ಭಗವಂತನು ಭಕ್ತರನ್ನು ಪರೀಕ್ಷಿಸುತ್ತಾರೆಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಹಾಗೆಯೇ ಎಂತಹ ಸಮಯದಲ್ಲೂ ತನ್ನ ಭಕ್ತರನ್ನು ಕಾಪಾಡುತ್ತಾನೆ. ಈ ದಿನ ನಡೆದ ಘಟನೆ ಈ ವಿಷಯ ಅರ್ಥವಾಗುವ ರೀತಿಯಲ್ಲಿ ತಿಳಿಸುತ್ತದೆ. ಕೇದಾರನಾಥ ದೇವಾಲಯದ ದ್ವಾರಗಳು 6 ತಿಂಗಳುಗಳ ಕಾಲ ಮುಚ್ಚಿರುತ್ತವೆ ಮತ್ತು ಆರು ತಿಂಗಳುಗಳ ಕಾಲ ತೆರೆದಿರುತ್ತವೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. 2024 ಮೇ 10ನೇ ತಾರೀಖು ಕೇದಾರನಾಥ ದೇವಾಲಯದ ಬಾಗಿಲುಗಳು ತೆರೆದರು.
ಕೇದಾರ ನಾಥನ ದರ್ಶನಕ್ಕೆ ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಜನರು ಬರುತ್ತಿದ್ದರು. ಭಕ್ತರಿಗೋಸ್ಕರ ದೇವಸ್ಥಾನದ ಸುತ್ತಲು ಏರ್ಪಾಟು ಮಾಡುವುದು ಸಾಧಾರಣ ವಿಷಯವಾಗಿರುತ್ತದೆ. ಭಕ್ತರು ಹೆಚ್ಚು ದರ್ಶನಕ್ಕೆ ಬರಲು ಪ್ರಾರಂಭವಾಗಿರುವುದರಿಂದ ಉತ್ತರ ಖಾಂಡದ ಸರ್ಕಾರ ಕೇದಾರನಾಥ ದೇವಾಲಯದ ಸುತ್ತಲು ಸ್ಥಳವನ್ನು ವಿಸ್ತರಿಸಲು ನಿರ್ಧರಿಸಿತು.ಇದರಿಂದ ದೇವಾಸ್ಥಾನದ ಸುತ್ತಮುತ್ತ ಇರುವ ಅಂಗಡಿಗಳನ್ನು ತೆರವುಗೊಳಿಸಬೇಕಾಗುತ್ತದೆ.ಈ ಪ್ರಕ್ರಿಯೆಯಿಂದಾಗಿ ಅಂಗಡಿಗಳು ಮತ್ತು
ಹೋಟೆಲ್ ಗಳಿಗೆ ನೋಟೀಸನ್ನು ಅಲ್ಲಿನ ಸರ್ಕಾರ ಕಳಿಸಿದರು. ಇಲ್ಲಿನ ಅಂಗಡಿಗಳು ಆರು ತಿಂಗಳು ಆದಾಯವನ್ನು ಪಡೆಯುತ್ತವೆ ಮತ್ತೆ ಇನ್ನು ಆರು ತಿಂಗಳು ಯಾವುದೇ ರೀತಿಯ ವಹಿವಾಟು ನಡೆಯದೇ ಅಂಗಡಿಗಳು ಮುಚ್ಚಬೇಕಾಗುತ್ತದೆ. ಅಲ್ಲಿನ ಜನರು ಈ ಆರು ತಿಂಗಳಿನ ಆದಾಯವನ್ನು ನಂಬಿಕೊಂಡಿದ್ದಾರೆ. ಆದರೇ ಅಲ್ಲಿನ ಸರ್ಕಾರ ಅಂಗಡಿಗಳನ್ನು ತೆರವುಗೊಳಿಸಿದಾಗ ಅಲ್ಲಿನ ಜನರು ಕಣ್ಣೀರಿಟ್ಟರು. ಅಲ್ಲಿನ ಜನರು ಕಡಿಮೆ ಬೆಲೆಗೆ ಖರೀದಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿದ್ದು
