ನಾವು ಈ ಲೇಖನದಲ್ಲಿ ರಾತ್ರಿ ಮಲಗುವಾಗ ಏಕೆ ಚಡಪಡಿಕೆಯಾಗುತ್ತದೆ ಹೇಗೆ ಸೌಭಾಗ್ಯ ಮತ್ತು ದುರ್ಭಾಗ್ಯ ತಲೆದಿಂಬಿನ ಮೂಲಕ ಮನುಷ್ಯನ ಒಳಗಡೆ ಪ್ರವೇಶಿಸುತ್ತದೆ. ತಲೆದಿಂಬಿನ ಕೆಳಗಡೆ ಯಾವ ವಸ್ತುವನ್ನು ಇಟ್ಟರೆ ಚಮತ್ಕಾರ ನಡೆಯುತ್ತದೆ. ಎಂಬುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ನಮ್ಮ ಮನೆಯಲ್ಲಿ ತುಂಬಾ ಮುಖ್ಯವಾದ ಕೋಣೆ ಎಂದರೆ ಮಲಗುವ ಕೋಣೆ ಆಗಿರುತ್ತದೆ. ನಮ್ಮ ವೇದ ಪುರಾಣಗಳಲ್ಲಿ ಶಯನ ಗೃಹದ ಬಗ್ಗೆ ತುಂಬಾ ವಿಸ್ತಾರವಾಗಿ ತಿಳಿಸಿದ್ದಾರೆ.
ನಾವು ಮಲಗುವ ಕೋಣೆಯಲ್ಲಿ ಯಾವ ವಸ್ತುವನ್ನು ಇಡಬೇಕು ಅಥವಾ ಯಾವ. ವಸ್ತುವನ್ನು ಇಡಬಾರದು ಎಂಬುದನ್ನು ತಿಳಿಸಿದ್ದಾರೆ. ಕೆಲವು ವಸ್ತುಗಳಲ್ಲಿ ಸಂಪೂರ್ಣ ನಕಾರಾತ್ಮಕತೆಯು ತುಂಬಿರುತ್ತದೆ ಇದರ ಕಾರಣದಿಂದಾಗಿ ಸಮಸ್ಯೆಗಳು ಹೆಚ್ಚಾಗುತ್ತದೆ. ಕೆಲವೊಂದು ವಸ್ತುಗಳನ್ನು ತಲೆದಿಂಬಿನ ಕೆಳಗಡೆ ಇಟ್ಟರೆ ನಿಮ್ಮಲ್ಲಿರುವಂತಹ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿಯು ನೆಲೆಗೊಳ್ಳುತ್ತದೆ. ಜೀವನದಲ್ಲಿ ಸುಖ ಸಮೃದ್ಧಿ ಆರೋಗ್ಯ ನೆಲೆಸಬೇಕಾದರೆ
ವಿಶೇಷವಾಗಿ ಮಹಿಳೆಯರು ತಲೆದಿಂಬಿನ ಕೆಳಗಡೆ ಈ ವಸ್ತುವನ್ನು ಖಂಡಿತವಾಗಿ ಇಡಬೇಕು, ಇದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆಯು ನಿಮ್ಮ ಮೇಲೆ ಶಾಶ್ವತವಾಗಿ ಇರುತ್ತದೆ . ವೇದ ಪುರಾಣದಲ್ಲಿ ಮಲಗುವ ಸಮಯದಲ್ಲಿ ಏನಾದರೂ ತಪ್ಪು ಮಾಡಿದರೆ ದರಿದ್ರತೆಯು ಯಾವಾಗಲೂ ನಿಮ್ಮನ್ನು ಬಿಡುವುದಿಲ್ಲ. ಹೀಗಾಗಿ ಈ ವಸ್ತುವನ್ನು ನೀವು ಯಾವಾಗಲೂ ತಲೆದಿಂಬಿನ ಕೆಳಗಡೆ ಇಟ್ಟುಕೊಳ್ಳಬೇಕು. ತಲೆದಿಂಬನ್ನು ಸಾಮಾನ್ಯವಾದ ವಸ್ತು ಎಂದು ತಿಳಿಯಬೇಡಿ. ಶ್ರೀಮಂತರಾಗಿರಲಿ
ಬಡವರೇ ಆಗಿರಲಿ ಪ್ರತಿಯೊಬ್ಬರಿಗೂ ಮಲಗಲು ತಲೆದಿಂಬಿನ ಅವಶ್ಯಕತೆ ಇದೆ. ತಲೆ ದಿಂಬನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ನಿಮ್ಮ ಜನ್ಮಜನ್ಮಾಂತರದ ಬಡತನವನ್ನು ನಾಶ ಮಾಡಬಹುದು. ವಸ್ತುವನ್ನು ಇಟ್ಟರೆ ರಾತ್ರೋರಾತ್ರಿ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ಜೀವನದಲ್ಲಿ ಸುಖ ಸಂತೋಷ ಸಮೃದ್ಧಿ ಎಲ್ಲವೂ ನೆಲೆಸುತ್ತದೆ. ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ನಿಮಗೆ ಕಾಣಿಸಿಕೊಂಡರೆ ಯಾವುದೋ ಒಂದು ಗ್ರಹವು ನಿಮ್ಮ ಮೇಲೆ ಪರಿಣಾಮ ಉಂಟುಮಾಡುತ್ತಿರುತ್ತದೆ.
ಇವುಗಳ ಕಾರಣದಿಂದ ತಾಯಿ ಲಕ್ಷ್ಮಿ ದೇವಿಯ ಸಿಟ್ಟನ್ನು ನೀವು ಅನುಭವಿಸಬೇಕಾಗುತ್ತದೆ. ನಿಮಗೆ ಉನ್ನತಿಯನ್ನು ಬಯಸಲು ಇಚ್ಛಿಸುತ್ತಿದ್ದರೆ ನಿಮ್ಮ ತಲೆಬಿಂಬಿನ ಕೆಳಗಡೆ ನವಿಲುಗರಿಯನ್ನು ಇಟ್ಟುಕೊಳ್ಳಿ. ಮಕ್ಕಳ ವಿದ್ಯಾಭ್ಯಾಸದ ಉನ್ನತಿಗಾಗಿ ಪೋಷಕರು ಅವರ ಪುಸ್ತಕದ ಒಳಗಡೆ ನವಿಲುಗರಿಯನ್ನು ಇಟ್ಟಿರುತ್ತಾರೆ . ನವಿಲುಗರಿಯನ್ನು ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಿದರೆ ನಿಮ್ಮ ಕುಂಡಲಿಯಲ್ಲಿರುವಂತಹ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ.
ಇದರಿಂದ ಭಗವಂತನಾದ ಶ್ರೀ ಕೃಷ್ಣನ ಆಶೀರ್ವಾದ ನಿಮಗೆ ದೊರಕುತ್ತದೆ. ಇನ್ನು ಎರಡನೆಯದಾಗಿ ತುಳಸಿ ಗಿಡದ ಎಲೆಯನ್ನು ತಲೆದಿಂಬಿನ ಕೆಳಗಡೆ ಇಟ್ಟು ಮಲಗಬೇಕು. ಇದು ಪೂಜೆಯ ಸಸ್ಯವಾಗಿದ್ದು ತಾಯಿ ಲಕ್ಷ್ಮಿ ದೇವಿಯ ಸ್ವರೂಪವಾಗಿರುತ್ತದೆ. ತುಳಸಿ ಗಿಡದ ಪ್ರತಿಯೊಂದು ಎಲೆಯಲ್ಲಿಯೂ ಸಹ ಭಗವಂತನಾದ ಶ್ರೀ ವಿಷ್ಣುವಿನ ವಾಸವಿದೆ. ತುಳಸಿ ಗಿಡದ ಎಲೆಯನ್ನು ದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಿದರೆ ನಿಮ್ಮ ಜೀವನದಲ್ಲಿರುವ ನಕರಾತ್ಮಕ ಶಕ್ತಿಗಳು ದೂರವಾಗುತ್ತದೆ.
ರಾತ್ರಿ ಇಟ್ಟಂತಹ ಎಲೆಯನ್ನು ಬೆಳಗ್ಗೆ ಎದ್ದು ನೀವು ತಿನ್ನಬೇಕು. ಈ ರೀತಿ ತುಳಸಿ ಎಲೆಯನ್ನು ತಿನ್ನುವುದರಿಂದ ನಿಮಗೆ ಆರೋಗ್ಯದಲ್ಲಿ ಬಹಳ ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ. ಇಲ್ಲಿ ಒಂದು ನೆನಪಿಟ್ಟುಕೊಳ್ಳಬೇಕಾದಂತಹ ಅಂಶವೆನೇಂದರೆ ತುಳಸಿ ಎಲೆಯನ್ನು ರಾತ್ರಿ ವೇಳೆಯಲ್ಲಿ ಕೀಳಬಾರದು ನೀವು ಬೆಳಗಿನ ಸಮಯದಲ್ಲೇ ನಮಸ್ಕರಿಸಿ ಅದನ್ನು ತೆಗೆದು ಇಟ್ಟುಕೊಳ್ಳಬೇಕು. ರವಿವಾರದ ದಿನವೇ ಯಾವುದೇ ಕಾರಣಕ್ಕೂ ತುಳಸಿ ಎಲೆಯನ್ನು ಕೀಳಬಾರದು.
ಬೇರೆ ದಿನದಲ್ಲಿ ಈ ಉಪಾಯವನ್ನು ಮಾಡಿಕೊಳ್ಳಬಹುದು. ಒಂದು ವೇಳೆ ಹಣಕಾಸಿನ ಎಲ್ಲಾ ಬಾಗಿಲುಗಳು ನಿಮಗೆ ತೆರೆಯಲಿ ಎಂದು ನೀವು ಬಯಸುತ್ತಿದ್ದರೆ ನಿಮ್ಮ ಬಳಿ ಇರುವ ಹಣವು ವ್ಯರ್ಥ ಕಾರ್ಯಗಳಲ್ಲಿ ಖರ್ಚಾಗುತ್ತಿದ್ದರೆ ನಿಮ್ಮ ದನ ಸಂಪತ್ತಿನಲ್ಲಿ ವೃದ್ಧಿ ಆಗಬೇಕು ಎಂದು ಬಯಸುತ್ತಿದ್ದರೆ ತಲೆದಿಂಬಿನ ಕೆಳಗಡೆ ಒಂದು ರೂಪಾಯಿ ನಾಣ್ಯವನ್ನು ಇಟ್ಟು ಮಲಗಬೇಕು ನಂತರ ಬೆಳಗ್ಗೆ ಅದನ್ನು ಯಾರಾದರೂ ಬಡವರಿಗೆ ದಾನ ಮಾಡಬೇಕು. ಈ ರೀತಿ ಮಾಡಿದರೆ ಹಣಕಾಸಿನ ಸಂಬಂಧ ಪಟ್ಟ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.
ವ್ಯಾಪಾರಿಗಳು ಈ ರೀತಿಯ ಉಪಾಯವನ್ನು ಮಾಡುತ್ತಾರೆ ಇದರಿಂದ ಅವರಿಗೆ ಹಣಕಾಸಿನ ಕೊರತೆ ಇರುವುದಿಲ್ಲ. ಈ ರೀತಿಯ ಉಪಾಯವನ್ನು ಮಾಡಿದರೆ ಹಣಕಾಸಿನ ಸಮಸ್ಯೆಯಿಂದ ನೀವು ಮುಕ್ತಿ ಪಡೆಯಬಹುದು. ನಿಮ್ಮ ಅದೃಷ್ಟವು ಹೆಚ್ಚಾಗಲು ನೀವು ಬಯಸುತ್ತಿದ್ದರೆ ಯಾವುದಾದರೂ ಒಂದು ಧಾರ್ಮಿಕ ವಸ್ತುವನ್ನು ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಕೊಳ್ಳಿ. ಇದರಿಂದ ಬೇಗನೆ ನಿಮ್ಮ ಅದೃಷ್ಟವೂ ಬದಲಾಗುತ್ತದೆ. ನಿಮ್ಮ ಶ್ರಮಕ್ಕೆ ಫಲ ತಕ್ಕಂತಹ ಫಲ ನಿಮಗೆ ದೊರಕದೆ ಇದ್ದಲ್ಲಿ ಧಾರ್ಮಿಕ ವಸ್ತುಗಳನ್ನು ಇಟ್ಟು ಮಲಗಿದರೆ ನಿಮ್ಮ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗುತ್ತದೆ.
ಧಾರ್ಮಿಕ ವಸ್ತುಗಳು ಎಂದರೆ ತಾಯಿ ಲಕ್ಷ್ಮಿ ದೇವಿಯ ಚಿಹ್ನೆಗಳನ್ನು ಇಡಬಹುದು. ಇದರಿಂದ ನಿಮ್ಮ ಎಲ್ಲಾ ಅಡೆತಡೆಗಳು ದೂರವಾಗುತ್ತದೆ. ಹಲವಾರು ಸಮಸ್ಯೆಗಳಲ್ಲಿ ಸಿಲುಕಿದರೆ ಚಿಂತೆಗಳು ನಿಮ್ಮನ್ನು ಕಾಡುತ್ತಿದ್ದರೆ ಇಂಥ ವೇಳೆಯಲ್ಲಿ ನಿಮಗೆ ಏನು ಮಾಡಬೇಕು ಎಂಬುದು ತೋಚದೆ ಇದ್ದಲ್ಲಿ ತಲೆದಿಂಬಿನ ಕೆಳಗಡೆ ಕಿಲಿ ಕೈಯನ್ನು ಇಟ್ಟುಕೊಳ್ಳಿ. ಪ್ರತಿದಿನ ನೀವು ತಲೆದಿಂಬಿನ ಕೆಳಗಡೆ ಕೀಲಿ ಕೈಯನ್ನು ಇಟ್ಟು ಮಲಗಿಕೊಳ್ಳುವುದರಿಂದ ಯಾವ ಸಮಸ್ಯೆಯಿಂದ ಬಳಲುತ್ತಿರುವರೋ ಆ ಸಮಸ್ಯೆಯಿಂದ ಹೊರಗಡೆ ಬರಬಹುದು. ಒಂದು ವೇಳೆ ನಿಮ್ಮ ಕುಂಡಲಿಯಲ್ಲಿ ಗುರುವಿನ ದೋಷವಿದ್ದರೆ ದಿಂಬಿನ ಕೆಳಗಡೆ ಅರಿಶಿಣದ ಬೇರನ್ನು ಇಟ್ಟು ಮಲಗಿಕೊಳ್ಳಿ .
ಈ ಉಪಯೋಗ ಮಾಡಿಕೊಳ್ಳುವುದರಿಂದ ನಿಮ್ಮ ಕುಂಡಲಿಯಲ್ಲಿರುವ ಬೃಹಸ್ಪತಿ ದೋಷ ಗುರುದೋಷವು ನಿವಾರಣೆಯಾಗುತ್ತದೆ. ನೀವು ಹೊಸದಾಗಿ ವ್ಯಾಪಾರ ವ್ಯವಹಾರವನ್ನು ಶುರು ಮಾಡುತ್ತಿದ್ದರೆ ಅದರಲ್ಲಿ ಯಶಸ್ಸು ಕಾಣುವುದಕ್ಕಾಗಿ ನೀವು ಒಂದು ಬೆಳ್ಳುಳ್ಳಿಯ ಎಸಳನ್ನು ತೆಗೆದುಕೊಂಡು ಬೆಳ್ಳುಳ್ಳಿಯ ಎಸಳನ್ನು 21 ದಿನಗಳ ಕಾಲ ತಲೆದಿಂಬಿನ ಕೆಳಗಡೆ ಇಟ್ಟು ಮಲಗಿಕೊಳ್ಳಿ. ಈ ರೀತಿ 21 ದಿನಗಳ ಕಾಲ ಮಾಡಿದರೆ ನಿಮ್ಮ ಜೀವನದಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ.