ಮನೆಯ ಈಶಾನ್ಯ ಮೂಲದಲ್ಲಿ ಈ ಒಂದು ಕೆಲಸ ಮಾಡಿದರೆ ಎಂತಹ ಬಡವರು ಕೂಡ ಧನವಂತರಾಗುತ್ತಾರೆ !

ತಾಮ್ರದ ತಂಬಿಗೆಯನ್ನ ಈ ದಿಶೆಯಲ್ಲಿ ಇಟ್ಟರೆ ಸಾಕು ಆ ಮನೆಯಲ್ಲಿ ಧನಕ್ಕೆ ಕೊರತೆಯೆ ಇರುವುದಿಲ್ಲ ಎಂದು ಹೇಳುತ್ತಾರೆ ಪಂಡಿತರು. ಹೌದು ಮನೆಯಲ್ಲಿ ಈ ರೀತಿಯಾಗಿ ತಾಮ್ರದ ತಂಬಿಗೆಯನ್ನ ತುಂಬಿ ಇಡುವುದರಿಂದ ಮನೆಯಲ್ಲಿ ಅಷ್ಟ ಐಶ್ವರ್ಯಗಳು ಸಿಗುತ್ತದೆ.ಮುಖ್ಯವಾಗಿ ಹುಣ್ಣಿಮೆ, ಅಮಾವಾಸ್ಯೆ ದಿನ ಈ ರೀತಿಯಾಗಿ ಮಾಡುವುದರಿಂದ ಸಾಕಷ್ಟು ಪ್ರಭಾವ ಇರುತ್ತದೆ ಎಂದು ಹೇಳುತ್ತಾರೆ. ಇನ್ನು ಪ್ರಪಂಚದಲ್ಲಿ ಅನೇಕ ಲೋಹಗಳಿವೆ ಬೆಳ್ಳಿ ಬಂಗಾರ, ತಾಮ್ರ, ಹಿತ್ತಾಳೆ, ಪಂಚಲೋಹ. ಅದರಲ್ಲಿ ಸುವರ್ಣ ಈಶ್ವರನಿಗೆ ಪ್ರತೀಕವಾದರೆ. ತಾಮ್ರ ನಾರಾಯಣನಿಗೆ ಪ್ರತೀಕ.

ತಾಮ್ರದ ಪಾತ್ರೆಗಳಲ್ಲಿ ಶ್ರೀಮನ್ ನಾರಾಯಣ ವಾಸವಾಗಿರುತ್ತಾನೆ ಎಂದು ಹೇಳಲಾಗುತ್ತದೆ. ಇದಕ್ಕೆ ನಾರಾಯಣಗೆ ಪ್ರತಿ ರೂಪವಾಗಿ ತಾಮ್ರವನ್ನು ಬಳಸವುದು. ನಾರಾಯಣ ಗೆ ಪ್ರಿಯಾವಾದ್ದು ತಾಮ್ರ. ಇದಕ್ಕೆ ಕಾರಣವನ್ನ ಶ್ರೀಮನ್ ನಾರಾಯಣ ಸ್ವಯಂ ಆಗಿ ಭೂದೇವಿಗೆ ವಿವರಿಸಿದ್ದಾರೆ. ಪ್ರತಿ ನಿತ್ಯ ತಾಮ್ರದ ತಂಬಿಗೆಯಲ್ಲಿ ನೀರು ತುಂಬಿ ಮಾವಿನ ಎಲೆಯಿಂದ ಪ್ರತಿ ಮನೆಯ ಮೂಲೆಗಳಿಗು ಸಿಂಪಡಿಸಬೇಕು. ಇದರಿಂದ ಮನೆಯಲ್ಲಿ ಇರುವ ಪ್ರತಿಕೂಲ ಶಕ್ತಿ ತೊಲಗಿ ಹೋಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ತಾಮ್ರದ ತಂಬಿಗೆಯಲ್ಲಿ ನೀರು ತುಂಬಿ ಸ್ವಲ್ಪ ಅರಿಶಿಣ ಪುಡಿ ಹಾಕಿ ಅದನ್ನ ಪ್ರತಿ ದಿನ ಪ್ರತಿಯೊಂದು ಮೂಲೆ ಮೂಲೆಗೂ ಸಿಂಪರಣೆ ಮಾಡಬೇಕು. ಹಾಗೇ ತಾಮ್ರದ ತಂಬಿಗೆಯಲ್ಲಿ ನೀರು ಕುಡಿಯುವದರಿಂದ ಅನಾರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಇಷ್ಟೆ ಅಲ್ಲ ತಾಮ್ರದಿಂದ ತಯಾರಿಸಿದ ಉಂಗುರವನ್ನು ಧರಿಸುವುದರಿಂದ ಕೂಡ ಸಾಕಷ್ಟು ಪರಿಹಾರಗಳಿವೆ.ತಾಮ್ರದ ತಂಬಿಗೆಯಲ್ಲಿ ನೀರು ತುಂಬಿ ಈ ಒಂದು ಪ್ರದೇಶದಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಧನ ಉಳಿಯಲು ಪ್ರಾರಂಭಿಸುತ್ತದೆ. ಮನೆಯಲ್ಲಿ ದಿನೇ ದಿನೇ ಧಾನ್ಯ ಅಭಿವೃದ್ಧಿ ಆಗುತ್ತದೆ. ಒಂದು ತಾಮ್ರದ ತಂಬಿಗೆಯಲ್ಲಿ ನೀರು ತುಂಬಿಕೊಂಡು ಮನೆಯ ಪ್ರಧಾನ ಬಾಗಿಲಿನ ಈಶಾನ್ಯ ಮೂಲೆಯಲ್ಲಿ ಈ ನೀರಿನ ತಂಬಿಗೆಯನ್ನ ಇಡಬೇಕು.

ಇದರಿಂದ ಉತ್ತಮವಾದ ಫಲಿತಾಂಶಗಳನ್ನು ಹೊಂದಬಹುದು ಎಂದು ಹೇಳಲಾಗುತ್ತದೆ. ಕೆಲವರು ಇದನ್ನ ಮಂಚದ ಕೆಳಗೆ ಸಹ ಇಡುತ್ತಾರೆ. ಹೀಗೆ ಮಾಡುವುದು ಒಳ್ಳೆಯ ಪದ್ಧತಿ ಅಲ್ಲ. ಮನೆಯ ಈಶಾನ್ಯ ಮೂಲೆಯಲ್ಲಿ ಇಡುವುದರಿಂದ ಮತ್ತು ಬೆಳಗ್ಗೆ ಎದ್ದ ತಕ್ಷಣ ಆ ನೀರನ್ನು ಕುಡಿಯುವುದರಿಂದ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಮುಖ್ಯವಾಗಿ ಹೀಗೆ ತಾಮ್ರದ ತಂಬಿಗೆಯಲ್ಲಿ ನೀರು ತುಂಬಿ ಇಡುವುದರಿಂದ ಹಸಿ ಕೂಸುಗಳಿಗೆ ದೃಷ್ಟಿ ತಾಗುವುದಿಲ್ಲ. ಇದರಿಂದ ಲಕ್ಷ್ಮಿ ದೇವಿಯ ಕೃಪೆಯಿಂದ ಧನ ಧಾನ್ಯ ಸಮೃದ್ಧಿ ಆಗುತ್ತದೆ. ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Comment