ನಾವು ಈ ಲೇಖನದಲ್ಲಿ ಕರ್ಕಾಟಕ ರಾಶಿಯ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಜೀವನದಲ್ಲಿ ತುಂಬಾ ಶ್ರಮಪಟ್ಟು ಕೆಲಸವನ್ನು ಮಾಡುತ್ತೀರಾ ಜೀವನದಲ್ಲಿ ಪ್ರತಿಕ್ಷಣ ಹೋರಾಟ ಮತ್ತು ಪಾಠವನ್ನು ನಿಮಗೆ ಜೀವನ ಹೇಳಿ ಕೊಡುತ್ತಿದೆ. ನಿಮ್ಮ ಗುರಿಯನ್ನು ತಲುಪಲು ನಿಮಗೆ ಸಾಧ್ಯವಾಗುತ್ತಿಲ್ಲ. ಈ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಮೇ ತಿಂಗಳು ಹೊಸ ಆಶಾವಾದವನ್ನು ಕೊಡುತ್ತದೆ. ಇದರ ಫಲ ಯಾವ ರೀತಿ ಇದೆ ನೀವು ಏನನ್ನು ಬಯಸಬಹುದು
ಮತ್ತು ಯಾವ ಅವಧಿಯವರೆಗೂ ಯಶಸ್ಸು ನಿಮಗೆ ಸಿಗುತ್ತಾ ಹೋಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಮೊದಲು ಹೇಳುವ ಶುಭ ಸಮಾಚಾರಗಳು, ಮೇ ಮಾಸ ಭವಿಷ್ಯಕ್ಕೆ ಮಾತ್ರ ಅನ್ವಯವಾಗುತ್ತದೆ . ಆದರೆ ಕೊನೆಯಲ್ಲಿ ಹೇಳುವ ಶುಭ ಸಮಾಚಾರಗಳು ವರ್ಷಾಂತದವರೆಗೂ ಇರುತ್ತದೆ. ಮೇ ತಿಂಗಳಿನಲ್ಲಿ ರವಿಗ್ರಹದ ಅನುಗ್ರಹ ನಿಮ್ಮ ಮಟ್ಟಿಗೆ ತುಂಬಾ ಶುಭಫಲವಾಗಿದೆ. 14ನೇ ತಾರೀಕಿಗೆ ರವಿ ಪರಿವರ್ತನೆ ಆಗುತ್ತಾನೆ. ಮೇ ತಿಂಗಳಿನಲ್ಲಿ ರವಿಯಿಂದ ನೀವು ಒಳ್ಳೆಯ ಶುಭ ಸಮಾಚಾರವನ್ನು ಬಯಸಬಹುದು .
ಮಹತ್ವದ ಕೆಲಸ ಕಾರ್ಯಗಳಲ್ಲಿ ಸಾಧನೆಯನ್ನು ಮಾಡುತ್ತೀರಾ, ಒಳ್ಳೆಯ ಆಶಾಕಿರಣ ನಿಮಗೆ ಸಿಗುತ್ತದೆ. ಕಾಲ ಕಾಲಕ್ಕೆ ಆಗಬೇಕಾದಂತಹ ಕೆಲಸಗಳು ಎಲ್ಲವೂ ನೆರವೇರುತ್ತದೆ . ಕೆಲಸ ಹುಡುಕುವಂತಹ ವ್ಯಕ್ತಿಗಳಿಗೆ ಸಂದರ್ಶನದ ವೇಳೆ ಬರಬಹುದು. ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳು ಬರುತ್ತವೆ. ಹೊಸ ವಿಚಾರಗಳನ್ನು ರೂಢಿಸಿಕೊಳ್ಳುವಲ್ಲಿ ಮತ್ತು ಹೊಸ. ಪ್ರಯೋಗಗಳನ್ನು ಮಾಡುವಲ್ಲಿ ಅನ್ವೇಷಣೆ , ಸಾಧನೆ ಇಂಥ ವಿಚಾರಗಳಲ್ಲಿ ಒಳ್ಳೆಯ ಯಶಸ್ಸನ್ನು ಕಾಣುವಿರಿ. ಸರ್ಕಾರಿ ಕೆಲಸಗಳಲ್ಲಿ ನಿಮ್ಮ ಕೈ ಮೇಲೆ ಆಗುತ್ತದೆ.
ಖಾಸಗಿ ಕೆಲಸಗಳನ್ನು ಸಹ ಸುಲಭವಾಗಿ ನೆರವೇರುತ್ತದೆ. ಮುಖ್ಯವಾಗಿ ರವಿಯು ಧನವನ್ನು ತಂದುಕೊಡುತ್ತಾನೆ. ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಮತ್ತು 14ನೇ ತಾರೀಖಿನ ನಂತರ ರವಿ ಪರಿವರ್ತನೆ ಆಗುತ್ತಾನೆ. ರವಿಯು ದ್ವಿತೀಯ ಸ್ಥಾನಕ್ಕೆ ಬರುತ್ತಾನೆ. ದ್ವಿತೀಯ ಸ್ಥಾನಕ್ಕೆ ಬಂದಾಗ ಅದು ಧನ ಸ್ಥಾನದಲ್ಲಿರುತ್ತದೆ .ಆರ್ಥಿಕ ವಿಚಾರಗಳಲ್ಲಿ ತುಂಬಾ ಯಶಸ್ಸು ದೊರಕುತ್ತದೆ. ಜೀವನದಲ್ಲಿ ದುಡ್ಡು ಒಂದೇ ಇದ್ದರೆ ಸಾಕಾಗುವುದಿಲ್ಲ ಯಶಸ್ಸು ಮಾನ ಸನ್ಮಾನಗಳು ಗುರುತಿಸಿಕೊಳ್ಳುವಿಕೆ ಇವೆಲ್ಲವೂ ಬೇಕಾಗುತ್ತದೆ. ಆ ರೀತಿಯ ವಿಚಾರಗಳಲ್ಲೂ ನಿಮಗೆ ಯಶಸ್ಸು ದೊರಕುತ್ತದೆ.
ಆರೋಗ್ಯದಲ್ಲಿ ಏರುಪೇರಿನ ಸಮಸ್ಯೆ ಇದ್ದರೆ ರೋಗ ರುಜಿನಗಳು ನಿಮ್ಮನ್ನು ಕಾಡುತ್ತಿದ್ದರೆ , ಈ ಸಮಸ್ಯೆಗಳಿಂದ ರವಿಯು ನಿಮಗೆ ಮುಕ್ತಿಯನ್ನು ಕೊಡುತ್ತಾನೆ. ಮುಖ್ಯವಾಗಿ ನಿಮ್ಮ ಜೀವನದಲ್ಲಿ ಹೊಸ ಸಂಚಲನೆ ಇವು ಮೂಡುತ್ತದೆ . ಜೀವನದಲ್ಲಿ ಬರೀ ಹಣವಿದ್ದರೆ ಮಾತ್ರವಷ್ಟೇ ಸಾಲದು ಖುಷಿಯ ವಾತಾವರಣ ಸಹ ನಿಮಗೆ ನಿರ್ಮಾಣವಾಗುತ್ತದೆ. ದೀರ್ಘಕಾಲದ ಹೂಡಿಕೆಗಳು ಇವುಗಳ ಬಗ್ಗೆ ನಿಮಗೆ ಒತ್ತಡದ ಮತ್ತು ಆತಂಕದ ವಾತಾವರಣ ಸೃಷ್ಟಿಯಾಗುತ್ತದೆ .ಆದರೆ ಅದಕ್ಕೆ ತಲೆಕೆಡಿಸಿಕೊಳ್ಳುವಂತಹ ಅಗತ್ಯವಿಲ್ಲ . ಲಾಭದ ಸ್ಥಾನಕ್ಕೆ ಗುರು ಗ್ರಹವು ಒಂದನೇ ತಾರೀಕಿಗೆ ಬರುವುದರಿಂದ ಯೋಚನೆ ಮಾಡುವ ಅಗತ್ಯವಿಲ್ಲ.
10ನೇ ತಾರೀಕಿಗೆ ಬುಧ ಗ್ರಹವು ಪರಿವರ್ತನೆಯಾಗಿ ನಿಮ್ಮ ರಾಶಿಗೆ ಬರುತ್ತದೆ . ಈ ಎಲ್ಲಾ ಪರಿವರ್ತನೆಗಳು ಒಟ್ಟಾರೆಯಾಗಿ ನಿಮಗೆ ಲಾಭವನ್ನು ತಂದುಕೊಡುತ್ತದೆ. ಇಂತಹ ಲಾಭದ ಸ್ಥಾನಕ್ಕೆ ಪ್ರೇರಕವಾಗಿ ಇನ್ನೊಂದಷ್ಟು ಗ್ರಹಗಳು ನಿಲ್ಲುತ್ತದೆ. ತೃತೀಯ ಭಾಗದಲ್ಲಿ ಕೇತು ಗ್ರಹವಿರುತ್ತದೆ. ಮೂರನೇ ಭಾವ ಇದು ವಿಕ್ರಮ ಸ್ಥಾನವಾಗಿರುತ್ತದೆ . ಜೀವನದಲ್ಲಿ ಸಾಕಷ್ಟು ಧೈರ್ಯವನ್ನು ತಂದುಕೊಡುತ್ತದೆ. ಹಠಾತ್ತಾಗಿ ತೆಗೆದುಕೊಳ್ಳುವ ತೀರ್ಮಾನಗಳು ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ.
ಅಷ್ಟಮ ಶನಿ ನಡೆಯುತ್ತಿರುವುದರಿಂದ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳು ಕಾಣಿಸಿಕೊಳ್ಳುತ್ತದೆ . ಗುರುಬಲವು ಹೆಚ್ಚಾಗುತ್ತಿರುವುದಿರುವುದರಿಂದ ಕೇಂದ್ರ ಸ್ಥಾನದಿಂದ ಏಕಾದಶಸ್ಥಾನಕ್ಕೆ ಗುರು ಬರುವುದರಿಂದ ಲಾಭವು ದೊಡ್ಡ ಪ್ರಮಾಣದಲ್ಲಿ ಸಿಗುವುದರ ಜೊತೆಗೆ ಇಷ್ಟು ವರ್ಷದಲ್ಲಿ ಕೆಲಸದಲ್ಲಿ ಬಹಳಷ್ಟು ಶ್ರಮಪಟ್ಟಿದ್ದರೆ ನಿರೀಕ್ಷೆಗಳು ಹೆಚ್ಚಾಗಿದ್ದರೆ ಇಷ್ಟು ದಿನ ನೀವಂದುಕೊಂಡಂತಹ ಕೆಲಸಗಳನ್ನು ಸಾಧಿಸಲು ಸಾಧ್ಯವಾಗದೆ ಇದ್ದರೆ ಇನ್ನು ಮುಂದೆ ಆ ಕೆಲಸಗಳು ಬಹುಬೇಗ ನನಸಾಗುತ್ತದೆ .
ನಿಮಗೆ ಯಶಸ್ಸು ಬಹುಬೇಗ ಬರುತ್ತದೆ . ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಾ. ಗುರು ಗ್ರಹದ ಅನುಗ್ರಹ ,ಹಿರಿಯರ ಅನುಗ್ರಹ, ಹೆಚ್ಚಾಗುತ್ತದೆ .ಈ ರೀತಿಯ ಸಕಾರಾತ್ಮಕ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೆಚ್ಚಾಗುತ್ತದೆ. ಒಂದು ತಿಂಗಳು ಅಥವಾ ಎರಡು ತಿಂಗಳು ಅಷ್ಟೇ ಅಲ್ಲ ಇಡೀ ವರ್ಷಂತದವರೆಗೂ ನಿಮ್ಮಲ್ಲಿ ಸಕರಾತ್ಮಕ ಬೆಳವಣಿಗೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ . ಈ ರೀತಿಯ ಬದಲಾವಣೆಗಳು ಉಂಟಾಗಿ ನಿಮ್ಮ ಜೀವನದಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ.