ಪೂಜೆ ಮಾಡುವಾಗ ಆಕಳಿಕೆ ಮತ್ತು ಕಣ್ಣೀರು ಬಂದರೆ ದೇವತೆಗಳು ಈ ಸಂಕೇತ ಕೊಡುತ್ತಾರೆ.. ಯಾವಾಗ ನೀವು ಪೂಜೆಯನ್ನ ಮಾಡ್ತೀರೋ ನಿಮಗೆ ಆಕಳಿಕೆ ಬರುತ್ತದೆ, ಕಣ್ಣುಗಳಲ್ಲಿ ನೀರು ಬರಲು ಶುರುವಾಗುತ್ತದೆ. ಶರೀರವು ನಡುಗಲು ಶುರುಮಾಡುತ್ತದೆ. ಮತ್ತು ಈ ಸ್ಥಿತಿಯಲ್ಲಿ ನಿಮಗೆ ತುಂಬಾ ಒಳ್ಳೆಯ ಅನುಭವ ಕೂಡ ಆಗುತ್ತದೆ. ಯಾವಾಗ ಈ ರೀತಿಯ ವಿಷಯಗಳು ನಿಮ್ಮೊಡನೆ ನಡೆಯಲು ಶುರುವಾಗುತ್ತವೆಯೋ ಇಲ್ಲಿ ಇನ್ನಷ್ಟು ಪೂಜೆ ಮಾಡಲು ಮನಸ್ಸಾಗುತ್ತದೆ.
ದೇವರ ಮೇಲಿರುವಂತ ಶ್ರದ್ಧೆ, ಭಕ್ತಿ ಇನ್ನಷ್ಟು ಹೆಚ್ಚಾಗಲು ಶುರುವಾಗುತ್ತದೆ. ಇಲ್ಲಿ ಆಕಳಿಕೆ ಬರೋದಾಗ್ಲೀ ಅಥವಾ ಕಣ್ಣಿನಲ್ಲಿ ನೀರು ಬರುವುದು ಇವೆಲ್ಲಾ ಯಾಕೆ ಬರುತ್ತವೆ, ಇವುಗಳ ಹಿಂದೆ ಇರುವ ಕಾರಣ ಆದ್ರೂ ಏನಿದೆ? ನಿಮ್ಮ ಮೇಲೆ ಏನಾದ್ರೂ ನಕಾರಾತ್ಮಕ ಶಕ್ತಿಗಳ ಪ್ರಭಾವ ಇದೆಯಾ, ಇವುಗಳ ಕಾರಣದಿಂದ ಕಣ್ಣುಗಳಲ್ಲಿ ನೀರು ಬರುತ್ತಿದೆಯಾ ಅಥವಾ ಆಕಳಿಕೆ ಬರುತ್ತಾ..
ಹಲವಾರು ಜನರು ಈ ರೀತಿ ಯೋಚನೆ ಮಾಡಿ ಪೂಜೆ ಮಾಡೋದನ್ನೇ ಬಿಟ್ಟು ಬಿಟ್ಟಿರ್ತಾರೆ ಅಥವಾ ಮಂತ್ರ ಜಪಗಳನ್ನ ಬಿಟ್ಟಿರ್ತಾರೆ. ನಕಾರಾತ್ಮಕ ಶಕ್ತಿಗಳ ಪ್ರಭಾವ ತಮ್ಮ ಮೇಲೆ ಇದ್ದಾಗ ಈ ರೀತಿಯಾದ ಆಕಳಿಕೆಗಳು ಬರುತ್ತವೆ ಅಂತ ಅವರು ಅರ್ಥ ಮಾಡ್ಕೊಂಡಿರ್ತಾರೆ. ಇದರಿಂದ ಯಾವ ಪೂಜೆಯ ಫಲ ಇವರಿಗೆ ಸಿಗಬೇಕಾಗಿರುತ್ತದೆಯೋ ಆ ಫಲ ಇವರಿಗೆ ಸಿಕ್ತಾ ಇರೋದಿಲ್ಲ.
ಹಾಗಾಗಿ ಇಂದು ನಾ ನಿಮ್ಗೆ ಪೂಜೆ ಮಾಡುವಂತ ಸಮಯದಲ್ಲಿ ಬರುವಂತ ಆಕಳಿಕೆ ಬಗ್ಗೆ ಆಗ್ಲಿ ಅಥವಾ ಯಾಕೆ ಕಣ್ಣೀರು ಬರುತ್ತವೆ ಇವುಗಳ ಹಿಂದೆ ಇರುವಂತೆ ಕಾರಣ ಮತ್ತು ರಹಸ್ಯವನ್ನ ತಿಳಿಸಿಕೊಡ್ತೀನಿ. ಈ ನನ್ನ ಮಾತುಗಳನ್ನ ಪೂರ್ತಿಯಾಗಿ ಕೇಳಿರಿ. ಇದರಿಂದ ಎಲ್ಲಾ ವಿಷಯಗಳು ನಿಮಗೆ ಪೂರ್ತಿಯಾಗಿ ಅರ್ಥ ಆಗುತ್ತವೆ. ಮೊದಲನೆಯ ಮಾತನ್ನ ನೀವು ತುಂಬಾ ಗಮನವಿಟ್ಟು ಕೇಳಿರಿ.
ಮನುಷ್ಯನಿಗೆ ಪೂಜೆ ಮಾಡುವಂತ ಸಮಯದಲ್ಲಿ ಆಕಳಿಕೆ ಬರೋದಾಗ್ಲೀ ಅಥವಾ ಕಣ್ಣುಗಳಲ್ಲಿ ನೀರು ಬರುವುದು ಯಾವುದೇ ರೀತಿಯ ನಕಾರಾತ್ಮಕ ವಿಷಯವಲ್ಲ. ಇಲ್ಲಿ ಆಕಳಿಕೆ ಬರಲು ಮುಖ್ಯವಾದ ಕಾರಣ ಏನಿದೆ ಅಂದ್ರೆ ಒಂದ್ ವೇಳೆ ದೇವರ ಮೇಲೆ ನಿಮಗೆ ಪೂರ್ತಿಯಾದ ನಂಬಿಕೆ ಇದ್ದು, ಶೃದ್ಧಾ ಭಾವನೆ ಏನಾದ್ರೂ ಇದ್ರೆ ಯಾವಾಗ ನಿಮ್ಮ ಇಷ್ಟ ದೇವರ ಫೋಟೋ ಆಗ್ಲೀ ಅಥವಾ ಮೂರ್ತಿ ನಿಮ್ಮ ಮುಂದೆ ಇರುತ್ತದೆಯೋ,
ಅವರೊಂದಿಗೆ ನೀವೇನಾದ್ರೂ ಒಂದು ಪ್ರೀತಿಯ ಸಂಬಂಧ ಅಂದ್ರೆ ಅವರನ್ನ ತಾಯಿಯಾಗಿ ಕಾಣ್ತಾ ಇರ್ತೀರ ತಂದೆಯ ಸಮಾನವಾಗಿ ಕಾಣ್ತಾ ಇರ್ತೀರಾ. ಯಾವಾಗ ಇಂತ ಪವಿತ್ರವಾದ ಸಂಬಂಧವನ್ನ ನೀವು ದೇವರೊಂದಿಗೆ ಮಾಡ್ತೀರಾ ಆಗ ನಿಮ್ಮ ಮನಸ್ಸಿನಲ್ಲಿ ಮುಂದಿರುವಂತಹ ಫೋಟೋ ಆಗ್ಲೀ, ಮೂರ್ತಿಯಾಗಲಿ ನಿಮ್ಮ ಮನಸ್ಸಿನಲ್ಲಿ ಸಜೀವಿಯಾಗಿ ಬಿಡುತ್ತದೆ.
ಯಾವಾಗ ಅದು ಸಜೀವವಾಗುತ್ತದೆಯೋ ಆಗ ನೀವು ನಿಮ್ಮ ಮನಸ್ಸಿನಲ್ಲಿ ಭಾವನೆಗಳಿಂದ ಯಾವಾಗ ಅವರ ಸೇವೆ ಪೂಜೆಯನ್ನ ಮಾಡ್ತೀರೋ ಇಲ್ಲಿ ನಿಮಗೆ ಆಕಳಿಕೆಗಳು ಬರುತ್ತವೆ. ಕಣ್ಣುಗಳಲ್ಲಿ ನೀರು ಸಹ ಬರುತ್ತದೆ. ಇಲ್ಲಿ ದೇವರ ಮೇಲೆ ಅದೆಷ್ಟು ದೊಡ್ಡದಾಗಿರುವ ಪ್ರೀತಿ ಶ್ರದ್ಧೆ ಭಕ್ತಿ ಉತ್ಪತ್ತಿಯಾಗುತ್ತದೆ ಅಂದ್ರೆ ಇಲ್ಲಿ ನಿಮ್ಮ ಮನಸ್ಸಿನಲ್ಲಿರುವಂತಹ ಎಲ್ಲಾ ವಿಷಯಗಳನ್ನ,
ಮಾತುಗಳನ್ನ ಅವರ ಬಳಿ ಅಂದ್ರೆ ದೇವರ ಬಳಿ ಹೇಳಿಬಿಡ್ತೀರಾ, ಇಲ್ಲಿ ಏನೇ ವಿಷಯಗಳಿದ್ದರೂ ಎಲ್ಲವನ್ನ ನೀವು ದೇವರ ಬಳಿ ಹೇಳಿಬಿಡ್ತೀರ. ಜೊತೆಗೆ ಹಲವಾರು ಜನರೊಂದಿಗೆ ಯಾವ ರೀತಿಯಾಗಿ ಘಟನೆಗಳು ನಡೆಯುತ್ತವೆ ಅಂದ್ರೆ ಯಾವಾಗ ಅವರು ಈ ಸ್ಥಿತಿಗೆ ಬಂದು ತಲುಪುತ್ತಾರೋ ಅವರಿಗೆ ಆಕಳಿಕೆ ಬರುತ್ತದೆ, ಕಣ್ಣುಗಳಲ್ಲಿ ನೀರು ಬರುತ್ತವೆ. ಯಾವಾಗ ಅವರು
ತಮ್ಮ ತೊಂದರೆಗಳನ್ನ ಕಷ್ಟಗಳನ್ನ ದೇವರ ಮುಂದೆ ಇಟ್ಟು ಬಿಡ್ತಾರೋ, ಅವುಗಳಿಗೆ ಇರುವಂತ ಸೊಲ್ಯೂಶನ್ ಕೂಡ ಅವರ ಮನಸ್ಸಿನಲ್ಲಿ ಅವರಿಗೆ ಸಿಕ್ಕಿಬಿಡುತ್ತದೆ. ಇಲ್ಲಿ ನಿಮ್ಮಲ್ಲಿರುವಂತ ಶ್ರದ್ಧೆ ಭಕ್ತಿಯ ಜೊತೆಗೆ ನಿಮ್ಮ ಮನಸ್ಸಿನಲ್ಲಿ ಆ ದೇವರ ಸಲುವಾಗಿ ಎಷ್ಟು ಶ್ರದ್ಧೆ ಭಕ್ತಿ ಹುಟ್ಟುತ್ತದೆ ಅಂದ್ರೆ ಇದರಿಂದ ನಿಮ್ಮ ಕಣ್ಣುಗಳಲ್ಲಿ ನೀರು ಬರುತ್ತವೆ.
ತುಂಬಾ ಅತ್ತು ಬಿಡಲು ಮನಸ್ಸಾಗುತ್ತದೆ. ಇಲ್ಲಿ ಆಕಳಿಕೆ ಬರಲು ಹಲವಾರು ರೀತಿಯ ಕಾರಣಗಳು ಸಹ ಇರುತ್ತವೆ. ಇವು ಕೇವಲ ಸಕಾರಾತ್ಮಕ ಕಾರಣಗಳು ಮಾತ್ರ ಇರುತ್ತವೆ. ಯಾವುದೇ ರೀತಿಯ ನಕಾರಾತ್ಮಕ ಕಾರಣಗಳು ಆಕಳಿಕೆಯಲ್ಲಿ ಇರೋದಿಲ್ಲ. ಯಾವಾಗ ನೀವು ನಿಮ್ಮ ಜ್ಞಾನವನ್ನು ಕೇಂದ್ರೀಕರಿಸುತ್ತಿರೋ, ನಿಮ್ಮ ಆಜ್ಞಾಚಕ್ರದ ಮೇಲೆ ಏನಾದ್ರೂ ನಿಮ್ಮ ಜ್ಞಾನವನ್ನು
ಕೇಂದ್ರೀಕರಿಸುತ್ತಿರೋ ಅಥವಾ ಯಾವುದಾದರೂ ಒಂದು ಬಿಂದುವಿನ ಮೇಲೆ ನಿಮ್ಮ ಜ್ಞಾನವನ್ನು ಕೇಂದ್ರೀಕರಿಸಿದ್ರೆ ಇಲ್ಲಿ ಹಲವಾರು ಯಾವ ರೀತಿಯ ವಿಷಯಗಳು ಇರುತ್ತವೆ ಅಂದ್ರೆ, ಅವು ನಿಮ್ಮ ಆಜ್ಞಾಚಕ್ರದ ಸುತ್ತಲೂ ತಿರುಗುತ್ತಿರುತ್ತವೆ. ಇಲ್ಲಿ ನಿಮಗೆ ಭಿನ್ನ ಭಿನ್ನ ವಿಚಾರಗಳು ಕಾಣಲು ಶುರುವಾಗಿರುತ್ತವೆ. ಇವು ನಿಮ್ಮ ವಿಚಾರಗಳಾಗಿರುತ್ತವೆ,
ಯೋಚನೆಗಳಾಗಿರುತ್ತವೆ ಸಂಬಂಧಿಕರಿರಬಹುದು, ಅಕ್ಕಪಕ್ಕದವರಿರಲಿ, ಹಳೆದಾಗೆ ನಡೆದಿರುವಂತಹ ಘಟನೆಗಳಾಗಲಿ, ಮುಂಬರುವಂತ ನಡೆವ ಘಟನೆಗಳ ಬಗ್ಗೆ ನಿಮಗೆ ಹಲವಾರು ವಿಚಾರಗಳು ನೋಡಲು ಸಿಗುತ್ತವೆ ಮತ್ತು ಕೇಳಲು ಸಿಗುತ್ತವೆ. ಯಾವಾಗ ನೀವು ನಿಧಾನವಾಗಿ ಜ್ಞಾನವನ್ನು ಕೇಂದ್ರೀಕರಿಸಲು ಶುರು ಮಾಡ್ತೀರೋ ಇಲ್ಲಿ ಒಂದು ಯಾವ ರೀತಿಯ ಸ್ಥಿತಿ ನಿಮ್ಮ ಮುಂದೆ ಬರುತ್ತದೆ ಅಂದ್ರೆ ನೀವು ನಿಮ್ಮ ಆ ಬಿಂದುವಿನ ಮೇಲೆ ಅಥವಾ ಆಜ್ಞಾಚಕ್ರದ ಮೇಲೆ ಪೂರ್ತಿ ಯಾಗಿ ಜ್ಞಾನವನ್ನು ಕೇಂದ್ರೀಕರಿಸಬಹುದು.
ಯಾವಾಗ ನಿಮ್ಮ ಪೂರ್ಣ ಜ್ಞಾನವು ಆಜ್ಞಾಚಕ್ರದ ಮೇಲೆ ಬರುತ್ತದೆಯೋ ಆ ಸಮಯದಲ್ಲಿ ನಿಮಗೆ ಆಕಳಿಕೆಗಳು ಬರುತ್ತವೆ. ಎರಡನೇ ಕಾರಣ ಏನಿದೆ ಅಂದ್ರೆ ಯಾವಾಗ ನಿಮ್ಮ ಇಷ್ಟ ದೇವರೊಂದಿಗೆ ನೀವು ಆಳವಾದ ಭಾವ ಅಥವಾ ಒಂದು ಸಂಬಂಧವನ್ನ ನೀವು ಇಷ್ಟ ದೇವರೊಂದಿಗೆ ನೀವು ಮಾಡ್ತಿರೋ, ಇದರಿಂದ ನಿಮಗೆ ಆಕಳಿಕೆಗಳು, ಕಣ್ಣುಗಳಲ್ಲಿ ನೀರು ಬರುತ್ತವೆ.
ನೀವು ಸಹ ಎಲ್ಲಾದ್ರೂ ದೇವಸ್ಥಾನಗಳಿಗೆ ಅಥವಾ ದೇವರಿದ್ದಲ್ಲಿ ನೀವು ಹೋದಾಗ ನೀವು ನೋಡಿರ್ತೀರ ಕೆಲವು ಜನರ ಮೈಮೇಲೆ ದೇವರುಗಳು ಬಂದಿರ್ತಾರೆ. ಆ ದೇವರುಗಳು ಬರುವ ಮುನ್ನ ಅವರಿಗೆ ಆಕಳಿಕೆಗಳು ಬರಲು ಶುರುವಾಗಿರುತ್ತವೆ. ಕೆಲವು ಜನರ ಕಣ್ಣುಗಳಲ್ಲಿ ನೀರು ಬರುತ್ತವೆ. ಈ ರೀತಿ ಯಾಕೆ ಆಗುತ್ತದೆ ಗೊತ್ತಾ.. ಶರೀರದಲ್ಲಿ ಇರುವಂತ ಮೂಲಾಧಾರ ಚಕ್ರವು ಅಂದ್ರೆ ಯಾವುದೇ ರೀತಿಯ ಶಕ್ತಿಗಳು
ಶರೀರವನ್ನ ಪ್ರವೇಶ ಮಾಡಿದಾಗ ಯಾವಾಗ ಶರೀರದಲ್ಲಿ ಸಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುತ್ತವೆಯೋ, ಒಂದು ವೇಳೆ ದೇವಾನುದೇವತೆಗಳ ತರಂಗಗಳು ಶರೀರವನ್ನು ಪ್ರವೇಶ ಮಾಡಿದ್ರೆ ಎಲ್ಲಕ್ಕಿಂತ ಮೊದಲು ಮೂಲಾಧಾರ ಚಕ್ರವನ್ನ ಅವು ಆಕ್ಟಿವೇಟ್ ಮಾಡುತ್ತವೆ. ಅದನ್ನ ಜಾಗೃತ ವ್ಯವಸ್ಥೆಗೆ ತರುತ್ತವೆ. ಆ ಸಮಯದಲ್ಲಿ ಮೂಲಾಧಾರ ಚಕ್ರವು ಪೂರ್ಣವಾಗಿ ಯಾವ ರೀತಿಯ
ಕಾರ್ಯವನ್ನು ಮಾಡುತ್ತದೆ ಅಂದ್ರೆ ನೀವು ಸಹ ನೋಡಿರಬಹುದು. ಯಾವಾಗ ಮೋಟರ್ ತಿರುಗುತ್ತದೆಯೋ ಎರಡು ಚುಂಬಕಗಳು ಇರುತ್ತವೆ. ಯಾವಾಗ ಈ ಎರಡು ಚುಂಬಕಗಳ ನಡುವೆ ಮೋಟಾರ್ ತಿರುಗುತ್ತದೆಯೋ ರೋಟೇಟ್ ಮಾಡುತ್ತದೆಯೋ ಅಂದರೆ ಮಧ್ಯದಲ್ಲಿ ನೀವು ಮೋಟರನ್ನ ಇಟ್ಟು ಅದರ ಅಕ್ಕ ಪಕ್ಕದಲ್ಲಿ ಎರಡು ಚುಂಬಕಗಳನ್ನ ಅಂದ್ರೆ ಅಯಸ್ಕಾಂತಗಳನ್ನ ಇಟ್ಟರೆ
ಆಗ ಅದು ತಿರುಗಲು ಶುರುಮಾಡುತ್ತದೆ. ಅದೇ ರೀತಿಯಾಗಿ ಇರುತ್ತದೆ ಇಲ್ಲಿ ಯಾವಾಗ ನಿಮ್ಮ ಮೂಲಾಧಾರ ಚಕ್ರದ ಮೇಲೆ ದೇವಾನುದೇವತೆಗಳ ತರಂಗಗಳು ಬರುತ್ತವೆಯೋ ಅಂದರೆ ಆಕರ್ಷಣೆ ಆಗುತ್ತವೆಯೋ ಆಗ ಆ ಮೂಲಾಧಾರ ಚಕ್ರವು ಜಾಗೃತ ವ್ಯವಸ್ಥೆಗೆ ಬರುತ್ತದೆ. ಅಂದರೆ ಆಕ್ಟಿವೇಟ್ ಆಗುತ್ತದೆ. ನಂತರ ಅದು ತಿರುಗಲು ಶುರುಮಾಡುತ್ತದೆ. ಈ ಒಂದು ಕಾರಣದಿಂದಾಗಿ ನಿಮಗೆ ಆಕಳಿಕೆಗಳು ಬರಲು ಶುರುವಾಗುತ್ತವೆ.
ಯಾವಾಗ ದೈವಿಕ ತರಂಗಗಳು ನಿಮ್ಮ ಮೂಲಾಧಾರಕ್ಕೆ ಸ್ಪರ್ಶವಾಗುತ್ತವೆಯೋ, ಯಾವುದೇ ಪ್ರಕಾರದಲ್ಲಿ ಇರಲಿ, ಕೆಲವರಿಗೆ ಭಜನೆ ಮಾಡುವಾಗ ಆಕಳಿಕೆಗಳು ಬರುತ್ತವೆ. ಮಂತ್ರ ಜಪ ಮಾಡಿದಾಗ ದೊಡ್ಡದಾಗಿರುವ ಆಕಳಿಕೆಗಳು ಬರುತ್ತವೆ. ಯಾವ ಸ್ಥಾನದಲ್ಲಿ ಅವರು ಮಂತ್ರ ಜಪ ಮಾಡಿರ್ತಾರೋ ಅಥವಾ ಯಾವ ಸ್ಥಾನವು ಸಕಾರಾತ್ಮಕ ಶಕ್ತಿಯ ಪ್ರತೀಕವಾಗಿರುತ್ತದೆಯೋ
ಆ ಸ್ಥಾನದಲ್ಲಿ ನೀವೇನಾದರೂ ಪೂಜೆ ಮಾಡಿದ್ರೆ, ಪೂಜೆ ಮಾಡುವಾಗ ನೀವೇನಾದರೂ ಕೆಲವು ಮಂತ್ರಗಳನ್ನು ಜಪ ಮಾಡಿದ್ರೆ, ಆ ಸ್ಥಾನದಲ್ಲಿ ಮಂತ್ರಗಳ ಶಕ್ತಿ ಇರುತ್ತದೆ. ಯಾವಾಗ ನೀವು ಆ ಸ್ಥಾನಕ್ಕೆ ಹೋಗ್ತಿರೋ ಆಗಲೂ ದೊಡ್ಡದಾಗಿರುವ ಆಕಳಿಕೆಗಳು ಬರುತ್ತವೆ. ಈ ರೀತಿ ಯಾಕೆ ಬರುತ್ತವೆ ಅಂದ್ರೆ ಆ ದೇವರ ಶಕ್ತಿಗಳನ್ನ ಮೂಲಾಧಾರ ಚಕ್ರವು ಅಂದರೆ ಆ ದೇವರ ಶಕ್ತಿಯ ತರಂಗಗಳನ್ನ ಮೂಲಾಧಾರ ಚಕ್ರವು ಆಕರ್ಷಣೆ ಮಾಡುತ್ತದೆ. ಇದರಿಂದ ಅದು ಜಾಗೃತ ವ್ಯವಸ್ಥೆಗೆ ಬಂದಾಗ
ನಿಮಗೆ ಆಕಳಿಕೆಗಳು ಬರಲು ಶುರುವಾಗುತ್ತವೆ. ಯಾವಾಗ ದೇವರು ಮೈ ಮೇಲೆ ಬರೋದಿರುತ್ತದೆಯೋ, ಯಾಕೆಂದರೆ ಯಾವುದೇ ಶಕ್ತಿ ಬಂದರೂ ಮೂಲಾಧಾರ ಚಕ್ರದ ಮೇಲೆ ಸ್ಥಿರವಾಗುತ್ತದೆ. ಈ ಒಂದು ಕಾರಣದಿಂದಾಗಿ ಭಕ್ತರಾಗಲಿ ಅಥವಾ ವ್ಯಕ್ತಿಗೆ ಆಕಳಿಕೆಗಳು ಬರುತ್ತವೆ. ಹೆಚ್ಚಾಗಿ ಯಾವ ವ್ಯಕ್ತಿಗಳು ಮಂತ್ರ ಜಪಗಳನ್ನ ಮಾಡ್ತಾರೋ, ಪೂಜೆ ಪಾಠಗಳನ್ನ ಮಾಡ್ತಾರೋ ಅಂತಹ ವ್ಯಕ್ತಿಗಳಲ್ಲಿ
ಮೂಲಾಧಾರ ಚಕ್ರವು ಜಾಗೃತ ವ್ಯವಸ್ಥೆಗೆ ಬರುತ್ತದೆ, ಪೂರ್ಣವಾಗಿ ಆಕ್ಟಿವೇಟ್ ಕೂಡ ಆಗುತ್ತದೆ. ಜೊತೆಗೆ ಯಾರು ನಿರಂತರವಾಗಿ ಧ್ಯಾನಗಳನ್ನ ಮಾಡ್ತಾ ಇರ್ತಾರೋ ಅವರಲ್ಲಿ ಸಹ ಮೂಲಾಧಾರ ಚಕ್ರ ಅಕ್ಟಿವೇಟ್ ಆಗಿರುತ್ತದೆ. ಇದರಿಂದ ಅವರಿಗೆ ಆಕಳಿಕೆಗಳು ಬರುತ್ತವೆ. ಈ ಮಾಹಿತಿ ಇಷ್ಟವಾದರೆ ಓಂ ನಮಃ ಶಿವಾಯ ಹರ ಹರ ಮಹಾದೇವ ಅಂತ ಕಮೆಂಟ್ ನಲ್ಲಿ ಬರೆಯಿರಿ. ಹಾಗೆ ವಿಡಿಯೋವನ್ನು ಹೆಚ್ಚಾಗಿ ಎಲ್ಲರಿಗೂ ಶೇರ್ ಮಾಡಿರಿ. ಧನ್ಯವಾದಗಳು.