ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಒಳ್ಳೆಯ ಅಭ್ಯಾಸಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಿ.
1) ತಮ್ಮ ಶಕ್ತಿ ಇರುವಷ್ಟು ಮಾತ್ರ ಕೆಲಸ ಮಾಡಬೇಕು ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು.
2) ತನ್ನ ವಯಸ್ಸಿಗೆ ತಕ್ಕಂತೆ ಯೋಗ ವ್ಯಾಯಾಮವನ್ನು ಮಾಡಬೇಕು. 3) ರಾತ್ರಿಯ ವೇಳೆಯಲ್ಲಿ ಕರಗಿದ ಕಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. 4) ಮಲಗುವ ಕೋಣೆಯೊಳಗೆ ಯಥೇಚ್ಛವಾಗಿ ಗಾಳಿ ಮತ್ತು ಬೆಳಕು ಬರುವಂತಿರಬೇಕು.
5) ಹೊರಗಿನ ಆಹಾರ ಸೇವನೆಯಿಂದ ಶರೀರಕ್ಕೆ ಯಾವುದೇ ಪೋಷಕಾಂಶ ದೊರಕುವುದಿಲ್ಲ ಆದರೆ ಶರೀರದ ತೂಕ ಹೆಚ್ಚುತ್ತದೆ. 6) ಆಹಾರ ಸೇವಿಸುವಾಗ ನಿರಾಳ ಮನಸ್ಥಿತಿಯಿಂದ ಇರಬೇಕು. 7) ಆಲ್ಕೋಹಾಲ್ ಸೇವನೆಯನ್ನು ತ್ಯಜಿಸುವುದು ಉತ್ತಮ ಇಲ್ಲದಿದ್ದರೆ ಇದು ನಿಮ್ಮ ಜೀವನವನ್ನೇ ಹಾಳು ಮಾಡಿಬಿಡುತ್ತದೆ.
8) ಹುಳಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಾರದು. 9) ಆಹಾರದಲ್ಲಿ ಹಸಿರು ತರಕಾರಿ ಹಾಗೂ ಹಣ್ಣುಗಳ ಸೇವನೆ ಮಾಡುವುದು ಒಳ್ಳೆಯದು.
10) ಆತಂಕ ಕಡಿಮೆ ಮಾಡುವ ಮಾತ್ರೆಗಳು ಮತ್ತು ನಿದ್ರೆ ಮಾತ್ರೆಗಳ ಸೇವನೆ ಎಂದಿಗೂ ಮಾಡಬಾರದು. 11) ಕೋಪ ತಾಪಗಳನ್ನು ದೂರ ಮಾಡಿಕೊಳ್ಳಿ ಶಾಂತಿಯನ್ನು ಕಾಪಾಡಿಕೊಳ್ಳಿ 12) ಪ್ರತಿನಿತ್ಯ ಹಲ್ಲು ವಸಡು ನಾಲಿಗೆಗಳನ್ನ ಶುಭ್ರವಾಗಿ ಇಟ್ಟುಕೊಳ್ಳಿ 13) ನೆಟ್ಟಗೆ ನಿಲ್ಲಬೇಕು ನೆಟ್ಟಗೆ ಕುಳಿತುಕೊಳ್ಳಬೇಕು ನೆಟ್ಟಗೆ ನಡೆಯಬೇಕು ಯಾವ ಕಾರಣಕ್ಕೂ ಬಗ್ಗಬಾರದು ಕುಣಿದಾಡಿ ನಡೆಯಬಾರದು ಆತ್ಮವಿಶ್ವಾಸದಿಂದ ಇರಬೇಕು. 14) ಯಾವುದೇ ಆಹಾರವನ್ನು ಅತಿಯಾಗಿ ಸೇವಿಸಬಾರದು.
15) ಪ್ರತಿದಿನವೂ ಕ್ರಮವಾಗಿ ಮಲವಿಸರ್ಜನೆ ಆಗುವಂತೆ ನೋಡಿಕೊಳ್ಳಬೇಕು. 16) ಮನವಿಸರ್ಜನೆ ಮಾಡುವಾಗ ಇಂಡಿಯನ್ ಟಾಯ್ಲೆಟ್ ಬಳಸಿ ಇಂಡಿಯನ್ ಟಾಯ್ಲೆಟ್ ಬಳಸುವುದು ಉತ್ತಮ ಮತ್ತು ಒಳ್ಳೆಯ ಅಭ್ಯಾಸ.
