ನಾವು ಈ ಲೇಖನದಲ್ಲಿ 9 ದಿನದಲ್ಲಿ ಬಿಳಿ ಕೂದಲು ಕಪ್ಪು ಆಗಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ . ಬಿಳಿ ಕೂದಲಿನ ಸಮಸ್ಯೆಗೆ ಏನು ಪರಿಹಾರ ಎಂದು ತಿಳಿದುಕೊಳ್ಳೋಣ . ನೈಸರ್ಗಿಕವಾಗಿ ನಾವು ಕೂದಲಿಗೆ ಮನೆಯಲ್ಲಿ ಕಲರ್ ನ್ನು ಹೇಗೆ ತಯಾರಿಸಿಕೊಳ್ಳುವುದು ಎಂದು ನೋಡೋಣ. ಕೆಮಿಕಲ್ ಹೇರ್ ಡೈ ಹಾಕುವುದರಿಂದ ಚರ್ಮದ ಕ್ಯಾನ್ಸರ್ , ಕಣ್ಣಿನ ಸಮಸ್ಯೆ , ಚರ್ಮ ರೋಗಗಳು ಹೆಚ್ಚಾಗಿ ಬರುತ್ತಿವೆ.
ಪೇರಳೆ ಎಲೆಯನ್ನು ಪೇಸ್ಟ್ ಮಾಡಿಕೊಳ್ಳಬೇಕು.
ಜಾಸ್ತಿ ನೀರನ್ನು ಹಾಕಬಾರದು . ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಹಾಕಿ ತಯಾರಿಸಬೇಕು. ಇದರ ಪೇಸ್ಟ್ ನ್ನು 100 ಗ್ರಾಂ , ಮೆಹಂದಿ ಪುಡಿಯನ್ನು ನೀರಿನಲ್ಲಿ ಕಲಸಬೇಕು. ಸ್ವಲ್ಪ ಗಟ್ಟಿಯಾಗಿ ಕಲಸಬೇಕು. ಇದನ್ನು 50 ಗ್ರಾಂ ತೆಗೆದುಕೊಳ್ಳಬೇಕು . ಇನ್ನೂ ನಿಂಬೆಹಣ್ಣಿನ ರಸ 40ರಿಂದ 50 ಎಂ ಎಲ್ . ಈ ಮೂರನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಅದನ್ನು ಕಬ್ಬಿಣದ ಪಾತ್ರೆಯಲ್ಲಿ ಹಾಕಿ ಇಡಬೇಕು. ಇದನ್ನು ಮುಚ್ಚಿ ಇಡಬೇಕು. ಪ್ರತೀ ದಿನ ಕದರಬೇಕು. ಇಲ್ಲ ಅಂದರೆ, ಅದು ಬೂಸ್ಟ್ ಬರುತ್ತದೆ.
ಹೀಗೆ ಅದನ್ನು 9 ದಿನಗಳ ಕಾಲ ಬಿಡಬೇಕು. 9 ದಿನ ಆದ ಮೇಲೆ ಅದು ಕೆಮಿಕಲ್ ರಿಯಾಕ್ಷನ್ ಆಗಿ ಪೂರ್ತಿಯಾಗಿ ಕಪ್ಪಾಗಿರುತ್ತದೆ. ಅದನ್ನು ನೀವು ತಲೆಗೆ ಹಚ್ಚಬೇಕು. ನಂತರ ಅಂಟುವಾಳದ ಕಾಯಿಯಿಂದ ತಲೆಯನ್ನು ತೊಳೆಯಬೇಕು. ಅಥವಾ ಮುಲ್ತಾನಿ ಮಿಟ್ಟಿಯನ್ನು ಬಳಸಬಹುದು. ಅಂಟುವಾಳದ ಕಾಯಿ ಒಳ್ಳೆಯದು ಎಂದು ಹೇಳಲಾಗಿದೆ. ಅದೇ ರೀತಿ 2 3 ದಿನ ಹಚ್ಚಿ , ತೊಳೆಯಬೇಕು. ಸ್ವಲ್ಪ ತಲೆಗೆ ಎಣ್ಣೆಯನ್ನು ಬಳಸಬೇಕು . ಹೀಗೆ 3-4 ದಿನ ಮಾಡುವುದರಿಂದ ಬಿಳಿ ಕೂದಲು ಕಪ್ಪು ಆಗುತ್ತದೆ. ಇದು ಅದ್ಭುತವಾದ ಪ್ರಯೋಗ .
ಇದು ನೈಸರ್ಗಿಕವಾಗಿ ಇರುವುದರಿಂದ ಇದು ನಿಮ್ಮ ಚರ್ಮಕ್ಕೆ ಅಥವಾ ಕಣ್ಣಿಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಇದನ್ನು ಬಳಸಿಕೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳಿ . ಇದನ್ನು ಮಾಡಿದಾಗ ನಾವು ಹೇಳಿದ ಸಮಯದ ವರೆಗೆ ಕಾಯಬೇಕು. ನೀವು ಬೇಗ ಬೇಗ ಮಾಡಿದರೆ, ಪ್ರಯೋಜನ ಆಗುವುದಿಲ್ಲ ಎಂದು ಹೇಳಲಾಗಿದೆ. ವರ್ಷಕ್ಕೆ ಒಂದು ಸಲ ಬಿಳಿ ಕೂದಲು ಬರಬಾರದು ಎಂದರೆ, ಪಂಚ ಕರ್ಮ ಚಿಕಿತ್ಸೆ ಮಾಡಿಸಿಕೊಳ್ಳಿ, ತಲೆಗೆ ಚೆನ್ನಾಗಿ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುವುದರಿಂದ ಇಂತಹ ಸಮಸ್ಯೆ ಬರುವುದಿಲ್ಲ ಎಂದು ಹೇಳಲಾಗಿದೆ.