ಧನು ರಾಶಿ ರಹಸ್ಯ

0

ನಮಸ್ಕಾರ ಸ್ನೇಹಿತರೆ ಧನು ರಾಶಿಯ ರಹಸ್ಯವನ್ನು ತಿಳಿಸಿ ಕೊಡುವ ಇವತ್ತಿನ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ಇದು ರಾಶಿ ಚಕ್ರದ ಒಂಬತ್ತನೇ ರಾಶಿ ಮೂಲ ನಕ್ಷತ್ರ ಹಾಗೂ ಪೂರ್ವಾಷಾಡ ನಕ್ಷತ್ರದ ನಾಲ್ಕು ಪಾದಗಳು ಮತ್ತು ಉತ್ತರಾಷಾಡ ನಕ್ಷತ್ರದ ಒಂದು ಪಾದ ಈ ರಾಶಿಗೆ ಸೇರುತ್ತದೆ ಈ ನಕ್ಷತ್ರದ ಚಿಹ್ನೆ ಅರ್ಧ ಮನುಷ್ಯ ಹಾಗೂ ಅರ್ಧ ಕುದುರೆಯ ಚಿತ್ರವನ್ನು ಹೊಂದಿರುತ್ತದೆ ಹಾಗೆ ಕೈಯಲ್ಲಿ ಬಿಲ್ಲು ಬಾಣವನ್ನು ಹೊಂದಿರುವ ಚಿನ್ಹೆಯನ್ನು ಈ ರಾಶಿಯವರು ಹೊಂದಿರುತ್ತಾರೆ

ಇವರ ಕಣ್ಣುಗಳಲ್ಲಿ ಬಹಳ ಸ್ಪಷ್ಟತೆ ಇರುತ್ತದೆ ಇವರು ಇಟ್ಟ ಬಾಣ ಯಾವತ್ತಿಗೂ ಗುರಿ ತಪ್ಪುವುದೇ ಇಲ್ಲ ಬಹಳ ಪಾಸಿಟಿವ್ ಆಗಿ ಯೋಚಿಸುತ್ತಾರೆ ಇವರು ತಾವು ಅಂದುಕೊಂಡಿದ್ದೆಲ್ಲ ಆಗಬೇಕು ಅನ್ನುವ ಜಾಯಮಾನದವರು ರಾಶಿಗೆ ಅಧಿಪತಿ ಗುರು ಇದರ ಪ್ರಕಾರ ಹೇಳುವುದಾದರೆ ಇವರು ನೋಡುವುದಕ್ಕೆ ಸಾಮಾನ್ಯ ಎತ್ತರ ಆಗಿರುವವರು ಆಗಿದ್ದು ದಪ್ಪ ಕೂದಲನ್ನು ಹೊಂದಿರುತ್ತಾರೆ

ಆಕರ್ಷಕವಾದ ಹೊಳೆಯುವಂತಹ ಕಣ್ಣುಗಳು ಮೃದುವಾದ ಸುಮಧುರವಾದ ಧ್ವನಿ ಉದ್ದವಾದ ಕೈಕಾಲುಗಳು ದೊಡ್ಡದಾದ ಮೂಗು ಹಾಗೂ ಮೇಲಿನ ಹಲ್ಲುಗಳು ದರ್ಬಕೆ ತಕ್ಕ ಹಾಗೆ ಸರಳವಾದ ಬಟ್ಟೆಗಳನ್ನು ಧರಿಸುತ್ತಾರೆ ಉತ್ತಮ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಇವರು ಯಾವುದೇ ರೀತಿಯ ತೊಂದರೆಗಳಿಗೆ ಸಿಕ್ಕಿಹಾಕಿಕೊಳ್ಳಲು ಬಯಸುವುದಿಲ್ಲ ಆದರೆ ಪ್ರೀತಿ ಪಾತ್ರರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಯಾವಾಗಲೂ ಮುಂದೆ ಇರುತ್ತಾರೆ ತಮಾಷೆ ಮಾಡುತ್ತಾ

ಜನರನ್ನು ಯಾವಾಗಲೂ ಸಂತೋಷವಾಗಿರುತ್ತಾರೆ ಪ್ರಕೃತಿಯನ್ನು ತುಂಬಾ ಇಷ್ಟಪಡುತ್ತಾರೆ ಆಟೋಟ ದೈಹಿಕ ಚಟುವಟಿಕೆಗಳಲ್ಲಿ ಯಾವತ್ತಿಗೂ ಮುಂದೆ ಇರುತ್ತಾರೆ ಆದರೂ ಕೆಲವೊಮ್ಮೆ ಅತಿ ಸೋಮಾರಿಗಳಾಗಿರುತ್ತಾರೆ ಇವರು ತಮ್ಮ ಪ್ರೀತಿಪಾತ್ರದೊಂದಿಗೆ ಖುಷಿಯಿಂದ ಕಾಲ ಕಳೆಯುವುದಕ್ಕೆ ಬಯಸುತ್ತಾರೆ ರೀತಿಯಲ್ಲಿ ನಿಷ್ಠಾವಂತರು ಹಾಗೂ ಸಮರ್ಪಣಾ ಮನೋಭಾವದವರು ನಿಷ್ಠಾವಂತ ಸ್ನೇಹಿತರನ್ನು ಹೊಂದಿರುತ್ತಾರೆ ಕೊನೆಯವರೆಗೂ ತಮ್ಮ ಗೆಳೆತನವನ್ನು ಉಳಿಸಿಕೊಂಡಿರುತ್ತಾರೆ

ಇವರಿಗೆ ಹೆಚ್ಚು ಆರೋಗ್ಯದ ಸಮಸ್ಯೆಗಳು ಕಂಡುಬರುವುದಿಲ್ಲ ಕೆಲವೊಮ್ಮೆ ಹೊಟ್ಟೆ ಸೊಂಟ ಕಾಲಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಮದ್ಯಪಾನ ಹಾಗೂ ಕೊಬ್ಬಿನಂಶ ಇರುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು ಹಾಗೆ ವಾಹನ ಚಲಾಯಿಸುವಾಗ ಯಾವಾಗಲೂ ಎಚ್ಚರಿಕೆಯಿಂದ ಇರಬೇಕಾದ ಅಗತ್ಯತೆ ಇದೆ ಇವರ ವೃತ್ತಿ ಜೀವನದ ಬಗ್ಗೆ ನೋಡುವುದಾದರೆ

ಪ್ರಯಾಣಕ್ಕೆ ಸಂಬಂಧಿಸಿದ ವೃತ್ತಿಗಳು ಇವರನ್ನು ಆಕರ್ಷಿಸುತ್ತವೆ ಹೊಸ ಜನರನ್ನು ಭೇಟಿ ಮಾಡುವುದಕ್ಕೆ ಹಾಗೂ ಹೊಸ ಸಂಸ್ಕೃತಿಯನ್ನು ಇವರು ಇಷ್ಟ ಪಡುತ್ತಾರೆ ಇವರು ಕೆಲಸವನ್ನು ಎಷ್ಟೇ ಬೇಗ ಶುರು ಮಾಡಿದರು ಕೆಲಸವನ್ನು ಮುಗಿಸುವುದು ಲೇಟಾಗಿ ರಾಜಕಾರಣಿಗಳು ಸಮಾಜ ಸೇವೆಗಳು ಆಗಬಹುದು ವೈದ್ಯ ವೃತ್ತಿಯನ್ನು ಕೂಡ ಇವರು ಮಾಡಬಹುದು ಇವರು ಧೈರ್ಯಶಾಲಿಗಳಾಗಿದ್ದು ಆತ್ಮವಿಶ್ವಾಸದಿಂದ ಎಲ್ಲವನ್ನು ಮೆಟ್ಟಿ ನಿಲ್ಲುತ್ತಾರೆ ತಮ್ಮ ಗುರಿಯನ್ನು ಸಾಧಿಸುವುದಕ್ಕೆ ಹೊರಡುವ

ಮೊದಲು ಎರಡು ಬಾರಿ ಯೋಚನೆ ಮಾಡುತ್ತಾರೆ ಹಾಸ್ಯಪ್ರಜ್ಞೆಯಿಂದ ಇವರು ಮಾಡುವ ಕೆಲಸದ ಸ್ಥಳವನ್ನು ಅತ್ಯಂತ ಸಂತೋಷದಿಂದ ಇಡುವುದು ಇವರ ಸ್ವಭಾವ ಅದಕ್ಕೆ ಎಲ್ಲರೂ ಅವರ ಜೊತೆ ಕೆಲಸ ಮಾಡುವುದಕ್ಕೆ ಬಯಸುತ್ತಾರೆ ಸ್ಪೂರ್ತಿದಾಯಕ ನಾಯಕರು ಇವರು ಈ ರಾಶಿಯ ಮಹಿಳೆಯರು ಆದರ್ಶವಾದಿಗಳು ನೋಡಿದರೆ ತುಂಬಾ ಕುತೂಹಲ ಅನಿಸುವ ಹಾಗೆ ಇರುತ್ತಾರೆ ಸ್ವಂತ ಅನುಭವದಿಂದ ಹೊಸ ವಿಷಯಗಳನ್ನು ಕಲಿಯುವುದಕ್ಕೆ ಬಯಸುತ್ತಾರೆ

