ನಿಮ್ಮ “ಕೈ ಬೆರಳುಗಳು” ಈ ರೀತಿ ಇದ್ದರೆ ನೀವೇ ಅದೃಷ್ಟವಂತರು !

ನಾವು ಈ ಲೇಖನದಲ್ಲಿ ನಿಮ್ಮ ಕೈ ಬೆರಳುಗಳು ಈ ರೀತಿ ಇದ್ದರೆ, ನಾವು ಹೇಗೆ ಅದೃಷ್ಟವಂತರು ಆಗುತ್ತೇವೆ , ಎಂದು ತಿಳಿಯೋಣ . ಕೈ ಬೆರಳುಗಳು ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ಅದು ಹೇಗೆ ಎಂದರೆ, ನಿಮ್ಮ ಬೆರಳುಗಳು ಉದ್ದವಾಗಿದೆ ಅಥವಾ ಒಂದು ಉದ್ದ , ಒಂದು ಗಿಡ್ಡವಾಗಿದೆಯೇ , ಪರೀಕ್ಷೆ ಮಾಡಿಕೊಳ್ಳಬಹುದು. ತೋರು ಬೆರಳು ಉಂಗುರದ ಬೆರಳಿಗಿಂತ ಉದ್ದವಾಗಿ ಇದ್ದರೆ, ಅಥವಾ ಗಿಡ್ಡವಾಗಿ ಇದ್ದರೆ , ಎರಡು ಸಮಾನವಾಗಿ ಇದ್ದರೆ , ಏನೆಲ್ಲಾ ಇರುತ್ತದೆ. ಎಂದು ನೋಡೋಣ .

ತೋರು ಬೆರಳು ಮತ್ತು ಉಂಗುರದ ಬೆರಳು ಎರಡೂ ಒಂದೇ ಸಮಾನವಾಗಿ ಇದ್ದರೆ. ಇವರಿಗೆ ಜಗಳ ಎಂದರೆ, ಆಗುವುದಿಲ್ಲ. ಈ ಜೀವನ ಹೇಗೋ ಅರಾಮಾಗಿ ಕಳೆದು ಹೋದರೆ ಸಾಕು , ಎಂದು ಭಾವಿಸುತ್ತಾರೆ . ಹಾಗೆಂದು ಯಾರಾದರೂ ಜಗಳಕ್ಕೆ ಬಂದರೆ ಅವರಿಗೆ ಒಂದು ಗತಿ ಕಾಣಿಸುವ ತನಕ ಬಿಡುವುದಿಲ್ಲ . ತೋರು ಬೆರಳು ಮತ್ತು ಉಂಗುರದ ಬೆರಳು ಒಂದೇ ಸಮನಾಗಿ ಇದ್ದು , ತಮ್ಮ ಸಂಗಾತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮನೆ ಒಳಗಿನ ಯಾವುದಾದರೂ ವ್ಯವಹಾರವನ್ನು ಸರಿ ಮಾಡುವುದರಲ್ಲಿ ಇವರು ಸಮರ್ಥರಾಗಿರುತ್ತಾರೆ .

ಇನ್ನು ತೋರು ಬೆರಳಿಗಿಂತ ಉಂಗುರದ ಬೆರಳು ಉದ್ದವಾಗಿ ಇದ್ದರೆ , ಇವರು ನೋಡಲು ತುಂಬಾ ಆಕರ್ಷಕವಾಗಿ ಇರುತ್ತಾರೆ . ಮತ್ತು ಸುಂದರವಾಗಿ ಇರುತ್ತಾರೆ . ಮಾತಿನಿಂದ ಇತರರನ್ನು ಬಹುಬೇಗ ಆಕರ್ಷಣೆ ಮಾಡುತ್ತಾರೆ . ಇತರರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ . ಗೆಳತಿ ಅಥವಾ ಗೆಳೆಯನನ್ನು ಅನು ಕ್ಷಣ ಖುಷಿ ಪಡಿಸಲು ಇಷ್ಟಪಡುತ್ತಾರೆ . ಒಮ್ಮೊಮ್ಮೆ ದುಡುಕಿನ ಸ್ವಭಾವವನ್ನು ತೋರಿದರು ಸಹ ಉಂಗುರದ ಬೆರಳು ಉದ್ದ ಇರುವವರು ಹಣವನ್ನು ಸಹ ಚೆನ್ನಾಗಿ ಸಂಪಾದನೆ ಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ

ಕಂಡುಕೊಳ್ಳುವಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಇವರು ಹೆಸರನ್ನು ಗಳಿಸುತ್ತಾರೆ .
ಇನ್ನು ಉಂಗುರದ ಬೆರಳಿಗಿಂತ ತೋರು ಬೆರಳು ಉದ್ದವಾಗಿ ಇದ್ದರೆ , ಇವರು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ . ಅದು ಇತರರಿಗೆ ಅಹಂಕಾರದಂತೆ ಕಾಣಿಸುತ್ತದೆ . ಅಂತರ್ಮುಖಿ ಅಲ್ಲದೆ ಇದ್ದರೂ , ಇವರು ಒಬ್ಬರೇ ಇರಲು ಇಷ್ಟಪಡುತ್ತಾರೆ . ದೂರ ದೃಷ್ಟಿ ಗುರಿಯ ಕಡೆ ಇರುತ್ತದೆ . ಬೇಗ ಯಾರ ಜೊತೆಗೂ ಸ್ನೇಹ ಕೈ ಚಾಚುವುದಿಲ್ಲ. ಪ್ರೀತಿಯನ್ನು ವ್ಯಕ್ತಪಡಿಸಲಾರರು . ಇವರು ಇರುವುದರಲ್ಲಿ ತೃಪ್ತಿಯನ್ನು ಪಟ್ಟಿಕೊಳ್ಳುತ್ತಾರೆ . ಹೀಗೆ ತೋರು ಬೆರಳುಗಳು ಮತ್ತು ಉಂಗುರದ ಬೆರಳುಗಳು ಉದ್ದ ಗಿಡ್ಡ ಇದ್ದರೆ, ಅವರವರ ವ್ಯಕ್ತಿತ್ವ ಈ ರೀತಿಯಾಗಿ ಇರುತ್ತದೆ ಎಂದು ಹೇಳಲಾಗಿದೆ .

Leave a Comment