ಈ ಐದು ಸಮಯದಲ್ಲಿ ಶೃಂಗಾರ ಮಾಡಲೇಬಾರದು. ಈ 5 ವೇಳೆಗಳಲ್ಲಿ ಶೃಂಗಾರ ಮಾಡಿದರೆ ದಾರಿದ್ರ್ಯ ಖಂಡಿತಾ ಅನುಭವಿಸಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ಗಂಡ ಹೆಂಡತಿ ಯಾವ ಸಮಯದಲ್ಲಿ ಶೃಂಗಾರ ಮಾಡಬೇಕು? ಹೆಂಗಸರು ಶೃಂಗಾರ ಮುಗಿದ ನಂತರ ಅಂದರೆ ಬೆಳಿಗ್ಗೆ ಎದ್ದ ತಕ್ಷಣ ತಲೆ ಸ್ನಾನ ಮಾಡಬಹುದಾ? ಸ್ನಾನವಿಲ್ಲದೇ ಅಡುಗೆ ಮನೆ ಪ್ರವೇಶಿಸುವ ಹಾಗೆ ಇಲ್ವಾ? ದೇವರ ಪೂಜೆ ನಿಯಮ ಹೇಗೆ? ನಿತ್ಯ ತಲೆ ಸ್ನಾನ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಾ?
ಈ ಎಲ್ಲ ಗೊಂದಲಗಳಿಗೆ ಹಿರಿಯರು ಶಾಸ್ತ್ರದಲ್ಲಿ ಏನು ಹೇಳಿದ್ದಾರೆ ಎಂಬುವುದರ ಬಗ್ಗೆ ತಿಳಿಯೋಣ ಬನ್ನಿ.
ದಂಪತಿಗಳು ಈ 5 ಸಮಯದಲ್ಲಿ ಯಾವುದೇ ಕಾರಣಕ್ಕೂ ಶೃಂಗಾರ ಮಾಡಲೇಬಾರದು ನೆನಪಿರಲಿ.
ಪುರಾಣದಲ್ಲಿ ತಿಳಿಸಿರುವಂತೆ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಶೃಂಗಾರ ಮಾಡಬಾರದು. ಹೌದು, ಅದು ದೇವತೆಗಳ ಸಂಚಾರ ಮಾಡುವ ಸಮಯ ಹಾಗೂ ಅದು ಪೂಜಾ ಸಮಯ. ಆದ್ದರಿಂದ ದಂಪತಿಗಳು ಆ ಸಮಯದಲ್ಲಿ ಶೃಂಗಾರ ಮಾಡುವುದು ಒಳ್ಳೆಯದಲ್ಲ.
ಸಾಯಂಕಾಲ ಸಮಯದಲ್ಲಿ ಸಹ ದಂಪತಿಗಳು ಶೃಂಗಾರ ಮಾಡಬಾರದು. ಈ ತಪ್ಪಾದರೆ ಕೆಟ್ಟ ಗುಣದ ಮಕ್ಕಳು ಜನಿಸುತ್ತಾರೆ ಎಂದು ಹೇಳಲಾಗಿದೆ. ಮನಸ್ತಾಪ ಅಥವಾ ಆರೋಗ್ಯ ಸಮಸ್ಯೆ ಇದ್ದರೆ ಶೃಂಗಾರ ಮಾಡಲೇಬಾರದು.
ವ್ರತದ ಸಮಯದಲ್ಲಿ ಅಥವಾ ಯಾವುದಾದರೂ ವಿಶೇಷ ಹಬ್ಬ, ಆಚರಣೆ, ಸಡಗರ, ಸಂಭ್ರಮದಲ್ಲಿ ದಂಪತಿಗಳು ಯಾವುದೇ ಕಾರಣಕ್ಕೂ ಶೃಂಗಾರ ಮಾಡಲೇಬಾರದು.
ಗ್ರಹಣದ ಸಮಯದಲ್ಲಿ ಸೂರ್ಯಗ್ರಹಣ ಅಥವಾ ಚಂದ್ರ ಗ್ರಹಣ ಇಂತಹ ಸಮಯದಲ್ಲಿ ದಂಪತಿಗಳು ಯಾವುದೇ ಕಾರಣಕ್ಕೂ ಶೃಂಗಾರ ಮಾಡಲೇಬಾರದು. ಹೆಂಗಸರು ಮುಟ್ಟಾದಾಗ ಮುಟ್ಟಿನಾವಧಿ ಮುಗಿಯುವವರೆಗೂ ಐದು ದಿನದವರೆಗೂ ಯಾವುದೇ ಕಾರಣಕ್ಕೂ ಶೃಂಗಾರ ಮಾಡಲೇಬಾರದು.
ಪ್ರೆಗ್ನೆನ್ಸಿ ಟೈಮಲ್ಲಿ ಯಾವುದೇ ಕಾರಣಕ್ಕೂ ಶೃಂಗಾರ ಮಾಡುವುದು ಒಳ್ಳೆಯದಲ್ಲ. ಇನ್ನೂ ಮುಖ್ಯವಾದ ವಿಚಾರ ಎಂದರೆ ಶೃಂಗಾರ ಮಾಡುವಾಗ ದಂಪತಿಗಳು ಖುಷಿಯಾಗಿರಬೇಕು. ಯಾವುದೇ ಮನಸ್ತಾಪ ಇರಬಾರದು. ಇದು ಎರಡು ಆತ್ಮಗಳ ಮಿಲನ. ಮಲಗುವ ಕೊಠಡಿ ಕಗ್ಗತ್ತಲಾಗಿ ಇರಬಾರದು. ಕನಿಷ್ಠ ಪಕ್ಷ ಚಿಕ್ಕ ದೀಪ, ಕಂದಾಗಿರೋ ಬಲ್ಬ್ ಅಥವಾ ಕ್ಯಾಂಡಲ್ ಆದರೂ ಇರಬೇಕು.
ದಂಪತಿಗಳು ಕತ್ತಲಲ್ಲಿ ಶೃಂಗಾರ ಮಾಡಿದರೆ ಜೀವನದಲ್ಲಿ ದಾರಿದ್ರ್ಯ ಅನುಭವಿಸುವ ಸಾಧ್ಯತೆ ಇರುತ್ತದೆ. ಪುರುಷರು ಶೃಂಗಾರ ಮಾಡಿದ ನಂತರ ಬೆಳಗ್ಗೆ ಎದ್ದ ನಂತರ ಕಡ್ಡಾಯವಾಗಿ ತಲೆ ಸ್ನಾನ ಮಾಡಲೇಬೇಕು. ನಂತರವೇ ಇನ್ನಿತರ ಕೆಲಸ ಮಾಡಬೇಕು. ಹೆಂಗಸರು ಕೂಡ ಸ್ನಾನ ಮಾಡಿದ ನಂತರವೇ ಮನೆ ಕೆಲಸಗಳನ್ನು ಮಾಡಬಹುದು. ಹಾಗೂ ದೀಪಾರಾಧನೆ ಮಾಡಬಹುದು.