ಹಬ್ಬದ ದಿನ ಕುಂಕುಮಕ್ಕೆ ಮುತ್ತೈದೆಯರನ್ನ ಕರೆಯುತ್ತೀರಿ ಅವರಿಗೆ ಯಾವ ರೀತಿ ಕೊಡಬೇಕು ಅದರ ಜೊತೆಯಲ್ಲಿ ಗರ್ಭಿಣಿಯರು ಮನೆಗೆ ಬಂದಾಗ ಅವರಿಗೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.ಎಲ್ಲವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಮೊದಲು ಅರಿಶಿಣ, ಕುಂಕುಮ, ಅಕ್ಷತೆಯನ್ನು ಮೊದಲು ಸಿದ್ಧತೆ ಮಾಡಿಟ್ಟುಕೊಳ್ಳಿ. ನೀವು ಎಷ್ಟು ಜನರಿಗೆ ಬ್ಲೋಸ್ ಪೀಸ್ ಕೊಡಬೇಕೆಂದು ಅಂದುಕೊಂಡಿರುತ್ತೀರೋ ಅಷ್ಟು ಬ್ಲೋಸ್ ಪೀಸ್ ರೆಡಿ ಮಾಡಿ ಇಟ್ಟುಕೊಳ್ಳಿ.
ಒಂದು ತಟ್ಟೆಗೆ ಒಂದು ಬ್ಲೋಸ್ ಪೀಸ್ ಅದರ ಮೇಲೆ ಎರಡು ವೀಳ್ಯೆದೆಲೆ ಅದರ ಮೇಲೆ ಅಡಕೆ ಅರಿಶಿಣ ಕುಂಕುಮದ ಪ್ಯಾಕೆಟ್, ದಕ್ಷಿಣೆ 1 ರೂ ಯಿಂದ ಪ್ರಾರಂಭವಾಗುತ್ತದೆ 11 ರೂ. 51, 101 ರೂಪಾಯಿ ಆಗಿರುತ್ತದೆ, ಅದರ ಮೇಲೆ ನೀವು ಎಷ್ಟಾದರೂ ಕೊಡಬಹುದು. ಅದರ ನಂತರ ಕಡ್ಲೆಕಾಳನ್ನು ಹಾಕಿರಿ, ಗುರುವಾರನೇ ಕಡ್ಲೆಕಾಳನ್ನು ನೆನೆಸಿ ಇಡಿ ಶುಕ್ರವಾರ ಅದನ್ನು ಕೊಡಬಹುದು.
ಎಲೆಯ ತುದಿ ಅವರ ಕಡೆ ಇರಬೇಕು, ಎಲೆಯ ತೊಟ್ಟು ನಿಮ್ಮ ಕಡೆ ಇರಬೇಕು. ಬಾಳೆಹಣ್ಣಿನ ತುದಿ ಅವರ ಕಡೆಗೆ ಮಾಡಿ ಇಟ್ಟು ಕೊಡಬೇಕು. ಒಬ್ಬರಿಗೆ ಒಂದು ತಟ್ಟೆಗೆ ಅಕ್ಕಿಯನ್ನು ಹಾಕಿ ಅದರ ಮೇಲೆ ಇಟ್ಟು ಕೊಡಿ ಆ ರೀತಿ ಕೊಡಬೇಕಾದರೆ ವ್ರತದ ದಾರವನ್ನು ರೆಡಿ ಮಾಡಿ ಇಡಿ, ಅದಕ್ಕೆ ಎರಡು ವೀಳ್ಯೆದೆಲೆ ಅಡಕೆ, ಬಾಳೆಹಣ್ಣು ಬ್ಲೋಸ್ ಪೀಸ್, ದಕ್ಷಿಣೆ, ಅರಿಶಿಣದ ಪ್ಯಾಕೆಟ್, ಬಾಗಿಣದ ಪ್ಯಾಕೆಟ್, ಕಡ್ಲೆಕಾಳನ್ನು ಹಾಕಬೇಕು.
ಒಂದು ಕಾಯಿಯನ್ನು ಇಡಿ, ನಾಲ್ಕು ಬಳೆಯನ್ನು ಇಟ್ಟು ಕೊಡಿ. ಹಿರಿಯ ಮುತ್ತೈದೆಯರಿಗೆ ಕೊಟ್ಟರೆ ಒಳ್ಳೆಯದು. ಅವರಿಗೆ ಅಕ್ಷತೆಯನ್ನು ಕೊಟ್ಟು ಆಶೀರ್ವಾದವನ್ನು ತೆಗೆದುಕೊಳ್ಳಿ. ಗರ್ಭಿಣಿಯರಿಗೆ ಕುಂಕುಮ ಕೊಡಬೇಕಾದರೆ ಸಿಪ್ಪಿ ಸುಲಿಯದೇ ಇರುವ ಕಾಯಿಯನ್ನು ಕೊಡಿ. ಚೂರು ಅಡಕೆ ಕೊಡಬೇಡಿ, ಬಟ್ಟಲು ಅಡಕೆಯನ್ನೇ ಹಾಕಿ ಕೊಡಬೇಕು. ಒಂದು ಡಜನ್ ಬಳೆ ಜೊತೆಗೆ ಅವರನ್ನು ಹಾಗೇ ಕಳಿಸಬಾರದು ಹೆಸರುಬೇಳೆ ಪಾನಕ ಕೊಟ್ಟು ಕಳುಹಿಸಿ.
ನಂತರದಲ್ಲಿ ಮುತ್ತೈದೆಯರಿಗೆ ಕುಂಕುಮವನ್ನು ಹೇಗೆ ಕೊಡಬೇಕೇಂಬುದನ್ನು ತಿಳಿಸಿಕೊಡುತ್ತೇನೆ. ಎರಡು ಎಲೆ, ಹಸಿಗಡಲೆ, ಅಡಕೆ, ಬ್ಲೋಸ್ ಪೀಸ್ ಕೊಟ್ಟರೆ ಕೊಡಬಹುದು ನಿಮ್ಮ ಇಷ್ಟ. ಕೋಸಂಬರಿಯನ್ನು ಇಡಬಹುದು, ದಕ್ಷಿಣೆ, ನಾಲ್ಕು ಬಳೆ, ಯಾವುದಾದರೂ ಹಣ್ಣು, ಬಾಳೇಹಣ್ಣು, ಮೂಸಂಬಿ, ದಾಳಿಂಬೆ ಯಾವ ಹಣ್ಣಾದರೂ ಇಡಬಹುದು. ಲಕ್ಷ್ಮಿ ಅಮ್ಮನವರಿಗೆ ದಾಳಿಂಬೆ ಎಂದರೆ ಪ್ರಿಯವಾದ ಹಣ್ಣು. ಒಂದು ತಟ್ಟೆಗೆ ಅರಿಶಿಣ ಕುಂಕುಮದ ಬಟ್ಟಲು, ಹೂವಿನ ತಟ್ಟೆಯನ್ನು ರೆಡಿ ಮಾಡಿಕೊಳ್ಳಿ. ಹಸಿರು ಗಾಜಿನ ಬಳೆಗಳನ್ನ ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಎಲ್ಲವನ್ನು ಮುಂಚಿತವಾಗಿ ತಯಾರು ಮಾಡಿಕೊಂಡರೆ ನಿಮಗೂ ಗಡಿಬಿಡಿಯಾಗುವುದಿಲ್ಲ.