ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯವರ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಜೀವನದಲ್ಲಿ ಬೆಳಕು ಬಂದರು ಸಹ ಬೆಳಕು ಮತ್ತು ಕತ್ತಲಿನ ಆಟ ನಡೆಯುತ್ತಲೇ ಇರುತ್ತದೆ. ಯಾವಾಗಲೂ ಬೆಳಕು ಇರುತ್ತದೆ ಮತ್ತು ಯಾವಾಗಲೂ ಕತ್ತಲೆ ತುಂಬಿರುತ್ತದೆ ಎಂದು ಅಂದುಕೊಳ್ಳಲು ಸಾಧ್ಯವಿಲ್ಲ. ಜೀವನವೆಂದರೆ ಬೆಳಕು ಮತ್ತು ಕತ್ತಲಿನ ಆಟವಾಗಿರುತ್ತದೆ. ನಿಮ್ಮ ಮಟ್ಟಿಗೆ ಕೆಲವೊಂದು ಭ್ರಾಂತಿ ತರುವ ವಿಚಾರಗಳು ನಡೆಯುತ್ತಿರುತ್ತದೆ. ಬ್ರಾಂತಿ ಎಂದರೆ ಜೀವನದಲ್ಲಿ ಬೆಳಕೆ ಇರಬೇಕು ಎಂದು ನಿರೀಕ್ಷೆ ಮಾಡುವುದು.
ನಮ್ಮ ಜೀವನದಲ್ಲಿ ಬರೀ ನಕಾರಾತ್ಮಕ ಅಂಶಗಳಿವೆ ಎಂದುಕೊಳ್ಳುವುದು ಒಂದು ತರಹದ ಬ್ರಾಂತಿಯೇ ಆಗಿರುತ್ತದೆ. ರಾಹುಗ್ರಹವು ನಿಮ್ಮ ಪಂಚಮ ಸ್ಥಾನದಲ್ಲಿದೆ. ಆ ಗ್ರಹಕ್ಕೆ ಕುಜಗ್ರಹವು ಸೇರುವುದರಿಂದ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು . ವಿಶೇಷವಾಗಿ ಪೂರ್ವ ಪುಣ್ಯಸ್ಥಾನದಲ್ಲಿ ಇದು ಪ್ರಭಾವವನ್ನು ಬೀರುತ್ತಿದೆ ಧನಸ್ಥಾನವು ಸಹ ಆಗಿದೆ. ರಾಹು ಮತ್ತು ಕುಜ ಗ್ರಹವು ಒಟ್ಟಿಗೆ ಸೇರಿಕೊಂಡಿರುವುದರಿಂದ ಭ್ರಾಂತಿಗಳು ಹೆಚ್ಚಿಗೆ ಆಗುತ್ತದೆ. ಗೊಂದಲವನ್ನು ಮತ್ತು ವಿವಾದ ಮತ್ತು ಸಂಘರ್ಷಗಳನ್ನು ಉಂಟುಮಾಡುತ್ತದೆ.
ವಿಶೇಷವಾಗಿ ತಂದೆ ಮತ್ತು ಮಕ್ಕಳ ಮಧ್ಯ ಪಿತ್ರಾರ್ಜಿತ ಆಸ್ತಿಗಾಗಿ ಜಗಳ ಮತ್ತು ಸಂಘರ್ಷಗಳು ಉಂಟಾಗುತ್ತದೆ . ಇದರಿಂದ ನೀವು ಎಚ್ಚರಿಕೆಯಿಂದ ಇರಬೇಕು. ಮಕ್ಕಳಿಗೆ ಸಣ್ಣ ಪುಟ್ಟ ಅನಾಹುತ ಆಗುವ ಸಂಭವಗಳು ಹೆಚ್ಚಾಗಿರುತ್ತದೆ .ಆದ್ದರಿಂದ ನೀವು ತುಂಬಾ ಎಚ್ಚರಿಕೆಯನ್ನು ವಹಿಸಬೇಕು . ಮೆಟ್ಟಿಲು ಹತ್ತುವಾಗ ವಾಹನಗಳಲ್ಲಿ ಓಡಾಡುವಾಗ ರಸ್ತೆಯಲ್ಲಿ ನಡೆಯುವಾಗ ಈ ರೀತಿಯ ವಿಚಾರಗಳಲ್ಲಿ ಎಚ್ಚರಿಕೆಯನ್ನು ಅನುಸರಿಸಬೇಕು. ಅವರ ಚಟುವಟಿಕೆಗಳಲ್ಲಿ ಹುಷಾರಾಗಿರಬೇಕು .
ಶನಿ ಗ್ರಹವು ಸುಖ ಸ್ಥಾನದಲ್ಲಿದೆ. ಜೀವನದಲ್ಲಿ ಕತ್ತಲೆ ಆವರಿಸಿದೆ ಎಂಬಂತಹ ಯೋಚನೆಗಳು ಬರುತ್ತಿರುತ್ತವೆ. ಸುಖ ಸ್ಥಾನದಲ್ಲಿ ದುಃಖಕಾರಕನಾದಂತಹ ಶನಿಗ್ರಹವು ಇರುವುದರಿಂದ ನಿಮ್ಮ ಜೀವನದಲ್ಲಿ ಒಳ್ಳೆಯ ಸಂಗತಿ ಮತ್ತು ವಿಷಯಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು. ಆದಷ್ಟು ಸಕಾರಾತ್ಮಕ ಸಂಗತಿಗಳನ್ನು ನಿಮ್ಮ ಮನಸ್ಸಿನಲ್ಲಿ ತೆಗೆದಿಟ್ಟುಕೊಳ್ಳಿ. ನಿಮಗಿಂತ ಕೆಳಮಟ್ಟದಲ್ಲಿರುವ ವ್ಯಕ್ತಿಯನ್ನು ನೋಡಿಕೊಂಡು ನೀವು ಸಂತೈಸಿಕೊಳ್ಳಬೇಕು. ಅಂದರೆ ಆರ್ಥಿಕವಾಗಿ ಆರೋಗ್ಯದ ವಿಷಯದಲ್ಲಿ
ಈ ರೀತಿಯ ವಿಚಾರಗಳಲ್ಲಿ ನೀವು ನಿಮ್ಮನ್ನು ನೋಡಿಕೊಳ್ಳಬೇಕು . ಈ ರೀತಿಯ ವಿಚಾರಗಳಲ್ಲಿ ನೀವು ನಿಮ್ಮನ್ನು ಕೆಳಮಟ್ಟದಲ್ಲಿರುವವರ ಜೊತೆ ಹೋಲಿಸಿಕೊಂಡು ಸಂತೈಸಿಕೊಳ್ಳಬೇಕು. ನಾನು ಕತ್ತಲೆಯಲ್ಲಿ ಇದ್ದೇನೆ ಎಂದು ಯೋಚನೆ ಮಾಡುವುದರ ಬದಲು ಬೆಳಕನ್ನು ಹುಡುಕಿಕೊಳ್ಳುತ್ತೇನೆ . ಎಂಬ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು . ತಲ್ಲಣಿಸದಿರು ಖಂಡ್ಯ ತಾಳು ಮನವೇ ಎಂಬ ಪದ್ಯವನ್ನು ನೆನಪಿಸಿಕೊಂಡು ಮನಸ್ಸನ್ನು ಬೇರೆ ರೀತಿಯ ಒದ್ದಾಟಗಳಿಗೆ ಒಡ್ಡಿಕೊಳ್ಳದೆ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
ಕಷ್ಟಗಳನ್ನು ಸಹನೆಯಿಂದ ಸಹಿಸಿಕೊಳ್ಳಬೇಕು. ಸುಖದಲ್ಲಿ ಶನಿ ಪಂಚಮದಲ್ಲಿ ಇರುವಾಗ ಮಹತ್ವದ ವಿಚಾರಗಳಿಗೆ ಗಮನಹರಿಸಬೇಕು. ನಮ್ಮ ಕಷ್ಟಗಳು ಪರಿವರ್ತನೆಗಳು ಸಂಚಲನಗಳು ಇವೆಲ್ಲವೂ ಸೇರಿ ನಮ್ಮ ಜೊತೆ ವಾಸ ಮಾಡುವ ನಮ್ಮ ಬೇಕು ಬೇಡಗಳನ್ನು ನೋಡಿಕೊಳ್ಳುವಂತಹ ದಾಂಪತ್ಯದಲ್ಲಿ ಕ್ರೂರೀಕರಣವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವೃಶ್ಚಿಕ ರಾಶಿಯವರ ವರ್ತನೆಗಳು ಬಹಳ ತೀಕ್ಷ್ಣವಾಗಿರುತ್ತದೆ . ಹೃದಯದಲ್ಲಿ ಒಳ್ಳೆಯ ಭಾವನೆ ಇದ್ದರೂ ಸಹ ವ್ಯಕ್ತಪಡಿಸುವ ರೀತಿಯು ಬಹಳ ತೀಕ್ಷ್ಣವಾಗಿರುತ್ತದೆ.
ಸುಖ ಸ್ಥಾನ ಮತ್ತು ಪಂಚಮ ಸ್ಥಾನ ಸಪ್ತಮ ಸ್ಥಾನ ಅಂದರೆ ಕಳತ್ರ ಭಾಗದ ಮೇಲೆ ಸಾಕಷ್ಟು ಒತ್ತಡ ಬೀರುತ್ತದೆ. ಸಂಘರ್ಷ ಮತ್ತು ಸಾಕಷ್ಟು ತೊಳಲಾಟಗಳು ಸಹ ಉಂಟಾಗುತ್ತದೆ . ಆದರೆ ಇಂತಹ ವಿಚಾರಗಳು ಕೊನೆಯಲ್ಲಿ ಒಳ್ಳೆಯ ರೀತಿಯಲ್ಲಿ ಕೊನೆಗೊಳ್ಳುತ್ತದೆ. ಸದ್ಗುರು ಎಂದರೆ ಗುರು ಗ್ರಹವು ಮೇ ಒಂದಕ್ಕೆ ಪರಿವರ್ತನೆಯಾಗಿದೆ. ಸಪ್ತಮಭಾಗದಲ್ಲಿ ಗುರುವಿನ ದೃಷ್ಟಿ ವೃಶ್ಚಿಕ ರಾಶಿಯ ಮೇಲಿರುತ್ತದೆ. ಭಾವನೆಗಳ ಏರುಪೇರು ಮಾನಸಿಕ ಒತ್ತಡ ಅಸಹಿಷ್ಣುತೆ, ಇವೆಲ್ಲ ವಿಚಾರಗಳ ಮೇಲೆ ಬೇಜಾರು ನಕಾರಾತ್ಮಕ ಚಿಂತನೆಗಳ ಮೇಲೆ ಇದರಿಂದ ಮೇಲೆ ಎತ್ತುವಂತಹ ಮಹಾನ್ ಶಕ್ತಿ ಗುರುಗ್ರಹವಾಗಿರುತ್ತದೆ.
ಒಂದು ವರ್ಷದ ಮಟ್ಟಿಗೆ ಇದು ನಿಮ್ಮನ್ನು ಕಾಪಾಡುತ್ತದೆ. ಖಂಡಿತವಾಗಿಯೂ ಸಕಾರಾತ್ಮಕ ಬದಲಾವಣೆಯ ಬಗ್ಗೆ ಒಳ್ಳೆಯ ಬದಲಾವಣೆಯನ್ನು ತರುತ್ತದೆ. ವಿದ್ಯಾರ್ಥಿಗಳಿಗೆ ಗುರುವಿನ ಅನುಗ್ರಹದಿಂದ ಬಹಳಷ್ಟು ಒಳ್ಳೆಯ ಲಾಭಗಳು ದೊರಕುತ್ತದೆ . ಶುಕ್ರ ಮತ್ತು ಬುಧ ಗ್ರಹಗಳು ನಿಮ್ಮ ರಾಶಿಯಲ್ಲಿ ಗುರುಗ್ರಹದ ಜೊತೆಗೆ ಸೇರಿಕೊಂಡಿರುವುದರಿಂದ ಒಳಿತನ್ನ ಉಂಟುಮಾಡುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಶುಭದಾಯಕವಾಗಿದೆ. ಸಪ್ತಮ ಭಾಗದಲ್ಲಿರುವ ಗುರು ಯಶಸ್ಸು ಮತ್ತು ಶ್ರೇಯಸ್ಸನ್ನು ತಂದುಕೊಡುತ್ತಾನೆ . ಹಣಕಾಸಿನ ವಿಚಾರದಲ್ಲಿ ಒಳ್ಳೆಯ ಲಾಭವನ್ನು ಕೊಡುವುದರಿಂದ ನಿಮ್ಮ ಜೀವನಕ್ಕೆ ಅಷ್ಟೊಂದು ಅಡೆತಡೆ ಉಂಟಾಗುವುದಿಲ್ಲ.