ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯನ ಸುಡು ಬಿಸಿಲಿನಿಂದ ರಕ್ಷಿಸಿ. Hydrate ಆಗಿರಿ ಅಂದರೆ ಪ್ರತಿದಿನ 6ರಿಂದ 8 ಗ್ಲಾಸ್ ನೀರು ಕುಡಿಯಿರಿ ಇದರಿಂದ ನೀವು ಹೈಡ್ರೇಟ್ ಆಗಿ ಇರುತ್ತೀರಾ ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗಿ ಇರುತ್ತದೆ.
ನೀವು ಸೇವಿಸುವ ಆಹಾರದಲ್ಲಿ vitamin C ಆದಷ್ಟು ಬಳಸಿ ಇದು ನಿಮ್ಮ ತ್ವಚೆಯನ್ನು ರಕ್ಷಿಸಲು ಬಹಳ ಪ್ರಮುಖವಾಗಿದೆ. ಒಂದೇ ಕಡೆ ಕುಳಿತಲ್ಲೇ ಕುಳಿತುಕೊಳ್ಳಬೇಡಿ. ಪ್ರತಿದಿನ 10 ನಿಮಿಷವಾದರೂ, ವಾಕಿಂಕ್ ಮಾಡುವುದು ತುಂಬಾ ಅಗತ್ಯ.
ಆರೋಗ್ಯಕರ ಸಮತೋಲಿತ ಆಹಾರವನ್ನು ಸೇವಿಸಿ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿ ಇರಬೇಕು ಮತ್ತು ಪ್ರೊಟಿನ್ ಭರಿತ ಆಹಾರ ಸೇವಿಸುವುದು ಒಳ್ಳೆಯದು. ನೀವು ಧೂಮಪಾನ ಅಥವಾ ಮಧ್ಯಪಾನ ಮಾಡುತ್ತಿದ್ದರೆ ನಿಲ್ಲಿಸಿ. ಸ್ನಾನ ಮಾಡುವಾಗ ಹೆಚ್ಚು ಹೊತ್ತು ನಿಮ್ಮ ತ್ವಚೆಯನ್ನು ಉಜ್ಜಬೇಡಿ ಇದರಿಂದ ನಿಮ್ಮ ತ್ವಚೆಯ ನ್ಯಾಚುರಲ್ ಗ್ಲೋ ಕಡಿಮೆ ಆಗುತ್ತದೆ.
ನೀವು ಹೆಚ್ಚು ಬೆವರುತ್ತಿದ್ದರೆ ನಿಮ್ಮ ಮುಖವನ್ನು ತೊಳೆಯಿರಿ ಅಥವಾ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ. ನಿದ್ರೆಗೆ ಪ್ರಮುಖ ಆದ್ಯತೆ ನೀಡಿ ನಿಮ್ಮ ಸೌಂದರ್ಯವನ್ನು ಕಾಪಾಡಲು ಪ್ರಮುಖ ಅಂಶವೆಂದರೆ ಸರಿಯಾದ ನಿದ್ರೆ ದಿನಕ್ಕೆ 8 ಗಂಟೆ ನಿದ್ರೆ ಅತ್ಯವಶ್ಯಕ.
ಪ್ರತಿದಿನ ಮುಖಕ್ಕೆ ಅಲೋವೆರಾ ಹಚ್ಚಿ ನೀವು ರೋಸ್ ವಾಟರ್ ಕೂಡ ಹಚ್ಚಬಹುದು ಇದರಿಂದ ತ್ವಚೆ ಮೃದುವಾಗುತ್ತದೆ. ಪ್ರತಿದಿನ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚರ್ಮ ಟೈಟ್ ಆಗುತ್ತದೆ ಹೊಳಪು ಬರುತ್ತದೆ, ಕಲೆಗಳು ಮಾಯವಾಗುತ್ತದೆ.
ಸದಾ ಖುಷಿಯಾಗಿರಿ ಒತ್ತಡವನ್ನು ಕಡಿಮೆ ಮಾಡಲು ಯಾವುದಾದರೂ ಕಾಮಿಡಿ ವೀಡಿಯೋವನ್ನು ನೋಡಿ. ಸೌಂದರ್ಯದ ಮತ್ತೊಂದು ಗುಟ್ಟೇನೆಂದರೆ ಅದು ನಗು ಮುಖ ಮುಖದ ಬಣ್ಣ ಯಾವುದೇ ಇರಲಿ ನಗು ಮುಖವೇ ಒಂದು ಅದ್ಭುತ ಸೌಂದರ್ಯ