ಪಾರ್ವತಿ ಶಿವನನ್ನು ಕೇಳಿದ ಈ 3 ಪ್ರಶ್ನೆಗಳು ಪ್ರತಿ ಹೆಣ್ಣಿಗೂ ಅನ್ವಯಿಸುತ್ತದೆ

ಒಂದು ಸಾರಿ ಪಾರ್ವತಿ ದೇವಿಯು ಪರಮೇಶ್ವರನನ್ನು ಈ ರೀತಿ ಕೇಳುತ್ತಾಳೆ. ಸ್ವಾಮಿ ನಾನು ಭೂ ಲೋಕದಲ್ಲಿ ಮೂರು ಜನ ಪ್ರಾಣ ಸ್ನೇಹಿತರನ್ನು ನೋಡಿದೆ. ಇಬ್ಬರು ವಿಧವೆಯರು, ಒಬ್ಬಳು ಗಂಡನ ಜೊತೆ ಸಂತೋಷವಾಗಿ ಬದುಕುತ್ತಿದ್ದಾಳೆ. ಅವರನ್ನು ನೋಡಿದ ಮೇಲೆ ನನಗೆ ಮೂರು ಸಂದೇಹಗಳು ಮೂಡಿದವು.

ಯಾವ ಹೆಣ್ಣು ಚಿಕ್ಕ ವಯಸ್ಸಿಗೆ ವಿಧವೆಯಾಗುತ್ತಾಳೆ. ಯಾವ ಹೆಣ್ಣು ಸಂತೋಷವಾಗಿ ಬದುಕುವುದಿಲ್ಲ. ಗಂಡ ಕೇಳಿದರೂ ಕೊಡಬಾರದ ವಸ್ತು ಏನು? ಈ ಮೂರು ಸಂದೇಹಗಳನ್ನು ಬಗೆಹರಿಸಿ ಎಂದು ಶಿವನಲ್ಲಿ ಪಾರ್ವತಿ ಕೇಳಿದಳು. ಆಗ ಶಿವನು ಒಂದು ಕತೆಯನ್ನು ಹೇಳುತ್ತೇನೆ ಆಗ ನಿನ್ನ ಮೂರು ಚಿಕ್ಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಒಂದು ರಾಜ್ಯದಲ್ಲಿ ಮಹಾರಾಜನಿಗೆ ಒಬ್ಬ ಸ್ನೇಹಿತನಿದ್ದ, ಅವನು ಮಹಾರಾಜನಿಗೆ ಸೇವಕನಾಗಿ ಕೆಲಸ ಮಾಡುತ್ತಿದ್ದ.

ರಾಜ ಹಾಗೂ ಆ ಸೇವಕನ ಸ್ನೇಹ ನೋಡಿ ಎಲ್ಲರೂ ಕೂಡ ಅಸೂಯೆ ಪಡುತ್ತಿದ್ದರು. ಒಂದು ದಿನ ಮಹಾರಾಜ ಮಹಾರಾಣಿಯನ್ನ ಒಂದು ವಿಚಾರವಾಗಿ ಹೊಗಳಿದ. ಅದೇ ಸಮಯದಲ್ಲಿ ಈ ಸೇವಕ ತನ್ನ ಹೆಂಡತಿಯ ಬಗ್ಗೆ ಈ ರೀತಿ ಹೇಳಿದ ನನ್ನ ಹೆಂಡತಿ ಮಹಾ ಪತಿವ್ರತೆ ನನಗೋಸ್ಕರ ಪ್ರಾಣವನ್ನು ಕೊಡುತ್ತಾಳೆ. ಅವಳು ಯಾವತ್ತು ಕೂಡ ಪತಿವ್ರತಾ ಧರ್ಮಕ್ಕೆ ದ್ರೋಹವನ್ನು ಬಗೆಯುವುದಿಲ್ಲ ಎನ್ನುತ್ತಾನೆ. ಮಂತ್ರಿಗೆ ರಾಜ ಮತ್ತು ಆ ಸೇವಕನ ಸ್ನೇಹ ನೋಡಿ ಅಸೂಯೆ ಇತ್ತು.