ಕಷ್ಟಾನೋ ಅಥವಾ ಸುಖಾನೋ ಜೀವನ ಬಂದ ಹಾಗೆ ಅನುಭವಿಸುತ್ತಾರೆ ಅವರ ಕ್ರಿಯೆ ಅವರ ಮಾತು ಬೇರೆಯವರ ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವುದರ ಬಗ್ಗೆ ಒಂದು ಚೂರು ಯೋಚನೆ ಮಾಡುವುದಿಲ್ಲ ಯಾವಾಗಲೂ ಅವಸರದಲ್ಲೇ ಇರುತ್ತಾರೆ ಸ್ವಲ್ಪ ಲೇಟಾದರೂ ಕೋಪಾನೇ ಬಂದುಬಿಡುತ್ತದೆ ಈ ರಾಶಿಯ ಪುರುಷರಿಗೆ ಸರಿ ಹಾಗೂ ತಪ್ಪುಗಳ ಪ್ರಜ್ಞೆ ಇದೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವುದಕ್ಕೆ ಬಯಸುತ್ತಾರೆ

ಅನಗತ್ಯ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಹೆಚ್ಚು ಪ್ರತಿಯೊಬ್ಬರನ್ನು ಕಂಪೇರ್ ಮಾಡಿ ನೋಡುವುದು ಪ್ರಾಮಾಣಿಕತನ ಮುಳ್ಳಾಗಬಹುದು ಯಾವುದರ ಮೇಲೂ ಆಸಕ್ತಿ ಇಲ್ಲ ಅನ್ನುವ ತರ ಇರುತ್ತದೆ ಕೆಲವೊಮ್ಮೆ ಅಸಭ್ಯವಾದ ವರ್ತನೆಯನ್ನು ಕೂಡ ತೋರಬಹುದು ನಿರಾಸೆ ಹಾಗೂ ಮುಂಗೋಪಕ್ಕೆ ಒಳಗಾಗುತ್ತಾರೆ ಉತ್ತಮ ಸಲಹೆಗಳನ್ನು ತಿರಸ್ಕರಿಸಬಹುದು ಈ ರಾಶಿಯವರು ಹಣ ಅದೃಷ್ಟ ಖುಷಿ ಧೈರ್ಯ ಪ್ರೇರಣೆ ಸಿಗುವುದಕ್ಕೆ ಏನೆಲ್ಲ ಮಾಡಬಹುದು

ಯಾವ ರತ್ನವನ್ನು ಹಾಗೆ ಯಾವ ಬಟ್ಟೆಯನ್ನು ಧರಿಸುವುದು ಒಳ್ಳೆಯದು ಎನ್ನುವುದನ್ನು ಒಂದೊಂದಾಗಿ ನೋಡುತ್ತಾ ಹೋಗೋಣ ಈ ರಾಶಿಗೆ ಅಧಿಪತಿ ಗುರು ಪುಷ್ಯ ರಾಗ ಹಾಗೂ ಹಳದಿ ಬಟ್ಟೆಯನ್ನು ಧರಿಸುವುದು ಒಳ್ಳೆಯದು ಇದನ್ನು ಧರಿಸುವುದರಿಂದ ಸುಖ ಶಾಂತಿ, ನೆಮ್ಮದಿ ಸಿಗುತ್ತದೆ ಕೆಂಪು ಬಣ್ಣದ ಹವಳದ ಜೊತೆಗೆ ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಖ್ಯಾತಿ ಮಾನಸಮಾನ ಜನರ ನಡುವೆ ಪ್ರಸಿದ್ಧಿಗೆ ಬರುವುದಕ್ಕೆ ಸಾಧ್ಯವಾಗುತ್ತದೆ

ರಾಶಿಯವರು ಮಹಾವಿಷ್ಣು ಹಾಗೂ ವಿಷ್ಣುವಿನ ಅವತಾರವನ್ನು ಪೂಜೆ ಮಾಡುವುದು ಸೂಕ್ತ ಗುರುವಾರವನ್ನು ಇಷ್ಟು ದಿನವನ್ನಾಗಿ ಮಾಡಿಕೊಳ್ಳಬಹುದು ಈ ರಾಶಿಯವರು ಗುರುಗ್ರಹದಿಂದ ಸಮಸ್ಯೆಯಿಂದ ಮುಕ್ತಿ ಪಡೆಯುವುದಕ್ಕೆ ಗುರುವನ್ನು ಪೂಜಿಸಿ ಅಶ್ವತ ಹಾಗೂ ಅರಳಿ ಮರದ ಪ್ರದಕ್ಷಿಣೆಯನ್ನು ಹಾಕಬೇಕು ಇದನ್ನು ಪೂಜೆ ಮಾಡುವುದರಿಂದ ಆರೋಗ್ಯದ ತೊಂದರೆಗಳು ದೂರವಾಗುತ್ತವೆ ಗಿಡವನ್ನು ನೆಟ್ಟು ಬೆಳೆಸುವುದರಿಂದ ಗುರುದೋಷ ನಿವಾರಣೆ ಆಗುತ್ತದೆ ಸ್ನೇಹಿತರೆ ಈ ಎಲ್ಲಾ ಪರಿಹಾರಗಳನ್ನು ಮಾಡಿಕೊಂಡು ನಿಮ್ಮ ಜೀವನವನ್ನು ಸುಸೂತ್ರವಾಗಿ ನಡೆಸಿ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತೆ ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.