ಕಂಡರೆ ಶುಭ ಶಕುನ ಈ ಏಳು ಅಂಶಗಳು ಕಂಡರೆ ಅಪಶಕುನ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ನಾವು ಪ್ರಯಾಣ ಮಾಡುತ್ತಿರುವ ಉದ್ದೇಶ ಕಾರ್ಯ ಯಶಸ್ಸು ಸಿಗುತ್ತದೆಯೋ ಅಥವಾ ಏನಾದರೂ ಅಪಘಾತಗಳು ಹಾನಿಗಳು ಎದುರಾಗುತ್ತದೆಯೋ ಎಂದು ಮುಂಚಿತವಾಗಿ ತಿಳಿಯಲು ಹಿಂದೂ ಶಾಸ್ತ್ರ ಗ್ರಂಥಗಳ ಪ್ರಕಾರ ಪ್ರಯಾಣ ಮಾಡುವಾಗ ಎದುರಾಗುವ
ಕೆಲವು ಶುಭ ಹಾಗೂ ಅಶುಭ ಸೂಚನೆಯ ಅಂಶಗಳನ್ನು ಗಮನಿಸಿಕೊಂಡು ಹಾಗೂ ಪರಿಗಣನೆಗೆ ತೆಗೆದುಕೊಂಡು ಪ್ರಯಾಣದ ಕೊನೆಯಲ್ಲಿ ಅಗುವ ಶುಭ ಶಕುನ ಅಥವಾ ಅಪಶಕುನದ ಮಾಹಿತಿಯನ್ನು ಮೊದಲೇ ತಿಳಿಯಬಹುದಾಗಿದೆ ಹಾಗಾಗಿ ಪ್ರಯಾಣ ಮಾಡುವಾಗ ಶುಭ ಮತ್ತು ಶುಭ ಸೂಚನೆಯ ಅಂಶಗಳನ್ನು ಈಗ ಒಂದೊಂದಾಗಿ ನೋಡೋಣ ಪ್ರಯಾಣ ಮಾಡುವಾಗ ಶುಭ ಸೂಚನೆ ಅಂಶಗಳು
1 ಪ್ರಯಾಣ ಮಾಡುವಾಗ ಗಂಧ ಅರಿಶಿಣ ಹೂ ಹಣ್ಣು ಹಾಲು ಮೊಸರು ಇವುಗಳು ಕಂಡರೆ ಶುಭ ಶಕುನವಾಗಿದೆ
2 ಆನೆ ಎತ್ತು ಕುದುರೆಗಳು ಎದುರು ಬಂದರೆ ಶುಭ ಶಕುನವಾಗಿದೆ 3 ಚತ್ರ ಚಾಮರಗಳು ಚಿನ್ನ ಬೆಳ್ಳಿ ರತ್ನಗಳು ಆಯುಧಗಳು ಇವುಗಳಲ್ಲಿ ಯಾವುದಾದರೂ ಕಂಡು ಬಂದರೆ ಶುಭ ಶಕುನವೆಂದು ತಿಳಿಯಬೇಕು
4 ಪ್ರಯಾಣ ಮಾಡುವಾಗ ಗಂಟೆ ಶಬ್ದ ವೀಣೆ ವಾದ್ಯ ಪಿಟೀಲು ನಾಗಸ್ವರ ಸಂಗೀತಗಳು ಕೇಳುತ್ತಿದ್ದರೆ ಶುಭಕರವೆಂದು ಅರ್ಥ 5 ವೇದ ಶಾಸ್ತ್ರಗಳ ಪಟನೆ ಕೇಳುತ್ತಿರುವುದು ವೃದ್ಧ ಸುಹಾಸಿನಿಯರು ಹಾಡುತ್ತಿರುವುದು ಮಕ್ಕಳು ಆಡುತ್ತಿರುವ ಸದ್ದು ಕೇಳುವುದು ಹಿರಿಯರ ಆಶೀರ್ವಾದ ಪ್ರೀತಿ ನುಡಿ ಕೇಳುವುದು ಇನ್ನು ಎಲ್ಲಾ ವಿಧಗಳಿಂದ ಒಳ್ಳೆಯ ಸುದ್ದಿ ಕೇಳುವುದು ಶುಭಕರವೆಂದು ಅರ್ಥ
6 ಗಿಣಿ ಕಾಗೆ ಪಕ್ಷಿ ಕೊಕ್ಕರೆ ಇವುಗಳಲ್ಲಿ ಯಾವುದಾದರೂ ಎಡಗಡೆಯಿಂದ ಬಲಕ್ಕೆ ಹೋಗುವುದು ಹಾಗೂ ಗೂಬೆ ಗರುಡ ಮುಂಗಸಿ ನಾಯಿ ಇವುಗಳು ಬಲಗಡೆಯಿಂದ ಎಡಕ್ಕೆ ಹೋಗುವುದು ಕಂಡರೆ ಶುಭವಾಗುತ್ತದೆ
7 ಹಲ್ಲಿಯು ಧ್ವನಿ ಮಾಡುವುದು ಕೋಗಿಲೆ ಕೂಗುವುದು ಕೇಳಿದರೆ ಪ್ರಯಾಣ ಮಾಡುವ ಉದ್ದೇಶ ಕಾರ್ಯ ಈಡೇರುವ ಜೊತೆಗೆ ಶುಭಪ್ರಾಪ್ತಿಯಾಗುತ್ತದೆ
ಪ್ರಯಾಣ ಮಾಡುವಾಗ ಅಶುಭ ಸೂಚನೆಯ ಅಂಶಗಳು 1 ಪ್ರಯಾಣ ಮಾಡುವಾಗ ಕಟ್ಟಿಗೆ ಹೊರೆ ಜಗಳ ಆಡುತ್ತಿರುವುದು ಅಳುತ್ತಿರುವುದು ಕಂಡರೆ ಅಶುಭ ಸೂಚನೆಯಾಗಿದೆ 2 ಧಾರಾಕಾರ ಮಳೆ ಸುಂಟರಗಾಳಿ ಸಿಡಿಲು ಗುಡುಗು ಎದುರಾದರೆ ಅಶುಭ ಸೂಚನೆಯಾಗಿದೆ
3 ಭಯಾನಕ ಧ್ವನಿ ವಿಕಾರವಾದ ಧ್ವನಿಯಲ್ಲಿ ಪ್ರಾಣಿಗಳು ಕೂಗುವುದು ಕಂಡು ಬಂದರೆ ಅಶುಭ ಸೂಚನೆಯಾಗಿದೆ
4 ಗಿಡುಗ ಗರುಡ ನಾಯಿ ಗೂಬೆ ಮುಂಗುಸಿ ಇವುಗಳು ಎಡದಿಂದ ಬಲಕ್ಕೆ ಹೋಗುವುದು ಹಾಗೂ ಕಾಗೆ ಗಿಣಿ ನರಿ ಬೇಕ್ಕು ಕೊಕ್ಕರೆ ಇತ್ಯಾದಿಗಳು ಬಲದಿಂದ ಎಡಕ್ಕೆ ಹೋಗುವುದು ದೋಷ ಎಂದು ತಿಳಿಯಬೇಕು 5 ಪ್ರಯಾಣಕ್ಕೆ ಹೊರಟಾಗ ಮಕ್ಕಳಾಗಲಿ ಮನೆಯಲ್ಲಿ ಸಾಕಿದ ಪ್ರಾಣಿಯಾಗಲಿ
ಬಟ್ಟೆಯನ್ನು ಹಿಡಿದು ಎಳೆದರೆ ನಿಲ್ಲಿಸಿದಂತೆ ಮಾಡಿದರೆ ಅಶುಭ ಎಂದು ಅರ್ಥ 6 ಪ್ರಯಾಣ ಮಾಡುವವನಿಗೆ ಯಾರಾದರೂ ಹೋಗಬೇಡ ಎನ್ನುವುದು ನಾನು ಜೊತೆಯಲ್ಲಿ ಬರುತ್ತೇನೆ ಎಂದು ಹಠ ಮಾಡುವುದು ಅಶುಭ ಎಂದು ಅರ್ಥ 7 ಪ್ರಯಾಣಿಕೆ ಹೊರಟವನಿಗೆ ಊಟ ಮಾಡಿಕೊಂಡು ಹೋಗು ದೂರ ಹೊರಟಿರುವೆ ಎಂದು ಕೇಳುವ ಬದಲು ಎಲ್ಲಿಗೆ ಹೋಗುತ್ತಿರುವೆ ಎಂದು ಕೇಳುವುದು ಅಪಶಕುನ ಎಂದು ತಿಳಿಯಬೇಕು