ಇದೇ ಸರಿಯಾದ ಸಮಯವೆಂದು ಈ ರೀತಿ ಹೇಳಿದ ಈ ಸೇವಕ ಹೇಳುವುದನ್ನು ಕೇಳಿದರೇ ಇವನ ಹೆಂಡತಿ ಬಿಟ್ಟು ಬೇರೆಯವರ ಹೆಂಡತಿ ಪತಿವ್ರತೆಯಲ್ಲ ಎನ್ನುವ ರೀತಿಯಲ್ಲಿದೆ. ಇವನು ಹೇಳುವ ರೀತಿ ಕೇಳಿದರೇ ಮಹಾರಾಣಿಗು ಕಳಂಕ ಬರುವ ರೀತಿ ಇದೆ. ನಾನು ಇವನ ಹೆಂಡತಿ ಪತಿವ್ರತೆ ಅಲ್ಲವೆಂದು ಸಾಬೀತು ಪಡಿಸುತ್ತೀನಿ ಆಗ ಇವನು ಏನು ಮಾಡುತ್ತಾನೆಂದು ನೋಡೋಣ ಎಂದ. ಅದಕ್ಕೆ ಆ ಸೇವಕ ಮಂತ್ರಿಗೆ ನನ್ನ ಹೆಂಡತಿಯ ಮೇಲೆ ನನಗೆ ಪೂರ್ತಿ ನಂಬಿಕೆ ಇದೆ ಅವಳ ಪತಿವ್ರತೆಯ ಧರ್ಮವನ್ನು ಹಾಳುಮಾಡಲು ಸಾಧ್ಯವಾಗುವುದಿಲ್ಲ.

ಒಂದು ವೇಳೆ ನನ್ನ ಹೆಂಡತಿ ಪತಿವ್ರತೆಯಲ್ಲವೆಂದು ಸಾಬೀತು ಪಡಿಸಿದರೇ ಆ ಕ್ಷಣವೇ ನಾನು ಗಲ್ಲುಶಿಕ್ಷೆ ಅನುಭವಿಸುತ್ತೀನಿ ಎಂದನು ಸೇವಕ. ನಾನು ನಿನ್ನ ಹೆಂಡತಿ ಪತಿವ್ರತೆಯಲ್ಲ ಎಂದು ಹೇಳಲು ನಾನು ಯಾವ ಆಧಾರವನ್ನು ತರಬೇಕು ಎಂದು ಕೇಳಿದ. ಅದಕ್ಕೆ ಸೇವಕ ಮಂತ್ರಿಗೆ ನಾನು ನನ್ನ ಹೆಂಡತಿಗೆ ಮೊದಲ ರಾತ್ರಿ ಒಂದು ಚಿನ್ನದ ಹಾರವನ್ನು ಕಾಣಿಕೆಯಾಗಿ ಕೊಟ್ಟಿದ್ದೆ ಅದನ್ನು ಅವಳು ಯಾವಾಗಲೂ ಕೊರಳಿನಲ್ಲಿ ಹಾಕಿಕೊಂಡು ಇರುತ್ತಾಳೆ ಮತ್ತು ಅದನ್ನು ಯಾರಿಗೂ ಕೂಡ ಅದನ್ನು ತೋರಿಸುವುದಿಲ್ಲ.

ಇದುವರೆಗೂ ಅವಳು ಮತ್ತು ನನ್ನನ್ನು ಹೊರತುಪಡಿಸಿ ಹಾರವನ್ನು ಯಾರು ಕೂಡ ನೋಡಿಲ್ಲ. ನೀನು ಆ ಹಾರವನ್ನು ತಂದರೇ ನನ್ನ ಹೆಂಡತಿ ಪತಿವ್ರತೆಯಲ್ಲವೆಂದು ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ನನ್ನ ಹೆಂಡತಿ ಪತಿವ್ರತೆಯಲ್ಲವೆಂದು ಸಾಬೀತು ಪಡಿಸಲು ವಿಫಲನಾದರೇ ನೀನು ಯಾವ ಶಿಕ್ಷೆಯನ್ನು ಅನುಭವಿಸುತ್ತೀಯ ಎಂದು ಸೇವಕ ಕೇಳಿದ. ಮಹಾರಾಜ ನಿನ್ನ ಹೆಂಡತಿ ಪತಿವ್ರತೆಯಲ್ಲವೆಂದು ಸಾಬೀತು ಪಡಿಸದಿದ್ದರೇ ಅವನು ಕೂಡ ನಿನ್ನಂತೆ ಗಲ್ಲುಶಿಕ್ಷೆ ಅನುಭವಿಸುತ್ತಾನೆ.

ನಂತರ ಮಂತ್ರಿಯು ಪಕ್ಕದ ಊರಿಗೆ ಹೋಗುತ್ತಾನೆ ಅಲ್ಲಿ ಒಬ್ಬ ವ್ಯಕ್ತಿಗೆ ತಾನು ಬಂದಿರುವ ವಿಚಾರವನ್ನು ಹೇಳಿ ಹಾರವನ್ನು ಕದ್ದು ತೆಗೆದುಕೊಂಡು ಬಾ ಮತ್ತು ಆಕೆಯ ಮೈಯಲ್ಲಿರುವ ಯಾವುದಾದರೂ ಮಚ್ಚೆಯನ್ನು ನೋಡಿಕೊಂಡು ನನಗೆ ಹೇಳು ಎಂದು ನಿನಗೆ ದುಡ್ಡನ್ನು ಕೊಡುವೆ ಎಂದು ಹೇಳುತ್ತಾನೆ. ನಂತರ ಆ ವ್ಯಕ್ತಿಯು ಆ ಪತಿವ್ರತೆಯ ಮನೆಗೆ ಬರುತ್ತಾನೆ ನಾನು ನಿಮ್ಮ ಗಂಡನ ಸ್ನೇಹಿತ ನಿಮ್ಮ ಮನೆಯಲ್ಲಿ ಎರಡು ದಿನ ಉಳಿಯುತ್ತೇನೆ ಎನ್ನುತ್ತಾನೆ ಅದನ್ನು ನಂಬಿ ಆಕೆಯು ಒಪ್ಪಿಕೊಂಡು ಅತಿಥಿ ಸತ್ಕಾರ ಮಾಡುತ್ತಾಳೆ.

ಮಾರನೇ ದಿನ ಆಕೆಯು ಸ್ನಾನಕ್ಕೆ ಹೋದಾಗ ತನ್ನ ಹಾರವನ್ನು ಬಿಚ್ಚಿಡುತ್ತಾಳೆ ಅದನ್ನು ಆ ಕಳ್ಳನು ಕದಿಯುತ್ತಾನೆ ಮತ್ತು ಕದ್ದು ಆಕೆಯ ತೊಡೆಯಲ್ಲಿದ್ದ ಮಚ್ಚೆಯನ್ನು ನೋಡಿ ಆ ಮಂತ್ರಿಗೆ ಹೇಳುತ್ತಾನೆ ಮತ್ತು ಹಾರವನ್ನು ಕೊಟ್ಟು ದುಡ್ಡನ್ನು ಪಡೆದುಕೊಂಡು ತೆರಳುತ್ತಾನೆ. ನಂತರ ಮಂತ್ರಿ ಸಂತೋಷದಿಂದ ಅರಮನೆಗೆ ಬಂದು ಸೇವಕನನ್ನು ಕರೆದು ನಿನ್ನ ಹೆಂಡತಿಯ ಬಳಿ ನನಗೆ ಅವಶ್ಯಕತೆ ಇದೆ ಹಾರವನ್ನು ಕೊಡು ಎಂದು ಕೇಳಿದಾಗ ಆಕೆ ಕೊಟ್ಟಳು ಮತ್ತು ಅವಳ ಜೊತೆ ನಾನು ಇದ್ದು ಬಂದೆ ಅವಳ ತೊಡೆಯಲ್ಲಿ ಒಂದು ಮಚ್ಚೆ ಇದೆ ಎಂದು ಹೇಳಿದಾಗ ಸೇವಕನು ಗೋಳಾಡುತ್ತಾನೆ ಅಳುತ್ತಾನೆ.

