ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ 30 ಶರಣ ವಿಷಯಗಳು ಮತ್ತು ಅದರ ಅದ್ಭುತ ಫಲಿತಾಂಶಗಳ ಬಗ್ಗೆ ತಿಳಿದುಕೊಳ್ಳೋಣ 1) ಯಾವಾಗಲೂ ಮೂಗಿನಿಂದ ಉಸಿರಾಡಿ ಬಾಯಿಯ ಮೂಲಕ ಉಸಿರಾಟವು ಅನೇಕ ರೋಗಗಳನ್ನು ಆಹ್ವಾನಿಸುತ್ತದೆ 2) ನಿಮ್ಮ ಔಷಧಿಯನ್ನು ತಣ್ಣೀರಿನಿಂದ ತೆಗೆದುಕೊಳ್ಳಬೇಡಿ 3) ಮಲಬದ್ಧತೆ ಸಮಸ್ಯೆ ಇರುವವರು ಸಹಾಯಕಾಲ ಪಪ್ಪಾಯಿ ತಿನ್ನಿ
4) ಸಂಜೆ ಆರರ ನಂತರ ಭಾರವಾದ ಆಹಾರವನ್ನು ಸೇವಿಸಬೇಡಿ 5) ಎಡ ಕಿವಿಯ ಮೂಲಕ ಫೋನ್ ಕರೆಯನ್ನು ಕೇಳಿ 6) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಲೋಟ ಉಗುರು ಬೆಚ್ಚಗಿನ ಬಿಸಿ ನೀರನ್ನು ಕುಡಿರಿ 7) ನೀವು ಪ್ರತಿದಿನ ಎಂಟರಿಂದ ಹನ್ನೆರಡು ಗ್ಲಾಸ್ ನೀರು, ಗುಟು ಗುಟುಕಾಗಿ ಕುಡಿಯಿರಿ 8) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ 9) ಊಟ ಆದ ನಂತರ ಸೋಂಪು ಅಥವಾ ಬಡೇ ಸೊಪ್ಪು ಅಥವಾ ಬೆಲ್ಲವನ್ನು ತಿನ್ನಬೇಕು
10) ರಾತ್ರಿ ಹೊತ್ತು ಅನ್ನ ಸೇವನೆ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎನ್ನಲಾಗಿದೆ ಅದರಲ್ಲೂ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ರಾತ್ರಿ ಹೊತ್ತು ಅನ್ನ ಸೇವಿಸದೆ ಇರುವುದು ಒಳ್ಳೆಯದು ಇದರ ಹೊರತಾಗಿಯೂ ಅನ್ನ ತಿನ್ನದೇ ಭೋಜನ ಪೂರ್ಣ ಆಗುವುದಿಲ್ಲ ಎಂದಾದರೆ ಲಿಮಿಟ್ ತಿನ್ನಿ11) ಫ್ರಿಜ್ ನಲ್ಲಿ ಇಟ್ಟ ತಣ್ಣೀರು ಕುಡಿಯಬೇಡಿ ಬದಲಿಗೆ ಶುದ್ಧವಾದ ನೀರನ್ನು ಕುಡಿಯಲು ಸ್ಟೀಲ್ ತಾಮ್ರ ಅಥವಾ ಮಣ್ಣಿನ ಮಡಕೆ ಬಳಸಿ 12) ಮಲಗಲು ಉತ್ತಮವಾದ ಸಮಯವೆಂದರೆ ರಾತ್ರಿ 10 ರಿಂದ ಬೆಳಗ್ಗೆ 5 ವರೆಗೆ
13) ರಾತ್ರಿ ಮಲಗುವಾಗ ಮೊಬೈಲ್ ಫೋನನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಡಿ 14) ಆಹಾರವನ್ನು ಸೇವಿಸಿದ ತಕ್ಷಣ ಮಲಗಬೇಡಿ 15) ಚಾರ್ಜ್ ಹಾಕಿದ ಫೋನಿನಿಂದ ಫೋನ್ ಕರೆಗಳನ್ನು ಮಾಡಬೇಡಿ ಅಥವಾ ಸ್ವೀಕರಿಸಬೇಡಿ ಏಕೆಂದರೆ ಆ ಸಮಯದಲ್ಲಿ ಹೆಚ್ಚು ರೇಡಿಯೇಶನ್ ಇರುತ್ತದೆ 16) ತುಂಬಾ ಕೆಳಗೆ ಬಾಗಿ ಪುಸ್ತಕಗಳನ್ನು ಓದುವುದರಿಂದ ಶ್ವಾಸಕೋಶಗಳು ದುರ್ಬಲವಾಗುತ್ತವೆ ಮತ್ತು ಟಿಬಿ ರೋಗ ಬರುವ ಸಂಭವ ಇರುತ್ತದೆ
17) ಆಹಾರವನ್ನು ಯಾವಾಗಲೂ ಸ್ನಾನ ಮಾಡಿದ ನಂತರವೇ ಸೇವಿಸಿ 18) ಆಹಾರವನ್ನು ಹಸಿವಿಗಿಂತ ಸ್ವಲ್ಪ ಕಡಿಮೆ ತಿನ್ನಬೇಕು ಮತ್ತು ಆಹಾರ ನುಂಗುವ ಮುನ್ನ ಕನಿಷ್ಠ 15 ಬಾರಿ ಕಚ್ಚಿ 19) ಹಣ್ಣುಗಳನ್ನು ಮತ್ತು ಸಾಲಡ್ ಗಳನ್ನು ಊಟದ ನಂತರ ತಿನ್ನಬಾರದು ಅವುಗಳನ್ನು ಯಾವಾಗಲೂ ಮೊದಲ ತಿನ್ನಬೇಕು 20) ಹುಳಿಯುಕ್ತ ಹಣ್ಣುಗಳನ್ನು ಯಾವಾಗಲೂ ರಾತ್ರಿ ತಿನ್ನಬಾರದು
21) ಸಕ್ಕರೆ ಮೈದಾ ಮತ್ತು ಉಪ್ಪು ಈ ಮೂರು ಬಿಳಿ ವಿಷಗಳು 22) ಬಿಳಿ ಉಪ್ಪನ್ನು ಸಂಪೂರ್ಣವಾಗಿ ನಿಲ್ಲಿಸಿ ಸಾಧ್ಯವಾದಷ್ಟು ಕಲ್ಲುಪ್ಪನ್ನು ಬಳಸಿ 23) ನಿಮ್ಮ ದೇಹವನ್ನು ಆಕ್ಟಿವ್ ಆಗಿ ಇಡಲು ಮತ್ತು ಒತ್ತಡದಿಂದ ದೂರವಿರಲು ದಿನಕ್ಕೆ ಅರ್ಧ ಗಂಟೆಗಳ ಕಾಲ ಧ್ಯಾನ ವ್ಯಾಯಾಮ ಯೋಗ ನಿಯಮಿತವಾಗಿ ಮಾಡಿ 24) ನಿದ್ರೆಯ ಸಮಸ್ಯೆ ಇರುವವರು ನಗುವುದನ್ನು ರೂಢಿಸಿಕೊಳ್ಳಬೇಕು ನಿಮ್ಮ ಮುಖದ ಮೇಲಿನ ನಗು ನಿಮ್ಮ ಹೃದಯವನ್ನು ಸಂತೋಷಗೊಳಿಸುತ್ತದೆ
ನಗುವ ಮೂಲಕ ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ 25) ಸದಾ ಪಾಸಿಟಿವ್ ಆಗಿ ಇರಿ 26) ಹೆಚ್ಚು ಎಣ್ಣೆ ಮಸಾಲೆಗಳಿಂದ ಬೇಯಿಸಿದ ಆಹಾರವನ್ನು ಬಳಸಬೇಡಿ 27) ನಿಮ್ಮ ವಿಶ್ರಾಂತಿ ಅಥವಾ ಮಲಗುವ ಕೋಣೆಯನ್ನು ಸ್ವಚ್ಚವಾಗಿ ಗಾಳಿ ಆಡುವಂತೆ ಇರಬೇಕು ನಿಮ್ಮ ಹಾಸಿಗೆಯನ್ನು ತಿಂಗಳಿಗೆ ಒಮ್ಮೆ ವಾಶ್ ಮಾಡುವುದು ಉತ್ತಮ
28) ನೀವು ಆರಾಮಾಗಿ ಮಲಗಲು ಬಯಸುವಿರಾದರೆ ಮಲಗುವ ಸಮಯದಲ್ಲಿ ಒಂದು ಗ್ಲಾಸ್ ಹಾಲು ಕುಡಿಯಿರಿ 29) ಹಗಲಿನಲ್ಲಿ ಸ್ವಲ್ಪ ಕಾಲ ಬರಿಗಾಲಿನಲ್ಲಿ ನಡೆಯಬೇಕು ಮತ್ತು ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ ಉತ್ತಮ ಭೂಮಿಯ ಒಂದಿಗಿನ ನೇರ ಸಂಪರ್ಕದಿಂದಾಗಿ ನಿಮ್ಮ ಆರೋಗ್ಯವು ಹೆಚ್ಚು ಪ್ರಯೋಜನಕಾರಿಯಾಗುತ್ತದೆ 30) ಬೆಳಗ್ಗಿನ ಉಪಹಾರ ಹೊಟ್ಟೆಯ ತುಂಬ ತಿನ್ನಿ ಮಧ್ಯಾಹ್ನದ ಊಟ ನಾರ್ಮಲ್ಇರಲಿ ರಾತ್ರಿ ಊಟವನ್ನು ಸ್ವಲ್ಪ ಲೈಟ್ ಆಗಿ ಮಾಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು