ನಾವು ಈ ಲೇಖನದಲ್ಲಿ ನಿಮ್ಮ ಸಂಬಂಧದಲ್ಲಿ ಇದೊಂದನ್ನು ಮಾಡಬೇಡಿ! 100% ನಿಮ್ಮ ತೊಂದರೆಗಳು ದೂರವಾಗಿ, ನೆಮ್ಮದಿಯ ಸಂಸಾರ ನಿಮ್ಮದಾಗುತ್ತದೆ. ಎಂಬುದನ್ನು ನೋಡೋಣ.
ಈ ವಿಚಾರಗಳು ನಿಮಗೆ ಗೊತ್ತಿದ್ದರೆ, ನಿಮ್ಮ ಸಂಬಂಧಗಳಲ್ಲಿ ಎಲ್ಲಾ ತೊಂದರೆಗಳಿಗೂ ನಿಮಗೆ ಪರಿಹಾರ ಸಿಗುತ್ತದೆ .
ಇದಕ್ಕೆ ಒಂದು ಉದಾಹರಣೆ ನೋಡೋಣ.. ಒಂದು ಊರಿನಲ್ಲಿ ಒಂದು ಯುವ ಜೋಡಿ ಇದ್ದರು.ಒಬ್ಬನೇ ಒಬ್ಬನು ತುಂಬಾ ಪ್ರೀತಿಸುತ್ತಿದ್ದರು. ಆದರೆ ಕೆಲಸದ ಸಮಯ ಕಳೆದ ನಂತರ ಇಬ್ಬರು ಹೆಚ್ಚಾಗಿ ಜಗಳವನ್ನು ಆಡುತ್ತಿದ್ದರು. ಒಂದು ದಿನ ಇಬ್ಬರೂ ಒಂದು ಬೆಟ್ಟಕ್ಕೆ ಟ್ರಿಪ್ ಗೆ ಹೋದರು. ಅಲ್ಲಿ ಇಬ್ಬರಿಗೂ ಆಕ್ಸಿಡೆಂಟ್ ಆಯಿತು. ಹುಡುಗಿ ಬೆಟ್ಟದ ತುದಿಯಲ್ಲಿ ಸಿಲುಕಿ ಕೊಂಡಿದ್ದಳು,
ಹುಡುಗ ಅವಳನ್ನು ಕಾಪಾಡ ಬೇಕಿತ್ತು.ಆದರೆ ಅವನಿಗೂ ತೊಂದರೆಯಾಗಿತ್ತು.ಆದರೂ ಆಕೆಯನ್ನು ಕಾಪಾಡಲು ಹೋಗುತ್ತಾನೆ. ಆದರೆ ಅವನು ಬಂಡೆಯಿಂದ ಏಟು ಮಾಡಿಕೊಂಡು ತಾನೆ ಹುಡುಗಿ ಸಿಕ್ಕಿಕೊಂಡಿರುವ ಜಾಗದಲ್ಲಿ ಕೆಳಗೆ ಒಂದು ಹಾವು ಇದೆ ಎನ್ನುವ ವಿಷಯ ಕೂಡ ಹುಡುಗನಿಗೆ ಗೊತ್ತಿರುವುದಿಲ್ಲ. ಈ ಕಡೆ ಹುಡುಗಿಗೂ ಕೂಡ ಅವನಿಗೆ ಬಂಡೆಯಿಂದ ಪೆಟ್ಟಾಗಿದೆ ಅನ್ನುವ ವಿಷಯ ಗೊತ್ತಿರುವುದಿಲ್ಲ..ನಾನು ಬಂದು ಬಿಡುತ್ತೇನೆ, ಕೆಳಗೆ ಹಾವು ಇರುವುದರಿಂದ ನಾನು ಬದುಕಿ ಬರಲು ಸಾಧ್ಯವಿಲ್ಲ.
ಎಂದು ಹುಡುಗಿ ಅಂದುಕೊಳ್ಳುತ್ತಾಳೆ.ಅವನು ಯಾಕೆ ಇನ್ನೂ ಸ್ವಲ್ಪ ಶಕ್ತಿ ಉಪಯೋಗಿಸಿ,ನನ್ನನ್ನು ಮೇಲಕ್ಕೆ ಎಳೆಯಬಹುದಲ್ಲ ಎಂದು ಕೊಳ್ಳುತ್ತಾಳೆ. “ನನಗೆ ತುಂಬಾ ನೋವಾಗುತ್ತಿದೆ,ಆದರೂ ನಾನು ನಿನ್ನನ್ನು ಎಳೆಯಯಲು ಪ್ರಯತ್ನ ಪಡುತ್ತಿದ್ದೇನೆ..ನೀನು ಇನ್ನೂ ಸ್ವಲ್ಪ ಕಷ್ಟಪಟ್ಟು ಮೇಲಕ್ಕೆ ಬರುವ ಪ್ರಯತ್ನ ಏಕೆ ಮಾಡಬಾರದು.. ಎಂದುಕೊಳ್ಳುತ್ತಾನೆ.ಈ ಹಂತದಲ್ಲಿ ಇಬ್ಬರು ಕೂಡ ನೋವಿನಲ್ಲಿ ಇದ್ದಾರೆ. ಆಗ ಹುಡುಗಿ,ಹುಡುಗನ ಕೈಯನ್ನು ಬಿಟ್ಟು ಸಾಯಬೇಕು ಎಂದು ನಿರ್ಧಾರ ಮಾಡುತ್ತಾಳೆ.ಅವಳು ಹುಡುಗನ ಕೈಬಿಟ್ಟು,ಬೆಟ್ಟದಿಂದ ಬಿದ್ದು ಸತ್ತು ಹೋಗುತ್ತಾಳೆ.
ಹುಡುಗ ಕೂಡ ಬಂಡೆಯ ಕೆಳಗೆ ಸಿಲುಕಿ ಸತ್ತು ಹೋಗುತ್ತಾನೆ. ಈ ನೋವಿನ ಕಥೆಯಿಂದ ನೀವು ಕಲಿತಿದ್ದೇನು?ಮತ್ತೊಬ್ಬ ವ್ಯಕ್ತಿಗೆ ಎಷ್ಟು ನೋವಿದೆ ಎಂದು ನಿಮಗೆ ಅರ್ಥವಾಗುವುದಿಲ್ಲ. ಅದೇ ರೀತಿ ನಿಮಗೆ ಎಷ್ಟು ನೋವಿದೆ ಎಂದು ಅವರಿಗೆ ಅರ್ಥವಾಗುವುದಿಲ್ಲ. ಇದೇ ಜೀವನ..ಕುಟುಂಬ,ಕೆಲಸ,ಸ್ನೇಹಿತರುಅಥವಾ ಭಾವನೆಗಳು ಏನೇ ಇದ್ದರೂ, ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು.ಬೇರೆ ರೀತಿಯಲ್ಲಿ ಇನ್ನು ಕ್ಲಿಯರ್ ಆಗಿ ಯೋಚನೆ ಮಾಡಿ.
ಇನ್ನೂ ಚೆನ್ನಾಗಿ ಮಾತನಾಡಬೇಕು.ಒಂದು ಸಣ್ಣ ಒಳ್ಳೆಯ ಯೋಚನೆ ಮತ್ತು ತಾಳ್ಮೆ ಜೀವನದಲ್ಲಿ ಬಹಳ ಸಮಯ ಜೊತೆಯಾಗಿ ಬರುತ್ತದೆ. ಕೆಲವೊಮ್ಮೆ ಸರಿಯಾಗಿ ಇರುವುದಕ್ಕಿಂತ ಮತ್ತೊಬ್ಬರನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಅರ್ಥ ಮಾಡಿಕೊಳ್ಳುವುದೇ ಪ್ರೀತಿಯ ಸ್ವಭಾವ..ಭಿನ್ನಾಭಿಪ್ರಾಯದ ಒಂದೇ ಒಂದು ಕ್ಷಣ ಕೂಡ ವಿಷಕಾರಿ ಆಗಿರುತ್ತದೆ. ಒಂದೇ ಒಂದು ನಿಮಿಷದಲ್ಲಿ ನಾವು ಕಳೆದಿರುವ ಅಷ್ಟೂ ಒಳ್ಳೆಯ ಕ್ಷಣವನ್ನು ಮರೆಯುವ ಹಾಗೆ ಮಾಡಿಬಿಡುತ್ತದೆ.
ಒಳ್ಳೆಯ ಸಂಬಂಧದಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾದ ಅಂಶ.ನೀವು ಭೇಟಿ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಕರುಣೆ ತೋರಿಸಿ,ಯಾಕೆಂದರೆ ತಮ್ಮ ಜೀವನದಲ್ಲಿ ಯಾರು ಯಾವ ರೀತಿಯ ಹೋರಾಟ ಮಾಡುತ್ತಿದ್ದಾರೆ ಎಂದು ನಮಗೆ ಗೊತ್ತಿರುವುದಿಲ್ಲ. ನಿಮ್ಮ ಮನಸ್ಸಿನಲ್ಲಿ ನೋವುಗಳು ಇದ್ದರೆ,ಮರೆಯದೆ ಅದನ್ನು ನಿಮ್ಮ ಸಂಗಾತಿಯ ಜೊತೆಗೆ ಹಂಚಿಕೊಳ್ಳಿ.
ನೀವು ನಿಮ್ಮ ನೋವುಗಳನ್ನು ಹಂಚಿಕೊಳ್ಳದೇ,ಅವರಿಗೆ ಅದರ ಬಗ್ಗೆ ಅರಿವು ಮೂಡುವುದಿಲ್ಲ.ನೀವು ಏನನ್ನೂ ಹಂಚಿಕೊಳ್ಳದೇ,ಅವರೇ ಎಲ್ಲವನ್ನು ತಿಳಿದುಕೊಳ್ಳಬೇಕು ಎಂದು ಊಹಿಸಿ ಕೊಂಡರೆ ಅದು ನಿಮ್ಮ ತಪ್ಪಾಗುತ್ತದೆ.ಅವಾಗಲೇ ಮನಸ್ತಾಪಗಳು ಜಗಳಗಳು ಶುರುವಾಗುತ್ತದೆ.ಏನೇ ವಿಚಾರ ಇದ್ದರೂ ಒಬ್ಬರು ಮತ್ತೊಬ್ಬರ ಜೊತೆ ಹಂಚಿಕೊಳ್ಳಬೇಕು . ಆವಾಗ ಎಲ್ಲವೂ ಸರಿ ಹೋಗುತ್ತದೆ.ನಿಮ್ಮ ಸಂಗಾತಿಯ ಜೊತೆ ಸುಖವಾಗಿ ಜೀವನವನ್ನು ಸಾಗಿಸಬಹುದು.