ಕನ್ಯಾ ರಾಶಿ ನವೆಂಬರ್ ಮಾಸ ಭವಿಷ್ಯ

0

ಕನ್ಯಾರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಪಾಸಿಟಿವ್ ವಾತಾವರಣವಿದೆ. ರಾಹುಕೇತುವಿನ ಬದಲಾವಣೆಯಿಂದ ಅಡ್ಡಿಆತಂಕಗಳು, ಅಷ್ಟಮ ಸ್ಥಾನದಲ್ಲಿ ಗುರು ಇರುವುದು ನಿಮಗೆ ತೊಂದರೆಯಾಗುತ್ತದೆ. ಏನೇ ಅಡ್ಡಿಗಳಿದ್ದರೂ ಅದನ್ನೆಲ್ಲಾ ಮೀರಿಸುವ ಅದ್ಭುತವಾದ ಶಕ್ತಿ ಇದೆ. ಎರಡು ಪ್ರಬಲ ಗ್ರಹಗಳು ದುಡ್ಡಿಗೆ ಸಂಬಂಧಪಟ್ಟಂತೆ ನಿಮ್ಮನ್ನು ಕಾಪಾಡಲು ಮುಂದೆ ಬರುತ್ತವೆ.

ಕನ್ಯಾರಾಶಿಯವರಿಗೆ ಎದುರುಗಡೆ ಶತೃಗಳು ಇರುವುದಿಲ್ಲ, ಒಳಗಡೆ ಇದ್ದುಕೊಂಡು ಕಾಲು ಎಳೆಯುವುದು, ಹೀಯಾಳಿಸುವುದು, ಚುಚ್ಚುಮಾತುಗಳನ್ನ ಆಡುವುದು ಇಂತಹವರು ನಿಮಗೆ ಇರುತ್ತಾರೆ. ನಿಮ್ಮ ಬೆಳವಣಿಗೆಗೆ ಇಂತಹ ವ್ಯಕ್ತಿಗಳ ಪ್ರೇರಣೆಯಿಂದ ಆಗುತ್ತದೆ. ಸಂಚು ಮಾಡಿ ವಂಚನೆ ಮಾಡುವವರು ನಿಮಗೆ ಈ ತಿಂಗಳು ಹೆಚ್ಚಾಗಿರುತ್ತಾರೆ.

ಕೇತು ನಿಮ್ಮ ರಾಶಿಗೆ ಬಂದಿರುವುದು ವ್ಯತಿರಿಕ್ತ ಬದಲಾವಣೆಯನ್ನು ಉಂಟುಮಾಡುತ್ತದೆ. ಕೆಲವರು ನಿಮ್ಮ ಜೊತೆ ಇದ್ದುಕೊಂಡೇ ನಿಮ್ಮನ್ನು ಘಾಸಿಗೊಳಿಸುವ ಸಾಧ್ಯತೆ ಇರುತ್ತದೆ. ಈ ತಿಂಗಳಿನಲ್ಲಿ ಬಹಳಷ್ಟು ಒಳ್ಳೆಯ ಪರಿವರ್ತನೆಗಳು ಇವೆ. ಶುಕ್ರನು ವ್ಯಯ ಭಾಗದಲ್ಲಿ ಇರುತ್ತಾನೆ. ಸಿಂಹರಾಶಿಯಲ್ಲಿರುವುದರಿಂದ ವಸ್ತ್ರ, ಧನ ಕನಕ ಇಂತಹ ವ್ಯಾಪಾರ ಮಾಡುವಂತಹ ವ್ಯಕ್ತಿಗಳಿಗೆ ಶುಭಫಲ ಸಿಗುತ್ತದೆ.

ದಾಂಪತ್ಯ ಜೀವನವು ಚೆನ್ನಾಗಿ ಇರುತ್ತದೆ. ಹೊರಗಡೆ ಊಟಕ್ಕೆ ಹೋಗುವ ಅವಕಾಶಗಳು, ದೂರಪ್ರಯಾಣದ ಯೋಗ ಶುಕ್ರನಿಂದ ಸಿಗುತ್ತದೆ. ಸಣ್ಣ ಪುಟ್ಟ ಖರ್ಚಾದರೂ ಅದರಿಂದ ಸಂತೋಷ ಸಿಗುತ್ತದೆ. ಸ್ನೇಹಿತರ ಜೊತೆ ದೂರ ಪ್ರಯಾಣ ಬೆಳೆಸಿ ಖುಷಿಯಾಗಿರುತ್ತೀರಿ. ನಿಮಗೆ 16ನೇ ತಾರೀಖು ಬಹಳ ಮುಖ್ಯವಾದ ದಿನಾಂಕವಾಗಿದೆ. ಎರಡು ಗ್ರಹಗಳ ಪರಿವರ್ತನೆಯಾಗುತ್ತದೆ.

