ಮೇಷ ರಾಶಿಯ ಸೆಪ್ಟೆಂಬರ್ ತಿಂಗಳ ಭವಿಷ್ಯ. ಮೇಷ ರಾಶಿಯವರಿಗೆ ಶನಿ ಲಾಭದಲ್ಲಿದ್ದಾನೆ. ಸುಮಾರು 72 ಅಥವಾ 75 ಪರ್ಸೆಂಟ್ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ. ಬಹಳಷ್ಟು ವಿಚಾರಗಳಲ್ಲಿ ಹೀಗೆ ಆಗುತ್ತದೆ. ಮೇಷ ರಾಶಿಯವರಿಗೆ 80 ಪರ್ಸೆಂಟ್ ಅಷ್ಟು ಉತ್ತಮ ಫಲಗಳು ಇವೆ. ಶನಿ ಲಾಭದಲ್ಲಿದ್ದಾನೆ. ವ್ಯಾಪಾರ, ವ್ಯವಹಾರ ,ವಿಶೇಷ ವಹಿವಾಟು, ಇನ್ಸೂರೆನ್ಸ್ ಮಾಡುವವರು,
ರಿಯಲ್ ಎಸ್ಟೇಟ್ ಏಜೆಂಟರು, ಮಧ್ಯವರ್ತಿಗಳು, ದಲ್ಲಾಳಿಗಳು, ಶೇರು ಕಟ್ಟೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಬೆಳವಣಿಗೆ. ಚೆನ್ನಾಗಿ ನಡೆಯುತ್ತಿರುವಾಗ ಗಾಬರಿಬೇಡ, ಅದು ಹಾಗೆಯೇ ನಡೆದುಕೊಂಡು ಹೋಗುತ್ತದೆ. ಅದರ ಜೊತೆಗೆ ಶುಕ್ರನ ಬಲ ಕೂಡ ಇದೆ. ಧನಸ್ಥಾನವಾದ ಚತುರ್ಥ ಭಾವದಲ್ಲಿ ಶುಕ್ರ ಬಹಳಷ್ಟು ವ್ಯವಹಾರಗಳಿಗೆ ಸ್ಪೂರ್ತಿ ತುಂಬುತ್ತಾನೆ.
ಪ್ರಗತಿಯನ್ನು ತಂದು ಕೊಡುತ್ತಾನೆ. ಹಣಕಾಸಿನ ವ್ಯವಹಾರದಲ್ಲಿ ಒಳ್ಳೆಯ ಪರಿವರ್ತನೆ ಇದೆ. ಸೆಪ್ಟೆಂಬರ್ ತಿಂಗಳು ನಿಮಗೆ ಸುಖಕರವಾಗಿರುತ್ತದೆಯೇ, ಯಾವ ಯಾವ ರೀತಿಯ ಸಮಸ್ಯೆಗಳು ಎದುರಾಗಬಹುದು? ಅದಕ್ಕೆ ಪರಿಹಾರವೇನು? ಮುಖ್ಯವಾಗಿ ರಾಶಿಯಲ್ಲಿ ಗುರು ಮತ್ತು ರಾಹು ಸಂಧಿ ಇದೆ. ಇದರ ಪರಿಣಾಮ ಮೇಷ ರಾಶಿಯವರ ಮೇಲೆ ಅವ್ಯಾಹತವಾಗಿ ನಡೆಯುತ್ತಿದೆ.
ಸಂಪಾದನೆ ತೃಪ್ತಿಕರವಾಗಿರಬಹುದು. ಈ ಸಂಪಾದನೆ ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತಿಲ್ಲ. ಸಂಪಾದಿಸಿದ್ದು ಖರ್ಚಾಗಿ ಹೋಗುತ್ತಿದೆ. ಅನುಭವಿಸಲು ನಿಮ್ಮಲ್ಲಿ ಸಮಯವಿರುವುದಿಲ್ಲ. ವಿರಾಮ ಸಿಕ್ಕಿದಾಗ ಅನಾರೋಗ್ಯ ಕಾಡುತ್ತದೆ. ಕೈ ನೋವು, ಕಾಲು ನೋವು, ಕುತ್ತಿಗೆ ಉಳುಕುವುದು, ನೆನಪಿನ ಶಕ್ತಿ ಏರುಪೇರು, ಕೆಲವೊಂದು ವಿಚಾರದಲ್ಲಿ ಭ್ರಮೆ ಉಂಟಾಗುವುದು.
