ನವೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿದೆ ಅಂತ ತಿಳಿದುಕೊಳ್ಳೋಣ. ನವಂಬರ್1/2 ತಿಂಗಳು ಸುಖಕರವಾಗಿ ಕಳೆದು ಹೋಗುತ್ತದೆ. ಗುರು ನಿಮಗೆ ಗೋಚಾರದಲ್ಲಿ ಒಳ್ಳೆ ಫಲಗಳನ್ನು ಕೊಡುತ್ತಾನೆ. ಶನಿಯಿಂದ ಉತ್ತಮ ಸುಖ ಸಮೃದ್ಧಿ ಬರುತ್ತಾ ಇದೆ. ಇನ್ನು ಬಂದಿಲ್ಲ ಅನ್ನುವವರು ಅವರ ಕರ್ಮದ ಅನುಸಾರ ನೋಡಿಕೊಳ್ಳಬೇಕಾಗುತ್ತದೆ. ಗೌರವ ಮನ್ನಣೆ ಸಿಗುತ್ತದೆ.
ನಿಮ್ಮ ಪಂಚಮ ಭಾವದಲ್ಲಿರುವ ಗುರು ಗ್ರಹದಿಂದ ನಿಮಗೆ ಮಕ್ಕಳ ಭಾಗ್ಯ ಅಥವಾ ಮಕ್ಕಳಿಂದ ಖುಷಿ ಸಿಗುತ್ತದೆ. ಕುಜಗ್ರಹದಿಂದ ಮನ್ನಣೆಹೆಚ್ಚಾಗುತ್ತದೆ. ಮನೋಬಲ ಚೆನ್ನಾಗಿರುತ್ತದೆ. ಸಮಸ್ಯೆಗೆ ಪರಿಹಾರವನ್ನು ಬೇಗ ಹುಡುಕುತ್ತೀರಾ. ಲಾಭದಲ್ಲಿರುವ ಕುಜ ಗ್ರಹದಿಂದ ನಿಮಗೆ ರೋಗಗಳಿಂದ ಮುಕ್ತಿ ಸಿಗುತ್ತದೆ. ಜಗಳಗಳು ಕಿರಿಕಿರಿಯಾಗುವ ಸಾಧ್ಯತೆ ಇರುತ್ತದೆ.
ಅವಮಾನವಾಗುವ ಸಾಧ್ಯತೆ ಇರುತ್ತದೆ. ಪರಿಸ್ಥಿತಿಗೆ ತಕ್ಕಂತೆ ಯೋಚನೆ ಮಾಡಿ ಮಾತನಾಡಬೇಕಾಗುತ್ತದೆ. ದುಡ್ಡು ಬರುತ್ತದೆ ಅಂದರೆ ತೆರಿಗೆ ಕಟ್ಟುವುದರಲ್ಲಿ ಹೋಗುತ್ತದೆ. ಮನಸನ್ನ ಖಾಲಿ ಬಿಡಬೇಡಿ ಯಾವುದಾದರೂ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಆಪ್ತರ ಜೊತೆ ಜಗಳಗಳು ಹಾಗೂ ಸಾಧ್ಯತೆ ಇರುತ್ತದೆ. ಉಷ್ಣದಿಂದ ಏರುಪೇರು ಆಗುವ ಸಾಧ್ಯತೆ ಇರುತ್ತದೆ ಹುಷಾರಾಗಿ ಇರಬೇಕಾಗುತ್ತದೆ.