ನನ್ನ ಹೆಂಡತಿ ನನಗೆ ಮೋಸ ಮಾಡಿದಳು ನನ್ನನ್ನು ಗಲ್ಲಿಗೇರಿಸಿ ಎನ್ನುತ್ತಾನೆ ಆದರೆ ಮಹಾರಾಜನು ನಾನು ನಿನ್ನನ್ನು ಗಲ್ಲಿಗೇರಿಸುತ್ತೇನೆ ಎಂದು ಹೇಳಿಲ್ಲ ನೀನೆ ಹೇಳಿದ್ದು ಗಲ್ಲುಗೇರುತ್ತೇನೆಂದು ನೀನು ನನ್ನ ಹೆಂಡತಿ ಪತಿವ್ರತೆ ಅಲ್ಲವೆಂದರೆ ಅವಳನ್ನು ಗಲ್ಲುಗೇರಿಸುತ್ತೇನೆ ಎಂದಾಗ ಸೇವಕನು ಇಂತಹ ಹೆಂಡತಿಯನ್ನು ಪಡೆದ ನಾನು ನಾನೇ ಗಲ್ಲುಗೇರುತ್ತೇನೆ ಎನ್ನುತ್ತಾನೆ. ಮಹಾರಾಜನು ಸರಿ ನಿನಗೆ ಒಂದು ವಾರ ಸಮಯ ಕೊಡುತ್ತೇನೆ. ನೀನು ನಿನ್ನ ಕೆಲಸವನ್ನು ಮುಗಿಸಿಕೊಂಡು ಬಾ ಎನ್ನುತ್ತಾನೆ.

ಸೇವಕನು ಮೊದಲು ತನ್ನ ತಂದೆ ತಾಯಿಯ ಮನೆಗೆ ಹೋಗಿ ಎರಡು ದಿನ ಇದ್ದು ನಂತರ ತನ್ನ ಮನೆಗೆ ಬರುತ್ತಾನೆ. ತನ್ನ ಹೆಂಡತಿಗೆ ಬಾಯಿಗೆ ಬಂದಹಾಗೆ ಬೈಯುತ್ತಾನೆ ಅದು ಆಕೆಗೆ ಅರ್ಥವಾಗಲಿಲ್ಲ. ನೀನು ಮಂತ್ರಿಗೆ ನಾನು ಕೊಟ್ಟ ಹಾರವನ್ನು ಕೊಟ್ಟಿದ್ದೀಯಾ ಎಂದು ಹೇಳಿ ನೀನು ವೈಶ್ಯೆ ಎಂದು ಹೇಳಿ ನಿಂದಿಸುತ್ತಾನೆ. ಅವಳ ಮಾತನ್ನು ಕೇಳದೇ ಅರಮನೆಗೆ ಹೊರಟು ಹೋಗುತ್ತಾನೆ.

ನಂತರ ಆಕೆಯು ಅರಮನೆಗೆ ನರ್ತಕಿಯ ವೇಷದಲ್ಲಿ ಹೋಗಿ ಕೆಲಸವನ್ನು ಮಹಾರಾಜರ ಬಳಿ ಕೇಳುತ್ತಾಳೆ. ಮಹಾರಾಜನು ಇಂದಿನ ಸಭೆಯಲ್ಲಿ ನೃತ್ಯ ಮಾಡು ನಿನ್ನ ನೃತ್ಯ ಇಷ್ಟವಾದರೇ ಮಾತ್ರ ಕೆಲಸಕ್ಕೆ ಸೇರಿಸಿಕೊಳ್ಳುವೆ ಎಂದು ಹೇಳುತ್ತಾನೆ. ಇವಳ ನೃತ್ಯ ನೋಡಿ ಇಷ್ಟವಾಗಿ ಕೆಲಸಕ್ಕೆ ಸೇರಿಸಿಕೊಳ್ಳುವೆನು ಎಂದು ಹೇಳಿ ಚಿನ್ನದ ಹಾರವನ್ನು ಕೊಡುತ್ತಾನೆ. ಆಕೆಯು ಬೇಡ ನನಗೆ ನಿಮ್ಮಿಂದ ಒಂದು ಉಪಕಾರವಾಗಬೇಕು ಈ ಸಭೆಯಲ್ಲಿ ಒಬ್ಬ ವ್ಯಕ್ತಿಯಿಂದ ನನ್ನ ಗಂಡನಿಂದ ದೂರವಿದ್ದೀನಿ ಮತ್ತು ನನ್ನ ಗಂಡ ನನ್ನ ಬಗ್ಗೆ ಅಪನಂಬಿಕೆಯಿಂದ ನನ್ನನ್ನು ವೈಶ್ಯೆ ಎಂದು ನಿಂದಿಸುತ್ತಾನೆ.

