ನಾವು ಈ ಲೇಖನದಲ್ಲಿ ನಮ್ಮ ಕೋರಿಕೆ ಏನೇ ಇರಲಿ ಈ ಸಮಯದಲ್ಲಿ ಬೇಡಿಕೊಂಡರೆ 100% ಬೇಗನೆ ಹೇಗೆ ಈಡೇರುತ್ತದೆ ಎಂದು ತಿಳಿಯೋಣ . ಯಾವ ಸಮಯದಲ್ಲಿ ಸರಿಯಾಗಿ ಬೇಡಿಕೊಳ್ಳಬೇಕು ಎಂಬ ಸರಳ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ . ನಿರ್ಧಾರಗಳನ್ನು ಮಾಡಿಕೊಳ್ಳದೆ ಯಾವುದೇ ಕೆಲಸವನ್ನು ಮಾಡಿದರೆ ಅದು ಖಂಡಿತವಾಗಿಯೂ ನೆರವೇರುವುದಿಲ್ಲ .
ನಾವು ಯಾವುದೇ ಕೆಲಸವನ್ನು ಪ್ರಾರಂಭ ಮಾಡಿಕೊಳ್ಳಬೇಕು ಎಂದರೆ ಸರಿಯಾದ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ . ಮೊದಲಿಗೆ ನೀವು ಒಂದು ಪುಸ್ತಕವನ್ನು ಇಡಬೇಕು .ಆ ಪುಸ್ತಕಕ್ಕೆ ಒಂದು ಹೆಸರನ್ನು ಕೊಟ್ಟು , ನಿಮ್ಮ ಗೆಳತಿ ಎಂದು ತಿಳಿಯಬೇಕು . ಈ ವರ್ಷದಲ್ಲಿ ಮಾಡಬೇಕಾದ ಕೆಲಸಗಳನ್ನು ಅದನ್ನು ಆ ಪುಸ್ತಕದಲ್ಲಿ ಬರೆದುಕೊಳ್ಳಿ . ನಿಮ್ಮ ಆಸೆಗಳು ಏನು ಇರುತ್ತದೆಯೋ ಅದನ್ನು ಪುಸ್ತಕದಲ್ಲಿ ಬರೆದುಕೊಳ್ಳಿ .
ಐದು ಕೆಲಸಗಳು ಇದ್ದರೆ ಅದಕ್ಕೆ ಒಂದೊಂದು ನಂಬರ್ ಗಳನ್ನು ನೀಡಬೇಕು .
ನಿಮ್ಮ ಕೆಲಸ ಮುಗಿದು ಊಟ ಮಾಡಿದ ನಂತರ ಮಲಗುವ ಮುಂಚೆ , ನೀವು ಬರೆದಿಟ್ಟಿರುವ ಕೆಲಸಗಳನ್ನು ದೃಢೀಕರಣ ಮಾಡಬೇಕು . ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಮಾಡಬೇಕಾಗಿರುವ ಕೆಲಸವನ್ನು ನೆನಪಿಸಿಕೊಳ್ಳಬೇಕು . ಮತ್ತು ಎಷ್ಟು ದಿನದಲ್ಲಿ ಅದನ್ನು ಮುಗಿಸಿ ಬಿಡಬೇಕು ಎಂಬುದನ್ನು ಅರ್ಥೈಸಿಕೊಳ್ಳಬೇಕು . ನೀವು ಹಣವನ್ನು ಯಾರಿಗಾದರೂ ಕೊಟ್ಟಿದ್ದರೆ ಈ ಸಮಯದಲ್ಲಿ ಬಂದರೆ ತುಂಬಾ ಒಳ್ಳೆಯದು ಎಂದು ಕೇಳಿಕೊಳ್ಳಬೇಕು . ನಿಮ್ಮ ಸಮಸ್ಯೆಗಳು ಚಿಕ್ಕದಾಗಿದ್ದರೆ ಅದು ಬೇಗನೆ ಈಡೇರುತ್ತದೆ .
21 ದಿನ ಈ ರೀತಿ ಮಾಡುವುದರಿಂದ ನೀವು ಕಳೆದುಕೊಂಡಿರುವ ಹಣ ನಿಮ್ಮ ಕೈ ಸೇರುತ್ತದೆ . ನಾವು ಅಂದು ಕೊಂಡಿರದ ರೀತಿಯಲ್ಲಿ ನಮ್ಮ ಹಣವನ್ನು ಸೇರುತ್ತದೆ . ಇದನ್ನು ಒಂದು ನಂಬಿಕೆಯಿಂದ ಮಾಡಬೇಕು . ಯಾವುದೇ ಕೆಲಸ ಆಗಿದ್ದರು ಈ ಒಂದು ಅಫರ್ಮೇಷನ್ ಅನ್ನುವ ಪ್ರಯತ್ನ ಮಾಡಬಹುದು . ಈ ರೀತಿ ನೆನೆಸಿಕೊಂಡು ಧ್ಯಾನ ಮಾಡುವುದರಿಂದ ನಿಮ್ಮ ಕೆಲಸಗಳು 100% ಈಡೇರುತ್ತದೆ ಎಂದು ಹೇಳಲಾಗಿದೆ . ಈ ರೀತಿ ಧ್ಯಾನ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಬೇಗನೆ ಬಗೆಹರಿಯುತ್ತದೆ .
ಆರೋಗ್ಯದ ಸಮಸ್ಯೆ , ಕೋರ್ಟ್ ಕೇಸ್ , ಮಕ್ಕಳ ವಿದ್ಯಾಭ್ಯಾಸ , ಮಕ್ಕಳಿಗೋಸ್ಕರ ಕೂಡ ಪ್ರಾರ್ಥನೆಯನ್ನು ಮಾಡಬಹುದು . ರಾತ್ರಿಯ ಸಮಯದಲ್ಲಿ ಮಾಡುವುದಕ್ಕೆ ಆಗುವುದಿಲ್ಲ ಎಂದರೆ , ಬೆಳಿಗ್ಗೆ ಬೇಗ ಎದ್ದು ಈ ಆಫರ್ಮೇಷನ್ ಮಾಡಬಹುದು . ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ . ಭಗವಂತ ಪ್ರತಿಯೊಂದು ಕೆಲಸವನ್ನು ನಮ್ಮಿಂದಲೇ ಮಾಡಿಸುತ್ತಾರೆ . ಯಾವುದೇ ಸಮಸ್ಯೆಗಳು ಇದ್ದರೂ ಅದು ನಮ್ಮಿಂದಲೇ ಸರಿಪಡಿಸಲಾಗುತ್ತದೆ . ಆ ಪರಿಹಾರದ ದಾರಿಯನ್ನು ನಾವೇ ಹುಡುಕಿಕೊಳ್ಳಬೇಕು .
ನಾವು ಯಾವುದೇ ಆಸೆ ಕನಸು ಕಾಣಲು ಯಾವುದೇ ಹಣ ಕೊಡಬೇಕಾಗಿಲ್ಲ . ನಾವು ಈ ರೀತಿ ಮಾಡುವುದರಿಂದ ನಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ . ನಾವು ಧ್ಯಾನ ಮಾಡುವುದು ಯುನಿವರ್ಸಿಗೆ ಕನೆಕ್ಟ್ ಆಗುವುದರಿಂದ ಅದು ಬೇಗನೆ ನೆರವೇರುತ್ತದೆ ಎಂದು ಹೇಳಲಾಗುತ್ತದೆ . ನಾವು ಧ್ಯಾನ ಮಾಡುವ ಸಮಯದಲ್ಲಿ ನಮ್ಮ ಆಸೆ ಕನಸುಗಳ ಬಗ್ಗೆ ನಾವು ಯೋಚನೆಯನ್ನು ಮಾಡುತ್ತೇವೆ . ನಾವು ಅದನ್ನು ಈ ರೀತಿ ನೆನೆಸಿಕೊಳ್ಳುವುದರಿಂದ ಅದು ಬೇಗ ನೆರವೇರುತ್ತದೆ .
ನಾವು ಒಂದು ದಿನ ಧ್ಯಾನ ಮಾಡುವಾಗ ಏನು ಕೇಳಿಕೊಳ್ಳುತ್ತೇವೆ ಪ್ರತಿ ದಿನ ಅದನ್ನೇ ಕೇಳಿಕೊಳ್ಳಬೇಕು ಬೇರೆ ಬೇರೆ ಕೆಲಸದ ಬಗ್ಗೆ ಕೇಳಿ ಕೊಳ್ಳಬಾರದು . ಇದನ್ನು ಸರಿಯಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು . ನಾವು ಈ ರೀತಿ ನೆನೆಸಿಕೊಂಡು ಮಲಗುವುದರಿಂದ ಅದು ಆದಷ್ಟು ಬೇಗ ನೆರವೇರುವ ಸಾಧ್ಯತೆ ಇರುತ್ತದೆ . ನಾವು ಯಾವಾಗಲೂ ಒಳ್ಳೆಯದನ್ನೇ ಯೋಚನೆ ಮಾಡುತ್ತಾ ನೆನೆಸಿಕೊಂಡರೆ ಯಾವಾಗಲೂ ಒಳ್ಳೆಯದೇ ಆಗುತ್ತದೆ . ಇಲ್ಲೂ ಕೂಡ ಇದೇ ರೀತಿಯಾದ ಲಾಜಿಕ್ಕನ್ನು ಬಳಸಲಾಗಿದೆ .
ನಮಗೆ ಆಗಬೇಕಾದ ಕೆಲಸವನ್ನು ನೆನೆಸಿಕೊಂಡು ಅದೇ ಧ್ಯಾನದಲ್ಲಿ ನಾವು ಇದ್ದರೆ ಅದು ಖಂಡಿತವಾಗಿ ನೆರವೇರುತ್ತದೆ . ನಾವು ಯಾವಾಗಲೂ ಆದಷ್ಟು ಇನ್ನೊಬ್ಬರ ಬಗ್ಗೆ ಯೋಚನೆ ಮಾಡುವುದು ಇನ್ನೊಬ್ಬರ ಬಗ್ಗೆ ಮಾತನಾಡುವುದನ್ನು ಬಿಟ್ಟುಬಿಡಬೇಕು . ನಿಮ್ಮ ಸಮಸ್ಯೆಗಳು ನಿಮ್ಮ ಕೆಲಸದ ಬಗ್ಗೆ ಮಾತ್ರ ಯೋಚನೆ ಮಾಡಬೇಕು .ಆಗ ಖಂಡಿತವಾಗಿ ನೀವು ಬೆಳೆಯಲು ಸಾಧ್ಯವಾಗುತ್ತದೆ . ಈ ರೀತಿಯಾಗಿ ನಿಮ್ಮ ಕೆಲಸಗಳನ್ನು ಪುಸ್ತಕದಲ್ಲಿ ಬರೆದಿಟ್ಟುಕೊಂಡು ಪ್ರತಿದಿನ ಧ್ಯಾನ ಮಾಡುವುದರಿಂದ ಆ ಕೆಲಸಗಳು ಈಡೇರುತ್ತವೆ . ನಿಮಗೆ ಧ್ಯಾನ ಮಾಡಲು ಸಾಧ್ಯವಿಲ್ಲ ಎಂದರೆ ಅದನ್ನು ಪ್ರತಿದಿನ ಪುಸ್ತಕದಲ್ಲಿ ಬರೆಯುತ್ತಾ ಹೋದರು ಕೂಡ
ಆ ಸಮಸ್ಯೆಗಳಿಗೆ ಪರಿಹಾರ . ದೊರೆಯುತ್ತದೆ . ನಿಮ್ಮ ಕೆಲಸಗಳು ಆಗಬೇಕಾದರೆ ಆಗಬೇಕಾದ ಕೆಲಸವನ್ನು ಬೆಳಿಗ್ಗೆ ಮೂರು ಸಲ ಮಧ್ಯಾಹ್ನ ಆರು ಸಲ ಮಲಗುವ ಮುಂಚೆ 9 ಸಲ ಹೀಗೆ ಮಾಡುವುದರಿಂದ , ಅದು ಬೇಗನೆ ನೆರವೇರುತ್ತದೆ . ಹೀಗೆ ಮಾಡುವುದರಿಂದ ಅತಿ ಬೇಗ ನಿಮ್ಮ ಕೋರಿಕೆಗಳು ಈಡೇರುತ್ತದೆ .ಈ ಸರಳವಾದ ಉಪಾಯದಿಂದ ನೀವು ಖಂಡಿತವಾಗಿ ನಿಮ್ಮ ಸಮಸ್ಯೆಯಿಂದ ಬೇಗನೆ ಆಚೆ ಬರಬಹುದು .ಒಳ್ಳೆಯ ವಿಚಾರಗಳನ್ನು ಬೇರೆಯವರಿಂದ ನೋಡಿ ಅನುಸರಿಸುವುದು ಖಂಡಿತವಾಗಿಯೂ ಒಳ್ಳೆಯ ಕೆಲಸ .
