ನಮಸ್ಕಾರ ಸ್ನೇಹಿತರೆ ತಾಯಿ ಇಲ್ಲದ ಜನ್ಮವಿಲ್ಲ ಮಹಿಳೆ ಇಲ್ಲದ ಮನೆ ಇಲ್ಲ ಸ್ತ್ರೀ ಇಲ್ಲದ ಜಗವನ್ನು ಊಹಿಸಲು ಸಾಧ್ಯವಿಲ್ಲ ಅವಳ ಪಾತ್ರ ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಹೆಣ್ಣು ತನ್ನ ಪ್ರೀತಿಸುವವರ ಮುಂದೆ ಸೋಲುತ್ತಾಳೆ ಆದರೆ ಅವಳನ್ನು ಸೋಲಿಸಬೇಕು ಎನ್ನುವವರ ಮುಂದೆ ತಲೆತಗ್ಗಿಸುವುದಿಲ್ಲ ಸ್ವಾಭಿಮಾನದಿಂದ ಬದುಕಿ ತೋರಿಸುತ್ತಾಳೆ
ಹೆಣ್ಣನ್ನು ಹಾಸಿಗೆಗಾಗಿ ಪ್ರೀತಿಸಿದ್ದರೆ ನಿನ್ನ ಬಾಳು ಹೇಸಿಗೆ ಆಗುತ್ತದೆ ಅದೇ ಹೆಣ್ಣನ್ನು ಬದುಕಿಗಾಗಿ ಪ್ರೀತಿಸಿದರೆ ಬಾಳು ಬಂಗಾರವಾಗುತ್ತದೆ ಪ್ರೀತಿಸಿ ಬೆಳೆಸಿದ ತವರನ್ನು ತೊರೆದು ಬರುವ ಹೆಣ್ಣನ್ನು ಯಾವತ್ತು ನೋಯಿಸಬೇಡಿ ಯಾಕೆ ಅಂದರೆ ಅವಳ ತಂದೆ ತಾಯಿ ಅವಳು ಮನೆಗೆ ಭಾರವಾದರೂ ಅಂತ ಕಳಿಸಿರಲಿಲ್ಲ ಬದಲಾಗಿ ಅವಳಿಗೆ ಇನ್ನೂ ಉತ್ತಮ ಜೀವನ ಸಿಗಲಿ ಅಂತ ಕಳಿಸಿರುತ್ತಾರೆ
ಒಂದು ಹೆಣ್ಣು ಹೇಗೆಲ್ಲಾ ತನ ನೋವನ್ನು ಸಹಿಸುತ್ತಾಳೆ ಎಂದರೆ ತಂದೆ ತಾಯಿಗೆ ಹೇಳಿದರೆ ಅವರು ಕೊರಗುತ್ತಾರೆ ಎಂದು ಸ್ನೇಹಿತರಿಗೆ ಹೇಳಿದರೆ ಮನೆಯ ಮರ್ಯಾದೆ ಹೋಗುತ್ತದೆ ಎಂದು ಅಕ್ಕ ಪಕ್ಕದ ಮನೆಯವರಿಗೆ ಹೇಳಿದರೆ ಆಡಿಕೊಳ್ಳುತ್ತಾರೆ
ಎಂದು ಸಂಬಂಧಿಕರಿಗೆ ಹೇಳಿದರೆ ಮತ್ತಷ್ಟು ಚುಚ್ಚುತ್ತಾರೆ ಎಂದು ಈ ಎಲ್ಲಾ ಕಾರಣಗಳಿಂದ ಮನದಲ್ಲಿ ಕೊರಗಿ ಗೋಡೆಗಳ ಮಧ್ಯೆ ಕಣ್ಣೀರು ಇಟ್ಟು ಹೊರಗಿನ ಪ್ರಪಂಚದ ಜೊತೆ ನಗುನಗುತ್ತಾ ಜೀವನ ನಡೆಸುತ್ತಾಳೆ ಅದಕ್ಕೆ ಹೇಳುವುದು ಹೆಣ್ಣು ಸಹನೆಯ ಸಹಕಾರ ಮೂರ್ತಿ ಅಂತ
ಕುಟುಂಬಕ್ಕೆ ಚಕ್ರದಂತೆ ಜ್ಞಾನಕ್ಕೆ ಶರಧಿಯಂತೆ ಮಕ್ಕಳಿಗೆ ಕನ್ನಡಿಯಂತೆ ಪ್ರೀತಿಗೆ ವಿಳಾಸದಂತೆ ಬದುಕಿನ ಹಡಗಿಗೆ ನಾವಿಕಳಂತೆ ಬದುಕನ್ನ ಬಹುಪಾಲು ಆವರಿಸಿರುವ ಹೆಣ್ಣಿನ ಜನ್ಮ ಪುಣ್ಯವಂತೆ # ಮಧು ಮದುವೆಯಾಗಿ ಬಂದ ಹೆಣ್ಣಿನ ಬಳಿ ತವರು ಮನೆಯಿಂದ ಏನೇನು ತಂದೆ ಎಂದು ಕೇಳುವವರು ಹೆಚ್ಚು ಆದರೆ ಯಾರೂ ಕೂಡ ಏನನ್ನು ಬಿಟ್ಟು ಬಂದೆ ಎಂದು ವಿಚಾರಿಸುವುದಿಲ್ಲ
ಕೆಲವು ಹೆಣ್ಣು ಮಕ್ಕಳ ದುಃಖವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಯಾಕೆ ಅಂದರೆ ಅವರು ಯಾವ ಮನೆಯಲ್ಲಿ ಜನಿಸಿರುತ್ತಾರೋ ಅದೇ ಮನೆಯಲ್ಲಿ ಅವರಿಗೆ ಜಾಗವಿರುವುದಿಲ್ಲ ಹೆಣ್ಣಿಲ್ಲದೆ ಜೀವವಿಲ್ಲ ಹೆಣ್ಣಿಲ್ಲದೆ ಜೀವನವಿಲ್ಲ ಹೆಣ್ಣಿನಿಂದಲೇ ಬಾಳು ಬಂಗಾರ ಹೆಣ್ಣಿಲ್ಲದ ಬದುಕು ಘೋರ
ಹೆಣ್ಣು ಮಗು ಹುಟ್ಟಿದೆ ಎಂದು ಕೀಳಾಗಿ ನೋಡಬೇಡಿ ಒಂದು ಹೆಣ್ಣು ತಾನು ಹುಟ್ಟಿದ ಮನೆಗೆ ಬಾಳುವ ಮನೆಯನ್ನ ಬೆಳಗುವ ದೀಪ ಹೆಣ್ಣಿಲ್ಲದ ಮನೆ ಕತ್ತಲೆ ಮನೆ ಹೆಣ್ಣಿನ ಜಾಗಕ್ಕೆ ಕರುಣೆಗೆ ಸರಿಸಾಟಿ ಯಾರಿಲ್ಲ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು