ಕಲ್ಲುಪ್ಪಿನಿಂದ ನಿಮ್ಮ ಮನೆಯಲ್ಲಿ ಈ ತಂತ್ರವನ್ನು ಮಾಡಿದರೆ ಮನೆಯ ಸದಸ್ಯರಿಗೆ ಅದ್ಭುತವಾಗಿ ಏಳಿಗೆಯು ಆಗುತ್ತಾ ಹೋಗುತ್ತದೆ. ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಕಾರ್ಯ ಜಯವು ಏರ್ಪಡುತ್ತದೆ. ಕಲ್ಲಪ್ಪಿನಿಂದ ಯಾವ ತಂತ್ರವನ್ನು ಮಾಡಿದರೆ ಯಾವ ಫಲಗಳು ಪ್ರಾಪ್ತಿಯಾಗುತ್ತದೆಂದು ಈ ಲೇಖನದಲ್ಲಿ ತಿಳಿಸಲಾಗಿದೆ.
ಉಪ್ಪನ್ನು ಸಾಕ್ಷಾತ್ ಲಕ್ಷ್ಮಿ ರೂಪದಲ್ಲಿ ಉಪ್ಪನ್ನು ನೋಡುತ್ತೇವೆ. ಉಪ್ಪಿನಲ್ಲಿ ಸೂರ್ಯನ ತತ್ತ್ವ ಬಹಳ ಹೆಚ್ಚಾಗಿರುತ್ತದೆ. ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೂ ಒಂದೊಂದು ಧಾನ್ಯಗಳು ಇರುತ್ತವೆ. ಶನಿಗ್ರಹಕ್ಕೆ ಎಳ್ಳು, ಮಂಗಳನಿಗೆ ತೊಗರಿ, ಚಂದ್ರನಿಗೆ ಅಕ್ಕಿ, ಸೂರ್ಯದೇವನಿಗೆ ಗೋಧಿ ಹಾಗೂ ಉಪ್ಪನ್ನು ಅರ್ಪಿಸುತ್ತೀವಿ. ಉಪ್ಪಿನಲ್ಲಿ ಸೂರ್ಯನ ಪ್ರಭಾವ ಹೆಚ್ಚಾಗಿರುತ್ತದೆ.
ಸೂರ್ಯನನ್ನು ಉಪ್ಪು ಆಕರ್ಷಿಸುತ್ತದೆ. ನಮ್ಮ ಮೇಲೆ ಬೀರುವ ಕೆಟ್ಟ ಪ್ರಭಾವಗಳನ್ನು ಮತ್ತು ಶಕ್ತಿಗಳನ್ನು ಉಪ್ಪು ಉತ್ತಮ ಶಕ್ತಿಯನ್ನಾಗಿ, ಉತ್ತಮ ಪ್ರಭಾವಗಳಾಗಿ ಮಾರ್ಪಡಿಸುವ ಗುಣಗಳನ್ನು ಹೊಂದಿದೆ. ಸ್ವತಃ ವಿಜ್ಞಾನವೇ ಇದನ್ನು ಒಪ್ಪಿಕೊಳ್ಳುತ್ತದೆ. ಸಮುದ್ರ ಸ್ನಾನದಿಂದ ಆರೋಗ್ಯ ವೃದ್ಧಿ ಎಂದು ವಿಜ್ಞಾನವೇ ಹೇಳುತ್ತದೆ. ಆದ್ದರಿಂದ ನೀರಿಗೆ ಉಪ್ಪನ್ನು ಬೆರೆಸಿ ಎಷ್ಟೋ ಜನ ಸ್ನಾನ ಮಾಡುತ್ತಾರೆ.
ಉಪ್ಪಿಗೆ ಏಕೆ ಇಷ್ಟು ಶಕ್ತಿ ಇದೆ ಎಂದರೆ ಉಪ್ಪು ಸೂರ್ಯನ ತತ್ತ್ವದಲ್ಲಿ ಉದ್ಭವಿಸುತ್ತದೆ. ಈ ಉಪ್ಪನ್ನ ಅದರಲ್ಲೂ ಕಲ್ಲು ಉಪ್ಪನ್ನು ಪುಡಿ ಮಾಡಿ ನಿಮ್ಮ ಮನೆಯ ರಂಗೋಲಿ ಡಬ್ಬಿಗೆ ಬೆರೆಸಿ, ಉಪ್ಪು ಬೆರೆಸಿದ ರಂಗೋಲಿಯನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ರಂಗೋಲಿ ಬರೆಯಬೇಕಾದರೆ, ಹೊಸ್ತಿಲಿಗೆ ಮುಂಭಾಗದಲ್ಲಿ ರಂಗೋಲಿಯನ್ನು ಬರೆಯಬೇಕಾದರೆ
ಈ ಉಪ್ಪು ಬೆರೆಸಿದ ರಂಗೋಲಿಯ ಪುಡಿಯಿಂದ ರಂಗೋಲಿ ಬಿಡಿಸಿದರೆ ಅದ್ಭುತವಾಗಿ ಮನೆಯ ಏಳಿಗೆಯಾಗುತ್ತದೆ. ರಂಗೋಲಿಯನ್ನು ತುಳಿಯಬಾರದು ಆದ್ದರಿಂದ ದೇವರ ಕೋಣೆಯಲ್ಲಿ, ಹೊಸ್ತಿಲಿಗೆ ಮತ್ತು ತುಳಸಿ ಕಟ್ಟೆಯ ಮುಂಭಾಗದಲ್ಲಿ ಬಿಡಿಸಿದರೆ ಒಳ್ಳೆಯದು. ಮನೆಯಲ್ಲಿ ಪಾಸಿಟಿವ್ ಎನರ್ಜಿ ಉದ್ಭವವಾಗುತ್ತದೆ. ಸೂರ್ಯನ ಪ್ರಭಾವದಿಂದ ಮನೆಯ
ಸದಸ್ಯರಿಗೆ ಕಾರ್ಯಜಯ ಉಂಟಾಗುತ್ತದೆ. ರಾಜಕೀಯ ರಂಗದಲ್ಲಿ ಮನೆಯ ಸದಸ್ಯರು ಏಳಿಗೆಯನ್ನು ಕಾಣುತ್ತಾರೆ. ಸಾಮಾಜಿಕವಾಗಿ ಗೌರವವು ವೃದ್ಧಿಸುತ್ತದೆ. ನಾಯಕತ್ವದ ಗುಣ ಹೆಚ್ಚಾಗುತ್ತಾ ಹೋಗುತ್ತದೆ. ಯಾರ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುತ್ತದೆಯೋ, ಮಾನಸಿಕ ಗೊಂದಲುಗಳು ಇರುತ್ತದೆಯೋ, ಮಾಡುವ ಕೆಲಸದಲ್ಲಿ ಭಯಭೀತಿಗಳು ಹೆಚ್ಚಾಗಿರುತ್ತದೆಯೋ,
ಆರೋಗ್ಯದ ಸಮಸ್ಯೆ ಇರುತ್ತದೆಯೋ ಅಂತಹವರು ನಿಮ್ಮ ಮನೆಯಲ್ಲಿ ಈ ತಂತ್ರವನ್ನು ಮಾಡಿ, ಉಪ್ಪನಿಂದ ಬೆರೆಸಿದ ಆ ರಂಗೋಲಿಯನ್ನು ವಿಶೇಷವಾಗಿ ದೇವರ ಕೋಣೆಯಲ್ಲಿ, ತುಳಸಿ ಕಟ್ಟೆಯ ಮುಂಭಾಗ ರಂಗೋಳಿ ಬಿಡುವುದರಿಂದ ಅದ್ಭುತವಾದ ಫಲಗಳು ಉಂಟಾಗುತ್ತದೆ. ಮನೆಯಿಂದ ಯಾತ್ರೆಗಳಿಗೆ ಅಥವಾ ವಿಶೇಷವಾದ ಕೆಲಸಗಳಿಗೆ ಹೋಗಬೇಕಾದರೆ
ಈ ವಿಧವಾದ ರಂಗೋಲಿಯನ್ನು ಬರೆದು ನೋಡಿ ಅದ್ಭುತವಾದ ಯಶಸ್ಸು ಪ್ರಾಪ್ತಿಯಾಗುತ್ತದೆ. ಹಾಗೆಯೇ ಒಂದು ಚೊಂಬಿಗೆ ಸ್ವಲ್ಪ ಉಪ್ಪನ್ನು ಬೆರೆಸಿ ಮಲಗುವ ಸ್ಥಳದ ಸಮೀಪದಲ್ಲಿ ಇಟ್ಟು ನಿದ್ರಿಸಿದರೆ ಕೆಟ್ಟ ಕನಸುಗಳು ಬೀಳುವುದಿಲ್ಲ. ಕೆಟ್ಟ ಆಲೋಚನೆಗಳು ಕೂಡ ಬರುವುದಿಲ್ಲ. ಮಾನಸಿಕ ಗೊಂದಲಗಳು ದೂರವಾಗಿ ಆ ವ್ಯಕ್ತಿಗೆ ಇರುವ ಪ್ರತಿಯೊಂದ ನೆಗೆಟಿವ್ ಎನರ್ಜಿ ಕೂಡ ದೂರವಾಗುತ್ತದೆ.
ಮುಖದಲ್ಲಿ ತೇಜಸ್ಸು ವೃದ್ಧಿಯಾಗುತ್ತದೆ. ಆರೋಗ್ಯವು ಕೂಡ ವೃದ್ಧಿಸುತ್ತಾ ಹೋಗುತ್ತದೆ. ಹಾಗೆಯೇ ನಿಮ್ಮ ಮನೆಯ ಸ್ನಾನದ ಮನೆಯಲ್ಲಿ ಒಂದು ಲೋಟದ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಒಂದು ಮೂಲೆಯಲ್ಲಿ ಇಟ್ಟಿದ್ದೆ ಆದಲ್ಲಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತಾ ಹೋಗುತ್ತದೆ. ಹಾಗೆಯೇ ಸೋಮವಾರದ ದಿನ ಒಂದು ಗಾಜಿನ ಲೋಟಕ್ಕೆ ಕಲ್ಲುಪ್ಪನ್ನು ಹಾಕಿ
ಮನೆಯ ಈಶಾನ್ಯದಿಕ್ಕಿನಲ್ಲಿ ಇಟ್ಟು ಪ್ರತಿ ಸೋಮವಾರ ಆ ನೀರನ್ನು ಬದಲಿಸುತ್ತಾ ಬಂದರೆ ಮನೆಯಲ್ಲಿನ ಸಂಕಷ್ಟದ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಮನೆಯಲ್ಲಿ ನಡೆಯುವ ಕಲಹಗಳು ಕಡಿಮೆಯಾಗುತ್ತಾ ಹೋಗುತ್ತದೆ. ಮತ್ತು ಕಲ್ಲುಪ್ಪನ್ನು ನಿಮ್ಮ ಮುಷ್ಠಿಯಲ್ಲಿ ಇಡಿದು ಇಷ್ಟದೇವರ ಹೆಸರನ್ನು ಹೇಳಿ ಪ್ರಾರ್ಥನೆ ಮಾಡಿ ಆ ಕಲ್ಲುಪ್ಪನ್ನು ಸಿಂಕ್ನಲ್ಲಿ ಹಾಕಿದರೆ ವಿಶೇಷವಾಗಿ ಆ ಕ್ಷಣದಲ್ಲಿ ಬಂದಂತಹ ಸಂಕಷ್ಟಕ್ಕೆ ಶೀಘ್ರವಾಗಿ ಪರಿಹಾರ ಸಿಗುತ್ತದೆ.