ವರಮಹಾಲಕ್ಷ್ಮಿ ಪೂಜೆ, ಗಣೇಶ ಪೂಜೆ, ಹೊಸ್ತಿಲು ಪೂಜೆ ಯಾವ ಅನುಕ್ರಮದಲ್ಲಿ ಮಾಡಬೇಕು?

ವರಮಹಾಲಕ್ಷ್ಮಿ ಹಬ್ಬದ ಬಗ್ಗೆ ಮೂರು ವಿಷಯದ ಬಗ್ಗೆ ಮಾಹಿತಿಯನ್ನು ಕೊಡುತ್ತೇನೆ. ಮೊದಲನೆಯದಾಗಿ ಸರಿಯಾದ ಕ್ರಮದಲ್ಲಿ ಯಾವ ರೀತಿ ಪೂಜೆಯನ್ನು ಮಾಡಬೇಕು 2ನೇಯದು ದೇವರ ಪೂಜೆಗೆ ಬೇಕಾದ ವಸ್ತುಗಳನ್ನು ಯಾವಾಗ ತರಬೇಕು 3ನೇಯದಾಗಿ ದೇವರ ಮನೆಯನ್ನು ಯಾವಾಗ ಶುದ್ಧಿ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತಿದ್ದೇನೆ.

ಪೂಜೆಯನ್ನ ಮಾಡಲು ಸಮಯವನ್ನು ತಿಳಿಸಿಕೊಡುತ್ತೇನೆ. ಆದಷ್ಟು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಮಾತ್ರ ಕೆಲಸಗಳು ಆಗುವುದು. ಕೆಲವರ ಮನೆಯಲ್ಲಿ ವಯಸ್ಸಾದವರು, ಮಕ್ಕಳು ಇರುತ್ತಾರೆ. ಆದ್ದರಿಂದ 5 ಸಮಯವನ್ನು ತಿಳಿಸಿಕೊಡುತ್ತೇನೆ. ಮೊದಲು ಹಸುವಿನ ಗಂಜಲ, ಅರಿಶಿಣ ಮತ್ತು ಉಪ್ಪನ್ನು ನೀರಿಗೆ ಸ್ವಲ್ಪ ಹಾಕಿಕೊಂಡು ಮನೆಯನ್ನು ಹೊರೆಸಿಕೊಳ್ಳಬೇಕು

ಮತ್ತು ಮನೆಯ ಹೊರಭಾಗದಲ್ಲೂ ಶುದ್ಧಿ ಮಾಡಿಕೊಂಡು, ಸ್ನಾನ ಮಾಡಿಕೊಳ್ಳಿ. ನೀವು ಕೂಡ ನೀರಿಗೆ ಸ್ವಲ್ಪ ಅರಿಶಿಣವನ್ನು ಹಾಕಿಕೊಂಡು ಮಾಡಿ ಒಳ್ಳೆಯದು. ಗುರುವಾರನೇ ದೇವರ ಕೋಣೆಯನ್ನು ಶುದ್ಧಿ ಮಾಡಿಟ್ಟುಕೊಂಡಿರಬೇಕು. ಶುಕ್ರವಾರ ಬೆಳಿಗ್ಗೆ ಹೊಸ್ತಿಲ ಮೇಲೆ ರಂಗೋಲಿಯನ್ನು ಹಾಕಿರಿ. ಮಾವಿನ ಸೊಪ್ಪಿನ ತೋರಣವನ್ನ ಕಟ್ಟಿ.

ತುಳಸಿ ಗಿಡಕ್ಕೂ ಅಲಂಕಾರ ಮಾಡಿ ಮತ್ತು ದೀಪವನ್ನು ರೆಡಿ ಮಾಡಿ ಇಟ್ಟುಕೊಳ್ಳಿ. ಶುಕ್ರವಾರದ ಸಮಯದಲ್ಲಿ ಯಾವ ರೀತಿ ನೀವು ಪೂಜೆ ಮಾಡುತ್ತೀರೋ ಅದೇ ರೀತಿ ಪೂಜಿಸಬೇಕಾಗುತ್ತದೆ. ಪೂಜೆಗೆ ಸಿದ್ದ ಮಾಡುವಾಗ ನಮ್ಮ ಮನೆದೇವರಿಗೆ ಎಂದು ದೀಪವನ್ನು ಹಚ್ಚಿರಿ, ನಂತರ ಗಣೇಶನಿಗೆ ಪೂಜೆ ಮಾಡಿ ವರಮಹಾಲಕ್ಷ್ಮಿ ಪುಸ್ತಕ ನಿಮ್ಮ ಬಳಿ ಇದ್ದರೆ ಅದನ್ನು ಗಣೇಶನ ಪಕ್ಕದಲ್ಲಿಯೇ ಇಡಿ.

