ಹೆಣ್ಣುಮಕ್ಕಳು ತವರು ಮನೆಯಿಂದ ಗಂಡನ ಮನೆಗೆ ಈ ವಸ್ತುಗಳನ್ನು ತರಬಾರದು

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಪ್ರತಿಯೊಬ್ಬ ಮದುವೆಯಾದ ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಯಾವುದಾದರೂ ವಸ್ತುಗಳನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗಬೇಕು ಎಂಬ ಆಸೆ ಇರುತ್ತದೆ. ಇದು ಹೆಣ್ಣು ಮಕ್ಕಳ ಸಹಜ ಗುಣ. ಮದುವೆಯಾದ ನಂತರ ತವರು ಮನೆಯಿಂದ ಗಂಡನ ಮನೆಗೆ ಯಾವುದೇ ಕಾರಣಕ್ಕೂ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗಲೇ ಬಾರದು ಎಂಬ ನಿಯಮಗಳಿವೆ ಇದು ಸಾಕಷ್ಟು ಜನರಿಗೆ ತಿಳಿದಿರುವ ವಿಷಯ.
ಈ ರೀತಿಯ ತಪ್ಪುಗಳನ್ನು ಮರೆತು ಕೂಡ ಮಾಡಬಾರದು ಮಾಡಿದರೆ ನಿಮ್ಮ ಜೀವನದಲ್ಲಿ ಕಷ್ಟಗಳನ್ನು ನೀವೇ ತಂದುಕೊಂಡಂತೆ, ತವರು ಮನೆ ಮತ್ತು ಗಂಡನ ಮನೆಯ ನೆಮ್ಮದಿ ಕೆಡುವುದು ಹಾಗೂ ಬಡತನಕ್ಕೆ ಕಾರಣವಾಗಬಹುದು.ಮದುವೆಯಾದ ಹೆಣ್ಣು ಮಕ್ಕಳು ಹುಟ್ಟಿದ ಮನೆಯಿಂದ ವಿವಿಧ ರೀತಿಯ ವಸ್ತುಗಳನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗಬೇಕು ಎಂದು ಬಯಸುತ್ತಾರೆ, ಅದರಲ್ಲೂ ಮುಖ್ಯವಾಗಿ ಹೊಸ ಬಟ್ಟೆಗಳು ಸಿಹಿ ಪದಾರ್ಥಗಳು

ಮಸಾಲೆ ತಿನಿಸುಗಳು ಮಸಾಲೆ ಸಾಮಾನುಗಳ ಜೊತೆಗೆ ತಾಯಿ ಪ್ರೀತಿಯಿಂದ ಕೊಡುವಂತಹ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ ಇದರಲ್ಲಿ ಯಾವುದೇ ರೀತಿಯಾದಂತಹ ದೋಷವಿಲ್ಲ.
ಆದರೆ ಕೆಲವರು ಪ್ರತ್ಯೇಕವಾಗಿ ವಸ್ತುಗಳನ್ನು ಯಾವುದೇ ಕಾರಣಕ್ಕೂ ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದೆಂದು ನಮ್ಮ ಹಿರಿಯರು ಹಿಂದಿನ ಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ, ಇನ್ನೂ ಮಹಿಳೆಯರು ಮದುವೆಯ ನಂತರ ಗಂಡನ ಮನೆಗೆ ತವರು ಮನೆಯಿಂದ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದೆಂದು ನೋಡುವುದಾದರೆ,

ಮದುವೆಯಾದ ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಗಣಪತಿ ವಿಗ್ರಹವನ್ನು ಯಾವುದೇ ಕಾರಣಕ್ಕೂ ಉಡುಗೊರೆ ಕೊಡಬಾರದು, ಗಣೇಶ ಮತ್ತು ಲಕ್ಷ್ಮಿ ದೇವಿ ಇರುವಂತಹ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ, ಹಾಗಿದ್ದಾಗ ನಾವು ಹೆಣ್ಣು ಮಕ್ಕಳನ್ನು ಲಕ್ಷ್ಮಿ ದೇವಿಯ ಸ್ವರೂಪವೆಂದು ಭಾವಿಸುತ್ತೇವೆ ಅಂತಹ ಲಕ್ಷ್ಮಿ ದೇವಿಯನ್ನು ಬೇರೆಯವರ ಮನೆಗೆ ಕಳುಹಿಸುವುದರ ಜೊತೆಗೆ ಗಣೇಶನನ್ನು ನೀವು ನಿಮ್ಮ ಮಗಳಿಗೆ ಕೊಟ್ಟರೆ ಅದು ನಿಮ್ಮ ಮನೆಯಿಂದ ಅವರ ಮನೆಗೆ ಹೋಗುತ್ತದೆ ಇದರಿಂದ ತವರು ಮನೆಯಲ್ಲಿ ಕಷ್ಟಗಳು ಎದುರಾಗುತ್ತವೆ ಆದ್ದರಿಂದ ಗಣೇಶನ ವಿಗ್ರಹವನ್ನು ಉಡುಗೊರೆಯಾಗಿ ಕೊಡಬಾರದು ಎಂದು ಹೇಳಲಾಗುತ್ತದೆ.

ತವರು ಮನೆಯಿಂದ ಗಂಡನ ಮನೆಗೆ ಯಾವುದೇ ಕಾರಣಕ್ಕೂ ಚೂಪಾದ ಹರಿತವಾದ ಅಂದರೆ ಚಾಕು ಕತ್ತರಿ ಸೂಜಿ ಈ ರೀತಿಯಾದ ಹರಿತವಾದ ಚೂಪವಾದ ವಸ್ತುಗಳನ್ನು ತರಬಾರದು, ಈ ರೀತಿ ಮಾಡುವುದರಿಂದ ಗಂಡನ ಮನೆಯಲ್ಲಿ ಜಗಳ ಕಲಹ ಹೆಚ್ಚಾಗುತ್ತದೆ ಇದರಿಂದ ಗಂಡ ಹೆಂಡತಿ ಬೇರೆ ಆಗುವ ಸನ್ನಿವೇಶ ಎದುರಾಗಬಹುದು, ಗಂಡನ ಮನೆಯ ತವರು ಮನೆಯ ನಡುವಿನ ಭಾಂದವ್ಯ ಕಡಿಮೆ ಆಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ತವರು ಮನೆಯಿಂದ ಗಂಡನ ಮನೆಗೆ ಹರಿತವಾದ ಚೂಪಾದ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು.

ಸಾಮಾನ್ಯವಾಗಿ ತವರು ಮನೆಯವರು ತಮ್ಮ ಮಗಳಿಗೆ ಮಸಾಲೆ ಪದಾರ್ಥಗಳನ್ನು ಗಂಡನ ಹೋಗಬೇಕು, ಹುಟ್ಟಿದ ಮನೆಯಿಂದ ಹುಣಸೆ ಹಣ್ಣನ್ನು ತೆಗೆದುಕೊಂಡು ಹೋದರೆ ಬಡತನ ಹೆಚ್ಚಾಗುತ್ತದೆ.

ಇನ್ನು ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪವಾದ ಪೊರಕೆಯನ್ನು ಯಾವುದೇ ಕಾರಣಕ್ಕೂ ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು , ಇದರಿಂದ ಬಡತನ ಎಂಬುದು ಹೆಚ್ಚಾಗುತ್ತದೆ, ಮಹಾಲಕ್ಷ್ಮಿ ದೇವಿಯು ಮನೆಯಲ್ಲಿ ನೆನೆಸುವುದಿಲ್ಲ, ಗಂಡನ ಮನೆ ಮತ್ತು ತವರು ಮನೆ ಎರಡು ಮನೆಗಳಿಗೂ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿ ಎದುರಾಗುತ್ತವೆ ಆದ್ದರಿಂದ ಯಾವುದೇ ಕಾರಣಕ್ಕೂ ಪೊರಕೆ ತವರು ಮನೆಯಿಂದ ಗಂಡನ ಮನೆಗೆ ತರಬಾರದು.

ಇನ್ನು ಯಾವುದೇ ಕಾರಣಕ್ಕೂ ಪೂಜಾ ಸಾಮಗ್ರಿಗಳನ್ನು ತವರು ಮನೆಯಿಂದ ಗಂಡನ ಮನೆಗೆ ತರಬಾರದು. ಹಿರಿಯರು ತಿಳಿಸಿರುವಂತೆ ಕೆಲವು ನಿಯಮಗಳನ್ನು ಪ್ರತಿಯೊಬ್ಬ ಮದುವೆಯಾದ ಹೆಣ್ಣು ಮಕ್ಕಳು ಪಾಲಿಸಬೇಕು, ನಿಯಮಗಳನ್ನು ಪಾಲಿಸುವುದರಿಂದ ಹುಟ್ಟಿದ ಮನೆ ಮತ್ತು ಮೆಟ್ಟಿದ ಮನೆ ಎರಡು ಮನೆಗಳಿಗೂ ಒಳ್ಳೆದಾಗುತ್ತದೆ.

ಸ್ನೇಹಿತರೆ ಈ ಒಂದು ಮಾಹಿತಿ ಇಷ್ಟ ಆದರೆ ಒಂದು ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಮತ್ತು ಇದೇ ರೀತಿ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ
ಧನ್ಯವಾದಗಳು

Leave a Comment