17) ದಿನಕ್ಕೆ ಒಂದು ಬಾರಿ ಸಾಯಂಕಾಲ ಹೊರಗಡೆ ಶುದ್ಧವಾದ ಗಾಳಿಯಲ್ಲಿ ತೇಲಾಡಬೇಕು ಅಥವಾ ನಡೆಯಬೇಕು.
18) ಪ್ರತಿನಿತ್ಯ ಗಂಧಕ ಕರ್ಪೂರ ತುಳಸಿ ಗಿಡ ಧೂಪ ಶ್ರೀಗಂಧ ಅಥವಾ ಬೇವಿನ ಕಡ್ಡಿಯಿಂದ ಮನೆಯಲ್ಲಿ ಹೊಗೆ ಹಾಕಿ ಗಾಳಿಯನ್ನು ಶುದ್ಧ ವಾಗುವಂತೆ ಮಾಡಬೇಕು ಇದರಿಂದ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ ಅದು ಇದ್ದರೂ ಕೂಡ ಹೊರಗೆ ಹೋಗುತ್ತದೆ.
19) ಮೆದುಳು ತನ್ನ ಕ್ರಿಯಾಶಕ್ತಿಯನ್ನು ಕಳೆದುಕೊಳ್ಳುವ ಯಾವುದೇ ಮಾದಕ ವಸ್ತುಗಳನ್ನು ಉಪಯೋಗಿಸಬಾರದು.
20) ನಿದ್ದೆ ಮಾತ್ರೆಯನ್ನು ಉಪಯೋಗಿಸಿದರೆ ಲಕ್ವ ಹೊಡೆಯುವ ಸಾಧ್ಯತೆ ಇರುತ್ತದೆ 21) ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿಗಳನ್ನು ಉಪಯೋಗಿಸಬಾರದು 22) ವಾರಕ್ಕೆ ಒಂದು ದಿನ ಉಪವಾಸ ಮಾಡುವುದನ್ನು ರೂಢಿಯಾಗಿ ಇಟ್ಟುಕೊಳ್ಳಬೇಕು
23) ತಮ್ಮ ಶರೀರಕ್ಕೆ ತೊಂದರೆ ಕೊಡುವ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನಬಾರದು 24) ಹಸ್ತ ಮೈದುನದ ಚಟ ಒಳ್ಳೆಯದಲ್ಲ ಅತಿಯಾದರೆ ಅದು ನಿಮ್ಮ ಮುಖದ ಕಾಂತಿ ಶರೀರದಲ್ಲಿನ ಶಕ್ತಿ ದೇಹದ ತೂಕ ಕೂದಲು ಉದರುವಿಕೆ ಇದೆಲ್ಲದಕ್ಕೂ ಅತಿ ದೊಡ್ಡ ಕಾರಣವಾಗಬಹುದು. 25) ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಚಹಾ ಕುಡಿಯುವುದನ್ನು ನಿಲ್ಲಿಸಿ
26) ದಿನಕ್ಕೆ ಎರಡು ವೇಳೆ ಆಹಾರವನ್ನು ಸೇವಿಸುವವನು ಎರಡು ಸಾರಿ ಮಲವಿಸರ್ಜನೆ ಮಾಡುವವನು ಅಲ್ಪ ಪ್ರಮಾಣದಲ್ಲಿ ಸ್ತ್ರೀ ಸಂಭೋಗ ಮಾಡುವವನು ಆರು ಸಾರಿ ಮೂತ್ರ ವಿಸರ್ಜನೆ ಮಾಡುವವನು ಸದಾ ಎಡಗಡೆ ಮಲಗುವವನು ಮತ್ತು ಚಿಂತೆಯನ್ನು ದೂರ ಮಾಡುವ ಶಕ್ತಿಯನ್ನು ಪಡೆದಿರುವವನು ದೀರ್ಘಾಯುಷ್ಯ ಆಗುವನು.
ಸ್ನೇಹಿತರೆ ಈ ರೀತಿಯ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಸಿಗೋಣ ಈ ಒಂದು ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿರಿ ಧನ್ಯವಾದಗಳು