ಸಾಮಾನ್ಯವಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಯಾವುದೇ ಕೆಲಸವನ್ನು ಮಾಡಿದರೂ ತುಂಬಾನೇ ಶ್ರೇಯಸ್ಸು ಎಂದು ಪುರಾಣಗಳಲ್ಲಿ ಕೇಳಲ್ಪಟ್ಟಿರುತ್ತೀರಿ. ಮಕ್ಕಳ ವಿದ್ಯಾಭ್ಯಾಸ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುತ್ತಾ ಬಂದಾಗ ಖಂಡಿತ ಅವರಿಗೆ ಯಶಸ್ಸು ಸಿಗುತ್ತದೆ.
ಸೂರ್ಯೋದಯದ ಸಮಯದ ಮುಂಚೆ ಅಂದರೆ 1:36 ಗಂಟೆಯ ಮುಂಚೆ ಈ ಬ್ರಾಹ್ಮಿ ಮುಹೂರ್ತ ಪ್ರಾರಂಭವಾಗುತ್ತದೆ. ಮುಕ್ತಾಯ ಯಾವಾಗ ಎಂದರೆ ಸೂರ್ಯೋದಯದ ಸಮಯದಲ್ಲಿ 48 ನಿಮಿಷಗಳ ಮೊದಲಿನಲ್ಲಿ ಇದು ಮುಕ್ತಾಯವಾಗುತ್ತದೆ.
ಉದಾಹರಣೆಗೆ ಸೂರ್ಯೋದಯದ ಸಮಯ 6 ಗಂಟೆಗೆ ಇದೆ ಎಂದಾದರೆ ನಮಗೆ ಬ್ರಾಹ್ಮಿ ಮುಹೂರ್ತ ಪ್ರಾರಂಭವಾಗುವುದು 1:36 ನಿಮಿಷದ ಮುಂಚೆ ಪ್ರಾರಂಭವಾಗಬೇಕೆಂದರೆ 4:24 ನಿಮಿಷಕ್ಕೆ ಬ್ರಾಹ್ಮಿ ಮುಹೂರ್ತ ಪ್ರಾರಂಭವಾಗುತ್ತದೆ. ಪೂಜೆಯನ್ನು ಅಲ್ಲಿಂದ ಶುರು ಮಾಡಿ ಯಾವಾಗ ಮುಕ್ತಾಯ ಮಾಡಬೇಕೆಂದರೆ ಸೂರ್ಯೋದಯದ
ಸಮಯ 6 ಗಂಟೆ ಆದರೇ 5:12 ನಿಮಿಷದ ಒಳಗೆ ನಿಮ್ಮ ಪೂಜೆಯನ್ನು ಮುಕ್ತಾಯ ಮಾಡಬೇಕಾಗುತ್ತದೆ. ಈ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಿದರೇ ಫಲಗಳು ಹೆಚ್ಚಾಗಿ ಸಿಗುತ್ತದೆ. ಈ ಸಮಯದಲ್ಲಿ ಧ್ಯಾನ, ಯೋಗ, ಜಪಗಳನ್ನ ಮಾಡಿದರೇ ಹೆಚ್ಚು ಫಲ ಸಿಗುತ್ತದೆ. ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವುದರಿಂದ ನಮ್ಮ ಸೌಂದರ್ಯ ಹೆಚ್ಚಾಗುತ್ತದೆ. ವಿದ್ಯೆ, ಬುದ್ಧಿ, ಆರೋಗ್ಯ ವೃದ್ಧಿಯಾಗುತ್ತದೆ.
ಈ ಸಮಯದಲ್ಲಿ ನಿದ್ರೆ ಮಾಡುವುದು ನಿಷಿದ್ಧ ಎಂದು ಹೇಳುತ್ತಾರೆ. ವೈಜ್ಞಾನಿಕವಾಗಿ ಈ ಬ್ರಾಹ್ಮಿ ಮುಹೂರ್ತಕ್ಕೆ ವಿಶೇಷವಿದೆ. ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚು ಆಗಬೇಕೆಂದರೆ ಈ ಸಮಯದಲ್ಲಿ ಮಕ್ಕಳು ತಮ್ಮ ಅಧ್ಯಯನದಲ್ಲಿ ತೊಡಗಿಕೊಳ್ಳುವುದು ತುಂಬಾನೇ ಒಳ್ಳೆಯ ಸಮಯವಾಗಿದೆ. ದೇವಸ್ಥಾನಗಳು ಕೂಡ ಇದೇ ಸಮಯದಲ್ಲಿ ತೆರೆಯುವುದು ಮತ್ತು ಪೂಜೆಗಳು ಶುರುವಾಗುತ್ತಿರುತ್ತದೆ.
ಈ ಸಮಯದಲ್ಲಿ ದೇವರ ದರ್ಶನ ಮಾಡಿದಾಗ ವಿಶೇಷವಾದ ಶಕ್ತಿಯು ಪ್ರಾಪ್ತಿಯಾಗುತ್ತದೆ. ಈ ಸಮಯದಲ್ಲಿ ವಾಕಿಂಗ್ ಮಾಡಲು ಏಕೆ ಹೇಳುತ್ತಾರೆಂದರೆ ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿ ಇರುತ್ತದೆಯಂತೆ ಹಾಗಾಗಿ ಈ ಸಮಯದಲ್ಲಿ ವಾಕಿಂಗ್ ಮತ್ತು ಅಧ್ಯಯನ ಮಾಡುವುದು ಒಳ್ಳೆಯದು. ಬ್ರಾಹ್ಮಿ ಮುಹೂರ್ತ ಮತ್ತು ಪ್ರಕೃತಿ ಆಳವಾದ ಸಂಬಂಧವಿದೆ. ಈ ಸಮಯದಲ್ಲೇ ಹಕ್ಕಿಗಳು ಎದ್ದೇಳುತ್ತವೆ ಮತ್ತು ಹೂಗಳು ಕೂಡ ಅದೇ ಸಮಯದಲ್ಲಿ ಅರಳುವುದು.
ಇದು ನಮಗೂ ಕೂಡ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಿ ಎಂಬ ಸಂದೇಶವನ್ನು ಕೊಡುತ್ತದೆ. ವಾಸ್ತುಪ್ರಕಾರ ಹೇಳುವುದಾದರೇ ಈ ಸಮಯದಲ್ಲಿ ಜನರು ಏಳುವುದರಿಂದ ಯಶಸ್ಸನ್ನು ಪಡೆಯುತ್ತಾರೆ ಮತ್ತು ಈ ಸಮಯದಲ್ಲಿ ವಾತಾವರಣ ಸಕಾರಾತ್ಮಕ ಶಕ್ತಿಯಿಂದ ಕೂಡಿರುತ್ತದೆ. ನಮ್ಮಲ್ಲೂ ಸಕಾರಾತ್ಮಕ ಭಾವನೆಯು ಹೆಚ್ಚಾಗುತ್ತಾ ಹೋಗುತ್ತದೆ. ಆದ್ದರಿಂದ ಬ್ರಾಹ್ಮಿ ಮುಹೂರ್ತವು ಪೂಜೆಗೆ ಒಳ್ಳೆಯದು. ವಯಸ್ಸಾಗಿರುವವರು, ಚಿಕ್ಕಮಕ್ಕಳು ಇರುವವರು ಸೂರ್ಯೋದಯ ಇನ್ನೇನು ಆಗುತ್ತದೆ ಎನ್ನುವ ಸಮಯದಲ್ಲಾದರೂ ದೀಪವನ್ನು ಹಚ್ಚಿದರೂ ಒಳ್ಳೆಯದು.