ಅಡುಗೆ ಮನೆ ಟಿಪ್ಸ್

ನಾವು ಈ ಲೇಖನದಲ್ಲಿ ಗಡಿಬಿಡಿ ಜೀವನದಲ್ಲಿ ಅಡುಗೆಮನೆ ನಿವ೯ಹಣೆ ಬೇಸರ ತಂದಿದ್ದರೆ, ಸರಳ ಟಿಪ್ಸ್ ; ಪಾಲಿಸಿ, ಹೇಗೆ ಸಮಯ ಉಳಿಸುವುದು ಎಂದು ತಿಳಿಯೋಣ .ಅಡುಗೆ ಮನೆ ನಿರ್ವಹಣಿ :- ಇಂದಿನ ಅವಸರದ ಜೀವನದಲ್ಲಿ ಎಲ್ಲವೂ ಗಡಿಬಿಡಿಯೇ. ಅದರಲ್ಲೂ ಕೆಲಸಕ್ಕೆ ತೆರಳುವ ಹೆಣ್ಣು ಮಕ್ಕಳ ಅಡುಗೆ ಮನೆಯ ಗಡಿಬಿಡಿ, ಗಜಿಬಿಜಿಗೆ ಕೊನೆಯಿಲ್ಲ. ಆದರೆ ಅಡುಗೆ ಮನೆಯಲ್ಲಿ ಗಡಿಬಿಡಿ ತಪ್ಪಿಸಿ, ಸುಸೂತ್ರವಾಗಿ ಅಡುಗೆ ಹಾಗೂ ಸಮಯ ನಿರ್ವಹಣೆ ನಿಮ್ಮದಾಗಬೇಕು ಎಂದರೆ, ಈ ಟಿಪ್ಸ್ ಪಾಲಿಸಿ. ಖಂಡಿತ ಇದು ನಿಮಗೆ ಸಹಾಯ ಆಗುವುದರಲ್ಲಿ ಎರಡು ಮಾತಿಲ್ಲ.

ಇಂದು ಹೆಚ್ಚಿನ ಮಹಿಳೆಯರು ಉದ್ಯೋಗದಲ್ಲಿರುವವರೇ. ನಿತ್ಯ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅಡುಗೆ ಮನೆ ಕೆಲಸ ನಿಭಾಯಿಸುವ ಕೆಲವೊಂದು ಸರಳ ಟಿಪ್ಸ್ ಗಳು ಇಲ್ಲಿವೆ. ಇದರಿಂದ ನಿಮ್ಮ ಸಮಯ ಹಾಗೂ ಶಕ್ತಿ ಎರಡೂ ಉಳಿಯಲಿದೆ.

1 . ಆಲೂಗೆಡ್ಡೆ ಸಿಪ್ಪೆಯನ್ನು ಬೇಗ ತೆಗೆಯಲು ಕುದಿಸುವಾಗ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿದರೆ ಆಲೂಗಡ್ಡೆಯ ಸಿಪ್ಪೆಯನ್ನು ಬಹಳ ಸುಲಭವಾಗಿ ತೆಗೆಯಬಹುದು. 2 . ಕಾಳುಗಳು ಮತ್ತು ಬೇಳೆಗಳು ಬೇಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಬಳಸುವ ಮುನ್ನ ಬೇಳೆ ಅಥವಾ ಕಾಳುಗಳನ್ನು ನೆನೆಸಿ, ನಂತರ ಬೇಯಿಸಿದರೆ ಬೇಗ ಬೇಯುತ್ತದೆ.

3 . ಅಕ್ಕಿಯನ್ನು ಮೃದುವಾಗಿಸಲು ಅಡುಗೆ ಮಾಡುವಾಗ ಎಣ್ಣೆ ಅಥವಾ ತುಪ್ಪವನ್ನು ಸೇರಿಸಬೇಕು. ಇದರಿಂದ ಅಕ್ಕಿ ಬೇಗನೆ ಬೇಯುವುದರ ಜೊತೆಗೆ ಉತ್ತಮ ರುಬೆಯನ್ನೂ ನೀಡುತ್ತದೆ. 4 . ತೆಂಗಿನಕಾಯಿಯನ್ನು ಯಾವುದೇ ಗ್ರೇವಿಯನ್ನು ದಪ್ಪವಾಗಿಸಲು ಬಳಸಲಾಗುತ್ತದೆ . ಇದನ್ನು ಯಾವುದೇ ತರಕಾರಿಗಳೊಂದಿಗೆ ಸಹ ಹಾಕಿ ಅಡುಗೆ ಮಾಡಬಹುದು.

5 . ಪದೇ ಪದೇ ಕಾಯಿ ತುರಿಯುವುದು ಕಷ್ಟದ ಕೆಲಸ. ಹಾಗಾಗಿ ಕಾಯಿ ತುರಿಯನ್ನು ದೀರ್ಘ ಕಾಲದವರೆಗೆ ತಾಜಾವಾಗಿ ಇಡಲು ನೀವು ಅದರಲ್ಲಿ ಕರಿಬೇವನ್ನು ಹಾಕಿ ಇಡಬಹುದು. 6 . ಬಿಡುವಿದ್ದಾಗ ಎರಡು ತೆಂಗಿನಕಾಯಿಯನ್ನು ತುರಿದು ಒಂದು ಡಬ್ಬದಲ್ಲಿ ಹಾಕಿಟ್ಟು ಫ್ರೀಜರ್ ನಲ್ಲಿ ಇಟ್ಟರೆ ಪ್ರತಿ ಸಲ ಕಾಯಿ ತುರಿಯುವ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.

7 . ಪಾಯಸ ಮಾಡುವಾಗ ಹಾಲು ದಪ್ಪವಾಗಲು ಸಹ ಬಹಳ ಸಮಯವನ್ನು ತೆಗೆದು ಕೊಳ್ಳತ್ತದೆ. ಇಂತಹ ಸಂದಭ೯ದಲ್ಲಿ ಹಾಲಿನ ಪುಡಿಯನ್ನು ಬಳಸಬಹುದು. 8 . ಜೇನು ತುಪ್ಪವನ್ನು ಫ್ರಿಡ್ಜ್ ನಲ್ಲಿ ಗಟ್ಟಿಯಾಗುತ್ತದೆ. ಬದಲಾಗಿ ತಂಪಾದ, ಶುಷ್ಕ ಸ್ಥಳದಲ್ಲಿ ಇಟ್ಟರೆ ಗಟ್ಟಿಯಾಗುವುದಿಲ್ಲ.

9 . ಹಾಟ್ ಬಾಕ್ಸ್ ಗಳಲ್ಲಿ ತಿಂಡಿ ಇಟ್ಟ ಬಳಿಕ ಅದನ್ನು ಬಟ್ಟೆಯಿಂದ ಮುಚ್ಚಿದರೆ ತೇವಾಂಶ ಉಂಟಾಗುವುದಿಲ್ಲ. 10 . ಟೊಮೊಟೊ ಬಹಳ ದಿನಗಳವರೆಗೆ ಕೆಂಡದಂತೆ ಇಡಬೇಕಾದರೆ , ಟೊಮೆಟೊ ಹಣ್ಣಿನ ಮೇಲ್ಭಾಗಕ್ಕೆ ಪ್ಲಾಸ್ಟರ್ ಹಾಕಿ ಇಡಬೇಕು.

11 . ಉಪ್ಪಿನ ಡಬ್ಬದಲ್ಲಿ ಎರಡು ಒಣಮೆಣಸಿನ ಕಾಯಿಯನ್ನು ಹಾಕಿ ಇಟ್ಟರೆ ಉಪ್ಪು ನೀರು ಬಿಟ್ಟು ಕೊಳ್ಳುವುದಿಲ್ಲ. 12 . ಬೆಳ್ಳುಳ್ಳಿಯನ್ನು ಹಚ್ಚಿದ ನಂತರ ಕೈ ಅದೇ ವಾಸನೆ ಬರುತ್ತಿದ್ದರೆ ಒಂದು ಪ್ಲೇಟ್ ಗೆ ಕೈಯನ್ನು ರಬ್ ಮಾಡಿದರೆ ಬೆಳ್ಳುಳ್ಳಿಯ ಹಸಿ ವಾಸನೆ ಹೋಗುತ್ತದೆ.

13 . ತೆಂಗಿನಕಾಯಿ ಒಡೆದ ಬಳಿಕ ಅದಕ್ಕೆ ಸ್ವಲ್ಪ ಉಪ್ಪು ಸವರಿ ಇಟ್ಟರೆ ಕೆಲ ದಿನಗಳವರೆಗೆ ಕೆಡುವುದಿಲ್ಲ. 14 . ನೀರನ್ನು ಕುದಿಸುವಾಗ ಪಾತ್ರೆಯನ್ನು ಮುಚ್ಚಿರಿ. ಇದರಿಂದ ನೀರು ಬೇಗನೆ ಬಿಸಿಯಾಗುತ್ತದೆ. 15 . ಆಹಾರ ಅಂಟಿಕೊಳ್ಳದಂತೆ ಸ್ಟೇನ್ ಲೆಸ್ ಸ್ಟೀಲ್ ಕುಕ್ ವೇರ್ ಅನ್ನು ಸರಿಯಾಗಿ ಬಳಸಿ.

16 . ಹಸಿಮೆಣಸಿನ ಕಾಯಿಯನ್ನು ಕತ್ತರಿಸಲು ಕತ್ತರಿಯನ್ನು ಬಳಸಿ. ಇದರಿಂದ ಕೈ ಉರಿಯುವುದನ್ನು ತಪ್ಪಿಸಬಹುದು. ಚಮಚ ಬಳಸಿ ಶುಂಠಿಯ ಸಿಪ್ಪೆಯನ್ನು ತೆಗೆದರೆ ಆ ಕೆಲಸ ಸುಲುಭವಾಗಿ, ಬೇಗನೆ ಆಗುತ್ತದೆ.18 . ಸಕ್ಕರೆ ಡಬ್ಬಿಯಲ್ಲಿ ಮೂರರಿಂದ ನಾಲ್ಕು ಲವಂಗ ಕಾಳುಗಳನ್ನು ಹಾಕಿ ಇಟ್ಟರೆ ಡಬ್ಬಕ್ಕೆ ಇರುವೆ ಬರುವುದನ್ನು ತಡೆಯಬಹುದು.

Leave a Comment