ಹಾಗೆಯೇ ಬೆಳಿಗ್ಗೆ ಆದಷ್ಟು ಬೇಗ ಎದ್ದೇಳುವ ಅಭ್ಯಾಸವನ್ನು ಮಾಡಿಕೊಳ್ಳಿ . ಬ್ರಾಹ್ಮಿ ಮುಹೂರ್ತದಲ್ಲಿ ನಾವು ಏನೇ ಕೆಲಸ ಮಾಡಿದರೂ ಅದು 100 ಪರ್ಸೆಂಟ್ ನೆರವೇರುತ್ತದೆ .ನೀವು ಬೆಳಗ್ಗೆ ಸಮಯದಲ್ಲಿ ಧ್ಯಾನ ಮಾಡುವುದರಿಂದ ನೀವು ಅಂದುಕೊಂಡಿರುವ ಕೆಲಸ ಹಾಗೆ ಆಗುತ್ತದೆ .ಆ ಸಮಯದಲ್ಲಿ ಸುತ್ತಮುತ್ತ ನಿಶಬ್ದವಾಗಿ ಇರುವುದರಿಂದ ನೀವು ಕೇಳಿಕೊಳ್ಳುವ ವಿಚಾರ ಯೂನಿವರ್ಸಿಗೆ ಬೇಗ ತಲುಪುತ್ತದೆ .ಹಾಗಾಗಿ ಬೆಳಗಿನ ಜಾವದಲ್ಲಿ ನೀವು ಎದ್ದು ಮಾಡುವುದು ಒಳ್ಳೆಯದು .
ನೀವು ಯಾವಾಗಲೂ ಚಿಕ್ಕ ಕೆಲಸದಿಂದ ದೊಡ್ಡ ಕೆಲಸಕ್ಕೆ ಹೋಗಬೇಕು . ಅಂದರೆ ನಾವು ಕೆಲಸಗಳನ್ನು ಒಂದು ಕಡೆ ಕಲೆ ಹಾಕಿಕೊಂಡು , ಒಂದಾದ ಮೇಲೆ ಒಂದು ಕೆಲಸವನ್ನು ಮಾಡಿ ಮುಗಿಸಬೇಕು . ನಾವು ಯಾವಾಗಲೂ ಸುಲಭದಿಂದ ಕಷ್ಟದ ಕೆಲಸಕ್ಕೆ ಹೋಗಬೇಕು . ನಾವು ಕಷ್ಟದ ಕೆಲಸವನ್ನು ಮೊದಲು ಮಾಡಿದಾಗ ಸುಲಭವಾದ ಕೆಲಸ ಮಾಡುವುದಕ್ಕೆ ಶಕ್ತಿ ಕೂಡ ನಮ್ಮ ಬಳಿ ಇರುವುದಿಲ್ಲ . ಆಗ ಆ ಕೆಲಸ ಹಾಗೆಯೇ ಉಳಿದುಕೊಳ್ಳುತ್ತದೆ . ಅದಕ್ಕಾಗಿ
ಈ ರೀತಿಯಾಗಿ ಬರೆದು ಇಟ್ಟುಕೊಂಡು ಒಂದಾದ ಮೇಲೆ ಒಂದರಂತೆ ಕೆಲಸಗಳನ್ನು ಮಾಡುತ್ತಾ ಹೋಗಬೇಕು . ಈ ಒಂದು ಸಣ್ಣ ಆಫರ್ಮೇಶನ್ ಮಾಡುವುದರಿಂದ ನಮ್ಮ ಜೀವನ ಸುಲಭವಾಗಿ ನಡೆದುಕೊಂಡು ಮುಂದೆ ಸಾಗುತ್ತದೆ ಎಂದು ಹೇಳಬಹುದು . ನಾವು ಇದನ್ನು ರೂಢಿಸಿಕೊಂಡು ಅಥವಾ ಅಳವಡಿಸಿಕೊಂಡು ಹೋಗುವುದರಿಂದ ಸಣ್ಣಪುಟ್ಟ ಸಮಸ್ಯೆಗಳು ಅಲ್ಲಿಯೇ ನಿವಾರಣೆಯಾಗಿ ಜೀವನ ಮುಂದೆ ಚೆನ್ನಾಗಿರುವ ಹಾಗೆ ಮಾಡುತ್ತದೆ . ಇದನ್ನು ನಂಬಿಕೆ ಇಟ್ಟು ಮಾಡಿ 100% ಫಲಿತಾಂಶ ದೊರೆಯುತ್ತದೆ .