ಎಲ್ಲರಿಗೂ ನಮಸ್ಕಾರ ವಾಸ್ತುಶಾಸ್ತ್ರದಲ್ಲಿ, ಮನೆಯ ಮುಖ್ಯ ದ್ವಾರ ಬಹಳ ಮುಖ್ಯ ಎಂದು ವಿವರಿಸಲಾಗಿದೆ. ಕುಟುಂಬದ ಸಂತೋಷ ಮತ್ತು ಸಮೃದ್ಧಿಯು ಮನೆಯ ಮುಖ್ಯ ಬಾಗಿಲಿನಿಂದ ಬರುತ್ತದೆ. ಇದಕ್ಕಾಗಿ ವಾಸ್ತುಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಸೂಚಿಸಲಾಗಿದೆ.ವಾಸ್ತುಶಾಸ್ತ್ರದಲ್ಲಿ ದಿಕ್ಕುಗಳಿಗೆ ಭಾರಿ ಮಹತ್ವವಿದೆ. ದಿಕ್ಕುಗಳಿಂದಲೇ ಮಂಗಳಮಯ ಹಾಗೂ ಅಮಂಗಳಮಯಗಳನ್ನು ನಿರ್ಧರಿಸಲಾಗುತ್ತದೆ. ಇದರ ಜೊತೆಗೆ ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯದ್ವಾರಕ್ಕು ಕೂಡ ವಿಶೇಷ ಮಹತ್ವ ನೀಡಲಾಗಿದೆ. ಮನೆಯ ಮುಖ್ಯದ್ವಾರದಿಂದಲೇ ಮನೆಯಲ್ಲಿ ಸುಖ-ಸಮೃದ್ಧಿ ಪ್ರವೇಶಿಸುತ್ತದೆ.ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಮಂಡಪ ಮಂಡಪ ಮುಖ್ಯದ್ವಾರದ ಎದುರು ಹಾಗೂ ಮುಖ್ಯದ್ವಾರದ ಗೋಡೆಗೆ ಹೊಂದಿಕೊಂಡಂತೆ ನಿರ್ಮಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣಗೊಳ್ಳುತ್ತದೆ ಹಾಗೂ ಸಂಕಷ್ಟಗಳು ದೂರವಾಗುತ್ತವೆ. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.ಗಣೇಶನ ಮೂರ್ತಿ ವಾಸ್ತು ಶಾಸ್ತ್ರದ ಪ್ರಕಾರ, ಗಣೇಶನ ವಿಗ್ರಹವನ್ನು ಅಥವಾ ಭಾವಚಿತ್ರವನ್ನು ಮುಖ್ಯ ಬಾಗಿಲಿಗೆ ಮೇಲೆ ಅಥವಾ ಸಮನಾಗಿ ಇರಿಸಿ. ಹೀಗೆ ಮಾಡುವುದರಿಂದ, ತಾಯಿ ಲಕ್ಷ್ಮಿ ಮನೆಯಲ್ಲಿಯೇ ನೆಲೆಸುತ್ತಾಳೆ ಮತ್ತು ಹಣದ ಸಮಸ್ಯೆ ಎಂದಿಗೂ ಇರುವುದಿಲ್ಲ.
ತೋರಣ ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರದ ಮೇಲೆ ಮಾವಿನ ಮರ, ಆಲದ ಮರ, ಅಶೋಕ ಮರದ ಎಳೆಗಳ ತೋರಣ ಹಾಕಿದರೆ ವಂಶವೃದ್ಧಿಯಾಗುತ್ತದೆ. ಈ ಎಳೆಗಳ ಸುಗಂಧದಿಂದ ಆಕರ್ಷಿತಗಾಗಿ ದೇವರು ಮನೆ ಪ್ರವೇಶಿಸುತ್ತಾರೆ ಎಂಬ ನಂಬಿಕೆ ಇದೆ.ಪಂಚಸೂಲಕ ಹಾಗೂ ಸ್ವಸ್ತಿಕ್ದು ತತ್ವಗಳ ಪ್ರತೀಕವನ್ನು ಪಂಚಸೂಲಕ ಎಂದು ಕರೆಯಲಾಗುತ್ತದೆ. ಇದನ್ನು ಮುಖ್ಯದ್ವಾರದ ಗೋಡೆಯ ಮೇಲೆ ರಚಿಸಲಾಗುತದೆ. ಇದರ ಜೊತೆಗೆ ಸ್ವಸ್ತಿಕ್ ರಚಿಸುವದೂ ಕೂಡ ಶುಭಕರ ಎನ್ನಲಾಗುತ್ತದೆ. ಸ್ವಸ್ತಿಕವನ್ನು ಶ್ರೀಗಣೇಶನ ರೂಪ ಎಂದೂ ಕೂಡ ಕರೆಯಲಾಗಿದೆ.
ಗಟ್ಟಿಯಾದ ಹೊಸ್ತಿಲು ನಿರ್ಮಿಸಿ ಮನೆ ನಿರ್ಮಾಣದ ವೇಳೆ ಮುಖ್ಯದ್ವಾರದ ಹೊಸ್ತಿಲು ಗಟ್ಟಿಯಾಗಿ ಹಾಗೂ ಸುಂದರವಾಗಿ ನಿರ್ಮಿಸಿ. ಮನೆಯಲ್ಲಿ ಮಂಗಳ ಕಾರ್ಯದ ವೇಳೆ ಹೊಸ್ತಿಲಿಗೆ ಪೂಜೆ ಸಲ್ಲಿಸುವ ಪರಂಪರೆ ಇದೆ. ಹೊಸ್ತಿಲ ಎರಡು ಬಾಡಿಗೆ ಸ್ವಸ್ತಿಕ ಚಿನ್ಹೆ ರಚಿಸುವುದು ಅತ್ಯಂತ ಶುಭಕರ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನಿರಂತರವಾಗಿ ನೆಲೆಸುತ್ತದೆ.ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.