ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಜೀವನದ ಹತ್ತು ಕಹಿ ಮತ್ತು ನಿಜವಾದ ವಿಷಯಗಳ ಬಗ್ಗೆ ತಿಳಿಸುತ್ತಾ ಇದ್ದೇವೆ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಪ್ರತಿಯೊಬ್ಬರೂ ಕೂಡ ಇದನ್ನು ತಿಳಿದುಕೊಳ್ಳಬೇಕು ಕಷ್ಟ ಅಂತ ಹೋದ್ರೆ ಯಾರು ಸಹಾಯ ಮಾಡಲ್ಲ ಇಷ್ಟ ಅಂತ ಹೇಳಿದ್ರೆ ಯಾರು ಪ್ರೀತಿ ತೋರಿಸಲ್ಲ ಅದಕ್ಕೆ ಹೇಳೋದು ಕಷ್ಟನಾ ತೋರಿಸಿಕೊಳ್ಳಬಾರದು ಇಷ್ಟಾನಾ ಹೇಳಿಕೊಳ್ಳಬಾರದು ಕಷ್ಟಕ್ಕೆ ಕರುಣೆ ಇಲ್ಲ ಇಷ್ಟಕ್ಕೆ ಬೆಲೆ ಇಲ್ಲ ಹತ್ತು *
ಜನರಿಗೆ ಒಳ್ಳೆಯವನು ಆಗಬೇಡ ನಿನ್ನ ಆತ್ಮಸಾಕ್ಷಿಗೆ ಒಳ್ಳೆಯವನಾಗು ಗೆದ್ದಾಗ ಹೊಗಳೂರು ಬಿದ್ದಾಗ ತೆಗುಳೋರ ಮಧ್ಯೆ ನೀನು ನೀನಾಗಿರು ಇನ್ನೊಬ್ಬರಿಗಾಗಿ ಬದಲಾಗದಿರು ತಪ್ಪು ಇಲ್ಲದ ಕಡೆ ತಲಬಾವಿಸಬೇಡ ಅದೇ ತರಹ ನಂಬಿಕೆ ಇಲ್ಲದ ಕಡೆ ವಾದಿಸಬೇಡ ಜೀವನ ಅನ್ನೋದು ಸೋಲು ಗೆಲುವಿನ ಆಟ ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ ಸೋತವನಿಗೆ ಗೆಲ್ಲಬೇಕೆಂಬ ಛಲವಿರುತ್ತದೆ ನೀವು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಜನರು ಬಯಸುತ್ತಾರೆ
ಆದರೆ ನೀವು ಅವರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಅವರು ಎಂದಿಗೂ ಬಯಸುವುದಿಲ್ಲ ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಒಂದು ನೋವು ತುಂಬಿದ ಕಥೆ ಇರುತ್ತದೆ ಹಾಗೆಯೇ ಆ ನೋವಿನ ಕಥೆಗೂ ಯಶಸ್ವಿ ಅಂತ್ಯವಿರುತ್ತದೆ ಆದ್ದರಿಂದ ನೋವನ್ನು ಕೂಡ ಸ್ವೀಕರಿಸಿ ಯಶಸ್ಸಿನ ಕಡೆ ಹೆಜ್ಜೆಯಿಡಿ ನಿಮ್ಮನ್ನು ಉರುಳಿಸಬೇಕೆಂದು ಯಾರಾದರೂ ಪ್ರಯತ್ನ ಪಟ್ಟರೆ ಮತ್ತೊಮ್ಮೆ ಎದ್ದು ನಿಲ್ಲುವ ಸಾಮರ್ಥ್ಯ ನಿಮಗಿದೆ ಎಂದು ಅವರಿಗೆ ತೋರಿಸಿಕೊಡಿ
ಹವಾಲುಗಳನ್ನು ಸ್ವೀಕರಿಸಿ ಬದುಕುವುದೇ ಬದುಕು ನೆನಪಿರಲಿ ಪ್ರತಿಯೊಬ್ಬರು ಹೇಳುವ ಮಾತನ್ನು ಕೇಳಿ ಹೇಳುವುದರಲ್ಲಿ ಏನು ತಪ್ಪಿಲ್ಲ ಆದರೆ ಕೊನೆಗೆ ನಿಮಗೆ ಯಾವುದು ಸರಿ ಅನಿಸುತ್ತದೆಯೋ ಅದನ್ನೇ ಮಾಡಿ ನಾವು ಮೌನವಾಗುತ್ತಾ ಹೋದಷ್ಟು ಜನರು ಹೆಚ್ಚು ಅರ್ಥವಾಗುತ್ತಾ ಹೋಗುತ್ತಾರೆ ನಿಮ್ಮ ಜೀವನದ ಯಾವುದೇ ದಿನವನ್ನು ಶಪಿಸಬೇಡಿ ಯಾಕೆಂದರೆ ಒಳ್ಳೆಯ ದಿನವೂ ಸಂತೋಷವನ್ನು ತರುತ್ತದೆ ಮತ್ತು ಕೆಟ್ಟ ದಿನಗಳು ಅನುಭವವನ್ನು ಕೊಡುತ್ತವೆ
ಯಶಸ್ವಿ ಜೀವನಕ್ಕೆ ಇವೆರಡು ಅಗತ್ಯ ಜೀವನದ ಅತ್ಯಂತ ದೊಡ್ಡ ತಪ್ಪು ಏನ್ ಗೊತ್ತಾ ನಿಮ್ಮ ತಪ್ಪುಗಳಿಂದ ನೀವು ಏನು ಕಲಿಯದಿದ್ದಾಗ ತಪ್ಪುಗಳಿಂದ ಕಲಿಯಬೇಕು ಮತ್ತು ಒಂದು ಬಾರಿ ಮಾಡಿದ ತಪ್ಪನ್ನು ಮತ್ತೆ ಯಾವತ್ತಿಗೂ ಮಾಡಬಾರದು ತಪ್ಪುಗಳು ಅನುಭವವನ್ನು ಹೆಚ್ಚಿಸುತ್ತವೆ
ಅದೇ ಅನುಭವ ತಪ್ಪುಗಳನ್ನು ಕಡಿಮೆ ಮಾಡಿಸುತ್ತವೆ ಪ್ರತಿಯೊಂದು ಗಾಳಿಪಟವು ಕೊನೆಗೆ ಮುರಿದು ಹೋಗುವುದೆಂದು ಅದಕ್ಕೆ ಗೊತ್ತು ಆದರೂ ಕೂಡ ಆಕಾಶ ಮುಟ್ಟಬೇಕೆಂಬ ಆಸೆ ಅದರದ್ದು ನೀವು ಕೂಡ ಪ್ರಾಣ ಇರುವಾಗಲೇ ಏನಾದರೂ ಮಾಡಿ ನಿಮ್ಮ ಸಾಧನೆ ಆಕಾಶದ ಎತ್ತರಕ್ಕೆ ಮುಟ್ಟುವಂತೆ ಮಾಡಿ ಸ್ನೇಹಿತರೆ ನಮ್ಮ ಈ ಪುಟ್ಟ ಪ್ರಯಾಸ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು