ಶ್ರಾವಣ ಮಾಸದಲ್ಲಿ ತುಳಸಿ ಗಿಡಕ್ಕೆ ಇರುವ ಮಹತ್ತ್ವವನ್ನು ತಿಳಿಸಿದ್ದಾರೆ. ಈ ತಿಂಗಳಿನಲ್ಲಿ ತುಳಸಿ ಗಿಡಕ್ಕೆ ಹಸಿರು ಬಣ್ಣದ ಬಟ್ಟೆಯನ್ನು ಕಟ್ಟಬೇಕು. ತುಳಸಿ ಗಿಡದ ಬಳಿ ಸಾಯಂಕಾಲ ದೀಪವನ್ನು ಹಚ್ಚಬೇಕು. ಇವುಗಳ ಜೊತೆಗೆ ಶ್ರಾವಣ ಮಾಸದಲ್ಲಿ ತುಳಸಿ ಗಿಡವು ನಾನಾ ಪ್ರಕಾರದ ಸಂಕೇತಗಳನ್ನು ಕೊಡುತ್ತದೆ. ಹಾಗಾಗಿ ಈ ಸಂಕೇತಗಳನ್ನು ಗಮನಿಸಬೇಕು.
ಶಿವಪುರಾಣದ ಅನುಸಾರವಾಗಿ ತುಳಸಿ ಎಲೆಗಳನ್ನು ಶಿವನಿಗೆ ಅರ್ಪಿಸುವುದಿಲ್ಲ. ಏಕೆಂದರೆ ಭಗವಂತನಾದ ಶಿವನು ದೇವಿ ಬೃಂದಾಳ ಗಂಡನಾದ ಜಾಲಂಧರ ವಧೆಯನ್ನು ಮಾಡಿದ್ದನು. ಈ ಸಿಟ್ಟಿನಿಂದ ಬೃಂದಾ ಭಗವಂತನಾದ ಶಿವನಿಗೆ ಶಾಪವನ್ನು ಕೊಟ್ಟಿದ್ದಳು ಇದರ ಜೊತೆಗೆ ಭಗವಂತನಾದ ವಿಷ್ಣುವಿಗೆ ಕಲ್ಲು ಆಗುವಂತೆ ಶಾಪವನ್ನು ಕೊಟ್ಟಳು. ಇವಳ ಶಾಪದಿಂದಲೇ ಹರಿ ವಿಷ್ಣುದೇವನು ಸಾಲಿಗ್ರಾಮದ ರೂಪವನ್ನು ಪಡೆದುಕೊಂಡನು. ಲಕ್ಷ್ಮಿದೇವಿಯು ವಿಷ್ಣುವಿನ ಶಾಪಮುಕ್ತಿಗಾಗಿ ಬೃಂದಳ ಬಳಿ ಹೋಗುತ್ತಾಳೆ.
ಬೃಂದಾ ವಿಷ್ಣುವನ್ನು ತನ್ನ ಬಳಿ ಇರುವಂತೆ ಶಪಥವನ್ನು ಪಡೆದುಕೊಳ್ಳುತ್ತಾಳೆ, ನಂತರ ಶಾಪದಿಂದ ವಿಮುಕ್ತಿ ಮಾಡುತ್ತಾಳೆ. ಆ ನಂತರ ಮಹಾನ್ ಪತಿವ್ರತೆ ಬೃಂದಾ ಸತಿಯಾಗುತ್ತಾಳೆ. ಮಹಾದೇವನ ಬೂದಿಯಿಂದ ಒಂದು ಸಸ್ಯ ಉತ್ಪತ್ತಿಯಾಯಿತು. ಇದಕ್ಕೆ ಬ್ರಹ್ಮದೇವರು ತುಳಸಿ ಎಂದು ಹೆಸರು ಕೊಟ್ಟರು. ಇದೇ ಸಸ್ಯವೂ ಸತಿ ಬೃಂದಾಳ ಪೂಜನೀಯ ಸ್ವರೂಪವಾಯಿತು.
ಭಗವಂತನಾದ ವಿಷ್ಣು ಬೃಂದಾದೇವಿಗೆ ಈ ವರವನ್ನು ಕೊಟ್ಟರು. ಅದೇನೆಂದರೆ ಇಡೀ ಜಗತ್ತಿನಲ್ಲಿ ತುಳಸಿಯ ಪೂಜೆ ಮಾಡಲಾಗುತ್ತದೆ. ಮತ್ತು ವರ್ಷಕ್ಕೊಮ್ಮೆ ತುಳಸಿ ಮತ್ತು ಸಾಲಿಗ್ರಾಮದ ಜೊತೆ ವಿವಾಹವನ್ನು ಮಾಡಲಾಗುತ್ತದೆ. ಹಾಗಾಗಿ ಹಿಂದೂಧರ್ಮಕ್ಕೆ ತುಳಸಿ ಗಿಡಕ್ಕೆ ಹರಿವಲ್ಲಭ ಎಂದು ಕರೆಯುತ್ತಾರೆ. ತುಳಸಿ ಶ್ರೀಹರಿಗೆ ಅತೀ ಪ್ರಿಯಾವಾಗಿದೆ. ತುಳಸಿಯು ತಾಯಿ ಲಕ್ಷ್ಮಿದೇವಿಯ ಅಂಶವೇ ಆಗಿದೆ.
ಹಾಗಾಗಿ ಹಿಂದೂ ಧರ್ಮದಲ್ಲಿ ಮಹತ್ತ್ವವಿದೆ. ಶಾಸ್ತ್ರದ ಪ್ರಕಾರ ಯಾರ ಮನೆಯಲ್ಲಿ ತುಳಸಿ ಗಿಡವು ಇರುತ್ತದೆಯೋ ಅಲ್ಲಿ ತುಳಸಿ ಗಿಡದ ಪೂಜೆ ನಡೆಯುತ್ತದೆಯೋ ಆ ಮನೆ ಯಾವ ಕಾರಣಕ್ಕೂ ವಿನಾಶವಾಗುವುದಿಲ್ಲ. ಮನೆಯ ಮುಂದೆ ತುಳಸಿ ಗಿಡ ಇದ್ದರೆ ನಕಾರಾತ್ಮಕ ಶಕ್ತಿ ದೂರ ಇರುತ್ತವೆ. ಮತ್ತು ಸುಖಸಂಮೃದ್ಧಿಯನ್ನು ನೀಡುತ್ತದೆ. ಇದನ್ನು ಮನೆಯ ಮುಖ್ಯದ್ವಾರದ ಮುಂದೆ ನೆಡಬೇಕು.
ಶಾಸ್ತ್ರಗಳಲ್ಲಿ ತುಳಸಿ ಗಿಡವನ್ನು ನೆಡುವುದಕ್ಕೆ ಹಲವು ಮಹತ್ತ್ವಪೂರ್ಣವಾದ ನಿಯಮವನ್ನು ತಿಳಿಸಿದ್ದಾರೆ. ಹಲವಾರು ಜನರು ತುಳಸಿ ಗಿಡವನ್ನು ನೆಡುವಾಗ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ ಇದರಿಂದ ಅಶುಭ ಫಲಗಳು ಸಿಗುತ್ತವೆ. ಹಾಗಾಗಿ ತುಳಸಿ ಗಿಡವನ್ನು ನೆಡುವಾಗ ಶಾಸ್ತ್ರಗಳಲ್ಲಿನ ಕೆಲವು ವಿಷಯಗಳನ್ನು ಪಾಲಿಸಬೇಕು
ಹಳೆಯ ಡಬ್ಬದಲ್ಲಿ ತುಳಸಿ ಗಿಡವನ್ನು ನೆಡುತ್ತಾರೆ ಯಾವುದೇ ಕಾರಣಕ್ಕೂ ಆ ರೀತಿ ಮಾಡದೇ ಮಣ್ಣಿನ ಪಾಟ್ನಲ್ಲೇ ನೆಡಬೇಕು. ನೀಟಾಗಿರುವ ಜಾಗದಲ್ಲಿ ನೆಡಬೇಕು. ಇಲ್ಲದಿದ್ದರೆ ಮನೆಯ ಸದಸ್ಯರಿಗೆ ತೊಂದರೆಯಾಗುತ್ತದೆ. ಪ್ರತಿದಿನ ಅದರ ಪೂಜೆಯನ್ನು ಮಾಡಬೇಕು. ತುಳಸಿ ಗಿಡ ಹಲವು ಮಹತ್ತ್ವಪೂರ್ಣ ಸಂಕೇತಗಳನ್ನು ಕೊಡುತ್ತದೆ. ಇದು ವಾತಾವರಣದಲ್ಲಿರುವಂತಹ ನಕಾರಾತ್ಮಕ ಶಕ್ತಿಯನ್ನು ತಿಳಿದುಕೊಳ್ಳುತ್ತದೆ. ಮನೆಗೆ ಬರುವ ತೊಂದರೆಗಳು ತುಳಸಿ ಗಿಡದ ಮೂಲಕ ತಿಳಿಯುತ್ತದೆ.
ಜೊತೆಗೆ ಜೀವನದಲ್ಲಿ ಏನಾದರೂ ಚೆನ್ನಾಗಿ ನಡೆಯಲಿ ಎಂದರೆ, ಒಳ್ಳೆಯ ಸುದ್ಧಿಗಳು ಸಿಗುವುದಾದರೇ ಆಗ ತುಳಸಿ ಗಿಡವು ಕೆಲವು ಸಂಕೇತಗಳನ್ನು ನೀಡುತ್ತವೆ. ಶ್ರೀಕೃಷ್ಣ ಹೇಳುತ್ತಾನೆ ಯಾವ ಮನುಷ್ಯ ತುಳಸಿಯ ಪೂಜೆಯನ್ನ ಮಾಡುತ್ತಾನೋ ಅವನಿಗೆ ಕೆಟ್ಟದ್ದು ಆಗುವುದಿಲ್ಲ. ಸಾವಿನ ನಂತರ ನರಕದ ಯಾತನೆಯನ್ನು ಮಾಡುವ ಸಂಭವವಿರುವುದಿಲ್ಲ. ಯಾರ ಮನೆಯಲ್ಲಿ ತುಳಸಿ ಗಿಡ ಇರುತ್ತದೆಯೋ ಅಲ್ಲಿ ಭೂತ, ಪ್ರೇತಗಳು ಬರುವುದಿಲ್ಲ.
ಶಾಸ್ತ್ರದ ಪ್ರಕಾರ ತುಳಸಿ ಗಿಡವು ಮನೆಯ ಮುಂದೆ ಯಾವತ್ತಿಗೂ ಒಣಗಬಾರದು. ತುಳಸಿ ಗಿಡವು ಒಣಗುವುದು ಅತ್ಯಂತ ಅಶುಭ ಎಂದು ತಿಳಿಯಲಾಗಿದೆ. ಪ್ರತಿದಿನ ನೀರನ್ನು ಹಾಕಿ ಒಣಗದಂತೆ ನೋಡಿಕೊಳ್ಳಬೇಕು. ತುಳಸಿ ಗಿಡಕ್ಕೆ ಶುದ್ಧವಾದ ನೀರನ್ನೇ ಹಾಕಬೇಕು. ತುಂಬ ಬಿಸಿಲು ಇರುವ ಜಾಗದಲ್ಲಿ ತುಳಸಿ ಗಿಡವನ್ನು ನೆಡಬಾರದು. ತುಳಸಿ ಗಿಡವನ್ನು ಚೆನ್ನಾಗಿ ನೋಡಿಕೊಂಡರೆ ಒಣಗುವುದಿಲ್ಲ.
ಹಲವಾರು ಪ್ರಯತ್ನಗಳನ್ನು ಮಾಡಿದರೂ ತುಳಸಿ ಗಿಡ ಒಣಗಿದರೆ ನಿಮ್ಮ ಮನೆಗೆ ಬರುವ ಯಾವುದೋ ದೊಡ್ಡ ತೊಂದರೆ ಎಂದು ನೀವು ತಿಳಿಯಬೇಕು. ಯಾವುದೋ ಕಾರಣದಿಂದ ನಿಮ್ಮ ಹಣ ಖರ್ಚು ಆಗಬಹುದು. ವ್ಯಾಪಾರದಲ್ಲಿ ದೊಡ್ಡ ನಷ್ಟ ಅನುಭವಿಸಬಹುದು. ಆದ್ದರಿಂದ ತಕ್ಷಣವೇ ಒಣಗಿದ ತುಳಸಿ ಗಿಡವನ್ನು ಯಾವುದಾದರೂ ನದಿಯಲ್ಲಿ ವಿಸರ್ಜಿಸಬೇಕು. ಆ ಜಾಗದಲ್ಲಿ ಹೊಸ ತುಳಸಿ ಸಸ್ಯವನ್ನು ನೆಡಬೇಕು.