ಇದಕ್ಕೆ ಕಾರಣವಾದ ಆ ವ್ಯಕ್ತಿಗೆ ಗಲ್ಲು ಶಿಕ್ಷೆ ಕೊಡಿ ಎಂದು ಕೇಳಿಕೊಳ್ಳುತ್ತಾಳೆ. ಮಹಾರಾಜ ಆ ವ್ಯಕ್ತಿ ಯಾರು ಎಂದು ಕೇಳಿದಾಗ ನನ್ನ ಮನೆಯಲ್ಲಿ ನಿಮ್ಮ ಮಂತ್ರಿಗಳೇ ಚಿನ್ನದ ಹಾರವನ್ನು ಕದ್ದಿರುವುದು ದಯವಿಟ್ಟು ಅವನಿಗೆ ಗಲ್ಲು ಶಿಕ್ಷೆ ಕೊಡಿ ಎಂದು ಕೇಳಿದಳು. ಮಂತ್ರಿಯು ಗಾಬರಿಯಿಂದ ಎದ್ದು ಈ ಹೆಂಗಸನ್ನು ನೋಡುತ್ತಿರುವುದು ಮೊದಲ ಬಾರಿಗೆ ಇವಳ ಚಿನ್ನದ ಹಾರವನ್ನು ನಾನು ಕದ್ದಿಲ್ಲ ಎಂದು ಹೇಳುತ್ತಾನೆ. ಇವಳು ವೈಶ್ಯನೇ ಇರಬಹುದು ಎಂದು ಮಂತ್ರಿ ಹೇಳಿದಾಗ

ಆ ಹೆಣ್ಣು ಈ ಮಂತ್ರಿ ಹೇಳಿದ ಹಾಗೇ ಇವನು ನನ್ನ ಮುಖವನ್ನು ನೋಡಿಲ್ಲವೆಂದು ನಾನು ನಿಮ್ಮ ಆಪ್ತ ಸೇವಕನ ಹೆಂಡತಿ ಮತ್ತು ನಾಲ್ಕು ದಿನದ ಹಿಂದೆ ಒಬ್ಬನು ನಮ್ಮ ಮನೆಗೆ ನನ್ನ ಗಂಡನ ಸೇವಕ ಎಂದು ಹೇಳಿಕೊಂಡು ಬಂದಿದ್ದ ನಾನು ಅವನಿಗೆ ಅತಿಥಿ ಸೇವೆ ಮಾಡಿದ ಕಳುಹಿಸಿದೆ. ಆದರೇ ಅವನು ನನ್ನ ಚಿನ್ನದ ಹಾರವನ್ನು ಕದ್ದು ಹೋಗಿದ್ದಾನೆ. ಜೊತೆಗೆ ಕದ್ದು ನಾನು ಸ್ನಾನ ಮಾಡುವಾಗ ನನ್ನ ತೊಡೆಯ ಮೇಲಿರುವ ಮಚ್ಚೆಯನ್ನು ನೋಡಿದ್ದಾನೆ. ನಡೆದ ಘಟನೆಯನ್ನು ಹೇಳಿಕೊಳ್ಳುವುದಕ್ಕೆ ನನ್ನ ಗಂಡ ಕೂಡ ಅವಕಾಶವನ್ನು ಕೊಟ್ಟಿಲ್ಲ,

ಇವತ್ತು ನನ್ನ ಗಂಡನಿಗೆ ಗಲ್ಲು ಶಿಕ್ಷೆ ಆಗುತ್ತಿದೆ ನೀವೆ ಕಾಪಾಡಬೇಕು ಎಂದು ಹೇಳಿದಳು. ಆಗ ರಾಜನಿಗೆ ಎಲ್ಲವೂ ಅರ್ಥವಾಯಿತು. ಆ ಹೆಣ್ಣು ಹಾರವನ್ನು ಕೊಟ್ಟಿದ್ದಾಳೆ ಮತ್ತು ನನ್ನ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾಳೆಂದು ಹೇಳಿದ್ದ ಇದರ ಸತ್ಯ ರಾಜನಿಗೆ ಅರ್ಥವಾಯಿತು. ರಾಜನಿಗೆ ಮೋಸ ಮಾಡಿರುವುದರಿಂದ ಮತ್ತು ಈ ಶರತ್ತಿನಲ್ಲಿ ಸೋತಿರುವುದರಿಂದ ಮಂತ್ರಿಗೆ ಗಲ್ಲು ಶಿಕ್ಷೆ ಹಾಕಿದ. ಹಾಗೇ ಆತನ ಸ್ನೇಹಿತ ಸೇವಕನನ್ನು ಕಾಪಾಡಿದ. ಅದರ ನಂತರ ಗಂಡ ಹೆಂಡತಿ ಮತ್ತೆ ಒಂದಾದರು.

ಪಾರ್ವತಿಗೆ ಶಿವನು ಕಥೆ ಹೇಳಿದ ಮೇಲೆ ನೀನು ಕೇಳಿದ ಮೂರು ಪ್ರಶ್ನೆಗಳಲ್ಲಿ ಗಂಡನ ಜೊತೆ ಇರುವ ಸೇವಕನ ಹೆಂಡತಿ. ನಿನ್ನ ಪ್ರಶ್ನೆಗೆ ಉತ್ತರ ಹೀಗಿದೆ ಯಾರು ಗಂಡನನ್ನು ಹೆಸರು ಇಡಿದು ಕರೆಯುತ್ತಾಳೋ ಆಕೆ ಚಿಕ್ಕ ವಯಸ್ಸಿನಲ್ಲೇ ವಿಧವೆಯಾಗುತ್ತಾಳೆ. ಏಕೆಂದರೆ ಹೆಂಡತಿ ಹೆಸರು ಇಡಿದು ಕರೆಯುವ ಪ್ರತಿಸಾರಿ ಗಂಡನ ಆಯಸ್ಸು ಸ್ವಲ್ಪ ಸ್ವಲ್ಪ ಕ್ಷೀಣಿಸುತ್ತದೆ. ಇನ್ನು ನಿನ್ನ ಎರಡನೇ ಪ್ರಶ್ನೆ ಯಾವ ಹೆಂಗಸು ಸಂತೋಷವಾಗಿ ಇರುವುದಿಲ್ಲ ಎಂಬ ಪ್ರಶ್ನೆಗೆ

ಉತ್ತರ ನಿನ್ನ ಹತ್ತಿರ ಎಷ್ಟೇ ಆಭರಣ, ಆಸ್ತಿ ಅಂತಸ್ತು ಇದ್ದರೂ ಗಂಡ ಜೊತೆಯಲ್ಲಿ ಇಲ್ಲವೆಂದಾಗ ಹೆಣ್ಣು ಸಂತೋಷವಾಗಿರಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಎಷ್ಟೇ ಆಸ್ತಿ ಅಂತಸ್ತು ಇದ್ದರೂ ಕೂಡ ಆ ಮಂತ್ರಿಯ ಹೆಂಡತಿ ವಿಧವೆಯಾಗಿ ಬದುಕುತ್ತಿದ್ದಾಳೆ. ಹೆಂಡತಿ ಗಂಡ ಕೇಳಿದರೂ ಕೊಡಬಾರದ್ದು ಶಾಪ. ಹೆಂಡತಿಯ ಶಾಪದಿಂದ ತಪ್ಪಿಸಿಕೊಳ್ಳಲು ಗಂಡನಿಂದ ಸಾಧ್ಯವಾಗದ್ದು ಎಂದು ಪರಮೇಶ್ವರ ಪಾರ್ವತಿಯ ಪ್ರಶ್ನೆಗಳಿಗೆ ಉತ್ತರಿಸಿದನು.

Leave a Comment