ಪೊರಕೆ ಹತ್ತಿರ ಇದನ್ನು ಇಡಬೇಡಿ ಬಡತನ ಬರುತ್ತೆ

ನಮಸ್ಕಾರ ಸ್ನೇಹಿತರೇ, ಇವತ್ತಿನ ಈ ಸಂಚಿಕೆಯಲ್ಲಿ,ಮನೆಯಲ್ಲಿ ಉಪಯೋಗಿಸುವಂತಹ ಪೊರಕೆಯನ್ನು ಯಾವ ಕಡೆ ಇಡಬೇಕು ಅದರಿಂದ ಏನೆಲ್ಲ ಲಾಭಗಳಿವೆ ಹಾಗೂ ನಷ್ಟಗಳಿದೆ ತಿಳಿದುಕೊಳ್ಳೋಣ ಸ್ನೇಹಿತರೆ.
ಈ ಒಂದು ಉಪಯುಕ್ತ ಮಾಹಿತಿಯನ್ನು ತಪ್ಪದೇ ಕೊನೆಯ ತನಕ ನೋಡಿ ಕೈಯಲ್ಲಿ ದುಡ್ಡೇ ನಿಲ್ಲುತ್ತಿಲ್ಲ ವ್ಯಾಪಾರ ಮಾಡಿದರೆ ಅಲ್ಲೂ ಕೂಡ ನಷ್ಟವನ್ನು ಅನುಭವಿಸುತ್ತಿದ್ದೀವಿ, ಇದೆಲ್ಲ ಒಂದು ಕಡೆಯಾದರೆ ಇನ್ನೊಂದು ಕಡೆ ಮನೆಗೆ ಹೋದರೆ ಸಾಕು ಕಿರಿಕಿರಿ ಶುರುವಾಗುತ್ತದೆ.

ನಾನಾ ತರದ ಅಸಮಾಧಾನಗಳು ಸೃಷ್ಟಿಯಾಗುತ್ತವೆ ಸುಲಭವಾಗಿ ಹೇಳಬೇಕೆಂದರೆ ಮನೆಯಲ್ಲೂ ನಿಮ್ಮದೇ ಇಲ್ಲ ಹೊರಗಡೆ ಕೂಡ ನಿಮ್ಮದೇ ಇಲ್ಲದಂತಾಗಿದೆ ಹೀಗೆಲ್ಲಾ ಹೇಳೋರನ್ನ ಅನೇಕ ಜನರನ್ನು ನೋಡ್ತಾ ಇರುತ್ತೇವೆ. ಇದಕ್ಕೆ ಮೂಲ ಕಾರಣ ಏನೆಂದು ನಮಗೆ ಗೊತ್ತಿಲ್ಲ ಆದರೆ ನಮಗೆ ಗೊತ್ತಿದ್ದೂ ಗೊತ್ತಿಲ್ಲದೇನೋ ಕೆಲವು ತಪ್ಪುಗಳನ್ನು ನಾವು ಮಾಡಿಬಿಡುತ್ತೇವೆ. ಇದರಲ್ಲಿ ಇದೆಲ್ಲದರಿಂದ ಮುಕ್ತಿ ಹೊಂದಬೇಕೆಂದರೆ ನಾವು ಏನು ಮಾಡಬೇಕು? ನಿಮ್ಮ ಮನೆಯ ಮೂಲೆಯಲ್ಲಿ ಇರುವಂತಹ ಪೊರಕೆಯನ್ನು ಗಮನದಲ್ಲಿಟ್ಟು ನೋಡಿ ಅದೇ ಒಂದು ಪೊರಕೆಯಲ್ಲಿ ಇದೆ ನೋಡಿ

ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ . ಅದು ಹೇಗೆ ಅಂದರೆ ನೀವು ಮಾಡಬೇಕಾದಂತ ಮೊದಲನೇ ಕೆಲಸ ಏನು ಎಂದರೆ ಈ ಒಂದು ಸಂಚಿಕೆಯನ್ನು ಸ್ಕಿಪ್ ಮಾಡದೆ ನೋಡಿರಿ. ನಿಮ್ಮ ಮನೆಯಲ್ಲಿ ಇರುವಂತಹ ಬುಡಕ್ಕೆ ಯಾವತ್ತೂ ಬಿಡಿಬಿಡಿಯಾಗಿ ಇಡಬೇಡಿ ಅದೆಲ್ಲವನ್ನು ಗಟ್ಟಿಯಾಗಿ ಬಿಗಿಯಾಗಿ ಕಟ್ಟಿ ಒಂದು ಮೂಲೆಯಲ್ಲಿ ಇಡಿ ಹೀಗೆ ಮಾಡುವುದರಿಂದ ಅದನ್ನು ಉಪಯೋಗಿಸಲು ನಿಮಗೆ ಯಾವುದೇ ರೀತಿಯಾದ ಸಮಸ್ಯೆ ಆಗುವುದಿಲ್ಲ, ಹಾಗೆಯೇ ಈ ಪೊರಕೆಯನ್ನು ಯಾರ ಕಣ್ಣಿಗೂ ಕಾಣದಂತೆ ಬಚ್ಚಿಡಬೇಕು.

ನಿಮ್ಮ ಮನೆಯ ಮೇಲೆ ಯಾರದ್ದಾದರೂ ಕೆಟ್ಟ ದೃಷ್ಟಿ ಬಿದ್ದಿದೆ ಅಂತ ಅನುಮಾನ ಕಾಡುತ್ತಿದೆಯಾ? ಹಾಗಿದ್ದಲ್ಲಿ ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಪೊರಕೆಯನ್ನು ಇಟ್ಟುಬಿಡಿ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಏನಾದರೂ ನಿಮ್ಮ ಮನೆಯ ಒಳಗೆ ಹೋಗಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುವುದಿಲ್ಲ, ಬದಲಾಗಿ ಆ ಶಕ್ತಿ ಹೊರಗಿದ್ದರೆ ಹೋಗುತ್ತದೆ. ಹೀಗೆ ಮಾಡಿದಾಗ ಮನೆಯಲ್ಲಿ ಶಾಂತಿ ತನ್ನಿಂದ ತಾನೇ ನೆಲೆಯಾಗುತ್ತದೆ.
ಇನ್ನೂ ಹಸಿಯಾದ ಪೊರಕೆ, ಸವೆದು ಹೋದಂತಹ ಪೊರಕೆ,

ಮುರಿದಂತಹ ಪೂರೆಕೆ ಜೊತೆಗೆ ತುಂಬಾ ಹಳೆಯದಾದ ಪೊರಕೆಯನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು. ಇದು ನಿಮ್ಮ ಹಾಗೂ ನಿಮ್ಮ ಮನೆಯಲ್ಲಿರುವಂತಹ ಸದಸ್ಯರುಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ, ಕೆಲವರು ತಮ್ಮ ಪೊರಕೆಯನ್ನು ನೆರೆಹೊರೆಯವರಿಂದ ಸಾಲದ ರೂಪವಾಗಿ ಪಡೆದುಕೊಂಡಿರುತ್ತಾರೆ ಇದರಿಂದ ಏನು ಮಹಾ ಆಗುತ್ತದೆ? ಎಂಬುವುದು ಅವರ ಆಲೋಚನೆ ಇಂತಹ ಆಲೋಚನೆ ನಿಮಗೂ ಇದ್ದಲ್ಲಿ ಆಲೋಚನೆಯನ್ನು ಮೊದಲು ಬಿಟ್ಟುಬಿಡಿ.

ಹೀಗೆ ಸಾಲದ ರೂಪದಲ್ಲಿ ಯಾರಿಂದ ಪೊರಕೆಯನ್ನು ಪಡೆದಿರುತ್ತಿರೋ ಅವರಿಂದ ಅವರ ಮನೆಯ ಸಮಸ್ಯೆ ಹಾಗೂ ನಕಾರಾತ್ಮಕ ಶಕ್ತಿಯನ್ನು ಕೂಡ ಪೊರಕೆ ರೂಪದಲ್ಲಿ ನೀವು ತೆಗೆದುಕೊಂಡು ಬರುತ್ತೀರ. ಆದ್ದರಿಂದ ಯಾವುದೇ ಕಾರಣಕ್ಕೂ ಯಾರಿಂದಲೂ ಕೂಡ ಪೊರಕೆಯನ್ನು ಸಾಲವಾಗಿ ಪಡೆದುಕೊಳ್ಳಬೇಡಿ.
ಇನ್ನೂ ಕೆಲವರು ಹೊಸ ಪೊರಕೆಯನ್ನು ಖರೀದಿ ಮಾಡಿ ಇನ್ನೊಬ್ಬರಿಗೆ ಕೊಟ್ಟಿರುತ್ತಾರೆ ಗೊತ್ತಿದ್ದವರೇ ಕೊಟ್ಟಿದ್ದಾರೆ ಎಂದು ಹಿಂದೆ ಮುಂದೆ ಯೋಚನೆ ಮಾಡದೆ ಅದನ್ನು ತೆಗೆದುಕೊಂಡು ಬಿಡುತ್ತಾರೆ.

ಹಾಲು ಕೊಡುವ ಪೊರಕೆಗಳಲ್ಲಿ ನಕಾರಾತ್ಮಕ ಶಕ್ತಿಗಳು ಇರುತ್ತವೆ, ಆದ್ದರಿಂದ ಅದನ್ನು ದೂರ ಇಟ್ಟುಬಿಡಿ. ಹೊಸ ಮನೆಗೆ ಹೋಗುವಾಗ ಹೊಸ ಪೊರಕೆಯನ್ನು ಖರೀದಿ ಮಾಡಿಕೊಂಡು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಮನೆಯಲ್ಲಿ ಬಳಸಿದಂತಹ ಹಳೆಯ ಪೊರಕೆಯನ್ನು ಕೂಡ ಬಿಟ್ಟು ಬರುವುದು ಲಕ್ಷ್ಮಿಯನ್ನು ಬಿಟ್ಟು ಬಂದಂತೆ ಹಾಗಾಗಿ ಸ್ವಲ್ಪ ದಿನಗಳ ನಂತರ ಅದನ್ನು ತಂದು ಉಪಯೋಗಿಸಿ ನಂತರ ಬಿಸಾಕಿಬಿಡಿ. ಹೊಸ ಹೊರಕೆಯನ್ನು ತಂದರೆ

ಅದನ್ನು ಶನಿವಾರ ಉಪಯೋಗಿಸುವುದಕ್ಕೆ ಆರಂಭಿಸಿ ಹೀಗೆ ಮಾಡುವುದರಿಂದ ಮನೆಗೆ ಅದೃಷ್ಟ ಲಕ್ಷ್ಮಿ ಆದಷ್ಟು ಬೇಗ ನಿಮ್ಮ ಮನೆಗೆ ಬರುತ್ತಾಳೆ ಎನ್ನುವ ನಂಬಿಕೆ ಇದೆ ಜೊತೆಗೆ ಮನೆಯ ಪಶ್ಚಿಮ ದಿಕ್ಕಿನತ್ತ ಇಟ್ಟುಬಿಡಿ. ಅಡುಗೆಮನೆಯಾಗಲಿ, ಊಟ ಮಾಡುವ ಡೈನಿಂಗ್ ಹಾಲ್ ಅಥವಾ ಸ್ಟೋ ರೂಮ್ ಅಲ್ಲಿ ಇಡುವುದಕ್ಕೆ ಹೋಗಬೇಡಿ ಹೀಗೆ ಮಾಡುವುದರಿಂದ ನೀವು ಅನ್ನಪೂರ್ಣೇಶ್ವರಿ ದೇವಿಗೆ ಅವಮಾನ ಮಾಡಿದಂತದ್ದೇ ಆಗುತ್ತದೆ.
ಪ್ರತಿದಿನ ನೀವು ಮಲಗುವ ಮುನ್ನ ನಿಮ್ಮ ಮನೆಯ ಮೂಲೆಯಲ್ಲಿರುವಂತಹ ಪೊರಕೆಯನ್ನು ತೆಗೆದುಕೊಳ್ಳಿ ಅದನ್ನು ನಿಮ್ಮ ಮನೆಯ ಮುಖ್ಯದ್ವಾರದ ಒಳ ಭಾಗದಲ್ಲಿ ಇಟ್ಟು ಬಿಡಿ ಅದನ್ನು ಅಡ್ಡವಾಗಿ ಇಡಬೇಕು ಯಾವ ಕಾರಣಕ್ಕು ನೇರವಾಗಿ ಇಡಬಾರದು.

ಹೀಗೆ ಮಾಡುವುದರಿಂದ ನಿಮ್ಮ ಮನೆಯ ಬಳಿ ಯಾವುದೇ ನಕಾರಾತ್ಮಕ ಶಕ್ತಿ ಬರದಂತೆ ಈ ಪೊರಕೆ ತಡೆಗಟ್ಟುತ್ತದೆ, ಹಾಗಂತ ಯಾವಾಗ ಬೇಕು ಅವಾಗ ಇಡಬಾರದು ರಾತ್ರಿ ಇಟ್ಟು ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ತೆಗೆದಿಡಬೇಕು ಹಾಗೂ ಮತ್ತೊಂದು ಕೆಲಸವನ್ನು ಕೂಡ ಮಾಡಬೇಕು ಕೆಲವೇ ಕೆಲವು ಜೀರಿಗೆ ಕಾಳುಗಳನ್ನು ಹಾಕಿ ಅದರ ಮೇಲೆ ಇಟ್ಟುಬಿಡಿ ಅಂದರೆ ಒಂದು 10 ರಿಂದ 15 ಕಾಳುಗಳನ್ನು ಹಾಕಿಟ್ಟರೆ ಸಾಕು ಬೆಳಗ್ಗೆ ಆ ಕಸಬರಿಗೆಯನ್ನು ತೆಗೆದಾಗ ಜೀರಿಗೆ ಕಾಳುಗಳು ಕಸ ಗುಡಿಸಿ ತೆಗೆದುಬಿಡಿ.

ಅದಕ್ಕೂ ಮುಂಚೆ ಕಸ ಗುಡಿಸುವಾಗ ಜೀರಿಗೆ ಕಾಳುಗಳು ಕಸದ ಜೊತೆಗೆ ಇಡೀ ಮನೆಗೆ ಹರಡಿಕೊಳ್ಳುವಂತೆ ನೋಡಿಕೊಳ್ಳಿ ಹೀಗೆ ಮಾಡಿ ನೋಡಿ ನಿಮ್ಮ ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ಪರ್ಮನೆಂಟಾಗಿ ನಿರ್ಣಾಮ ಆಗೋದು ಗ್ಯಾರಂಟಿ. ಹಾಗೆ ಮನೆಯಲ್ಲಿರುವ ಎಲ್ಲಾ ತೊಂದರೆಗಳು ಕೂಡ ಹೋಗುವ ಹಾಗೆ ಮಾಡುತ್ತದೆ. ಪೊರಕೆ ಎಂದು ಅದನ್ನು ಕಾಲಿನಲ್ಲಿ ತುಳಿಯುವುದು ಮಾಡಬೇಡಿ ಹಾಗೆಯೇ ಎಲ್ಲಿಂದರಲ್ಲಿ ಬಿಸಾಕಬೇಡಿ ಪೊರಕೆ

ಯಾರ ಕಣ್ಣಿಗೂ ಕಾಣಿಸದ ಮೂಲೆಯಲ್ಲಿ ಇಡಬೇಕು. ತುಂಬಾ ದಿನದಿಂದ ನಿಮ್ಮ ಮನೆಯಲ್ಲಿ ಪೊರಕೆ ಇದ್ದರೆ ಅದನ್ನು ಕೂಡ ಉಪಯೋಗಿಸಬೇಡಿ ಅದು ವಾಸ್ತುದೋಷ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ದಿನದಿಂದ ದಿನಕ್ಕೆ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದಾದಲ್ಲಿ ಯಾವುದಾದರೂ ಒಂದು ದೇವಸ್ಥಾನಕ್ಕೆ ಪೊರಕೆಯನ್ನು ಗೌಪ್ಯವಾಗಿ ದಾನ ಮಾಡಿ ದಾನ ಮಾಡೋದೇ ಇದ್ರೆ ಒಂದು ಅಥವಾ ಮೂರು ಪೊರಕೆಯನ್ನು ಮಾತ್ರ ದಾನ ಮಾಡಿ,

ಎರಡು ಅಥವಾ ನಾಲ್ಕು ಪೂರಕೆಯನ್ನು ದಾನ ಮಾಡಬೇಡಿ ಖರೀದಿ ಮಾಡುವಾಗಲೂ ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ. ಈ ಮೇಲೆ ಹೇಳಿದಂತಹ ಮಾಹಿತಿಯನ್ನು ಅನುಸರಿಸಿದ್ದಲ್ಲಿ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ತಕ್ಷಣದಲ್ಲಿ ಸಿಗುತ್ತದೆ.ಸ್ನೇಹಿತರೆ ಈ ಒಂದು ಮಾಹಿತಿ ಇಷ್ಟ ಆಗಿದ್ದಲ್ಲಿ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕಮೆಂಟ್ ಮಾಡಿ. ಧನ್ಯವಾದಗಳು..

Leave a Comment