ನಿಮ್ಮ ಮನೆಯ ತುಳಸಿ ಗಿಡವು ಹಚ್ಚ ಹಸಿರಾಗಿದ್ದರೂ ಅದರ ಎಲೆಗಳು ತಾವಾಗಿಯೇ ಬೀಳಲು ಶುರು ಮಾಡಿದ್ದರೇ ಇದನ್ನು ಅಶುಭ ಸಂಕೇತವೆಂದು ತಿಳಿಯಿರಿ. ಆದರೇ ಎಲೆಯು ಹಳದಿ ಬಣ್ಣಕ್ಕೆ ತಿರುಗಿ ಬೀಳಲು ಶುರು ಮಾಡಿದರೆ ಏನೂ ತೊಂದರೆ ಇಲ್ಲ ಆದರೇ ಹಸಿರು ಎಲೆಗಳು ಬೀಳುವುದು ಅಪಶಕುನವೆಂದು ತಿಳಿಯಿರಿ. ಇದು ಲಕ್ಷ್ಮಿದೇವಿಯು ನಿಮ್ಮ ಮೇಲೆ ಸಿಟ್ಟಾಗಿರುವ ಸಂಕೇತವಾಗಿದೆ. ಮನೆಯಲ್ಲಿ ತುಳಸಿ ಗಿಡ ಇದ್ದರೆ ಮಾಂಸವನ್ನು ಸೇವನೆ ಮಾಡಬಾರದು.
ನಿಮ್ಮ ಮನೆಯ ತುಳಸಿ ಗಿಡದ ಮಧ್ಯೆ ಬೇರೆ ಗಿಡಗಳು ಹುಟ್ಟಲು ಶುರು ಆಗಿದ್ದರೇ ಇದು ಒಳ್ಳೆಯ ಸೂಚನೆಯಾಗಿದೆ. ಅನೇಕ ಮಾರ್ಗದಲ್ಲಿ ಹಣ ಬರುತ್ತದೆ. ವ್ಯಾಪಾರ ವೃದ್ಧಿಯಾಗುತ್ತದೆ. ನಿಮ್ಮ ಮನೆಯಲ್ಲಿ ತಾನಾಗಿಯೇ ತುಳಸಿ ಗಿಡ ಹುಟ್ಟುಕೊಂಡರೆ ಸಾಕ್ಷಾತ್ ಲಕ್ಷ್ಮಿದೇವಿಯು ನಿಮ್ಮ ಮನೆಗೆ ಪ್ರವೇಶ ಮಾಡಿದ್ದಾಳೆಂದು ಅರ್ಥ.
ನಿಮ್ಮ ಮನೆಯ ತುಳಸಿ ಗಿಡದ ಪಾಟ್ನಲ್ಲಿ ಇರುವೆಗಳು ಬರಲು ಶುರುಮಾಡಿದರೆ ಇದು ಶುಭ ಸಂಕೇತವಾಗಿದೆ. ಆದರೇ ತುಳಸಿ ಗಿಡಕ್ಕೆ ಬೇರೆ ಹುಳುಗಳು ಬಂದರೆ ಇದನ್ನು ಅಶುಭ ಸಂಕೇತವೆಂದು ತಿಳಿಯಿರಿ. ತುಳಸಿ ಗಿಡದಲ್ಲಿ ಜೇಡದ ಬಲೆಯಾದರೇ ಧನಸಂಪತ್ತಿನ ನಾಶದ ಸಂಕೇತವಾಗಿರುತ್ತದೆ, ತಕ್ಷಣ ತೆಗೆದುಹಾಕಬೇಕು.ತುಳಸಿ ಗಿಡ ಯಾವಾಗಲೂ ಹಚ್ಚಹಸಿರಾಗಿದ್ದರೇ ಇದು ದೊಡ್ಡದಾಗಿರುವ ಶುಭ ಸಂಕೇತವಾಗಿದೆ.