ಎರಡು ದೀಪವನ್ನು ಹಚ್ಚಿಸಿ, ಮನೆ ದೇವರಿಗೆ ಮಾಡುವ ಪೂಜೆ ಮುಗಿಯುತ್ತದೆ. ಹೊಸ್ತಿಲ ಬಳಿ ಎರಡು ದೀಪ, ತುಳಸಿಯ ಬಳಿ ಎರಡು ದೀಪವನ್ನು ಹಚ್ಚಿ ಇಡಿ. ಕಳಸಕ್ಕೆ ಎಲ್ಲಿಂದ ನೀರು ತರುತ್ತೀರೋ ಅಲ್ಲಿಂದ ನೀರು ತನ್ನಿ ಜೊತೆಗೆ ಅದಕ್ಕೆ ಕಟ್ಟುವ ಕಂಕಣವನ್ನು ಸಿದ್ಧತೆ ಮಾಡಿಕೊಂಡು ಹೋಗಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀರನ್ನು ತೆಗೆದುಕೊಳ್ಳಿ.

ಎಲ್ಲಿಂದ ನೀರನ್ನು ತರಬೇಕಾದರೇ ಆ ನಲ್ಲಿಗೆ ಅರಿಶಿಣ ಕುಂಕುಮ, ಊದುಬತ್ತಿ ಹಚ್ಚಿ ಆ ನಂತರ ಗಂಗೆಯನ್ನು ಮನೆಗೆ ತರಬೇಕು. ಎಲ್ಲಿ ನೀವು ವರಮಹಾಲಕ್ಷ್ಮಿ ಅಮ್ಮನವರನ್ನು ಎಲ್ಲಿ ಪ್ರತಿಸ್ಥಾಪನೆ ಮಾಡಬೇಕೆಂದುಕೊಂಡಿರುತ್ತೀರೋ ಅಲ್ಲಿ ಇಡಬೇಕಾಗುತ್ತದೆ. ಒಂದು ಬಿಂದಿಗೆಗೆ ಸೀರೆ ಉಡಿಸಿ ಸಿದ್ಧತೆ ಮಾಡಿಕೊಂಡಿರುತ್ತೀರಿ ಅದರ

ಮೇಲೆ ಇಡುವ ಕಳಸಕ್ಕೆ ಈ ನೀರನ್ನು ಹಾಕಬೇಕಾಗುತ್ತದೆ. ಮೊದಲು ಮನೆದೇವರ ಪೂಜೆ, ಗಣೇಶನ ಪೂಜೆ, ನಂತರದಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಬೇಕು ಗುರುವಾರ ಸಂಜೆ 6 ಗಂಟೆಯ ಒಳಗೆ ದೇವರ ಮನೆಯನ್ನು ಶುದ್ಧಿ ಮಾಡಬೇಕು. 6:42 ನಿಮಿಷಕ್ಕೆ ಸೂರ್ಯ ಮುಳುಗುವುದರಿಂದ ಯಾವುದೇ ರೀತಿಯ ದೇವರ ವಿಗ್ರಹವನ್ನು ತೊಳೆಯುವುದಾಗಲೀ, ಕಳಸ ತೆಗೆಯಬೇಡಿ. ಆದರೇ ಕಳಸವನ್ನು ಬೇರೆ ಸಮಯದಲ್ಲಿ ವಿಸರ್ಜನೆ ಮಾಡುವುದಿಲ್ಲ. ಕಳಸ ತೆಗೆಯಬೇಕಾಗಿರುವುದರಿಂದ

ಒಂದು ಪುಟ್ಟದಾದ ಬಿಂದಿಗೆಯನ್ನು ತೆಗೆದುಕೊಳ್ಳಿ. ಈಗ ವಿಸರ್ಜನೆ ಮಾಡಬೇಕಾಗಿರುವ ಕಳಸವನ್ನು ಪಕ್ಕದಲ್ಲಿ ಇಟ್ಟು, ಹೊಸದಾಗಿ ನೀರು ತುಂಬಿರುವ ಬಿಂದಿಗೆ ಅಥವಾ ಕಳಸವನ್ನು ಆ ಜಾಗದಲ್ಲಿ ಇಡಿ. ನಾವು ಯಾವತ್ತಿಗೂ ಕಳಸ ಇಡುವ ಜಾಗವನ್ನು ಖಾಲಿ ಬಿಡಬಾರದು. ಗುರುವಾರ ಇಟ್ಟಿರುವ ಬಿಂದಿಗೆ ಅಥವಾ ಕಳಸಕ್ಕೆ ಕಾಯಿ, ವೀಳ್ಯೆದೆಲೆ ಇಟ್ಟು ಪೂಜೆ ಮಾಡಿಕೊಳ್ಳಬಹುದು. ಪೂಜಾ ಸಾಮಾಗ್ರಿ ಮತ್ತು ವರಮಹಾಲಕ್ಷ್ಮಿಗೆ ಸೀರೆಯನ್ನು ಬುಧವಾರ ತರಬಹುದು.

Leave a Comment