ಕೆಟ್ಟ ಹೆಂಗಸರ ಲಕ್ಷಣಗಳು

ನಾವು ಈ ಲೇಖನದಲ್ಲಿ ಕೆಟ್ಟ ಹೆಂಗಸರ ಲಕ್ಷಣಗಳು ಯಾವುವು ಎಂಬುದು ಈ ಕೆಳಕಂಡಂತಿವೆ : -ಪ್ರತಿಯೊಬ್ಬ ಹೆಂಗಸರು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುತ್ತಾಳೆ , ಎಂದು ಹೇಳಲು ಸಾಧ್ಯವಿಲ್ಲ . ಅವರವರ ಮನಸ್ಸಿನ ಆಧಾರದ ಮೇಲೆ ಅವರ ಗುಣ ಸ್ವಭಾವ ಅವರವರ ವೈಯಕ್ತಿಕತ್ವ ಪ್ರತಿಯೊಂದು ಕೂಡ ನಿಂತಿರುತ್ತದೆ .

ಹಾಗೆಂದ ಮಾತ್ರಕ್ಕೆ ಎಲ್ಲರೂ ಕೂಡ ಕೆಟ್ಟವರು ಎಂದು ಹೇಳಲು ಸಾಧ್ಯವಿಲ್ಲ . ಹಾಗಾದರೆ ಯಾವ ಕೆಲವು ಗುಣಲಕ್ಷಣಗಳು ಇದ್ದರೆ , ಅದು ಹೆಂಗಸರ ಕೆಟ್ಟ ಗುಣಲಕ್ಷಣಗಳು ಅಂದರೆ , ಅದು ಒಳ್ಳೆಯದಲ್ಲ ಎಂದು , ಹೇಗೆ ಹೇಳಬಹುದು . ಆ ಲಕ್ಷಣಗಳು ಯಾವುವು ಎನ್ನುವುದನ್ನು ತಿಳಿಯೋಣ .

ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ , ಪ್ರತಿಯೊಬ್ಬ ಹೆಣ್ಣು ಕೂಡ ಮನೆಯ ಕನ್ನಡಿ ಎಂದು ಹೇಳಿದರೆ ತಪ್ಪಾಗುವುದಿಲ್ಲ .

ಮನೆಯಲ್ಲಿ ಯಾವುದೇ ರೀತಿಯ ಕಷ್ಟ , ಸುಖ , ದುಃಖ ಏನೇ ಇರಲಿ , ಅವೆಲ್ಲವನ್ನು ಸಹ ಸರಿಯಾಗಿ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಎಲ್ಲವನ್ನು ಕೂಡ ನಿಭಾಯಿಸಿಕೊಂಡು ಹೋಗುವವಳಿಗೆ ಹೆಣ್ಣು ಎಂದು ಕರೆದರೆ ತಪ್ಪಲ್ಲ .

ತ್ಯಾಗಮಯಿ ಕರುಣಾಮಯಿ ಎಂಬ ಅರ್ಥವೂ ಕೂಡ ಹೆಣ್ಣಿಗೆ ಇದೆ . ಇಷ್ಟೆಲ್ಲ ಗುಣಗಳನ್ನು ಹೊಂದಿರುವಂತಹ ಹೆಣ್ಣು ಒಂದಷ್ಟು ಸಂದರ್ಭದಲ್ಲಿ ಕೆಲವೊಂದಷ್ಟು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ .

ಹಾಗೇನಾದರೂ ಅವಳು ಪ್ರತಿಯೊಂದು ಸಮಯದಲ್ಲಿಯೂ ಕೂಡ ಹಠ ಮಾಡಿದರೆ , ಈ ಕೆಲಸ ಹೀಗೆ ಆಗಬೇಕು . ನನಗೆ ಈ ವಸ್ತು ಬೇಕೇ ಬೇಕು . ಎಲ್ಲವನ್ನು ಕೂಡ ಹಠ ಮಾಡಿ ಪಡೆದುಕೊಳ್ಳಬಾರದು .

ಹಾಗೇನಾದರೂ ನೀವು ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಹಠವನ್ನು ಮಾಡಿದರೆ , ಆ ಮನೆಯಲ್ಲಿ ಅಭಿವೃದ್ಧಿ , ಯಶಸ್ಸು ಎನ್ನುವುದು ಆಗುವುದಿಲ್ಲ . ಬದಲಿಗೆ ನಿಮ್ಮ ಮನೆಯಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ .

ಅದೇ ರೀತಿಯಲ್ಲಿ ಯಾವ ಕೆಲವು ಕೆಟ್ಟ ಗುಣಲಕ್ಷಣಗಳನ್ನು ಹೊಂದಿರುವ ಹೆಂಗಸರನ್ನು ಕೆಟ್ಟ ಹೆಂಗಸರು ಎಂದು ಹೇಳಬಹುದು ಎಂಬುದರ ಬಗ್ಗೆ ನೋಡೋಣ ….!

1 .ಗಂಡನ ಮಾತಿಗೆ ಎದುರುತ್ತರ ಕೊಡುವ ಸ್ತ್ರೀ , ಅತಿಯಾಗಿ ಆವೇಶ ಪಡುವ ಸ್ತ್ರೀಯರು , ಅವರಿಗೆ ಸಂತೋಷ ಇರುವುದಿಲ್ಲ . ಅವರ ಜೊತೆಯಲ್ಲಿ ಸುತ್ತಮುತ್ತ ಇರುವವರೆಗೂ ಕೂಡ , ಸಂತೋಷವಾಗಿ ಇರುವುದಕ್ಕೆ ಬಿಡುವುದಿಲ್ಲ .

2 .ಪದೇ ಪದೇ ಬಾಯಿಯಲ್ಲಿ ಬೈಗುಳ , ಸ್ನಾನ ಮಾಡದೆ ಕೊಳಕಾಗಿ ಇರುವುದು , ಸೀರೆಯ ಸೆರಗನ್ನು ಸರಿ ಮಾಡಿಕೊಳ್ಳದೆ , ಅಂಗಾಂಗಗಳನ್ನು ತೋರಿಸುವುದು , ಹೀಗೆ ಮಾಡಬಾರದು .

3 .ಮದುವೆಯಾದ ನಂತರ ಗಂಡನನ್ನು ಬಿಟ್ಟು , ಪರ ಪುರುಷರನ್ನು ತಲೆಯೆತ್ತಿ ನೋಡುವ ಸ್ತ್ರೀಯರು , ಪರ ಪುರುಷರ ಜೊತೆ ಸಂಬಂಧವಿರುವ ಸ್ತ್ರೀಯನ್ನು , ಕೆಟ್ಟ ಸ್ತ್ರೀ ಎಂದು ಹೇಳಿದರೆ ತಪ್ಪಲ್ಲ .

4 . ಅಲ್ಲಿಯ ಮಾತು ಇಲ್ಲಿ ಇಲ್ಲಿಯ ಮಾತು , ಅಲ್ಲಿ ಹೀಗೆ ಎಲ್ಲ ಕಡೆಯಲ್ಲಿಯೂ ಬೆಂಕಿ ಹಚ್ಚುವ ಸ್ತ್ರೀ , ಸಮಾಜದಲ್ಲಿ ಸಂಸಾರ ಹಾಳು ಮಾಡುವ ಕೆಲಸದಲ್ಲಿ ಮುಂದೆ ಇರುತ್ತಾರೆ .

5 .ಬೇರೆಯವರ ಖುಷಿ ನೆಮ್ಮದಿ ಕಂಡು ಅಸೂಯೆ ಪಡುವ ಸ್ತ್ರೀ , ಯಾವಾಗಲೂ ಹೋಲಿಕೆ ಮಾಡುವ ಸ್ತ್ರೀ , ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ .

6 .ಸ್ತ್ರೀಯು ಅತಿಯಾಗಿ ಅಲಂಕಾರ ಮಾಡಿಕೊಳ್ಳಬಾರದು .

7 .ಅತಿಯಾದ ಆವೇಶ ಹಾಗೂ ಅತಿಯಾದ ಕೋಪ ಖಂಡಿತವಾಗಿಯೂ ಕಷ್ಟದ ಪಾಲು ಮಾಡುತ್ತದೆ .

8 .ಸ್ತ್ರೀಗೆ ತಿನ್ನುವ ಯೋಗ ಇದ್ದರೆ , ಮಾತ್ರ ಪುರುಷನು ಸಂಪಾದಿಸುತ್ತಾನೆ .

9 .ಸ್ತ್ರೀಯು ಮಾಡಿದ ಪಾಪ ಖಂಡಿತವಾಗಿಯೂ ಪುರುಷನನ್ನು ಹಿಂಬಾಲಿಸುತ್ತದೆ .

ಹೀಗೆ ಇಷ್ಟೆಲ್ಲಾ ಕೆಟ್ಟ ಗುಣ ಹೊಂದಿರುವಂತಹ ಸ್ತ್ರೀಯನ್ನು ಕೆಟ್ಟ ಸ್ತ್ರೀ ಅಂತ ಹೇಳಬಹುದು . ಆದ್ದರಿಂದ ಇವೆಲ್ಲವನ್ನೂ ಈಗಲೇ ಸರಿಪಡಿಸಿಕೊಳ್ಳುವುದು ಉತ್ತಮ .

ದಯವಿಟ್ಟು ಗಮನಿಸಿ ಈ ಲೇಖನದಲ್ಲಿ ಕೆಲವು ಕೆಟ್ಟ ಗುಣಲಕ್ಷಣಗಳನ್ನು ಹೊಂದಿರುವ ಸ್ತ್ರೀಯರಿಗೆ ಮಾತ್ರ ಅನ್ವಯಿಸುತ್ತದೆ . ಎಲ್ಲರಿಗೂ ಅಲ್ಲ . ಈ ಲೇಖನದಲ್ಲಿ ಅವರಿಗೆ ಒಂದು ಒಳ್ಳೆಯ ಮಾರ್ಗದಲ್ಲಿ ನಡೆಯುವ ಒಂದು ಒಳ್ಳೆಯ ಮಾರ್ಗ ತೋರಿಸುವ ಉದ್ದೇಶವಾಗಿದೆ .

Leave a Comment