ಎಲ್ಲರಿಗೂ ನಮಸ್ಕಾರ, ನೀವು ಬಯಸಿದ ಕನಸುಗಳು ಶೀಘ್ರದಲ್ಲೇ ಈ ಡೇರಬೇಕು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು. ಸಕಲ ಕಾರ್ಯ ಸಿದ್ಧಿ ಗಾಗಿ ವಹಿವಾಟಗಳಲ್ಲಿ ನಷ್ಟ ಅನುಭವಿಸಿದರೆ ಮನೆಯ ಏಳಿಗೆಗಾಗಿ ಈ ಒಂದು ಗಿಡದಿಂದ ಈ ಚಿಕ್ಕ ಕೆಲಸ ಮಾಡಿ ಹೇಗೆ ನಿಮ್ಮ ಮೈ ಯಲ್ಲಿ ಇರುವ ಸಮಸ್ಯೆಗಳು ನಿವಾರಣೆ ಆಗುತ್ತೆ ಅನ್ನುವುದನ್ನು ನೋಡಿ ಈ ಒಂದು ಗಿಡವನ್ನು ಮನೆಯ ಬಲ ಭಾಗದಲ್ಲಿ ಬೆಳೆಸಬೇಕು ಇದರಿಂದ ಮನೆಯ ವಾಸ್ತು ದೋಷ ಇದ್ದರೆ ಕ್ರಮೇಣ ನಿವಾರಣೆಯಾಗುತ್ತದೆ. ಹಾಗೆ ಪುರಾಣಗಳಲ್ಲಿಯೂ ಕೂಡ ಉಲೇಖ ಪಡೆದುಕೊಂಡಿರುವ ಈ ಗಿಡವು ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ನೋಡಿರುತ್ತೀರಿ ಅದೇ ಬಿಳಿ ಎಕ್ಕದ ಗಿಡ.
ಹೌದು ಈ ಬಿಳಿ ಎಕ್ಕದ ಗಿಡದಲ್ಲಿ ಎರಡು ಪ್ರಬೇಧಗಳು ಇದ್ದು ಅದರಲ್ಲಿ ಬಿಳಿ ಎಕ್ಕದ ಗಿಡ ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ. ಸಮುದ್ರ ಮಂಥನ ವೇಳೆ ಸಮುದ್ರದಲ್ಲಿ ವಿಷ ಉಕ್ಕಿ ಬಂತು ಅದನ್ನು ಶಿವನು ಕುಡಿದ ನೀಲ ಕಂಠನಾದ ಆದರೆ ಈ ವಿಷಯದಲ್ಲಿ ಈ ಒಂದು ತೊಟ್ಟು ಶೀರ ಸಮುದ್ರಕ್ಕೆ ಬಿತ್ತು ಅಲ್ಲಿ ಇರುವ ಜಲ ಚರಗಳು ಸತ್ತು ಹೋಗುತ್ತದೆ. ಆಗ ದೇವಾನುದೇವತೆಗಳು ಗಣಪತಿಯ ಮೊರೆ ಹೋಗಿ ಈ ಸಮಸ್ಯೆಯನ್ನು ಬಗೆಹರಿಸಲು ಕೇಳಿಕೋಳ್ಳುತ್ತಾರೆ. ಆಗ ಗಣಪತಿಯೂ ಸುಂಟರ ಗಾಳಿಯನ್ನು ಎಬ್ಬಿಸಿ ಕ್ಷೀರ ಸಮುದ್ರದ ವಿಷವನ್ನು ನೊರೆಯಾಗಿಸಿ ದಡದಲ್ಲಿ ನಿಲ್ಲಿಸುತ್ತಾರೆ.
ಆ ಗಿಡವೇ ಬಿಳಿ ಎಕ್ಕದ ಗಿಡವಾಗಿ ಭೂಮಿ ಮೇಲೆ ಮಹತ್ವದ ಸ್ಥಾನ ಪಡೆದುಕೊಳ್ಳುತ್ತಾರೆ. ಈ ಬಿಳಿ ಎಕ್ಕದ ಗಿಡವನ್ನು ಪೂಜೆ ಮಾಡುತ್ತ ಬರುವುದರಿಂದ ಅಷ್ಟ ಐಶ್ವರ್ಯ ಕಾರ್ಯ ಸಿದ್ಧಿ ಆಗುತ್ತೆ. ಬಿಳಿ ಎಕ್ಕದ ಬೇರಿನಿಂದ ಗಣಪತಿ ಮಾಡಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡುತ್ತ ಬರಬೇಕು ಈ ರೀತಿ ಗಣಪತಿಯನ್ನು ಪೂಜೆ ಮಾಡುತ್ತ ಬರುವುದರಿಂದ ಮನೆಯಲಿನ ಸಮಸ್ಯೆಗಳು ದೂರ ಆಗುತ್ತದೆ. ಆಯುರ್ವೇದಲ್ಲಿ ಯೂ ಕೂಡ ಬಿಳಿ ಎಕ್ಕದ ಗಿಡ ಎಲೆಯ ಪ್ರಯೋಜನ ಹಾಗೂ ಇದರಲ್ಲಿ ಬರುವ ಬಿಳಿ ಹಾಲಿನ ಪ್ರಯೋಜನವನ್ನು ಮಾಡಿಕೋಳಲಾಗುತ್ತದೆ.
ಮೊದಲೇ ಹೇಳಿದಂತೆ ಬಿಳಿ ಎಕ್ಕದ ಗಿಡವನ್ನು ಮನೆಯ ಬಲ ಭಾಗದಲ್ಲಿ ಬೆಳಸಿ ಹಾಗೆ ಈ ಹೂವಿನ ಮಾಲೆಯನ್ನು ಮಂಗಳವಾರ ಮತ್ತು ಶನಿವಾರದಂದು ಆಂಜನೇಯ ಸ್ವಾಮಿ ಹಾಗೂ ಶನಿ ದೇವನಿಗೆ ಅರ್ಪಣೇ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ. ಇನ್ನು ಗಣಪತಿಗೆ ಸಂಕಷ್ಟ ಹರ ಚತುರ್ಥಿಯ ದಿವಸ ಈ ಬಿಳಿ ಎಕ್ಕದ ಗಿಡವನ್ನು ಸಮರ್ಪಣೆ ಮಾಡಬೇಕು ಇದರಿಂದ ನಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ. ಗಣಪತಿ ಗೆ ತುಂಬಾ ಪ್ರಿಯವಾದದ್ದು ಬಿಳಿ ಎಕ್ಕದ ಗಿಡ. ಬಿಳಿ ಎಕ್ಕದ ಗಿಡದ ಹೂವಿನಿಂದ ಗಣಪತಿಯನ್ನು ಪೂಜೆ ಮಾಡುತ್ತ ಬಂದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಜೈ ಗಣೇಶ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.