದ್ವಾರವನ್ನು ಎಷ್ಟು ಸಾಧ್ಯವೊ ಅಷ್ಟು ಅಲಂಕಾರವನ್ನು ಮಾಡುತ್ತಿರಬೇಕು . ನಾವು ಹಬ್ಬ ಹರಿದಿನಗಳು ಬಂದಾಗ ಮಾತ್ರ ಮನೆಯನ್ನು ಮತ್ತು ಮುಖ್ಯ ದ್ವಾರವನ್ನು ಅಲಂಕಾರ ಮಾಡುತ್ತೇವೆ.ಹೀಗೆ ಮಾಡದೆ ಪ್ರತಿನಿತ್ಯ ಮಾಡಬೇಕು. ಮಾವಿನ ಎಲೆಯನ್ನು ತೆಗೆದುಕೊಂಡು ಬಂದು ಅದರಿಂದ ತೋರಣ ಮಾಡಿ ಕಟ್ಟಬೇಕು .ಪ್ರತಿದಿನ ಕಟ್ಟುವುದರಿಂದ ನಿಮ್ಮ ಭಾಗ್ಯ ಉದಯಿಸುವುದು ಅಲ್ಲದೆ ಮನೆಯ ಋಣಾತ್ಮಕ ಶಕ್ತಿಯು ದೂರವಾಗುತ್ತದೆ .
ಮನೆಯ ಮುಖ್ಯದ್ವಾರದ ಬಳಿ ಕೆಂಪು ಬಣ್ಣದ ಮ್ಯಾಟ್ ಗಳನ್ನು ಹಾಕಬೇಕು .ಕಪ್ಪು ಬಣ್ಣದ ಮ್ಯಾಟ್ ಗಳನ್ನು ಯಾವತ್ತಿಗೂ ಹಾಕಬಾರದು .ಯಾಕೆಂದರೆ ಕಪ್ಪು ಬಣ್ಣ ಶನಿಯ ಬಣ್ಣ ಆಗಿರುವುದರಿಂದ ಶನಿಯ ಕೆಟ್ಟ ದೃಷ್ಟಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದರಿಂದ ಶನಿ ಕಾಟವು ಜಾಸ್ತಿ ಆಗಬಹುದು . ಇನ್ನೊಂದು ಕಾರಣವೇನೆಂದರೆ , ಕಪ್ಪು ಬಣ್ಣದ ಮ್ಯಾಟ್ ಗಳನ್ನು ಹಾಕುವುದರಿಂದ ಧೂಳು ಎದ್ದು ಕಾಣುತ್ತದೆ .ಅದಕ್ಕಾಗಿಯೇ ಕಪ್ಪು ಬಣ್ಣದ ಮ್ಯಾಟ್‌ಗಳನ್ನು ಹಾಕಬಾರದು .
ಮನೆಯಲ್ಲಿ ಹಲವಾರು ಹಬ್ಬಗಳನ್ನು ಆಚರಿಸುತ್ತೇವೆ. ಮನೆಯ ಮುಖ್ಯ ದ್ವಾರಕ್ಕೆ ಹಬ್ಬಗಳಲ್ಲಿ ಹೂಗಳಿಂದ ಅಥವಾ ಎಲೆಗಳಿಂದ ಅಲಂಕಾರ ಮಾಡುವುದು ಸಹಜ. ಆದರೆ ಹಬ್ಬ ಮುಗಿದ ನಂತರ ಅವುಗಳನ್ನು ತೆಗೆಯಲು ಮರೆತು ಬಿಡುತ್ತೇವೆ .ಅವುಗಳು ಒಣಗಿದರು ಸಹ ಅಲ್ಲಿಂದ ನೀವು ತೆಗೆಯಲು ಮರೆತು ಬಿಡಬಹುದು .ಮನೆಗೆ ಲಕ್ಷ್ಮೀ ದೇವಿಯು ಪ್ರವೇಶ ಮಾಡಲು ತಡೆ ಉಂಟಾಗುತ್ತದೆ ಅಂತ ಶಾಸ್ತಗಳಲ್ಲಿ ಹೇಳಲಾಗಿದೆ.
ಲಕ್ಷ್ಮಿ ದೇವಿ ನಮ್ಮ ಮನೆಗೆ ಬರುವುದಿಲ್ಲ .ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರು ಕೂಡ ಅದರಲ್ಲಿ ಯಾವುದೇ ಲಾಭ ಸಿಗುವುದಿಲ್ಲ. ಬದಲಿಗೆ ಖರ್ಚು ಹೆಚ್ಚಾಗುತ್ತದೆ.ಆದ್ದರಿಂದ ಒಣಗಿದ ಹೂಗಳನ್ನು ಮತ್ತು ಎಲೆಗಳನ್ನು ಮುಖ್ಯದ್ವಾರದ ಬಳಿ ಹೆಚ್ಚು ದಿನ ಬಿಡಬೇಡಿ .ಆದಷ್ಟು ಬೇಗ ಹಬ್ಬ ಮುಗಿದ ತಕ್ಷಣ ತೆಗೆದು ಹಾಕಿ .ನಾವು ಹೇಳಿದ ಹಾಗೆ ಮನೆ ಮುಖ್ಯ ದ್ವಾರದ ಬಳಿ ಇಂಥ ವಸ್ತುಗಳನ್ನು ಇಡಬಾರದು ಇಟ್ಟರೆ ವಾಸ್ತುದೋಷ ಉಂಟಾಗುತ್ತದೆ ಎಂದು ಹೇಳಲಾಗಿದೆ