ಏನ್ ಪ್ರಾಕ್ಟಿಕಲ್ ಈ ಜನ.

ಏನ್ ಪ್ರಾಕ್ಟಿಕಲ್ ಈ ಜನ. ನಾನು ಮುಂದೆ ತಿಳಿಸುವ 5 ರಾಶಿಯವರು ತಮ್ಮ ಹಳೇ ವಿಚಾರವನ್ನು ಕುರಿತು ಚಿಂತಿಸದೆ ತುಂಬಾ ಪ್ರಾಕ್ಟಿಕಲ್ ಆಗಿರುತ್ತಾರೆ. ಏನಿದ್ರೂ ನೇರ ನೇರ ಓನ್ಲಿ ಪ್ರೆಸೆಂಟ್ ಫ್ಯೂಚರ್ ಬಗ್ಗೆ ಮಾತ್ರ ಚಿಂತಿಸುತ್ತಾರೆ.
ಅದರ ಜೊತೆಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಇವರು ಮುಂದೆ ಎಂದು ಹೇಳಬಹುದು. ಆತ್ಮೀಯ ಓದುಗರೆ 5 ರಾಶಿಯವರ ಬಗ್ಗೆ ತಿಳಿಯೋಣ.

ಮೊದಲನೆಯ ರಾಶಿ ವೃಷಭ ಈ ರಾಶಿಯಲ್ಲಿ ಹುಟ್ಟಿದ ಜನ ತುಂಬಾನೇ ಪ್ರಾಕ್ಟಿಕಲ್ ಆಗಿರುತ್ತಾರೆ ಮತ್ತು ಡೌನ್ ಟು ಅರ್ಥ್ ಕೂಡ ಹೌದು ಕೆಲಸದ ವಿಚಾರಕ್ಕೆ ಬಂದರೆ ಸಿಕ್ಕಾಪಟ್ಟೆ ಕೋಪಿಷ್ಟರು ಆಗಿರುತ್ತಾರೆ. ಹೇಳಿದ್ದ ಕೆಲಸ ತಕ್ಷಣ ಆಗಬೇಕು ಕೆಲಸದಲ್ಲಿ ಯಾವುದೇ ರೀತಿ ತೊಂದರೆಯಾಗುವಂತಿಲ್ಲ. ತುಂಬಾನೇ ಇಷ್ಟ ಇದೆ. ಇವರು ಒಂದು ಸಲ ಹೆಚ್ಚು ಕೆಲಸ ಮಾಡುವುದು ಇನ್ನೊಂದು ಸಲ ಕೆಲಸ ಮಾಡದೆ ಇರುವುದು ಈ ರೀತಿ ಸ್ವಭಾವದವರಲ್ಲ ಕೆಲಸ ಯಾವಾಗಲೂ ಒಂದೇ ರೀತಿ ದಕ್ಷತೆಯನ್ನು ಮಾಡುತ್ತಾರೆ.

ಕೆಲಸ ಮಾಡುವ ಕಂಪನಿಗೆ ಸಹಾಯ ಮಾಡಬೇಕು ನಾನು ಕೂಡ ವಯಕ್ತಿಕವಾಗಿ ಬೆಳವಣಿಗೆ ಹೊಂದಬೇಕು ಎಂಬ ಭಾವನೆ ಈ ರಾಶಿಯವರಿಗೆ ಇರುತ್ತದೆ. ಹೀಗೆ ಜೀವನದಲ್ಲಿ ಯಾವುದರಿಂದ ಲಾಭ ಜಾಸ್ತಿ ಆಗುತ್ತದೆಯೋ ಅದರ ಬಗ್ಗೆ ಗಮನ ಇವರಿಗೆ ಜಾಸ್ತಿ ಇರುತ್ತದೆ.ಹಣಕಾಸಿನ ಬಗ್ಗೆ ಸ್ವಲ್ಪ ಜಾಸ್ತಿ ಹುಷಾರಾಗಿರುತ್ತಾರೆ. ಅಂದರೆ ಈಗ ಯಾವುದಕ್ಕಾದರೂ ಇನ್ವೆಸ್ಟ್ಮೆಂಟ್ ಮಾಡುವಾಗ ಎರಡಲ್ಲ ಮೂರು ಬಾರಿ ಪರೀಕ್ಷೆ ಮಾಡುತ್ತಾರೆ ಒಂದು ರೂಪಾಯಿಯೂ ಲಾಸ್ ಆಗಬಾರದೆಂದು.

ಹಾಗೆ ಮನೆ ಮಟ್ಟಿಗೆ ಹೇಳಬೇಕೆಂದರೆ ಒಂದು ತಿಂಗಳಲ್ಲಿ ಇಷ್ಟೇ ಖರ್ಚು ಮಾಡಬೇಕೆಂದು ಒಂದು ಬಜೆಟ್ ತಯಾರಿಸಿದರೂ ಆಶ್ಚರ್ಯವಿಲ್ಲ. ಕೆಲವರು ಬೇರೆಯವರ ಮೇಲೂ ಡಿಪೆಂಡ್ ಆಗಿರಬಹುದು ಇವರು ಭಾವನಾತ್ಮಕವಾಗಿ ಕನೆಕ್ಟ್ ಆಗುವುದು ತುಂಬಾ ಕಡಿಮೆ. ಈ ವೃಷಭ ದವರು ಜನರನ್ನು ಗೌರವಿಸುತ್ತಾರೆ ಅವರಿಗೆ ಸಹಾಯ ಕೂಡ ಮಾಡುತ್ತಾರೆ. ಆದರೆ ವಿರೋಧ ಕಟ್ಟಿಕೊಂಡರೆ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಒಂದಲ್ಲ ಒಂದು ದಿನ ಪಾಠ ಕಲಿಸೇತಿರುತ್ತಾರೆ ಎಂದು ಹೇಳಬಹುದು. ಇನ್ನು ಎರಡನೇ ರಾಶಿ ಕಟಕ, ಈ ರಾಶಿಯ ಜನ ಚಂದ್ರನ ಹಾಗೆ ತಂಪು ಸೈಲೆಂಟ್ ನೇಚರ್ .

ಆದರೆ ಅವರ ಸುದ್ದಿಗೆ ಕಟಕದ ಸಿಂಬಲ್ ಇದೆಯಲ್ಲ ಏಡಿಯ ಹಾಗೆ ತುಂಬಾ ಅಪಾಯಕಾರಿಯಾಗಿರುತ್ತಾರೆ. ಯಾಕಾದ್ರೂ ಇವರನ್ನು ಕೆಣಕಿದೆನೋ ನಿಲ್ಲಿಸಬೇಕು. ಆದರೆ ಇವರು ತುಂಬಾ ಪ್ರಾಕ್ಟಿಕಲ್ ಏಡಿ ಹೇಗೆ ತನ್ನ ಸೇಫ್ಟಿ ಬಗ್ಗೆ ಯೋಚನೆ ಮಾಡುತ್ತದೆಯೋ ಹಾಗೆಯೇ ಯಾರಾದ್ರೂ ಹಿಡಿಯಲು ಬಂದರೆ ಅವರ ಕೈ ಕಚ್ಚಿ ಪರಾರಿಯಾಗಲು ನೋಡುತ್ತದೆ ಹಾಗೆ ರಾಶಿಯ ಜನ ತಮ್ಮ ಸೇಫ್ಟಿ ಬಗ್ಗೆ ಯೋಚನೆ ಮಾಡುತ್ತಾರೆ. ಹೊಸ ಕೆಲಸಕ್ಕೆ ಕೈ ಹಾಕುವ ಮೊದಲು ಅಥವಾ ಇನ್ವೆಸ್ಟ್ ಮಾಡುವ ಮೊದಲು ಅಥವಾ

ಈ ಮದುವೆ ಪ್ರೀತಿ ಪ್ರೇಮ ಅಂತ ವಿಚಾರದಲ್ಲಿ ಆಗಬಹುದು ಮುಂದುವರೆಯುವ ಮೊದಲು ಬಹಳಷ್ಟು ಯೋಚನೆ ಮಾಡಿ ಮುನ್ನಡೆಯುತ್ತಾರೆ. ಕುಟುಂಬದ ವಿಚಾರವಾಗಲಿ ಪ್ರೀತಿ ಪಾತ್ರರ ವಿಚಾರವಾಗಲಿ ಅವರ ಬಗ್ಗೆ ಕೇರ್ಲೆಸ್ ಮಾಡಲು ಇಷ್ಟಪಡುವುದಿಲ್ಲ ಅವರಿಗೆಲ್ಲ ಕಂಫರ್ಟ್ ಲೈಫ್ ಕೊಡಬೇಕು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದರಲ್ಲಿ ಇವರೆ ಮೊದಲು ಹಾಗೇನೆ ಫ್ಯಾಮಿಲಿ ವಿಚಾರದಲ್ಲಿ ಕೆಲಸದ ವಿಚಾರದಲ್ಲಿ ಯಾರಾದರೂ ತೊಂದರೆ ಕೊಡಲು

ಬಂದರೆ ಸೇಡು ತೀರಿಸಿಕೊಳ್ಳುವ ಲೆವೆಲ್ಲಿಗೆ ಹೋದರೂ ಆಶ್ಚರ್ಯವಿಲ್ಲ. ಮೂರನೇ ರಾಶಿಯವರು ಕನ್ಯಾ ರಾಶಿ ಯವರು ಈ ರಾಶಿಯ ಹೆಚ್ಚಿನ ಜನ ತಮಗೆ ಲಾಭವಾಗುತ್ತದೆ ಎಂದರೆ ತಮ್ಮ ಅಭಿಪ್ರಾಯವನ್ನು ಸಮಯಕ್ಕೆ ತಕ್ಕಂತೆ ಬದಲಾಯಿಸುತ್ತಾರೆ. ಎಮೋಷನಲ್ ಕೂಡ ಆಗುತ್ತಾರೆ ಆಗಾಗ ಲವ್ ಫೇಲ್ಯೂರ್ ಆದಾಗ ಬ್ರೇಕಪ್ ಆದಾಗ ಬೇಜಾರಾಗುತ್ತದೆ. ಆದರೆ ಜಾಸ್ತಿ ದಿನ ಅದನ್ನೇ ಕುರಿತು ಯೋಚಿಸುವುದಿಲ್ಲ. ಬೇಗ ಮರೆಯುತ್ತಾರೆ ಕೆಲಸವೆಂದು ಬಂದರೆ ಯಾವಾಗಲೂ ಲಾಭದ ದೃಷ್ಟಿಯಿಂದ ನೋಡುವುದು ಜಾಸ್ತಿ.

ಪ್ರತಿಯೊಂದುಕ್ಕೂ ಲೆಕ್ಕ ಕೇಳುತ್ತಾರೆ ಇವರಿಗೆ ಎಲ್ಲವನ್ನು ಬಿಡಿಸಿ ಹೇಳಬೇಕಾಗುತ್ತದೆ. ಕೇಳಿದ ಡೌಟ್ ಕ್ಲಿಯರ್ ಆಗದಿದ್ದರೆ ಅದು ಕ್ಲಿಯರ್ ಆಗುವ ತನಕ ಬಿಡುವುದಿಲ್ಲ ಇವರು. ಹಾಗೆ ಈ ರಾಶಿಯ ಜನರದ್ದು ತೀಕ್ಷ್ಣ ಕಣ್ಣುಗಳು ಯಾವುದನ್ನು ಇವರು ಕಣ್ ತಪ್ಪಿಸಿ ಮಾಡಲಾಗುವುದಿಲ್ಲ ಎಲ್ಲದನ್ನು ಸಮರ್ಪಕವಾಗಿ ಮೇಂಟೈನ್ ಮಾಡಬೇಕು ಎನ್ನುವ ಜನ ಮತ್ತೊಂದು ವಿಚಾರವೇನೆಂದರೆ ಈ ರಾಶಿಯ ಜನರಿಗೆ ರಿಸಲ್ಟ್ ಪಾಸಿಟಿವ್ ಆಗಿ ಬರಬೇಕು ಅನ್ನೋದು ಇರುತ್ತದೆ ಅದಕ್ಕೋಸ್ಕರ ಇನ್ನೊಬ್ಬರ ಜೊತೆ ಕಿರಿಕ್ ಮಾಡಿಕೊಳ್ಳುವ ಸಾಧ್ಯತೆ ಇದೆ.

ಅವರನ್ನು ಸೈಲೆಂಟಾಗಿ ಮಟ್ಟ ಹಾಕಲು ನೋಡಬಹುದು. ಹಾಗೆ ಮೆಚ್ಯೂರ್ಡ್ ಆಗಿ ಬಿಹೇವ್ ಮಾಡುತ್ತಾರೆ ಎಂದು ಹೇಳಬಹುದು. ನಾಲ್ಕನೇ ರಾಶಿ ಯಾವುದೆಂದರೆ ಶನಿ ಅಧಿಪತಿಯಾಗಿರುವ ಮಕರ ರಾಶಿ ಇವರು ತಾನ ಆಯ್ತು ನನ್ನ ಕೆಲಸ ಆಯ್ತು ಯಾರಾದರೂ ಏನು ಬೇಕಾದರೂ ಮಾಡಿಕೊಳ್ಳಲಿ ಅಂತ ಹೇಳುವ ಜನ ಇವರು ತುಂಬಾನೇ ಪ್ರಾಕ್ಟಿಕಲ್. ಎಮೋಷನ್ ಆಗುವುದು ತೀರಾ ಕಡಿಮೆ. ಫ್ಯಾಮಿಲಿ ವಿಚಾರದಲ್ಲಿ ಕೆಲಸದ ವಿಚಾರದಲ್ಲಿ ಯಾವಾಗಲೂ ಕಾಮ್ಪ್ರಮೈಸ್ ಆಗುವುದಿಲ್ಲ.

ತಮ್ಮ ತೀರ್ಮಾನದಿಂದ ಹಿಂದಕ್ಕೂ ಸರಿಯುವುದಿಲ್ಲ ಮೊಸಳೆ ಬಿಗಿತ ಎನ್ನುತ್ತೇವೆಲ್ಲ ಹಾಗೆ ಮೊಸಳೆ ಸಂಕೇತವಾಗಿರುವ ಈ ಜನರು ಒಂದು ಸಲ ಬೇಕು ಎಂದರೆ ಒಂದು ಸಲ ಸಾಧನೆ ಮಾಡಬೇಕೆಂದು ತೀರ್ಮಾನ ಆದರೆ ಅದು ಎಷ್ಟೇ ಕಷ್ಟವಾದರೂ ಹಿಂದಕ್ಕೆ ಸರಿಯುವುದಿಲ್ಲ ಜೊತೆಗೆ ಮಹತ್ವಾಕಾಂಕ್ಷೆ ಜಾಸ್ತಿ ಇದೆ. ಮ್ಯಾನೇಜ್ ಮಾಡುವುದು ಇರಬಹುದು ಸ್ಟೇಬಲ್ ಆಗಿ ಕೆಲಸ ಮಾಡುವುದು ಇರಬಹುದು ಸತ್ಯ ನ್ಯಾಯದ ಪರವಾಗಿ ಇರುವ ಗುಣ ಇದು ಶನಿಯಿಂದ ಬಂದಿರುವ ಕೊಡುಗೆ ಹಾರ್ಡ್ ವರ್ಕ್ ಮಾಡುತ್ತಾರೆ.

ಎಲ್ಲವನ್ನು ಒಂದು ದೇಶ ಇಟ್ಟುಕೊಂಡೆ ಮಾಡುತ್ತಾರೆ. ಹಾಗೇನೇ ನೀಟಾಗಿ ಶಿಸ್ತಿಂದ ಇರಬೇಕೆಂದು ಬಯಸುತ್ತಾರೆ. ಧೂಳಿದೆ ಬೇಕಾಬಿಟ್ಟಿಯಾಗಿ ವಸ್ತುಗಳು ಬಿದ್ದಿವೆ ಎಂದರೆ ಇವರು ಸಹಿಸಿಕೊಳ್ಳುವುದಿಲ್ಲ. ಒಂಥರಾ ಡಿಫ್ರೆಂಟ್ ಸಖತ್ ಬುದ್ಧಿವಂತರಾಗಿರುತ್ತಾರೆ. ಐದನೇ ರಾಶಿ ಯಾವುದೆಂದರೆ ವೃಶ್ಚಿಕ ರಾಶಿ ಇವರು ತುಂಬಾನೇ ಪ್ರಾಕ್ಟಿಕಲ್ ಆಗಿರುತ್ತಾರೆ ಯಾವುದೇ ಎಮೋಷನ್ಗು ಒಳಗಾಗುವುದಿಲ್ಲ ಎಲ್ಲಿ ಹೋದರೂ ಹೊಂದಿಕೊಳ್ಳುವ ಗುಣವಿದೆ ಜನರ ಜೊತೆಗೂ ಬೆರೆಯುತ್ತಾರೆ ಅದರ ವೈಯಕ್ತಿಕವಾಗಿ ಯಾರೊಂದಿಗಾದರೂ ವೈರತ್ವ ಕಟ್ಟಿಕೊಂಡರೆ

ಈ ರಾಶಿ ಸಿಂಬಲ್ ಇದೆಯಲ್ಲ ಅದರಂತೆ ಡೇಂಜರಸ್ ಇವರು ಸಮಸ್ಯೆಗಳು ಬಂದರೆ ಎದಿರುವುದಿಲ್ಲ ಧೈರ್ಯವಾಗಿ ನಿಂತು ಬೇರುಸಮೇತ ಆ ಸಮಸ್ಯೆಯನ್ನು ಕಿತ್ತು ಹಾಕುತ್ತಾರೆ. ಏಕೆಂದರೆ ಎಂತಹ ಕಷ್ಟದ ಸಮಯದಲ್ಲಿ ಸರಿಯಾವುದು ತಪ್ಪು ಯಾವುದು ಯಾವ ನಿರ್ಧಾರ ತೆಗೆದುಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬುದು ಅವರ ತಲೆಯಲ್ಲಿ ಓಡುತ್ತಿರುತ್ತದೆ. ಸಖತ್ ಬೇಗ ತೀರ್ಮಾನ ಮಾಡಿ ಡಿಸಿಷನ್ ತೆಗೆದುಕೊಳ್ಳುತ್ತಾರೆ. ಹೆಚ್ಚಿನ ಜನ ಫಸ್ಟ್ ನಿಧಾನವಾಗಿ ಮಾತನಾಡಿ ಅರ್ಥ ಮಾಡಿಸಲು ನೋಡುತ್ತಾರೆ.

ಅದು ನಡೆಯದಿದ್ದರೆ ದಂಡಂ ದಶಗುಣಂ ಎನ್ನುವುದು ಇವರ ತಿಯರಿ ಕೆಲವರು ಪ್ರೀತಿ ಪ್ರೇಮದ ವಿಚಾರದಲ್ಲಿ ಸ್ವಲ್ಪ ಎಮೋಷನ್ ಆಗಬಹುದು ಆದರೆ ಕೆಲಸದ ವಿಚಾರದಲ್ಲಿ ಕಾಂಪ್ರಮೈಸ ಆಗುವುದಿಲ್ಲ ಒಂದೊಂದು ಪೈಸೆಗೂ ಲೆಕ್ಕ ಬಿಡುತ್ತಾರೆ ಕೊಟ್ಟಿರುವ ಡಬಲ್ ವಸೂಲಿ ಮಾಡುತ್ತಾರೆ. ಉಡುಗೊರೆ ಈ ಐದು ರಾಶಿಗಳು ತುಂಬಾ ಪ್ರಾಕ್ಟಿಕಲ್ ಆಗಿರುತ್ತಾರೆ.

Leave a Comment