ಮಹಿಳೆಯರಿಗೆ ಮುಖ್ಯವಾದ ಕಿವಿ ಮಾತುಗಳು. ಹೆಣ್ಣು ಲಕ್ಷ್ಮಿ ಸ್ವರೂಪ ಅಂತಹ ಲಕ್ಷ್ಮಿ ಮನೆಯಲ್ಲಿ ಹೇಗಿರಬೇಕು ಎಂಬುದನ್ನು ದಯವಿಟ್ಟು ತಾಳ್ಮೆಯಿಂದ ಓದಿರಿ. ಹೆಣ್ಣು ಸದಾ ನಗು ಮುಖದಿಂದ ಹಸನ್ಮುಖಿಯಾಗಿ ಇರಬೇಕು ಹೀಗಿದ್ದರೆ, ಗಂಡ ಮಕ್ಕಳು ಮತ್ತು ಮನೆಗೆ ಒಳ್ಳೆಯದು. ಸ್ತ್ರೀಯರು ಮನೆಯಲ್ಲಿ ಕಾಲನ್ನು ನೆಲಕ್ಕೆ ಒರೆಸುತ್ತಾ ನಡೆಯಬಾರದು. ಸ್ತ್ರೀಯಾದವಳು ಮೈ ತುಂಬಾ ಬಟ್ಟೆ ಹಾಕಬೇಕು ಯಾವುದೇ ಕಾರಣಕ್ಕೂ ಹೊಕ್ಕಳು ಇತರರಿಗೆ ಕಾಣಬಾರದು.
ಸ್ತ್ರೀಯರು ಮಧುರವಾಗಿ ಮಾತನಾಡಬೇಕು. ಮಕ್ಕಳ ಮುಂದೆ ಕೆಟ್ಟ ಪದಗಳನ್ನು ಬಳಕೆ ಮಾಡಬಾರದು ಮತ್ತು ಇನ್ನೊಬ್ಬರನ್ನು ಬೈಯ್ಯಬಾರದು. ಮನೆಯಲ್ಲಿರುವ ಹೆಣ್ಣು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಮನೆಯನ್ನು ಸ್ವಚ್ಚಗೊಳಿಸಿ ಹೊಸ್ತಿಲ ಭಾಗಕ್ಕೆ ಹೂವು ಅರಿಶಿನ, ಕುಂಕುಮ ಇಟ್ಟು ರಂಗೋಲಿ ಹಾಕಬೇಕು ಇದರಿಂದ ಯಾವುದೇ ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದಿಲ್ಲ.
ಮನೆಯ ಅಂಗಳದಲ್ಲಿ ತುಳಸಿ ಗಿಡ ಇರಬೇಕು ಅದಕ್ಕೆ, ಮನೆಯಲ್ಲಿರುವ ಹೆಣ್ಣು ಮಗಳು ಪ್ರತಿದಿನ ಪೂಜೆ ಮಾಡಬೇಕು. ಮನೆಯಲ್ಲಿ ಕೂದಲು ಬಿಟ್ಟುಕೊಂಡು ಇರಬಾರದು ಇದು ಒಳ್ಳೆಯ ಲಕ್ಷಣವಲ್ಲ.
ಸಂಜೆ ವೇಳೆ ಕೂದಲನ್ನು ಬಾಚಬಾರದು. ಶುಕ್ರವಾರ ಮತ್ತು ಮಂಗಳವಾರ ಮನೆಯಿಂದ ದಾನ ಮಾಡಬಾರದು ಮುಖ್ಯವಾಗಿ ದುಡ್ಡು ಯಾರಿಗು ಕೊಡಬಾರದು.
ಯಾವುದೇ ಕಾರಣಕ್ಕೂ ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು ಅಥವಾ ಕಾಲಿಟ್ಟು ನಿಲ್ಲಬಾರದು.
ಸ್ನಾನ ಮುಗಿಸಿ ಕೂದಲು ಬಿಟ್ಟುಕೊಂಡು ಪೂಜೆ ಮಾಡಬಾರದು. ಮನೆಯಲ್ಲಿ ಹೆಣ್ಣು ಸಂಜೆ ವೇಳೆ, ಅಂದರೆ ಸೂರ್ಯಾಸ್ತದ ನಂತರ ಬಟ್ಟೆ ಒಗೆಯುವುದಾಗಲಿ ಅಥವಾ ಕಸ ಗುಡಿಸುವುದಾಗಲಿ ಮಾಡಬಾರದು.
ಸ್ತ್ರೀಯು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಮತ್ತು ಮನೆಯ ಇತರರು ಕೂಡ ಸಹಾಯ ಮಾಡಬೇಕು.
ಪ್ರತಿದಿನ ತಲೆಗೆ ಒಂದು ಚಿಕ್ಕ ಹೂವಾದರೂ ಮುಡಿಯಬೇಕು. ತಾನು ಮುಡಿದ ಹೂವನ್ನು ಬೇರೆಯವರಿಗೆ ಕೊಡಬಾರದು, ಬೇರೆಯವರು ಮುಡಿದ ಹೂವನ್ನು ತಾನು ಮುಡಿಯಬಾರದು. ಸಂಸ್ಕೃತಿ ಮತ್ತು ಪರಂಪರೆಯನ್ನು ಪಾಲನೆ ಮಾಡಬೇಕು. ಉಳಿತಾಯ ಮಾಡುವ ಗುಣವನ್ನು ಹೊಂದಿರಬೇಕು ಕಾರಣವಿಲ್ಲದೆ ಖರ್ಚು ಮಾಡಬಾರದು.
ಕಷ್ಟದ ಸಮಯದಲ್ಲಿ ಧೈರ್ಯ ಮತ್ತು ತಾಳ್ಮೆಯಿಂದ ಇರಬೇಕು.