ಸಿಂಹ ರಾಶಿಯ ಮಹಿಳೆಯರ ಗುಣ ಸ್ವಭಾವಗಳು ಹೇಗೆ ಇರುತ್ತದೆ

ನಾವು ಈ ಲೇಖನದಲ್ಲಿ ಸಿಂಹ ರಾಶಿಯ ಮಹಿಳೆಯರ ಗುಣ ಸ್ವಭಾವಗಳು ಹೇಗೆ ಇರುತ್ತದೆ ಎಂದು ತಿಳಿಯೋಣ .
ಸಿಂಹ ರಾಶಿಯ ಸ್ತ್ರೀಯರು ಜನ್ಮದಿಂದಲೇ ಬಹಳಷ್ಟು ಆಶಾವಾದಿಗಳು ಆಗಿರುತ್ತಾರೆ . ಇವರಲ್ಲಿ ಬಹಳಷ್ಟು ಆಸೆ ಆಕಾಂಕ್ಷೆಗಳು ಅನ್ನುವುದು ತುಂಬಾ ಇರುತ್ತದೆ . ಇವರು ಸುಲಭವಾಗಿ ಯಾವುದೇ ಕಾರಣಕ್ಕೂ ನಿರಾಶೆಯನ್ನು ಅನುಭವಿಸುವುದಿಲ್ಲ . ಇವರು ಅಂದುಕೊಂಡಿರುವುದು ಸಿಗುವ ಕಾರಣದಿಂದಾಗಿ ನಿರಾಶೆ ಇವರ ಜೀವನದಲ್ಲಿ ಬಹಳ ಕಡಿಮೆ . ಇವರಿಗೆ ಆಸೆಗಳು ಹೆಚ್ಚಾಗಿರುತ್ತದೆ .

ಎಲ್ಲವನ್ನು ನೆರವೇರಿಸಿಕೊಳ್ಳುವ ಸಾಧ್ಯತೆಗಳು ಇರುತ್ತದೆ . ಆನಂದ ಭೋಗಗಳಲ್ಲಿ ಸಾಕಷ್ಟು ಅಭಿವೃದ್ಧಿಗಳನ್ನು ಹೊಂದಿರುತ್ತಾರೆ. ತಮ್ಮಲ್ಲಿರುವ ಅಲ್ಪ ಸುಖವನ್ನು , ಸಾಧನೆಗಳನ್ನು ಅನ್ಯರ ಮುಂದೆ ದೊಡ್ಡದಾಗಿ ಕಾಣುವಂತೆ ಪ್ರದರ್ಶನ ಮಾಡುತ್ತಾರೆ . ತಮ್ಮ ವೈಭೋಗಗಳನ್ನು ಅಥವಾ ಅನುಭವಿಸುವ ಸುಖಗಳನ್ನು , ಸಂತೋಷವನ್ನು ಬೇರೆಯವರ ಮುಂದೆ ದೊಡ್ಡ ಪ್ರಮಾಣದಲ್ಲಿ ಪ್ರದರ್ಶನ ಮಾಡುವ ಅಭಿರುಚಿ ಹೊಂದಿರುತ್ತಾರೆ . ಸ್ವಲ್ಪ ಜನರಿಗೆ ಈ ರಾಶಿಯವರನ್ನು ನೋಡಿದರೆ ಅಹಂಕಾರ ಭಾವನೆ ಬರುತ್ತದೆ .

ಇವರು ಭೋಗಪ್ರಿಯರು ಆಗಿರುತ್ತಾರೆ . ಉತ್ತಮವಾದ ಆಭರಣಗಳು , ವಸ್ತ್ರಗಳನ್ನು ಧರಿಸುವುದು , ಈ ರೀತಿಯಾದ ವಿಶೇಷತೆ ಇವರಲ್ಲಿ ಇರುತ್ತದೆ . ಬಹಳಷ್ಟು ಅಭಿರುಚಿಯಲ್ಲಿ ಇದು ಒಂದು ಕೂಡ ಆಗಿರುತ್ತದೆ . ಕೆಲವೊಂದು ರೂಪ ಲಾವಣ್ಯಗಳಿಂದ ಶೋಭಿತರಾಗಿರುತ್ತಾರೆ . ಇದು ಇವರಿಗೆ ಸಕಾರಾತ್ಮಕತೆಯನ್ನು ತೋರಿಸುತ್ತದೆ . ಇವರ ನಕಾರಾತ್ಮಕತೆ ಏನೆಂದರೆ , ದುಡ್ಡನ್ನು ವ್ಯಯ ಮಾಡುವುದು . ಖರ್ಚು ಹೆಚ್ಚಾಗಿ ಮಾಡುತ್ತಾರೆ .ಹಣಕ್ಕೆ ಮಹತ್ವ ಕೊಡುವುದಿಲ್ಲ .

ಖರ್ಚು ಮಾಡುವ ಪ್ರವೃತ್ತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು . ಕೆಲವೊಂದು ಸಮಯಗಳಲ್ಲಿ ಸಮಸ್ಯೆಗಳನ್ನು ಅನುಭವಿಸಿರುವುದು ಕೂಡ ಕಂಡುಬರುತ್ತದೆ . ಸುಖ ಸೌಲಭ್ಯದ ಸ್ವಚ್ಛಂದ ಜೀವನ ನಡೆಸುವ ಅಭಿಲಾಷೆ ಹೊಂದಿರುವ ಈ ಸಿಂಹ ರಾಶಿಯವರು , ಸಿಂಹ ರಾಶಿಯ ಸ್ತ್ರೀಯರಲ್ಲಿ ಅಪಾರವಾದ ಆತ್ಮವಿಶ್ವಾಸ ಇರುತ್ತದೆ . ಇದು ಅವರಿಗೆ ಉತ್ತೇಜನ ಕೊಡುತ್ತದೆ . ಎಂತಹ ಪರಿಸ್ಥಿತಿ ಬಂದರೂ ಅದನ್ನು ನಿಭಾಯಿಸುವ ಧೈರ್ಯ ಇರುತ್ತದೆ . ಬುದ್ಧಿಶಕ್ತಿ , ಚಾಣಾಕ್ಷತನ , ಸಮಯ ಪ್ರಜ್ಞೆ ಮತ್ತು ಜೊತೆಗೆ ಒಂದಿಷ್ಟು ಕೋಪ ಇರುತ್ತದೆ. ಬಹಳ ವಿಶೇಷವಾಗಿ ಕೋಪ ಇರುತ್ತದೆ .

ಸಿಂಹ ರಾಶಿಯ ಸ್ತ್ರೀಯರು ಧನಸ್ಸು ರಾಶಿ ಅಥವಾ ಕುಂಭ ರಾಶಿಯ ಪುರುಷರೊಂದಿಗೆ ಮದುವೆ ಆದರೆ ಚೆನ್ನಾಗಿ ಹೊಂದಾಣಿಕೆ ಆಗುತ್ತದೆ . ಅವರ ಅಭಿಲಾಷೆ ಮತ್ತು ಇವರ ಅಭಿಲಾಷೆಗೆ ಬಹಳಷ್ಟು ಹೊಂದಾಣಿಕೆ ಆಗುತ್ತದೆ . ಯಶಸ್ವಿವಾಗಿ ಜೀವನವನ್ನು ಸಾಗಿಸುತ್ತಾರೆ . ಸಿಂಹ ರಾಶಿ ಸ್ತ್ರೀಯರು ಅಸಾಧಾರಣವಾದ ಆರೋಗ್ಯವನ್ನು ಹೊಂದಿರುತ್ತಾರೆ . ಆರೋಗ್ಯದಲ್ಲಿ ಕೆಲವೊಂದು ಸಮಸ್ಯೆಗಳು ಇರುತ್ತವೆ . ವಾತಾವರಣಕ್ಕೆ ಬೇಗ ಬದಲಾವಣೆ ಆಗುತ್ತಾರೆ . ನೆಗಡಿ , ಶೀತ , ಕೆಮ್ಮು ಈ ರೀತಿಯಾದ ಸಹಜವಾಗಿ ಅಲರ್ಜಿಯ ರೀತಿ ಆಗುತ್ತದೆ . ಇವರು ಹೆಚ್ಚಾಗಿ ನೋವನ್ನು ತಡೆಯುವುದಿಲ್ಲ . ಅಷ್ಟೇ ಬೇಗ ಚೇತರಿಸಿಕೊಳ್ಳುತ್ತಾರೆ .

ಸಹಜವಾಗಿ ಕೆಲವೊಂದು ಅನಾರೋಗ್ಯಗಳು ಭಾದಿಸುತ್ತವೆ . ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು . ಇವರಿಗೆ ಬೇಗ ಚೇತರಿಕೆ ಕಂಡು ಬರುತ್ತದೆ. ಅಭಿರುಚಿಗೆ ತಕ್ಕಂತೆ ತಮ್ಮ ವಾತಾವರಣ ಇರಬೇಕು ಎಂದು ಬಯಸುತ್ತಾರೆ. ನೋವನ್ನು ತಡೆಯುವ ಶಕ್ತಿ ಇವರಿಗೆ ಕಡಿಮೆ ಇರುತ್ತದೆ . ಹಾಗೆಯೇ ಬೇಗ ಚೇತರಿಕೆಯನ್ನು ಕಾಣುತ್ತಾರೆ . ಮದುವೆಯಾದ ನಂತರ ಕೆಲವೊಂದು ಅನಾರೋಗ್ಯಗಳು ಭಾದಿಸುತ್ತದೆ . ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು . ಎಂತಹ ಸಮಸ್ಯೆ ಇದ್ದರೂ ಇವರು ಬೇಗ ಚೇತರಿಕೆಯನ್ನು ಕಾಣುತ್ತಾರೆ . ಇವರಿಗೆ ಶಾಂತಿ , ಪ್ರೇಮ , ಅಭಿರುಚಿಗೆ ತಕ್ಕಂತೆ ವಾತಾವರಣ ಇರಬೇಕು ಎಂದು ಬಯಸುವ ವ್ಯಕ್ತಿಗಳು ಆಗಿರುತ್ತಾರೆ ಎಂದು ಹೇಳಲಾಗಿದೆ.

Leave a Comment