ಸಾಮಾನ್ಯವಾಗಿ ಎಲ್ಲರೂ ಪೂಜೆ ಮನೆಯಲ್ಲಿ ದೇವರ ಫೋಟೋ ಅಥವಾ ವಿಗ್ರಹಗಳಿಗೆ ಪ್ರಾಧಾನ್ಯತೆ ನೀಡುತ್ತಾರೆ. ನಿಮ್ಮ ಮನೆಯಲ್ಲಿನ ಪೂಜಾ ಕೋಣೆಯಲ್ಲಿ ಕೆಲವು ಮುಖ್ಯವಾದ ವಸ್ತುಗಳನ್ನು ಇಟ್ಟುಕೊಂಡರೆ ಅನೇಕ ಭೋಗ ಭಾಗ್ಯಗಳು ನಿಮ್ಮ ಸ್ವಂತವಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ. ಈ ಮಂಗಳಕರವಾದ ವಸ್ತುಗಳಿಂದ ಅನೇಕ ಆರ್ಥಿಕ ಪ್ರಯೋಜನಗಳು, ಅದ್ಭುತವಾದ ಫಲಿತಾಂಶಗಳನ್ನು ಪಡೆಯಬಹುದು. ಹಾಗಾದರೆ ಆ ಮಂಗಳಕರವಾದ ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ.
• ಪಚ್ಚೆ ಕರ್ಪೂರ: ಪಚ್ಚೆ ಕರ್ಪೂರ ಅಂದರೆ ವಿಷ್ಣುದೇವರಿಗೆ ತುಂಬಾ ಪ್ರೀತಿ. ಆರತಿ ಮಾಡಿ ನೈವೇದ್ಯ ಮಾಡಿ ಏನು ಬೇಡಿಕೊಂಡರು ಜರುಗುತ್ತದೆ. • ಪೂಜೆಯಲ್ಲಿ 9 ಏಲಕ್ಕಿ 9 ಲವಂಗ ಹಾಕಿ ಇಡುವುದರಿಂದ ಲಕ್ಷ್ಮೀದೇವಿ ವಿಷ್ಣು ದೇವರ ಅನುಗ್ರಹ ತಪ್ಪದೇ ನಿಮ್ಮ ಮೇಲೆ ಇರುತ್ತದೆ. ಶುಕ್ರವಾರ ಸಂಜೆ ದೇವರ ಮನೆಯಲ್ಲಿ ಏಲಕ್ಕಿ ಕರ್ಪೂರವನ್ನು ಸುಟ್ಟು ಆ ಹೊಗೆಯಿಂದ ಲಕ್ಷ್ಮಿದೇವಿಗೆ ಆರತಿ ಮಾಡಿದರೇ, ನಿಮಗೆ ಏನಾದರೂ ಕೋರಿಕೆಗಳು ಇದ್ದರೇ, ಅಮ್ಮನವರ ಬಳಿ ಬೇಡಿಕೊಂಡರೆ ಕೆಲವು ದಿನಗಳಲ್ಲಿ ನೀವು ಕೋರಿದ ಕೋರಿಕೆಗಳು ಖಂಡಿತವಾಗಿ ನೆರವಿರುತ್ತದೆ.
• ಅರಿಶಿಣ ಅಕ್ಷತೆ: ಅರಿಶಿಣ ಅಕ್ಷತೆ ಪೂಜೆ ಕೋಣೆಯಲ್ಲಿ ಇದ್ದರೆ ಲಕ್ಷ್ಮೀದೇವಿಯ ಅನುಗ್ರಹ ಇರುತ್ತದೆ. ಪೂಜಾ ಮನೆಯಲ್ಲಿ ಅಕ್ಷತೆ ಕಾಳು ಇರುವುದರಿಂದ ಮನೆಯಲ್ಲಿ ಸಿರಿ ಸಂಪತ್ತಿಗೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ.
• ಅರಿಶಿನದ ಕವಡೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ. ಪೂಜೆ ಮನೆಯಲ್ಲಿ ಯಾವಾಗಲೂ ಆರು ಕವಡೆಗಳನ್ನು ಇಡಬೇಕು. ಆಗ ಧನಲಕ್ಷ್ಮಿ ಅನುಗ್ರಹಿಸಿ ಸಕಲ ಸಂಪತ್ತನ್ನು ಹೊಂದುವಿರಿ. ಕವಡೆಗಳನ್ನು ದೇವರ ಮನೆಯಲ್ಲಿ ಅಲ್ಲದೇ, ಹಣವನ್ನು ಇಡುವ ಜಾಗದಲ್ಲಿ ಅಥವಾ ವ್ಯಾಪಾರ ಮಾಡುವ ಜಾಗದಲ್ಲಿ ಇಟ್ಟರೆ ಅಲ್ಲಿ ಐಶ್ವರ್ಯ ಲಭಿಸುತ್ತದೆ.
ದೇವರ ಮನೆಯಲ್ಲಿ ಗೋವಿನ ಅಥವಾ ಕರುವಿನ ಫೋಟೋ ಇದ್ದರೆ ಸಕಲ ದೇವತೆಗಳ ಸ್ವರೂಪ ನಿಮ್ಮ ಮನೆಯಲ್ಲಿ ಇದ್ದ ಹಾಗೇನೇ, ಗೋಮಾತೆಯ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಯಾವಾಗಲೂ ಸಂಪತ್ತು ತಾಂಡವವಾಡುತ್ತದೆ.
• ದೇವರ ಮನೆಯಲ್ಲಿ ಇಡಬೇಕಾದ ಮುಖ್ಯ ವಸ್ತುಗಳೆಂದರೆ 5 ಕಾಳು ಮೆಣಸು ಹಾಗೂ ಎರಡು ವೀಳ್ಯದೆಲೆ, ಕಾಳು ಮೆಣಸು ಅದೃಷ್ಟದ ಸಂಕೇತವಾಗಿರುತ್ತದೆ ಹಾಗೂ ವೀಳ್ಯದೆಲೆಯು ಯಾವಾಗಲೂ ದೇವರಿಗೆ ಬಲುಪ್ರಿಯವಾದ ವಸ್ತು. ಹಾಗಾಗಿ ಇದನ್ನು ಎಲ್ಲಾ ಪೂಜೆಯಲ್ಲಿ ಬಳಸುತ್ತಾರೆ. ನೀವು ಮನೆಯಲ್ಲಿ ಪೂಜಾ ಮಾಡುವ ಸಮಯದಲ್ಲಿ ಈ ಎರಡು ವಸ್ತುಗಳನ್ನು ಇಟ್ಟು ಪೂಜಿಸಿ ನಂತರ ವೀಳ್ಯದೆಲೆಯ
ಒಳಗಡೆ ಕಾಳುಮೆಣಸನ್ನು ಹಾಕಿ ಮಡಚಿ ನೀವು ಯಾವ ಕೆಲಸವನ್ನು ಮಾಡಲು ಹೊರಟಿದ್ದೀರಾ ಆ ದಿನ ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಹೋಗಿ. ನಿಮ್ಮ ಜೀವನದ ಮುಖ್ಯ ಕೆಲಸ ಮಾಡುವ ದಿನ ನೀವು ತಪ್ಪದೇ ಈ ಪೂಜೆಯನ್ನು ಮಾಡಿ ವೀಳ್ಯದೆಲೆ ಕಾಳುಮೆಣಸನ್ನು ಜೇಬಿನಲ್ಲಿ ಇಟ್ಟುಕೊಂಡು ಹೋದರೆ, ನಿಮ್ಮ ಕೆಲಸವು ಕಾರ್ಯ ಸಿದ್ಧವಾಗುತ್ತದೆ ಹಾಗಾಗಿ ತಪ್ಪದೇ ಈ ವಿಧಾನವನ್ನು ಅನುಸರಿಸಿ.
• ಅರಿಶಿನದ ಕೊಂಬನ್ನು ಯಾವಾಗಲೂ ದೇವರ ಕೋಣೆಯಲ್ಲಿ ಇಡಬೇಕು. ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಹಣಕ್ಕೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ. • ಪೂಜಾ ಕೋಣೆಯಲ್ಲಿ ನವಿಲುಗರಿ ಇದ್ದರೆ ನವಗ್ರಹಗಳ ಅನುಗ್ರಹ ನಿಮಗೆ ಬರುತ್ತದೆ. ನವಗ್ರಹಗಳ ದೋಷಗಳು ಪರಿಹಾರವಾಗುತ್ತದೆ. ಪ್ರತಿದಿನ ಭಗವಂತನನ್ನು ಆರಾಧಿಸಿದ ನಂತರ ನವಿಲುಗರಿಗಳಿಂದ ಗಾಳಿ ಬೀಸಿ ದೇವರಿಗೆ ಈ ಸೇವೆ ಮಾಡುವುದರಿಂದ ದೇವರು ನಿಮ್ಮ ಕೋರಿಕೆಗಳನ್ನೆಲ್ಲ ನೆರವೇರಿಸುತ್ತಾರೆ. ನಿಮಗೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಇರುವುದಿಲ್ಲ. ಪೂಜಾ ಕೋಣೆಯಲ್ಲಿ ನವಿಲುಗರಿಗಳನ್ನು ಇಡುವುದರಿಂದ ಮನೆಯಲ್ಲಿ ಸಹಾನುಕೂಲ ಶಕ್ತಿ ಬರುತ್ತದೆ ಎಂದು ವಾಸ್ತುಶಾಸ್ತ್ರ ನಿಪುಣರು ಹೇಳುತ್ತಾರೆ.
• ಪೂಜಾ ಕೋಣೆಯಲ್ಲಿ ಬೆಳ್ಳಿಯಿಂದ ಮಾಡಿದ ಛತ್ರಿ ಅಥವಾ ರಾಗಿಯಿಂದ ಮಾಡಿದ ಚಿಕ್ಕ ಛತ್ರಿಯನ್ನು ಒಂದು ಮೂಲೆಯಲ್ಲಿ ಇಟ್ಟುಕೊಳ್ಳಿ. • ಮನೆಯಲ್ಲಿ ಶಂಖ ಊದುವುದರಿಂದ ಪಾಸಿಟಿವ್ ಎನರ್ಜಿ ಬರುತ್ತದೆ ಎಂದು ಹೇಳುವರು. ಪೂಜಾ ಕೋಣೆಯಲ್ಲಿ ಶಂಖವನ್ನು ಇಡುವುದರಿಂದ ಶುಭಪ್ರದವೆಂದು ಹಿಂದೂ ಧರ್ಮದಲ್ಲಿ ನಂಬುತ್ತಾರೆ. ಈ ರೀತಿ ಮಾಡುವುದರಿಂದ ಸುಖ ಸಂತೋಷ ಶಾಂತಿ ಸೌಭಾಗ್ಯಗಳು ಲಭಿಸುತ್ತದೆ.
• ಹಿಂದೂ ಧರ್ಮದಲ್ಲಿ ಪವಿತ್ರ ಗಂಗಾ ನದಿಗೆ ಪ್ರತ್ಯೇಕವಾದ ಪ್ರಾಮುಖ್ಯತೆ ಇದೆ. ಹಾಗಾಗಿ ಈ ಪವಿತ್ರ ಜಲವನ್ನು ಯಾವಾಗಲೂ ಪೂಜಾ ಕೋಣೆಯಲ್ಲಿ ಇಟ್ಟುಕೊಳ್ಳುವುದರಿಂದ ಲಕ್ಷ್ಮಿದೇವಿ ಸಂತೋಷವಾಗಿರುತ್ತಾಳೆ ಎಂದು ನಂಬಿಕೆ. • ಲಕ್ಷ್ಮಿದೇವಿಯ ಫೋಟೋಗೆ ಮುತ್ತುಗಳ ಮಾಲೆಯಿಂದ ಅಲಂಕರಿಸಿದರೆ ಲಕ್ಷ್ಮಿದೇವಿಯ ಅನುಗ್ರಹದಿಂದ ಸಿರಿಸಂಪತ್ತನ್ನು ಹೊಂದುತ್ತಾರೆ.
• ಪೂಜಾ ಮನೆಯಲ್ಲಿ ಮುರಿದುಹೋದ, ಒಡೆದು ಹೋದ ವಿಗ್ರಹಗಳನ್ನು ಇಡಬಾರದು. ಇದರಿಂದ ನೀವು ಮಾಡಿದ ಪೂಜೆಯ ಫಲ ಸಿಗುವುದಿಲ್ಲ. ತಪ್ಪದೇ ದೇವರ ಕೋಣೆಯಲ್ಲಿ ಸಾಯಂಕಾಲ ಸಮಯದಲ್ಲಿ ದೀಪವನ್ನು ಬೆಳಗಿಸಬೇಕು. • ಸಾಯಂಕಾಲ ಸಮಯದಲ್ಲಿ ಯಾವ ಮನೆಯಲ್ಲಿ ದೀಪವನ್ನು ಬೆಳಗಿಸುತ್ತಾರೋ ಆ ಮನೆಗೆ ಸಕಲ ದೇವತೆಗಳು ಪ್ರವೇಶಿಸುತ್ತಾರೆ ಎಂದು ಪಂಡಿತರು ಹೇಳುತ್ತಾರೆ.
• ಪೂಜಾ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ದೇವರ ವಿಗ್ರಹಗಳನ್ನು ಇಡಬಾರದು ಎಂದು ಹೇಳುತ್ತಾರೆ. ತುಂಬಾ ಜನರು ಎಲ್ಲೆಂದರಲ್ಲಿ ದೇವರ ವಿಗ್ರಹಗಳನ್ನು ತೆಗೆದುಕೊಂಡು ಬಂದು ದೇವರ ಕೋಣೆಯಲ್ಲಿ ಇಟ್ಟು ಅಲಂಕರಿಸುತ್ತಾರೆ.• ಹಾಗೇನೆ ಒಣಗಿದ ಹೂವುಗಳು, ಹೂವಿನ ಮಾಲೆಗಳು, ಕೆಲಸಕ್ಕೆ ಬಾರದ ಪೂಜಾ ಸಾಮಗ್ರಿ, ಇವುಗಳನ್ನು ದೂರ ಮಾಡಿ, ಕತ್ತಿ, ಚಾಕು, ಕಬ್ಬಿಣದ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು. ಹಾಗೇನೆ ಪೂಜಾ ಮನೆಯಲ್ಲಿ ಮುರಿದ ಅಕ್ಕಿಯಿಂದ ಮಾಡಿದ ಅಕ್ಷತೆ ಕಾಳನ್ನು ಇಡಬಾರದು.