ಕನಸ್ಸನ್ನು ನಿಜವೆಂದು, ನಿಜವನ್ನು ಕನಸೆಂದು ಭ್ರಮಿಸುವಿರಿ. ಚಳಿಗಾಲದಲ್ಲಿ ಎಚ್ಚರದಿಂದ ಇರಿ. ವಾತದ ಬಗೆಗೆ ಎಚ್ಚರವಿರಲಿ. ದಾಂಪತ್ಯ ಮತ್ತು ವೈವಾಹಿಕ ಜೀವನಕ್ಕೆ ಕಾರಕನಾಗಿರುವ ಶುಕ್ರ ಗ್ರಹ ಚತುರ್ಥಭಾವದಲ್ಲಿ ವಕ್ರನಾಗಿರುವುದು. ಅದರಲ್ಲೂ ಸುಖ ಸ್ಥಾನದಲ್ಲಿ ವಕ್ರನಾಗಿರುವುದರಿಂದ, ವೈವಾಹಿಕ ಮತ್ತು ದಾಂಪತ್ಯಕ್ಕೆ ಸಂಬಂಧಿಸಿದ ವಿಚಾರಗಳು ಕಗ್ಗಂಟಾಗುತ್ತವೆ.
ಅಷ್ಟೊಂದು ಸರಳವಾಗಿ ಯಾವುದೇ ಘಟನೆ ನಡೆಯುವುದಿಲ್ಲ. ಪ್ರೇಮ ವಿವಾಹವನ್ನು ನಿರೀಕ್ಷಿಸುತ್ತಿದ್ದರೆ, ಆ ವ್ಯಕ್ತಿಗಳು ನಿಮ್ಮನ್ನು ಅಥವಾ ತಮ್ಮ ನಿರ್ಧಾರವನ್ನು ಒಪ್ಪುವುದಿಲ್ಲ. ಇದರಿಂದ ನಿಮ್ಮ ಆತ್ಮವಿಶ್ವಾಸ ಕುಂದಬಹುದು. ಅವರು ನಿಮಗೆ ನೆಪಗಳನ್ನು ಹೇಳಬಹುದು. ಸಪ್ತಮದಲ್ಲಿರುವ ಕೇತುವಿನಿಂದಲೂ ಸಾಕಷ್ಟು ಸಮಸ್ಯೆಗಳು ವಿವಾಹಿತರೂ ಮದುವೆ ಬಗ್ಗೆ ಎಚ್ಚರಿಕೆಯ ಹೆಜ್ಜೆಯನ್ನಿಡಿ.
ವಿದ್ಯಾರ್ಥಿಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಇದಕ್ಕೆ ಕಾರಕನಾದ ಬುಧ ಪಂಚಮ ರಾಶಿಯಲ್ಲಿ. ಮಕ್ಕಳ ವಿದ್ಯಾಭ್ಯಾಸಕ್ಕೂ ಅಡ್ಡಿ ಆತಂಕಗಳು ಎದುರಾಗಬಹುದು. ವಿಶೇಷವಾಗಿ ಫೋಕಸ್ ಕಡಿಮೆಯಾಗಬಹುದು. ಒತ್ತಡ ಹೆಚ್ಚಾಗಿ ಮೊಬೈಲ್ ಗಳು, ಗೇಮ್ಸ್ ಇತ್ಯಾದಿ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಅಕ್ಟೋಬರ್ 30ರವರೆಗೆ ಮಕ್ಕಳ ಬಗೆಗೆ ಹೆಚ್ಚು ಕಾಳಜಿ ವಹಿಸಬೇಕು.
ಸರಿಯಾಗಿಯೇ ಓದಿದ್ದರೂ,ಅರ್ಥ ಮಾಡಿಕೊಳ್ಳುವಲ್ಲಿ ವ್ಯತ್ಯಾಸವಾಗಬಹುದು. ತಪ್ಪುಗಳ ಸಾಧ್ಯತೆ ಹೆಚ್ಚು. ಸಣ್ಣ ಗ್ರಹಿಕೆಯ ದೋಷದಿಂದ ಇಡೀ ಲೆಕ್ಕವೇ ತಪ್ಪಾಗಬಹುದು. ಎರಡು ಬಾರಿ ಪರೀಕ್ಷಿಸಿಕೊಳ್ಳಿ. ಇತರರ ಸಹಾಯ ಪಡೆದು ಖಾತ್ರಿಪಡಿಸಿಕೊಳ್ಳಿ. ಆರೋಗ್ಯದ ವಿಚಾರದಲ್ಲಿ ಸೆಪ್ಟೆಂಬರ್ 17ರ ನಂತರ ಪರಿವರ್ತನೆ ಯಾಗುತ್ತದೆ. ಈ ಸಮಯದಲ್ಲಿ ರವಿ ಗ್ರಹ ಆರನೆಯ ಮನೆಗೆ, ಕನ್ಯಾ ರಾಶಿಗೆ ಬರುತ್ತದೆ.
ಕುಜ ಸಹ ಅಲ್ಲೇ ಇರುತ್ತಾನೆ. ಎರಡು ಗ್ರಹಗಳು ಶಕ್ತಿಶಾಲಿಗಳಾಗುತ್ತವೆ. ಆರೋಗ್ಯ ದೃಢವಾಗುತ್ತದೆ. ಕಾನ್ಫಿಡೆನ್ಸ್ ಹೆಚ್ಚಾಗುತ್ತದೆ. ಮನೋಬಲ ವೃದ್ಧಿಯಾಗುತ್ತದೆ. ಹೋರಾಡಿ ಗೆಲ್ಲುವ ಛಲ ಬರುತ್ತದೆ. ಆರೋಗ್ಯವಂತರು ಆಗುವಿರಿ. ವಿಶೇಷವಾಗಿ ಸರ್ಜರಿ, ಚಿಕಿತ್ಸೆ ಅಥವಾ ಬದಲಿ ಜೋಡಣೆಗಳು, ಇವುಗಳನ್ನು ಪಡೆಯುವ ವ್ಯಕ್ತಿಗಳು ಯಶಸ್ವಿಗಳಾಗುತ್ತಾರೆ.
ವಿಶೇಷ ಪ್ರಯತ್ನದಿಂದ ಗುಣ ಮಾಡಿಕೊಳ್ಳುವ ಶಕ್ತಿ ಸಿದ್ಧಿಯಾಗುತ್ತದೆ. ಮಸಾಜ್ ಇರಬಹುದು ಅಥವಾ ವಿಶೇಷ ತೆರಪಿಗಳಿರಬಹುದು, ಇವುಗಳಲ್ಲಿ ಯಶಸ್ಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇರುವವರು, ದಾದಿಯರಿಗೆ ಇವರಿಗೆ ಕುಜ ಮತ್ತು ರವಿಯಿಂದ ಒಳ್ಳೆಯದಾಗುತ್ತದೆ. ಶತ್ರುಗಳು ನಿಮ್ಮನ್ನು ನೋಡಿ ಭಯಪಡುವಂತಾಗುತ್ತದೆ. ಕೋರ್ಟಿನ ವಿಚಾರಗಳುಇತ್ಯರ್ಥವಾಗುತ್ತದೆ. ಜಯ ನಿಮ್ಮದಾಗುತ್ತದೆ. ಇದು ಅಪರೂಪದ ಜಯ.