ಕಡಜ ಗೂಡು ಕಟ್ಟಿದರೇ ಏನು ಅರ್ಥ? ಮನೆಯ ಒಳಗಡೆ ಹೊರಗಡೆ ಕಟ್ಟಿದರೇ ಒಳ್ಳೆಯದಾ? ಕೆಟ್ಟದ್ದಾ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಕೆಲವರ ಮನೆಯಲ್ಲಿ ಮಾತ್ರ ಈ ಕಡಜ ಗೂಡು ಕಟ್ಟುತ್ತದೆ ಏನು ಇದರ ಅರ್ಥ? ಈ ಗೂಡನ್ನು ತೆಗೆಯಬೇಕಾ? ಇಟ್ಟುಕೊಳ್ಳಬೇಕಾ? ಯಾವ ರೀತಿ ತೆಗೆಯಬೇಕು ಮತ್ತು ಇದರಿಂದ ಏನಾದರೂ ದೋಷ ಬರುತ್ತದೆಯಾ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಹಳ್ಳಿ ಮತ್ತು ಸಿಟಿಯ ಮನೆಗಳಲ್ಲೂ ಕಡಜ ಗೂಡು ಕಟ್ಟಿರುತ್ತದೆ. ಆದರೇ ಯಾವುದೇ ಕಾರಣಕ್ಕೂ ಇದಕ್ಕೆ ತೊಂದರೆ ಮಾಡಬಾರದು. ಅದು ಕಚ್ಚಿದರೇ ತುಂಬಾ ನೋವು ಆಗುತ್ತದೆ ಮತ್ತು ಅದರ ಮುಳ್ಳಿನಲ್ಲಿ ವಿಷ ಕೂಡ ಇರುತ್ತದೆ. ಹೆಣ್ಣು ಕಡಜಗಳಲ್ಲಿ ಮುಳ್ಳು ಇರುತ್ತದೆ ಅದು ತನ್ನ ಮನೆಯನ್ನು ರಕ್ಷಣೆ ಮಾಡಿಕೊಳ್ಳಲು ಮತ್ತು ತನ್ನ ರಕ್ಷಣೆ ಮಾಡಿಕೊಳ್ಳಲು ಕಚ್ಚುತ್ತದೆ. ಹಾಗಾಗಿ ಈ ಗೂಡಗಳಿಗೆ ತೊಂದರೆ ಕೊಡಬಾರದು. ಯಾವ ರೀತಿ ದೋಷ ಬಾರದ ಹಾಗೇ ತೆಗೆಯಬೇಕು.
ಕೆಲವು ಮನೆಗಳಲ್ಲಿ ಮಾತ್ರ ಏಕೆ ಕಡಜ ಗೂಡು ಕಟ್ಟುತ್ತದೆ. ಈ ರೀತಿ ಕಟ್ಟುವುದರಿಂದ ಅದೃಷ್ಟದ ಸಂಕೇತವಾಗಿದೆ. ತುಂಬಾ ಒಳ್ಳೆಯದ್ದು ಆಗುತ್ತದೆ. ಲಕ್ಷ್ಮಿ ದೇವಿಯು ತನ್ನ ಆಶೀರ್ವಾದವನ್ನು ಮಾಡಲು ಕೆಲವನ್ನು ಮಾತ್ರ ಆರಿಸಿಕೊಳ್ಳುವುದು ಎಂದು ಹೇಳುತ್ತಾರೆ. ಅದರ ಸೂಚನೆಯಾಗಿ ಆ ಮನೆಯಲ್ಲಿ ಕಡಜಗಳು ಗೂಡು ಕಟ್ಟುತ್ತವೆ. ಯಾರ ಮನೆಯಲ್ಲಿ ಸಂತಾನಕ್ಕೋಸ್ಕರ ಚಿಕಿತ್ಸೆಯನ್ನು ಪಡೆಯುತ್ತಿದ್ದರೇ ಕಡಜಗಳು ಅಂತಹವರ ಮನೆಯಲ್ಲಿ ಗೂಡು ಕಟ್ಟಿದರೇ
ಆ ಮನೆಯ ದಂಪತಿಗಳಿಗೆ ಮಗುವಾಗುತ್ತದೆಂದು ಹೇಳುತ್ತಾರೆ. ಯಾರ ಮನೆಯಲ್ಲಿ ಈ ರೀತಿಯ ಗೂಡುಗಳು ಇರುತ್ತವೆಯೋ ಅಂತಹವರ ಮನೆಯಲ್ಲಿ ಲಕ್ಷ್ಮಿಯ ವಾಸವಿರುತ್ತದೆಂದು ಹೇಳುತ್ತಾರೆ. ಹಾಗಾಗೀ ಈ ರೀತಿಯ ಗೂಡುಗಳಿಗೆ ಭಯಪಡಬೇಕಿಲ್ಲ. ಆ ಮನೆಯಲ್ಲಿ ಮದುವೆಗೆ ಬಂದಿರುವ ಹುಡುಗ ಮತ್ತು ಹುಡುಗಿ ಮದುವೆಯಾಗಬೇಕೆಂದಿದ್ದರೇ ಶೀಘ್ರವಾಗಿ ಕಂಕಣಭಾಗ್ಯ ದೊರೆಯಲಿದೆ. ಆ ಮನೆಯ ಸದಸ್ಯರು ಮನೆ ಕಟ್ಟಬೇಕು ಎಂದು ಅಂದುಕೊಂಡಿದ್ದರೇ ಅದು ನೆರವೇರುತ್ತದೆ.
ಹಾಗಾಗಿ ಕಡಜಗಳು ಎಲ್ಲರ ಮನೆಯಲ್ಲಿ ಗೂಡು ಕಟ್ಟಲು ಸಾಧ್ಯವಿಲ್ಲ ತಾಯಿ ಲಕ್ಷ್ಮಿದೇವಿಯ ಅನುಗ್ರಹವಿದ್ದರೇ ಮಾತ್ರ ಸಾಧ್ಯ. ಗೂಡಿನ ಮಣ್ಣು ಕೂಡ ವಿಶೇಷವಾಗಿರುತ್ತದೆ ಕಾರಣ ಆ ಕಡಜಗಳು ಯಾರು ಓಡಾಡದ ಕಡೆಯಿಂದ ಬಣ್ಣನ್ನು ತಂದು ಗೂಡು ಕಟ್ಟುತ್ತವಂತೆ ಆದ್ದರಿಂದ ಈ ಗೂಡು ಶ್ರೇಷ್ಟವಾಗಿರುತ್ತದೆ. ಆದ್ದರಿಂದ ಈ ಗೂಡಿನಲ್ಲಿ ಮರಿಗಳು ಇದ್ದರೇ ತೊಂದರೆ ಕೊಡಬೇಡಿ. ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೇ ಅದರಿಂದ ತೊಂದರೆ ಆಗುತ್ತದೆಂದಾಗ
ಮಾತ್ರ ಕಡಜ ಮತ್ತು ಅದರ ಮರಿಗಳು ಇಲ್ಲದೇ ಇರುವುದನ್ನು ನೋಡಿಕೊಂಡು ಆ ಗೂಡಿಗೆ ಸ್ವಲ್ಪ ನೀರನ್ನು ಹಾಕಿ ಆ ಗೂಡನ್ನು ಒಂದು ಪೇಪರ್ ಗೆ ಉದುರಿಸಿಕೊಳ್ಳಿ ಮತ್ತು ಆ ಜಾಗವನ್ನು ಗೋಮೂತ್ರವನ್ನು ಸಿಂಪಡಿಸಿದಾಗ ಮತ್ತೆ ಆ ಜಾಗದಲ್ಲಿ ಕಡಜಗಳು ಗೂಡನ್ನು ಕಟ್ಟುವುದಿಲ್ಲ ಮತ್ತು ಯಾವುದೇ ದೋಷವೂ ಉಂಟಾಗುವುದಿಲ್ಲ. ಉದುರಿಸಿಕೊಂಡಿರುವ ಕಡಜದ ಗೂಡಿನ ಮಣ್ಣನ್ನು ಮನೆಯ ಎಲ್ಲಾ ಸದಸ್ಯರು ಹಣೆಗೆ ಹಚ್ಚಿಕೊಳ್ಳಬಹುದು. ಇದರಿಂದ ಯಾವಾಗಲೂ ಧನಾಕರ್ಷಣೆ ಆಗುತ್ತದೆ ಮತ್ತು ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಯಾವಾಗಲೂ ನಮ್ಮ ಮೇಲೆ ಆಗುತ್ತದೆ.