ಸಂಬಳದಲ್ಲಿ ಏನಾದರೂ ಸಮಸ್ಯೆ ಬರಬಹುದು. 16ನೇ ತಾರೀಖಿನ ನಂತರ ನಿಮಗೆ ಬರಬೇಕಾದ ದುಡ್ಡು ಕೈ ಸೇರುತ್ತದೆ. ಕನ್ಯಾ ರಾಶಿ ಎಲ್ಲರಿಗೂ ಶುಭವಾಗುತ್ತದೆ ಏಕೆಂದರೆ ರವಿ ಮತ್ತು ಕುಜ ಗ್ರಹಗಳು ತೃತೀಯ ಭಾಗದಲ್ಲಿದೆ. ರಿಯಲ್ ಎಸ್ಟೇಟ್, ಉದ್ಯಮದವರಿಗೆ, ಸಿಇಓಗಳಿಗೆ, ವ್ಯವಹಾರದಲ್ಲಿರುವವರಿಗೆ, ನಾಯಕರಿಗೆ ರವಿ ಮತ್ತು ಕುಜಗ್ರಹಗಳು ಒಳ್ಳೆಯ ಫಲಗಳನ್ನು ಕೊಡುತ್ತವೆ.

ಉದ್ಯೋಗಿಗಳಿಗೆ ಒಂದು ರೀತಿಯ ಶಕ್ತಿಯನ್ನು ಕೊಡುತ್ತಾನೆ. ಕೆಲಸ ಮಾಡಲು ತುಂಬಾ ಉತ್ಸಾಹವಿರುತ್ತದೆ. ಈ ರಾಶಿಯವರಿಗೆ ಪಾದರಸದಂತೆ ಚುರುಕುತನ ಬರುತ್ತದೆ. 16ನೇ ತಾರೀಖು ಕಳೆದ ನಂತರ ಕೆಲಸಗಳು ಸರಾಗವಾಗಿ ಆಗುತ್ತದೆ. ಬಹಳ ತೀವ್ರಗತಿಯ ಪ್ರಗತಿಯನ್ನು 16ನೇ ತಾರೀಖಿನ ನಂತರ ನಿರೀಕ್ಷೆ ಮಾಡಬಹುದು. ಕೆಲಸ ಇಲ್ಲದ ವ್ಯಕ್ತಿಗಳು ಕಷ್ಟಪಟ್ಟರೇ ಅವರಿಗೂ ಒಳ್ಳೆಯದಾಗುತ್ತದೆ.

ಈ ಸಮಯದಲ್ಲಿ ಗುರು ಅಷ್ಟಮ ಸ್ಥಾನದಲ್ಲಿರುವುದುರಿಂದ ಮಕ್ಕಳ ವಿಚಾರದಲ್ಲಿ ಅಷ್ಟೊಂದು ಸುಖವಿರುವುದಿಲ್ಲ ಮತ್ತು ಅದೃಷ್ಠವು ಕೈಕೊಡುತ್ತದೆ. ಬಿ.ಪಿ ಮತ್ತು ಶುಗರ್ ಇರುವವರಿಗೆ ಸ್ವಲ್ಪ ಹೆಚ್ಚಾಗಬಹುದು. ಮಾನಸಿಕ ಒತ್ತಡ, ಯೋಚನೆಗಳು ಹೆಚ್ಚಾಗುವ ಸಂಭವವಿರುತ್ತದೆ. ಸಮಾಧಾನವಿರುವುದಿಲ್ಲ ಮತ್ತು ಸಂಶಯವು ಮೂಡುತ್ತಿರುತ್ತದೆ ಇಂತಹ ಆಲೋಚನೆಗಳನ್ನು ಮಾಡಬೇಡಿ ಒಳ್ಳೆಯದನ್ನೇ ಯೋಚನೆ ಮಾಡಿದರೇ ಒಳ್ಳೆಯದೇ ಆಗುತ್ತದೆ.

ದೇವರ ಆರಾಧನೆಯನ್ನು ಮಾಡಿದರೇ ಒಳ್ಳೆಯ ಫಲಗಳನ್ನು ಪಡೆಯುತ್ತೀರಿ. ಹೆಚ್ಚಾಗಿ ಆಲೋಚನೆಯನ್ನ ಮಾಡುವುದನ್ನ ಕಡಿಮೆ ಮಾಡಿ. ನೀವು ನಿಮ್ಮ ಮತ್ತು ನಿಮ್ಮ ಸುತ್ತಮುತ್ತಲಿನವರ ಮೇಲೆ ನಂಬಿಕೆ ಇಟ್ಟುಕೊಳ್ಳಿ ಆಗ ಒಳ್ಳೆಯ ವಾತಾವರಣವು ನಿರ್ಮಾಣವಾಗುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ವಿಶ್ವಾಸಕ್ಕೆ ಪಾತ್ರರಾಗಿರಿ. ನಿಮಗೆ ಸಮಯ ಸಿಕ್ಕಾಗ ಸಣ್ಣ ಸಣ್ಣ ದೇವರ ಮಂತ್ರಗಳನ್ನು ಹೇಳಿಕೊಳ್ಳುತ್ತಾ ಬನ್ನಿ, ರವಿ, ಕುಜ, ಶುಕ್ರರಿಂದ ಒಳ್ಳೆಯ ವಾತಾವರಣ ಸೃಷ್ಠಿಯಾಗುತ್ತದೆ.

Leave A Reply

Your email address will not be published.