ಸತ್ತವರ ಈ ವಸ್ತುಗಳನ್ನು ಬಳಸಿದರೆ ಕಷ್ಟ ತಪ್ಪಿದ್ದಲ್ಲ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಎಂದಿಗೂ ನಿಜ ಅದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ ಸಾವಿನ ನಂತರ ಆತ್ಮ ಏನಾಗುತ್ತದ? ಅಥವಾ ಸಾವಿನ ನಂತರ ಆತ್ಮದ ಪ್ರಯಾಣ ಹೇಗಿರುತ್ತದೆ ಎಂಬುದರ ಕುರಿತು ಹಲವರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಹಿಂದೂ ಧಾರ್ಮಿಕ ಪುಸ್ತಕ ವಾದ ಗರುಡ ಪುರಾಣದಲ್ಲಿ ಮರಣದ ಕುರಿತು ವಿವರವಾಗಿ ವಿವರಿಸಲಾಗಿದೆ. ಗರುಡ ಪುರಾಣವು ಹಿಂದೂ ಧರ್ಮದ ಮತ್ತು ವೈಷ್ಣವ ಪಂಥದ ಪವಿತ್ರ ಪುಸ್ತಕವಾಗಿದ್ದು ಇದರಲ್ಲಿ ಮರಣ, ಪಾಪ ಪುಣ್ಯ ಮತ್ತು ಸ್ವರ್ಗ ನರಕಗಳ ಕುರಿತು ಸಂಪೂರ್ಣವಾಗಿ ಹೇಳಲಾಗಿದೆ. ಓರ್ವ ವ್ಯಕ್ತಿ ಮರಣ ಹೊಂದಿದ ನಂತರ ಏನಾಗುತ್ತದೆ? ಮರಣದ ನಂತರ ಆತ್ಮದ ಸಂಚಾರದ ಕುರಿತು ಯಾರನ್ನು ಹೇಳಿದರು ನಾವು ವಿಭಿನ್ನ ಅಭಿಪ್ರಾಯಗಳನ್ನು ಪಡೆದುಕೊಳ್ಳಬಹುದು.

ಹಿಂದೂ ಧರ್ಮದಲ್ಲೂ ಇದರ ಕುರಿತು ಸಾಕಷ್ಟು ನಂಬಿಕೆಗಳಿವೆ. ಸಾಮಾನ್ಯವಾಗಿ, ಕುಟುಂಬದ ಸದಸ್ಯರ ಮರಣದ ನಂತರ, ಜನರು ತಮ್ಮ ವಸ್ತುಗಳನ್ನು ಸ್ಮರಣಾರ್ಥಿವಾಗಿ ಅಥವಾ ಟೋಕನ್ ಆಗಿ ಬಳಸುತ್ತಾರೆ ಆದರೆ ಕೆಲವರು ಸತ್ತವರಿಗೆ ಸಂಬಂಧಿಸಿದ ವಸ್ತುಗಳನ್ನು ನಾಶ ಮಾಡುತ್ತಾರೆ ಗರುಡ ಪುರಾಣದಲ್ಲಿ ಸತ್ತ ವ್ಯಕ್ತಿಗೆ ಸಂಬಂಧಿಸಿದೆ ಕೆಲವು ವಿಷಯಗಳ ಬಗ್ಗೆ ಹೇಳಲಾಗಿದೆ. ಅಪ್ಪಿ ತಪ್ಪಿಯು ಬಳಸಬಾರದು. ಇದು ಸತ್ತ ಆತ್ಮವನ್ನು ಆಕರ್ಷಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ಹರಡುತ್ತದೆ ಎಂದು ನಂಬಿಕೆ ಇದೆ.

ಸತ್ತ ವ್ಯಕ್ತಿಗಳು ಮೊದಲು ಬಳಸುತ್ತಿದ್ದ ಶೂ ಗಳು, ಕೈ ಗಡಿಯಾರಗಳು ಅಥವಾ ಇತರ ದೈನಂದಿನ ವಸ್ತುಗಳನ್ನು ಬಳಸಬಾರದು. ಇದರಿಂದ ಬಳಸುವವರಿಗೆ ಸಮಸ್ಯೆ ಉಂಟಾಗುತ್ತದೆ. ಆ ವ್ಯಕ್ತಿ ಸತ್ತಿರುವುದು ದೃಢವಾದರೂ ಆತ್ಮವು ಒಂದೇ ಸಾರಿ ನಿರ್ಗಮಿಸುವುದಿಲ್ಲ ಆ ವ್ಯಕ್ತಿಗಳ ಆತ್ಮ ಅವರು ಬಳಸಿದ ವಸ್ತುಗಳ ವ್ಯಾಮೋಹ ಹೊಂದಿರುತ್ತದೆ ಎಂದು ನಂಬಲಾಗಿದೆ. ಅದರಲ್ಲೂ ಸತ್ತವರ ಬಟ್ಟೆಯನ್ನು ಬಳಸಲೇಬಾರದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಸತ್ತವರು ಧರಿಸಿದ ಬಟ್ಟೆಗಳನ್ನು ಸುಡಬೇಕು, ಇಲ್ಲದಿದ್ದರೆ ಧರಿಸಿದವರಿಗೆ ತೊಂದರೆಯಾಗುತ್ತದೆ. ಜೋತಿಷ್ಯದ ಪ್ರಕಾರ ಸತ್ತ ವ್ಯಕ್ತಿಗಳು ಬದುಕಿದ್ದಾಗ ಇಷ್ಟ ಪಡುತ್ತಿದ್ದಾಗ ಬಹಳ ಇಷ್ಟಪಡುತ್ತಿದ್ದ ಬಟ್ಟೆಗಳನ್ನು ನಾಶ ಮಾಡದಿದ್ದರೆ ಆತ್ಮಕ್ಕೆ ಇಲ್ಲಿರಬೇಕೋ ತೆರಳಬೇಕೋ ಎಂಬ ಗೊಂದಲ ಶುರುವಾಗುತ್ತದೆ.

ವ್ಯಕ್ತಿ ಬದುಕಿರುವಾಗ ಬಳಸಿದ ಹಿಡಿಕೆಗಳನ್ನು ಕೂಡ ಬಳಸಬಾರದು. ಅಂತಹ ಉತ್ಪನ್ನಗಳನ್ನು ಬಳಸುವುದರಿಂದ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡಬಹುದು ಆದ್ದರಿಂದ ಯಾರೇ ನಿಧನರಾದರು ಅವರಿಗೆ ಸೇರಿದ ವಸ್ತುಗಳು ಬೌದ್ಧಿಕವಾಗಿ ಉಳಿಯುವುದರಿಂದ ಅದು ವಿವಿಧ ಬಗೆಯ ಶಕ್ತಿಗಳಿಗೆ ವಾಸಸ್ಥಾನ ವಾಗುತ್ತದೆ ಆದ್ದರಿಂದ ದೇಹಕ್ಕೆ ಹತ್ತಿರವಾದ ಎಲ್ಲಾ ಬಟ್ಟೆಗಳನ್ನು ಸುಡಬೇಕು. ಅದು ಸಾಧ್ಯವಾಗದಿದ್ದಲ್ಲಿ 11 ದಿನಗಳೊಳಗೆ ಆ ಬಟ್ಟೆಗಳನ್ನು ಶುಭ್ರವಾಗಿ ತೊಳೆದು ಯಾರಿಗಾದರೂ ಹಂಚಬೇಕು. ಒಬ್ಬರಿಗೆ ಎಲ್ಲವನ್ನು ಹಂಚದೇ ಅದನ್ನು ವಿಂಗಡಣೆ ಮಾಡಬೇಕು. ಈಗ ಮಾಡಿದರೆ ಆತ್ಮದ ಪ್ರಭಾವ ಅಷ್ಟಾಗಿ ಕಾಡುವುದಿಲ್ಲ

ಒಂದು ವೇಳೆ ಸಪ್ತವರ ಚಿನ್ನಾಭರಣಗಳನ್ನು ಬಳಸಬೇಕಾದರೆ ಮೊದಲು ಅದನ್ನು ಕರಗಿಸಿ ಹೊಸದನ್ನು ತಯಾರಿಸಬೇಕು ಅಂದರೆ ಚಿನ್ನದ ಸರ ಇದ್ದರೆ ಅದನ್ನು ಕರಗಿಸಿ ಬಳೆ ಅಥವಾ ಮತ್ಯಾವುದೇ ಆಭರಣಗಳನ್ನು ತಯಾರಿಸಿ ಬಳಸಬಹುದು. ಇಲ್ಲವಾದರೆ ಚಿನ್ನವನ್ನು ಕೊಟ್ಟು ಹೊಸದಾಗಿ ಬೇರೆ ಚಿನ್ನವನ್ನು ಖರೀದಿಸಬಹುದು ಹೀಗೆ ಮಾಡಿದರೆ ನಕಾರಾತ್ಮಕ ಅಂಶ ಕಡಿಮೆಯಾಗುತ್ತದೆ.

ಸತ್ತ ವ್ಯಕ್ತಿಯ ವಾಚ್ ಇಟ್ಟುಕೊಳ್ಳಬಾರದು. ಇದು ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಏಕೆಂದರೆ ವಾಚ್ ಅವರ ಸಮಯವನ್ನು ತೋರಿಸುತ್ತದೆ. ಅವರ ಜೀವನದಲ್ಲಿ ಕಷ್ಟಗಳಿದ್ದರೆ ನಿಮಗೂ ಅದು ರವಾನೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಸ್ನೇಹಿತರೆ ಮಾಹಿತಿ ಇಷ್ಟ ಆದರೆ ನಮ್ಮ ಸಂಚಿಕೆಯನ್ನು ಲೈಕ್ ಮಾಡಿ, ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಇದೇ ರೀತಿ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ.
ಧನ್ಯವಾದಗಳು

Leave a Comment