ಮುಖದಲ್ಲಿ ಕಪ್ಪು ಚುಕ್ಕಿ, ರಿಂಕಲ್ಸ್ ಆಗುತ್ತಿದ್ದರೆ ಪಟಿಕಾ ಅಥವಾ ಆಲಾಮವನ್ನು ಬಳಸಿ ಸಂಪೂರ್ಣ ನಮ್ಮ ಮುಖದಲ್ಲಿರುವ ಕಲೆಗಳನ್ನ ಹೋಗಲಾಡಿಸಬಹುದು. ಇದು ಮಾರುಕಟ್ಟೆಯಲ್ಲಿ ಸಿಗುತ್ತದೆ. ಮೆಡಿಕಲ್ ಶ್ಯಾಪ್ನಲ್ಲೂ ಕೂಡ ಸಿಗುತ್ತದೆ. ಇದು ಎಷ್ಟು ಅದ್ಭುತವಾಗಿ ಕೆಲಸ ಮಾಡುತ್ತದೆಂದರೆ ಮುಖದಲ್ಲಿರುವ ಕಲೆಗಳು ಹೋಗಲಾಡಿಸುತ್ತದೆ.
ಇದನ್ನು ಕಟಿಂಗ್ ಶ್ಯಾಂಪ್ ಮತ್ತು ಬ್ಯೂಟಿ ಫಾರ್ಲರ್ಗಳಲ್ಲಿ ಬಳಸುತ್ತಾರೆ. ಕುಡಿಯುವ ನೀರನ್ನು ಸ್ವಚ್ಛ ಮಾಡಲು ಮತ್ತು ಬ್ಯಾಕ್ಟೇರಿಯಾವನ್ನು ನಾಶ ಮಾಡಲು ಮತ್ತು ಬ್ಯೂಟಿ ಪ್ರಾಡಕ್ಟ್ಗಳಲ್ಲಿ ಬಳಸಲಾಗುತ್ತದೆ. ಸ್ವಲ್ಪ ಪಟಿಕಾವನ್ನು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಕುಟಾಣಿಯಲ್ಲಿ ಚೆನ್ನಾಗಿ ಪುಡಿ ಮಾಡಿಕೊಂಡರೆ ಉತ್ತಮ. ರಿಂಕಲ್ಸ್ ಮತ್ತು ಕಲೆಯನ್ನು ಹೋಗಲಾಡಿಸುತ್ತದೆ.
ಈ ಪಟಿಕಾ ನಮ್ಮ ಸ್ಕಿನ್ ಅನ್ನು ಟೈಟ್ ಕೂಡ ಮಾಡುತ್ತದೆ. ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ನಷ್ಟು ಪಟಿಕಾವನ್ನು ತೆಗೆದುಕೊಂಡು ಇದಕ್ಕೆ ಒಂದು ಟೇಬಲ್ ಸ್ಪೂನ್ನಷ್ಟು ಅರಿಶಿನ ಪುಡಿ ಮತ್ತು ಒಂದು ಟೇಬಲ್ ಸ್ಪೂನ್ನಷ್ಟು ಗ್ಲಿಸರಿನ್ ಅನ್ನು ಸೇರಿಸಬೇಕು. ಮುಖದಲ್ಲಿರುವ ಕಪ್ಪು ಕಲೆಯನ್ನು ಗ್ಲಿಸರಿನ್ ತೆಗೆದು ಹಾಕುತ್ತದೆ. ಒಂದು ಟೇಬಲ್ ಸ್ಪೂನ್ನಷ್ಟು ಜೇನುತುಪ್ಪವನ್ನು ಮಿಕ್ಸ್ ಮಾಡಬೇಕು.
ಜೇನುತುಪ್ಪವನ್ನು ಪ್ರಕೃತಿದತ್ತವಾಗಿ ಸಿಗುವ ಅಮೃತವೆಂದೇ ಹೇಳಬಹುದು. ಇದು ಮುಖದಲ್ಲಿರುವ ಸುಕ್ಕನ್ನು ಹೋಗಲಾಡಿಸುತ್ತದೆ. ಮತ್ತು ನ್ಯಾಚುರಲ್ ಆಗಿ ನಮ್ಮ ಸ್ಕಿನ್ ಅನ್ನು ಬ್ಲೀಚ್ ಮಾಡುತ್ತದೆ. ವಿಟಮಿನ್ ಟ್ಯಾಬ್ಲೆಟ್ ಅನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು. ಈ ಮಾತ್ರೆಯಲ್ಲಿ ಆಟಿಆಕ್ಸಿಡೆಂಟ್ಗಳು ಇವೆ, ಇದು ನಮ್ಮ ಸ್ಕಿನ್ ಡ್ಯಾಮೇಜ್ ಆಗುವುದನ್ನು ತಪ್ಪಿಸುತ್ತದೆ.
ಕಪ್ಪು ಕಲೆಯನ್ನು ಹೋಗಲಾಡಿಸಿ ಸ್ಕಿನ್ ಸಾಫ್ಟ್ ಆಗುವ ರೀತಿ ಮಾಡುತ್ತದೆ. ಜೊತೆಗೆ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಇರುತ್ತದೆ. ಆ ಕಲೆಯನ್ನ ಹೋಗಲಾಡಿಸುತ್ತದೆ. ಒಂದು ಸ್ಪೂನ್ನಷ್ಟು ಅಲೋವೆರಾವನ್ನು ಸೇರಿಸಬೇಕು. ಅಲೋವೆರಾವು ಸ್ಕಿನ್ನಲ್ಲಿರುವ ಕಪ್ಪುಕಲೆಗಳನ್ನು ಹೋಗಲಾಡಿಸಿ ಡೆಡ್ ಸೆಲ್ಗಳನ್ನು ತೆಗೆದು ಹಾಕುತ್ತದೆ. ಕೆಲವರಿಗೆ ಮುಖದಲ್ಲಿ ಅಲರ್ಜಿ ಉಂಟಾಗುತ್ತಿರುತ್ತದೆ
ಅಂತಹವರು ಇಂತಹ ಮನೆಮದ್ದನ್ನು ಬಳಸುವುದರಿಂದ ಅಲರ್ಜಿ ಕಡಿಮೆಯಾಗುತ್ತದೆ. ಇದನ್ನು ಹೇಗೆ ಅಪ್ಲೈ ಮಾಡಬೇಕೆಂದರೆ ಮುಖವನ್ನು ನೀಟಾಗಿ ವಾಶ್ ಮಾಡಿ ನಿಮ್ಮ ಬೆರಳುಗಳಿಂದ ಅಥವಾ ಹತ್ತಿಯಿಂದ ಲೈಟಾಗಿ ಅಚ್ಚಬೇಕು. ಕಣ್ಣಿಗೆ ಅಪ್ಲೈ ಮಾಡಬೇಡಿ. ಎರಡು ಮೂರು ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ. ಮುಖ ತೊಳೆಯುವಾಗ ಯಾವುದೇ ರೀತಿಯ ಫೇಸ್ ವಾಶ್ ಬಳಸಬೇಡಿ. ಆಯಿಲ್ ಸ್ಕಿನ್ ಇರುವವರು ಈ ಮನೆಮದ್ದನ್ನು ಬಳಸಬಹುದು. ಮುಖ ಕಾಂತಿಯುಕ್ತವಾಗುತ್ತದೆ.