ಸಾಯೋವರೆಗೂ ಯವ್ವನವಾಗಿರಲು ಸಲಹೆಗಳು

ಯೌವನವಾಗಿರಲು ಕೆಲವು ಸಲಹೆಗಳು ಪ್ರತಿದಿನ ಸಾಧ್ಯವಾದಷ್ಟು ಹಸಿರು ತರಕಾರಿ ಮತ್ತು ಸೊಪ್ಪುಗಳ ಸೇವನೆ ಮಾಡಿ.ಹಾಗೇನೆ ಪ್ರತಿದಿನ ಯಾವುದಾದರೂ ಒಂದು ಹಣ್ಣಿನ ಸೇವನೆ ಮಾಡಿ. ಇಂತದ್ದೇ ಹಣ್ಣು ಸೇವನೆ ಮಾಡಬೇಕೆಂದೇನೂ ಇಲ್ಲ. ಯಾವುದೇ ಹಣ್ಣು ಬೇಕಾದರೂ ಸೇವಿಸಬಹುದು.

ಪ್ರತಿದಿನ ಆರರಿಂದ ಏಳು ಗ್ಲಾಸ್ ನೀರನ್ನು ಕುಡಿಯಲೇಬೇಕು. ಸರಿಯಾಗಿ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಮುಖ್ಯ.ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಅರ್ಥ ಗಂಟೆ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು ಆರೋಗ್ಯವನ್ನು ಕಾಪಾಡುತ್ತದೆ.

ಪ್ರತಿದಿನ ಸಾಧ್ಯವಾದರೆ ಯಾವುದಾದರೂ ಒಂದು ನಮೂನೆ ಡ್ರೈ ಫ್ರೂಟ್ಸ್ ಅನ್ನು ತಿನ್ನಿ.ಸಾಧ್ಯವಾದಷ್ಟು ಎಲ್ಲಾ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವನೆ ಮಾಡಿ.ತೂಕ ಇಳಿಸಿಕೊಳ್ಳಲು ಬಯಸುವವರು ಮತ್ತು ಯಾವಾಗಲೂ ಆರೋಗ್ಯವಾಗಿರಬೇಕು ಎಂದು ಬಯಸುವವರು ಖಂಡಿತವಾಗಿ ಬಿಳಿ ಅನ್ನದ ಸೇವನೆಯನ್ನು ಪೂರ್ತಿಯಾಗಿ ನಿಲ್ಲಿಸಿ ಕೆಂಪು ಅನ್ನವನ್ನು ಸೇವನೆ ಮಾಡಿ.

ಟೀ ಕಾಫಿ ಕುಡಿಯುವುದು ಕಡಿಮೆ ಮಾಡಿ, ಸಾಧ್ಯವಾದರೆ ಪೂರ್ತಿ ನಿಲ್ಲಿಸುವುದು ಉತ್ತಮ.ರಾತ್ರಿ ಮಲಗುವ ಮುನ್ನ ಅರಿಶಿನ ಹಾಲನ್ನು ಪ್ರತಿದಿನ ಒಂದು ಗ್ಲಾಸ್ ಕುಡಿಯುವುದು ಅಭ್ಯಾಸ ಮಾಡಿಕೊಳ್ಳಿ, ಹಾಗೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಮುಖದಲ್ಲಿ ಮೊಡವೆಗಳು ಕಲೆಗಳು ಮತ್ತು ಸುಕ್ಕುಗಳು ಕಡಿಮೆಯಾಗಿ ಚರ್ಮ ಕಾಂತಿಯುತವಾಗಿ ಆಗಬೇಕೆಂದರೆ ಪ್ರತಿದಿನ ಬಾದಾಮ್ ಎಣ್ಣೆಯಿಂದ ಮಸಾಜ್ ಮಾಡಿ

Leave a Comment