ಪೂಜೆಗೆ ಹೂವುಗಳನ್ನು ಕೇಳುವಾಗ ಈ ತಪ್ಪುಗಳನ್ನು ಮಾಡಬೇಡಿ!! ನೆಲದಲ್ಲಿ ಬಿದ್ದಿರುವ ಹೂಗಳನ್ನು ನೀವು ಪೂಜೆಗಾಗಿ ಬಳಸಬಾರದು.. ದೇವರಿಗೆ ಮೊಗ್ಗುಗಳನ್ನು ಅರ್ಪಿಸುವುದಾದರೆ ಚಂಪಾ ಮತ್ತು ಕಮಲದ ಹೂವುಗಳ ಮೊಗ್ಗುಗಳನ್ನು ಬಿಟ್ಟರೆ ಬೇರೆ ಯಾವುದೇ ಹೂವಿನ ಮೊಗ್ಗುಗಳನ್ನು ಅರ್ಪಿಸಬಾರದು. ಪೂರ್ಣ ಅರಳಿದ ಹೂಗಳನ್ನು ಮಾತ್ರ ದೇವರಿಗೆ ಅರ್ಪಿಸಬೇಕು.
ಸಂಜೆಯ ಸಮಯದಲ್ಲಿ ಗಿಡಗಳಿಂದ ಹೂವು ಕೇಳುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಗಿಡಗಳು ವಿಶ್ರಾಂತಿ ಪಡೆಯುವ ಸಮಯವಾಗಿರುತ್ತದೆ. ಬಾಡಿದ ಅಥವಾ ಒಣಗಿದ ಹೂವುಗಳನ್ನು ಪೂಜೆಗೆ ಬಳಸಬಾರದು.
.5. ಪೂಜೆಯಲ್ಲಿ ದೇವರಿಗೆ ಹೂವುಗಳನ್ನು ಅರ್ಪಿಸುವ ಮೊದಲು ಅಥವಾ ಅರ್ಪಿಸಿದ ನಂತರ ನೀರನ್ನು ಸಿಂಪಡಿಸಬೇಕೆ ಹೊರತು ಅದನ್ನು ತೊಳೆಯಬಾರದು.
ಹುಳುಗಳಿರುವ ಹೂಗಳನ್ನು ಪೂಜೆಗೆ ಸೂಕ್ತವಲ್ಲವೆಂದು ಪರಿಗಣಿಸಲಾಗುತ್ತದೆ. ನೀರಿನಿಂದ ತೊಳೆದು ಹೂವು, ಎಡಗಯಿಂದ ಕಿತ್ತು ತಂದ ಹೂವು, ಬೇರೆಯವರ ಕೋಪಕ್ಕೆ ಗುರಿಯಾಗಿ ತಂದ ಹೂವುಗಳು ದೇವರ ಪೂಜೆಯಲ್ಲಿ ಫಲ ನೀಡುವುದಿಲ್ಲ.
ನೆರದಲ್ಲಿ ಬಿದ್ದಿರುವ ಹೂವು ಪರಿಮಳವಿಲ್ಲದ ಹೂವು ಕೆಟ್ಟ ವಾಸನೆಯನ್ನು ಸೂಸುವ ಹೂವು ದಳಗಳು ಉದುರಿ ಹೋದ ಹೂವು ಪೂಜೆಗೆ ಸೂಕ್ತವಲ್ಲ.ಅಪವಿತ್ರ ಸ್ಥಳದಲ್ಲಿ ಬೆಳೆದ ಹೂವು ಮತ್ತು ಸ್ನಾನ ಮಾಡದೆ ನಾವು ಪೂಜೆಗಾಗಿ ಹೂವುಗಳನ್ನು ಕೀಳಬಾರದು. ಪೂಜೆಗೆಂದು ಹೂವುಗಳನ್ನು ಕೀಳುವಾಗ ಪಾದರಕ್ಷೆಯನ್ನು ಧರಿಸಬಾರದು.
ಗಿಡದಿಂದ ಹೂವನ್ನು ತೆಗೆದುಕೊಂಡಾಗ ಅದಕ್ಕೆ ಕೃತಜ್ಞತೆಯನ್ನು ಅರ್ಪಿಸಬೇಕು.12. ಪೂಜೆಗೆ ಹೂವುಗಳನ್ನು ತೆಗೆದುಕೊಳ್ಳುವಾಗ ಪೂಜೆ ಫಲಕಾರಿಯಾಗಲೆಂದು ಬೇಡಿಕೊಳ್ಳಬೇಕು. ಹೂವನ್ನು ಕೀಳುವಾಗ ಇಷ್ಟ ದೇವರ ನಾಮ ಸ್ಮರಣೆಯನ್ನು ಮಾಡಬೇಕು. ಪೂಜೆಯಲ್ಲಿ ಬಳಸುವ ಹೂಗಳಿಗೂ ಹೆಚ್ಚಿನ ಮಹತ್ವವಿರುವುದರಿಂದ ಈ ಎಲ್ಲಾ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ…