ವೃಷಭ ರಾಶಿಯ ಮಹಿಳೆಯರ ಗುಣಸ್ವಭಾವಗಳು

ನಾವು ಈ ಲೇಖನದಲ್ಲಿ ವೃಷಭ ರಾಶಿಯ ಮಹಿಳೆಯರ ಗುಣ ಸ್ವಭಾವಗಳು ಹೇಗೆ ಇರುತ್ತದೆ. ಎ೦ದು ತಿಳಿಯೋಣ .
ವೃಷಭ ರಾಶಿಯವರ ಗುಣ ಸ್ವಭಾವ ನೋಡುವುದಾದರೆ, ಪ್ರಾರಂಭದ ಹಂತದಲ್ಲಿ ಅಂದರೆ, ಚಿಕ್ಕವರಾಗಿ ಇರುವಾಗ ತೆಳುವಾಗಿ ಇರುವ ಸಾಧ್ಯತೆ ಹೆಚ್ಚು . ಕೈ ಕಾಲುಗಳು ಚಿಕ್ಕದಾಗಿ ಇರುವಂತದ್ದು , ಅಥವಾ ದೃಢ ಕಾಯ ಇರುವಂತದ್ದು ಬಹಳ ಕಡಿಮೆ . ಪ್ರೌಢಾವಸ್ಥೆಯಲ್ಲಿ ಬಹಳ ಸ್ಥೂಲ ಕಾಯದವರಾಗಿ ಸದೃಢವಾಗಿ ಕಂಡು ಬರುತ್ತಾರೆ . ಇನ್ನು ಮಂದಗತಿಯಲ್ಲಿ ಕೆಲಸ ಮಾಡುವಂತಹ ಸ್ವಭಾವದವರು ಆಗಿರುತ್ತಾರೆ .

ಆದರೆ ಬಹಳ ಶುದ್ಧವಾಗಿ , ನೀಟಾಗಿ , ನಿಧಾನವಾಗಿ ಕೆಲಸ ಮಾಡುವ ಮನಸ್ಥಿತಿ ಉಳ್ಳವರು ಆಗಿರುತ್ತಾರೆ . ಹಟಮಾರಿತನ ಹೆಚ್ಚಾಗಿರುತ್ತದೆ . ಹಾಗೆಯೇ ಕೋಪ ಕೂಡ ಇರುತ್ತದೆ . ನಿರಂತರವಾಗಿ ಪರಿವರ್ತನೆಯನ್ನು ಇಷ್ಟಪಡುತ್ತಾರೆ . ಯಾವುದೇ ಒಂದು ವಿಚಾರದಲ್ಲೂ ಪರಿವರ್ತನೆಯನ್ನು ಇಷ್ಟಪಡುತ್ತಾರೆ . ಹಾಗೆಯೇ ಶಾಂತ ಜೀವನವನ್ನು ನಡೆಸಲು ಬಹಳಷ್ಟು ಇಷ್ಟಪಡುತ್ತಾರೆ . ಏಕೆಂದರೆ ಗೊಂದಲ ಗೋಜಲ ಗಳು ಈ ರೀತಿಯಾಗಿ ಇರುವುದಕ್ಕೆ ಇವರು ಇಷ್ಟಪಡುವುದಿಲ್ಲ .

ಸಾಮಾಜಿಕ ಪ್ರವೃತ್ತಿ ಇವರಲ್ಲಿ ಅಧಿಕವಾಗಿರುತ್ತದೆ . ಯಾವುದೇ ಸಹಾಯ ಮಾಡುವುದು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದು , ಪರೋಪಕಾರ ಮಾಡುವಂತದ್ದು , ಈ ರೀತಿಯಾದ ಭಾವನೆಗಳು ಇವರಲ್ಲಿ ಹೆಚ್ಚಾಗಿರುತ್ತದೆ . ಸ್ನೇಹಿತರು ಅಥವಾ ಬಂಧುಗಳು ಈ ರೀತಿಯ ಪ್ರೀತಿ ಪಾತ್ರರಾದ ಜನರಿಗೆ ಸತ್ಕಾರ ಮಾಡುವ ವಿಷಯದಲ್ಲಿ ವಿಶೇಷವಾದ ಆಸಕ್ತಿ ಇರುವ ಗುಣವನ್ನು ಹೊಂದಿರುತ್ತಾರೆ . ಈ ರೀತಿಯಾದ ವಿಷಯ ಇವರಲ್ಲಿ ಸಕಾರಾತ್ಮಕವಾಗಿ ಇರುತ್ತದೆ .

ಇವರು ಯಾವ ವಿಚಾರದಲ್ಲಿ ಸುಖವಾಗಿ ಇರಲು ಬಯಸುತ್ತಾರೆ ಎಂದರೆ , ಸ್ವಲ್ಪ ವಿಲಾಸಿಯಾಗಿ ಇರುವ ಜೀವನವನ್ನು ಇವರ ತುಂಬಾ ಇಷ್ಟಪಡುತ್ತಾರೆ . ಯಾವುದೇ ರೀತಿ ಅಪಾಯವನ್ನು ತಂದುಕೊಳ್ಳಲು ಇವರು ಬಯಸುವುದಿಲ್ಲ . ಇರುವುದರಲ್ಲೇ ಸಂತೋಷ ಪಡಲು ಪ್ರಯತ್ನ ಪಡುವ ವ್ಯಕ್ತಿತ್ವ ಹೊಂದಿರುತ್ತಾರೆ . ಇನ್ನೂ ಸೌಂದರ್ಯದಲ್ಲಿ , ಕಲೆಯಲ್ಲಿ, ಸಂಗೀತ ಕ್ಷೇತ್ರದಲ್ಲಿ ವಿಶೇಷವಾದ ಅಭಿವೃದ್ಧಿಯನ್ನು ಇವರು ಹೊಂದಿರುತ್ತಾರೆ . ಕಲಾತ್ಮಕವಾಗಿ ಇರುವಂತಹ ಅಲಂಕಾರಿಕ

ವಸ್ತುಗಳನ್ನು ತಯಾರಿಸುವಲ್ಲಿ ನಿಪುಣತೆಯನ್ನು ಹೊಂದಿರುತ್ತಾರೆ . ಪ್ರತಿಯೊಂದು ವಸ್ತುಗಳನ್ನು ಕ್ರಮಬದ್ಧವಾಗಿ ಇಟ್ಟು ಕೊಂಡಿರುತ್ತಾರೆ . ಯಾವುದೇ ವಸ್ತುವನ್ನು ನೀಟಾಗಿ ಮತ್ತು ಶುದ್ಧವಾಗಿ ಇಟ್ಟುಕೊಳ್ಳುವ ವ್ಯಕ್ತಿತ್ವ ಇವರದಾಗಿ ಇರುತ್ತದೆ . ನಾಟಕ ಕಲೆಗಳಲ್ಲಿ ಇವರು ಬಹಳ ಚಾತುರ್ಯವನ್ನು ಹೊಂದಿರುತ್ತಾರೆ .ಬಹಳಷ್ಟು ಅಭಿರುಚಿಯನ್ನು ಕೂಡ ಹೊಂದಿರುತ್ತಾರೆ . ವ್ಯಾಪಾರದಲ್ಲಿ ಕೂಡ ಬಹಳಷ್ಟು ಆಸಕ್ತಿಯನ್ನು ಹೊಂದಿರುತ್ತಾರೆ .

ಇವರ ಜೀವನ ಹೇಗಿರುತ್ತದೆ ಎಂದು ನೋಡಿದರೆ , ಅವಕಾಶಕ್ಕೆ ತಕ್ಕಂತೆ ಯಾವುದೇ ರೀತಿಯ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ . ತಾಯಿಯಾಗಿ , ಮಗಳಾಗಿ , ಹೆಂಡತಿಯಾಗಿ , ತಂಗಿಯಾಗಿ , ಅಕ್ಕನಾಗಿ , ಸೊಸೆಯಾಗಿ ಎಲ್ಲಾ ರೀತಿಯ ಪಾತ್ರವನ್ನು ಯಾವುದೇ ರೀತಿಯ ತೊಂದರೆ ಇಲ್ಲದ ರೀತಿ ಇವರು ನಿಭಾಯಿಸಿಕೊಂಡು ಹೋಗುವ ತಲೆಯನ್ನು ಹೊಂದಿರುತ್ತಾರೆ .

ಇನ್ನು ತಮ್ಮ ಪ್ರೀತಿ ಪಾತ್ರರಿಗೆ ಯಾವುದಾದರೂ ರೀತಿಯ ಸಮಸ್ಯೆ ಇದೆ ಎಂದರೆ , ಯಾವುದೇ ರೀತಿಯ ತ್ಯಾಗಕ್ಕೂ ಕೂಡ ಮುಂದಾಗುತ್ತಾರೆ . ಇವರನ್ನು ಭಾವ ಜೀವಿಗಳು ಮುಗ್ಧ ಜೀವಿಗಳ ರೀತಿ ಯಾವುದೇ ರೀತಿಯಾದ ಕಷ್ಟಕ್ಕೂ ಕೂಡ ಬಲಿದಾನ ಮಾಡುವ ಮನಸ್ಥಿತಿ ಉಳ್ಳವರು ಆಗಿರುತ್ತಾರೆ. ಇವರು ಯಾವುದೇ ಕಾರಣಕ್ಕೂ ದ್ವೇಷಿಸಲು ಪ್ರಾರಂಭ ಮಾಡಿದರೆ , ಜೀವನ ಪರ್ಯಂತ ಅವರನ್ನು ಕ್ಷಮಿಸುವುದಿಲ್ಲ .

ಇವರಲ್ಲಿ ಎಷ್ಟು ದಯಾ ಗುಣ ಇರುತ್ತದೆಯೋ , ಅದೇ ರೀತಿಯಾಗಿ ಯಾರನ್ನು ಕೂಡ ಇವರು ಕ್ಷಮಿಸುವುದಿಲ್ಲ . ಒಳ್ಳೆಯ ಮನಸ್ಥಿತಿ ಹೊಂದಿರುವವರು ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ . ಇವರು ಎಲ್ಲರನ್ನೂ ನಂಬುವ ವ್ಯಕ್ತಿತ್ವ ಇವರದಲ್ಲ ,ತುಂಬಾ ಎಚ್ಚರಿಕೆಯಿಂದ ಇರುತ್ತಾರೆ . ಬಹಳ ಜಾಗೃತರಾಗಿರುತ್ತಾರೆ .

ಇನ್ನೂ ಇವರ ಮದುವೆ ವಿಚಾರವನ್ನು ನೀಡುವುದಾದರೆ , ಸಾಮಾನ್ಯವಾಗಿ ವೃಷಭ ರಾಶಿಯ ಸ್ತ್ರೀಯರು ಶ್ರೀಮಂತ ಮನೆತನಕ್ಕೆ ವಿವಾಹ ಆಗುತ್ತಾರೆ . ಇವರು ಮದುವೆಯಾಗಬೇಕು ಎಂದರೆ ಉತ್ತಮ ವ್ಯಾಪಾರಿಗಳು , ಶ್ರೀಮಂತ ಮನೆತನಕ್ಕೆ , ಇನ್ನು ಯೋಗ್ಯತೆಯ ಅನುಸಾರವಾಗಿ , ಸಂಘಟನಾ ಸಾಮರ್ಥ್ಯ ಇರುವ ವ್ಯಕ್ತಿಗಳ ಜೊತೆ , ರಾಜಕಾರಣಿಗಳ ಜೊತೆ , ಇಂತಹ ವ್ಯಕ್ತಿಗಳ ಜೊತೆ ವಿವಾಹ ನಡೆಯುವ ಸಾಧ್ಯತೆ ಇರುತ್ತದೆ .

ಇವರು ತಮಗಿಂತಲೂ ಹೆಚ್ಚಿನ ಶ್ರೀಮಂತರಾಗಿರುವ ಮನೆಗೆ ಸೊಸೆಯಾಗಿ ಹೋಗುವ ಹೆಚ್ಚಿನ ಸಾಧ್ಯತೆ ಇದೆ . ವ್ಯಾಪಾರ ಕ್ಷೇತ್ರದಲ್ಲಿ ಇವರಿಗೆ ಬಹಳಷ್ಟು ಚಾತುರ್ಯತೆ ಇರುತ್ತದೆ . ಏನೇ ಕೆಲಸವನ್ನು ಕೊಟ್ಟರು ಅದನ್ನು ಸಮರ್ಥವಾಗಿ ನಿಭಾಯಿಸುವ ಚಾಣಾಕ್ಷರೂ ಆಗಿರುತ್ತಾರೆ . ಇವರಲ್ಲಿ ಕಲಾ ಪ್ರೇಮ ಹೆಚ್ಚಾಗಿ ಇರುತ್ತದೆ . ಶಿಕ್ಷಣ , ಕಲಾವಿದ ಕ್ಷೇತ್ರದಲ್ಲಿ ಸೂಕ್ಷ್ಮವಾದ ಕಲೆ ಇರಲಿ .

ಇವರಲ್ಲಿ ಈ ರೀತಿಯಾದ ಕಲೆಯನ್ನು ಗುರುತಿಸಬಹುದು . ವೃಷಭ ರಾಶಿಯವರು ತಮ್ಮ ಶಕ್ತಿಗೆ ಅನುಸಾರವಾಗಿ ಇರುವಂತಹ ಶಕ್ತಿಯ ಲಕ್ಷಣವನ್ನು ಶೀಘ್ರವಾಗಿ ಗೋಚರಿಸುತ್ತಾರೆ . ಅಥವಾ ಭಾವನೆಗಳು ಅವರ ಯೋಚನೆಗಳು , ತುಂಬಾ ಬೇಗ ಅವರಿಗೆ ಗೊತ್ತಾಗುತ್ತದೆ . ಇವರು ತಮ್ಮ ಕುಟುಂಬಕ್ಕೆ ಅಥವಾ ತಮ್ಮ ಪತಿಗೆ ಹೆಚ್ಚು ಅವರನ್ನು ಅವರು ಹೆಚ್ಚಾಗಿ ಸಮರ್ಪಿಸಿಕೊಳ್ಳುತ್ತಾರೆ .

ಇದು ಇವರ ದಾಂಪತ್ಯ ಜೀವನಕ್ಕೆ ಬಹಳಷ್ಟು ಸುಖ ಮಯವಾಗಿ ಇರುವುದಕ್ಕೆ ಪ್ರೇರೇಪಣೆಯನ್ನು ನೀಡುವ ಅಂಶ . ಪ್ರತ್ಯೇಕವಾದ ಪರಿಸ್ಥಿತಿಯಲ್ಲಿ ಕಠಿಣವಾದ ಸನ್ನಿವೇಶದಲ್ಲಿಯೂ ಕೂಡ ಪತಿಗೆ ರಕ್ಷಣೆಯನ್ನು ಕೊಡುತ್ತಾರೆ . ಹೆಚ್ಚಿನ ಗಮನವನ್ನು ಕೊಡುವಂತದ್ದು, ಭಾವನೆಗಳನ್ನು ಹಂಚಿಕೊಳ್ಳುವುದು, ಜಾಗೃತವಾಗಿ ಇರುವುದು , ಬಹಳಷ್ಟು ಅನುಕೂಲ ಆಗೇ ಇರುತ್ತದೆ . ಮಕರ ರಾಶಿಯ ಪುರುಷರು ಕೂಡ ಇವರಿಗೆ ಅನುರೂಪವಾಗಿ ಇರುತ್ತದೆ . ಮದುವೆಯ ವಿಚಾರದಲ್ಲಿ ಬಹಳಷ್ಟು ಹೊಂದಾಣಿಕೆ ಆಗುತ್ತದೆ .

ಇನ್ನೂ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೋಡುವುದಾದರೆ , ಇವರಿಗೆ ಸಾಮಾನ್ಯವಾಗಿ ಕಾಣುವ ಸಮಸ್ಯೆ ಏನು ಎಂದರೆ , ಗಂಟಲು ನೋವಿನ ಭಾದೆಗಳು ಹೆಚ್ಚಾಗಿ ಕಂಡುಬರುತ್ತದೆ . ವೃತ್ತಿಯಲ್ಲಿ ಜಲೋಧರ ಎಂಬ ರೋಗ ಬಾಧಿಸುವ ಸಂಭವ ಇರುತ್ತದೆ. ಇನ್ನೂ ಜೊತೆಗೆ ಮಲಬದ್ಧತೆ , ಉಣ್ಣುಗಳು, ಮೊಡವೆಗಳು , ನೇತ್ರ ಹಾಗೂ ಸಂತಾನೋತ್ಪತ್ತಿ ಅಂಗಗಳಲ್ಲಿ ಕೆಲವೊಂದು ಭಾದೆಗಳು ಉಂಟಾಗುವ ಸಾಧ್ಯತೆ ಇದೆ . ಆರೋಗ್ಯದ ವಿಚಾರಕ್ಕೆ ಸಂಬಂಧಪಟ್ಟ ಎಚ್ಚರಿಕೆ ಇರಲಿ , ಅಂತಹ ದೊಡ್ಡ ಸಮಸ್ಯೆ ಇಲ್ಲದೆ ಇದ್ದರೂ ಕೂಡ , ಪ್ರತಿಯೊಬ್ಬರಿಗೂ ಕೆಲವೊಂದು ಸಾರಿ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದೇ , ಅದನ್ನು ಯಾವ ರೀತಿ ಸರಿ ಮಾಡಿಕೊಳ್ಳಬೇಕು ಎಂಬ ಸಮಯ ಪ್ರಜ್ಞೆ ಇದ್ದಾಗ , ಎಲ್ಲಾ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಬಹುದು .

Leave a Comment