ನಮ್ಮ ತಪ್ಪು ಎಂದು ಭಾವಿಸಿ ಭಗವಂತನಾದ ಕೇದಾರನಾಥನಲ್ಲಿ ಕ್ಷಮೆ ಕೇಳಿದರು. ನಂತರ ಆ ಅಂಗಡಿಗಳನ್ನು ಜೆಸಿಬಿಗಳ ಮೂಲಕ ಆ ಅಂಗಡಿಗಳನ್ನು ತೆರವು ಮಾಡಿದ ನಂತರ ಸಿಮೆಂಟ್ ರೋಡ್ ರೆಡಿ ಮಾಡುವ ಸಂದರ್ಭದಲ್ಲಿ ಎಲ್ಲರಿಗೂ ದಿಗ್ಭ್ರಾಂತಿಗೆ ಗುರಿಮಾಡಿತ್ತು. ಕೇದಾರನಾಥ ದೇವಾಲದಯದ ಸುತ್ತಮುತ್ತ ಭೂಮಿಯನ್ನು ಅಗೆಯುವಾಗ ಸುಮಾರು 5000 ವರ್ಷಗಳ ಹಿಂದಿನದಾದ ಕಿರೀಟ ಸಿಗುತ್ತದೆ. 2023ರಲ್ಲಿ ಕೇದಾರನಾಥದಲ್ಲಿ ಭಯಂಕರವಾದ ವಿಪತ್ತು ಸಂಭವಿಸಿತ್ತು
ಆ ಸಮಯದಲ್ಲಿ ಭೈರವನಾಥನ ದೇವಾಸ್ಥಾನ ಮುಳುಗಿ ಬಿಡುತ್ತದೆ ಅಲ್ಲಿ ಇದ್ದ ಭೈರವನಾಥನ ಕಿರೀಟ ಅದೃಶ್ಯವಾಗಿತ್ತು. ಭೂಮಿಯನ್ನು ಅಗೆಯುವ ಈ ಸಂದರ್ಭದಲ್ಲಿ ಆ ಕಿರೀಟವೇ ಸಿಕ್ಕಿದೆ ಎಂದು ಹೇಳುತ್ತಾರೆ. ಇದೆಲ್ಲವೂ ಕೇದಾರನಾಥನ ಮಹಿಮೆ ಎಂದು ಹೇಳಿಕೊಂಡರು. ನಂತರ ಆ ಕಿರೀಟವನ್ನು ಶುದ್ಧೀಕರಿಸಿ ಭೈರವನಾಥನಿಗೆ ಸಮರ್ಪಿಸಿದರು. ಭೈರವನಾಥನನ್ನು ಕೇದಾರನಾಥನಿಗೆ ರಕ್ಷಣೆ ಎಂದು ಹೇಳುತ್ತಾರೆ. ಕೇದಾರನಾಥದಲ್ಲಿ ಏನಾದರೂ ತಪ್ಪು ನಡೆದಾಗ ಭೈರವನಾಥನು ಅದನ್ನು ತಡೆದು ಭಕ್ತರನ್ನು ರಕ್ಷಿಸುತ್ತಾನೆಂದು ನಂಬುತ್ತಾರೆ.
ಒಂದು ದಿನ ರಾತ್ರಿ ಪ್ರಧಾನ ಪೂಜಾರಿಯ ಕನಸ್ಸಿನಲ್ಲಿ ಭೈರವ ನಾಥನು ಬಂದು ಆ ಪ್ರಾಂತ್ಯದಲ್ಲಿ ಅಂಗಡಿ ಮುಂಗಟ್ಟುಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕೆಂದು ಅಂದರೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಧರ್ಮಶಾಲೆಯ ಮಾಲೀಕರಿಗೆ ಯಾವ ರೀತಿಯ ಹಾನಿ ಮಾಡಬಾರದೆಂದು ಹೇಳಿ ಮಾಯವಾಗುತ್ತಾರೆ. ಬೆಳಿಗ್ಗೆ ಎದ್ದು ಆ ಪ್ರಧಾನ ಪೂಜಾರಿ ಈ ಕನಸ್ಸಿನ ಬಗ್ಗೆ ಎಲ್ಲರಿಗೂ ಹೇಳುತ್ತಾರೆ. ಈ ಪ್ರಧಾನ ಅರ್ಚಕರ ಮಾತಿಗೆ ಉತ್ತಮ ಗೌರವವಿದೆ.
ಅವರ ಮಾತಿಗೆ ಗೌರವ ಕೊಟ್ಟು ಭೂಮಿ ಅಗೆಯುವ ಕಾರ್ಯ ನಿಂತು ಹೋಗುತ್ತದೆ. ಆದರೇ ಈಗಾಗಲೇ ಅಂಗಡಿ ಮತ್ತು ಧರ್ಮಶಾಲೆಯನ್ನು ತೆರವುಗೊಳಿಸಿದ್ದರಿಂದ ಸರ್ಕಾರವು ಸಹಾಯವನ್ನು ಮಾಡುತ್ತದೆ ಮತ್ತು ಅಂಗಡಿ ಮತ್ತು ಧರ್ಮಶಾಲೆಯನ್ನು ಕಟ್ಟಿಸಲು ಕೇದಾರನಾಥನ ಸುತ್ತಲು ಭೂಮಿಯನ್ನು ಕೊಡಲಾಗುತ್ತದೆ. ಮತ್ತೆ ಅದರಲ್ಲಿ ತಮ್ಮ ಅಂಗಡಿ ಮತ್ತು ಧರ್ಮಶಾಲೆಯನ್ನು ಕಟ್ಟಿಸಿಕೊಳ್ಳುತ್ತಾರೆ. ಈ ಸಂಪೂರ್ಣ ಘಟನೆಯಲ್ಲಿ ಮೂರು ವಿಷಯಗಳು ತಿಳಿಯುತ್ತದೆ. ಕಡಿಮೆ ಬೆಲೆಯನ್ನು ಕೊಂಡುಕೊಂಡು ದುಬಾರಿ ಬೆಲೆಗೆ ಮಾರುತ್ತಿದ್ದ ಅಂಗಡಿ ಮಾಲೀಕರಿಗೆ ಒಳ್ಳೆಯ ಗುಣ ಪಾಠ ಹೇಳಿದ್ದೇ ಮೊದಲನೇ ಕೆಲಸ. ಎರಡನೇಯದಾಗಿ ಭೈರವನಾಥನ ಪುರಾತನ ಕಿರೀಟ ಕಾಣೆಯಾಗಿ ಮತ್ತೆ ಭೂಮಿಯಲ್ಲಿ ದೊರೆಯಿತು.
ಮೂರನೇ ವಿಷಯ ಯಾವುದೇ ಅಂಗಡಿ ಮಾಲೀಕರಿಗಾಗಲಿ ಮತ್ತು ಧರ್ಮಶಾಲೆಯ ಮಾಲೀಕರಿಗಾಗಲಿ ಅನ್ಯಾಯ ನಡೆಯಲಿಲ್ಲ. ಅವರ ಕೋರಿಕೆಯು ಈಡೇರಿತು. ಚಾರ್ ಧಾಮ ಯಾತ್ರೆಗಳಲ್ಲಿ ಕೇದಾರನಾಥ್ ದೇವಾಲಯವು ಒಂದಾಗಲಿದೆ. ದ್ವಾಪರಯುಗದಲ್ಲಿ ಪಾಂಡವರು ಈ ದೇವಾಲಯವನ್ನು ನಿರ್ಮಿಸಿದರೆಂದು ನಮ್ಮ ಪುರಾಣಗಳು ತಿಳಿಸುತ್ತವೆ. ಕ್ರಿ.ಶ. 8ನೇ ಶತಮಾನದಲ್ಲಿ ಆದಿ ಗುರು ಶಂಕರಚಾರ್ಯರು ಇಲ್ಲಿ ವಾಸಿಸುತ್ತಿದ್ದರು. ಅವರ ಸಮಾಧಿಯು ಕೂಡ ಇಲ್ಲಿದೆ. ಕೇದಾರನಾಥ ಶಿವಲಿಂಗ ತ್ರಿಭುಜಾಕಾರದಲ್ಲಿದೆ. ಮಹಾಭಾರತ ಯುದ್ಧ ಮುಗಿದ ನಂತರ ವೇದವ್ಯಾಸರ ಸೂಚನೆಯಂತೆ ಪಾಂಡವರು ಕೇದರನಾಥದಲ್ಲಿ ಶಿವಲಿಂಗವನ್ನು ಪ್ರತಿಸ್ಥಾಪಿಸಿದರೆಂದು ಮಹಾಭಾರತವು ಹೇಳುತ್ತದೆ.