ನೀವು ಹುಟ್ಟಿದ ವಾರ ಹೇಳುತ್ತದೆ ನಿಮ್ಮ ಬದುಕಿನ ರಹಸ್ಯವನ್ನು

ನೀವು ಹುಟ್ಟಿದ ವಾರ ಹೇಳುತ್ತದೆ ನಿಮ್ಮ ಬದುಕಿನ ರಹಸ್ಯವನ್ನು… ನೀವು ಹುಟ್ಟಿದ ವಾರ ಎಂಬುದರ ಮೇಲೆ ನಿಮ್ಮ ಭವಿಷ್ಯ ಹೇಗಿರುತ್ತದೆಂಬುದನ್ನು ತಿಳಿಯಬಹುದು. ನೀವು ಯಾವ ದಿನದಲ್ಲಿ ಹುಟ್ಟಿದರೆ ಏನು ಫಲ, ಯಾವ ವಾರದಲ್ಲಿ ಜನಿಸಿದವರು ಅದೃಷ್ಟವಂತರಾಗಿರುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ವ್ಯಕ್ತಿಯ

ಜನ್ಮ ದಿನಾಂಕ, ಗ್ರಹಗಳು, ರಾಶಿಗಳು, ನಕ್ಷತ್ರಗಳು ಹುಟ್ಟಿದ ದಿನದಷ್ಟೇ ಮಹತ್ತ್ವವನ್ನು ಹೊಂದಿದೆ. ವಾರದ ಪ್ರತಿಯೊಂದು ದಿನವೂ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಪ್ರತಿದಿನ ಜನಿಸಿದ ವ್ಯಕ್ತಿಯು ವಿಭಿನ್ನ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಆ ವ್ಯಕ್ತಿಯ ಹುಟ್ಟಿದ ದಿನವನ್ನು ನೋಡಿ ಅವನ ಭವಿಷ್ಯವನ್ನು ಅಲ್ಲದೆ ಆ ವ್ಯಕ್ತಿಯು ಭವಿಷ್ಯದಲ್ಲಿ ಯಾವ ರೀತಿ ಏಳಿಗೆಗಳನ್ನು ಹೊಂದುತ್ತಾನೆ ಎಂಬುದನ್ನು ತಿಳಿಯಬಹುದು. ನೀವು ಹುಟ್ಟಿದ ವಾರ ಅಥವಾ ದಿನ ಮತ್ತು ಗಳಿಗೆ ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದು ತಿಳಿಯೋಣ.

ಭಾನುವಾರ: ಈ ದಿನದಂದು ಜನಿಸಿದವರು ಆಶಾವಾದಿಗಳಾಗಿರುತ್ತಾರೆ. ಅಂತಹ ವ್ಯಕ್ತಿಗಳು ಎಲ್ಲದರಲ್ಲೂ ಗೆಲುವನ್ನು ಪಡೆಯುತ್ತಾರೆ. ಅವರ ಜೀವನದಲ್ಲಿ ನಿಧಾನವಾದರೂ ಅಪಾರವಾದ ಅದೃಷ್ಟವನ್ನು ಹೊಂದಿರುತ್ತಾರೆ. ಈ ದಿನ ಹುಟ್ಟಿದವರು ಕಲೆ ಸಾಹಿತ್ಯ ಶಿಕ್ಷಣ ಕ್ಷೇತ್ರದಲ್ಲಿ ಗೌರವವನ್ನು ಪಡೆಯುತ್ತಾರೆ. ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸಂತೋಷವಾಗಿರಲು ಬಯಸುತ್ತಾರೆ. ಸಾಮಾಜಿಕವಾಗಿ ಅಂತರ್ಮುಖಿಗಳಾಗಿರುತ್ತಾರೆ. ಇವರಿಗೆ ಧರ್ಮ ಕಾರ್ಯಗಳಲ್ಲಿಯೂ ಆಸಕ್ತಿ ಇರುತ್ತದೆ.

ಸೋಮವಾರ: ಈ ದಿನ ಜನಿಸಿದವರು ತುಂಬಾ ಶ್ರೀಮಂತರಲ್ಲದಿರಬಹುದು. ಆದರೇ ತೀರ ಕಡುಬಡವರಾಗಿ ಇರುವುದಿಲ್ಲ. ಇವರು ಸಾಮಾನ್ಯವಾಗಿ ಶಾಂತ ಸ್ವಭಾವದವರಾಗಿದ್ದು ತುಂಬಾ ಸಂತೋಷವಾಗಿರುತ್ತಾರೆ. ಈ ದಿನ ಜನಿಸಿದವರು ಸುಲಭವಾಗಿ ಯಾರಿಂದಲೂ ಪ್ರಭಾವಿತರಾಗುವುದಿಲ್ಲ. ಇವರು ಸಂತೋಷ ಮತ್ತು ದುಃಖ ಎರಡನ್ನು ಸಮಾನ ರೀತಿಯಲ್ಲಿ ಸ್ವೀಕರಿಸುತ್ತಾರೆ. ಇವರಿಗೆ ಬಾಲ್ಯದಲ್ಲಿ ಶಿಕ್ಷಣದಲ್ಲಿ ಆಸಕ್ತಿ ಇರುವುದಿಲ್ಲ ಆದರೆ ಕ್ರಮೇಣ ದೊಡ್ಡವರಾದಂತೆ ಇವರು ಬುದ್ಧಿವಂತಿಕೆಗೆ ಹೆಸರುವಾಸಿಯಾಗುತ್ತಾರೆ.

ಮಂಗಳವಾರ: ಈ ವಾರದಂದು ಜನಿಸಿದವರು ಕಟ್ಟುನಿಟ್ಟಾದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಇವರು ಬಹಳ ಮಹತ್ವಾಕಾಂಕ್ಷೆಯುಳ್ಳವರಾಗಿರುತ್ತಾರೆ ಮತ್ತು ಕೆಲವೊಮ್ಮೆ ಇವರ ಸ್ವಭಾವವು ಉಗ್ರವಾಗಿರುತ್ತದೆ. ಇವರು ಸಾಮಾನ್ಯವಾಗಿ ಎಲ್ಲ ವಿಷಯಗಳಲ್ಲಿ ತಮ್ಮದೇ ಆದ ನಿಲುವನ್ನು ಹೊಂದಿರುತ್ತಾರೆ. ಇವರ ಈ ಸ್ವಭಾವಗಳಿಂದಾಗಿ ಸುತ್ತಮುತ್ತಲಿನ ಜನರೊಂದಿಗೆ ಇವರ ಸಂಬಂಧ ಆಗಾಗ ತೊಂದರೆಗೊಳಗಾಗುವ ಸಂಭವವಿರುತ್ತದೆ. ಈ ಜನರು ಜೀವನದುದ್ದಕ್ಕೂ ಅಹಂಕಾರವನ್ನು ಹೊಂದಿರುತ್ತಾರೆ.

ಬುಧವಾರ: ಈ ವಾರದಂದು ಜನಿಸಿದವರು ಬುದ್ಧಿವಂತರಾಗಿರುತ್ತಾರೆ. ಕಲೆಯತ್ತ ಹೆಚ್ಚು ಒಲವು ತೋರಿಸುತ್ತಾರೆ. ಅಂತಹ ವ್ಯಕ್ತಿಗಳು ಮಹಾನ್ ಸಂಗೀತಗಾರರಾಗಿರುತ್ತಾರೆ. ಈ ದಿನ ಜನಿಸಿದವರು ತುಂಬಾ ಸುಲಭವಾಗಿ ಸಂಪತ್ತನ್ನು ಪಡೆಯುದರೊಂದಿಗೆ ದೊಡ್ಡ ಪ್ರಮಾಣದ ಹಣವನ್ನು ಪಡೆಯುತ್ತಾರೆ. ಸ್ವಭಾವತಃ ತುಂಬಾ ಹಠಮಾರಿಯಾಗಿರುತ್ತಾರೆ. ಇವರಿಗೆ ದೇವರ ಬಗ್ಗೆ ಅಪಾರವಾದ ಭಯ, ಭಕ್ತಿ ಇರುವುದರಿಂದ ನಕಾರಾತ್ಮಕ ಆಲೋಚನೆಗಳು ಮತ್ತು ಕಾರ್ಯಗಳಿಂದ ಅವರನ್ನು ದೂರವಿರಿಸುತ್ತದೆ. ಜೊತೆಗೆ ಸಭ್ಯ ವಿನಮ್ರ ಸ್ವಭಾವದವರಾಗಿದ್ದು ಹೆತ್ತವರ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೀತಿ ಇರುತ್ತದೆ. ಅಲ್ಲದೆ ಅವರ ಗುರಿ ಮತ್ತು ದಾರಿ ಅವರಿಗೆ ತಿಳಿದಿರುವುದರಿಂದ ಯಾರೂ ಅವರನ್ನು ಮರಳು ಮಾಡುವುದು ಅಷ್ಟು ಸುಲಭವಲ್ಲ.

ಗುರುವಾರ: ಈ ವಾರ ಜನಿಸಿದವರು ನ್ಯಾಯ ನೀತಿಯನ್ನು ಪ್ರೀತಿಸುತ್ತಾರೆ. ತುಂಬಾ ಶ್ರಮ ಜೀವಿಗಳಾಗಿರುತ್ತಾರೆ. ಇಂತಹ ವ್ಯಕ್ತಿಗಳು ಸರಳ ಜೀವನವನ್ನು ನಡೆಸುತ್ತಾರೆ. ಇವರಿಗೆ ದುಂದು ವೆಚ್ಚ ಮಾಡುವುದರಲ್ಲಿ ಯಾವ ಆಸಕ್ತಿ ಇರುವುದಿಲ್ಲ. ಇಂತಹ ವ್ಯಕ್ತಿಗಳು ತಮ್ಮದೇ ಆದ ತತ್ತ್ವ ಸಿದ್ಧಾಂತವನ್ನು ಹೊಂದಿರುತ್ತಾರೆ. ಕಠಿಣ ಪರಿಶ್ರಮದಿಂದ ಯಶಸ್ವಿಯಾಗುತ್ತಾರೆ. ಈ ದಿನದಂದು ಜನಿಸಿದ ವ್ಯಕ್ತಿಗೆ ಲೌಖಿಕ ಸುಖಗಳ ಬಗ್ಗೆ ಯಾವುದೇ ಮೋಹ ಅಥವಾ ದುರಾಸೆ ಇರುವುದಿಲ್ಲ. ಅದೃಷ್ಟ ಯಾವಾಗಲೂ ಅವರಿಗೆ ಅನುಕೂಲಕರವಾಗಿರುತ್ತದೆ.

ಶುಕ್ರವಾರ: ಈ ವಾರದಂದು ಜನಿಸಿದವರು ತುಂಬಾ ಉದಾರಿಗಳು ಮತ್ತು ಕರುಣಾಮಯಿಗಳು ಇರುತ್ತಾರೆ. ಅವರು ಸಂತೋಷ ಮತ್ತು ಗೌರವಯುತ ಜೀವನವನ್ನು ನಡೆಸುತ್ತಾರೆ. ನೀವು ನಿರಂತರವಾಗಿ ಕೆಲಸ ಮಾಡಬೇಕು ಏಕೆಂದರೆ ತಪ್ಪು ಮಾರ್ಗದಲ್ಲಿ ಹಣವನ್ನು ಗಳಿಸಲು ಸಾಧ್ಯವಿಲ್ಲ. ಈ ದಿನ ಹುಟ್ಟಿದ ವ್ಯಕ್ತಿಗಳು ತಮ್ಮ ಮಾತಿನ ಮೋಡಿಯಿಂದ ಇತರರ ಮೇಲೆ ಅಗಾಧವಾದ ಪ್ರಭಾವ ಬೀರುತ್ತಾರೆ. ಇವರು ಸಾಕಷ್ಟು ತಾಳ್ಮೆಯುಳ್ಳವರಾಗಿರುತ್ತಾರೆ. ಅದರೊಂದಿಗೆ ಕಷ್ಟದ ಸಮಯವನ್ನು ಉತ್ತಮ ರೀತಿಯಲ್ಲಿ ಎದುರಿಸುತ್ತಾರೆ. ಜಗತ್ತಿನ ಶ್ರೇಷ್ಠ ವೈದ್ಯರು, ಶ್ರೇಷ್ಠ ಸಮಾಜಶಾಸ್ತ್ರಜ್ಞರು ಮತ್ತು ಶಿಕ್ಷಣ ತಜ್ಞರಂತಹ ವ್ಯಕ್ತಿಗಳು ಈ ದಿನದಂದು ಜನಿಸಿರುವುದು ವಿಶೇಷ.

ಶನಿವಾರ: ಈ ವಾರ ಜನಿಸಿದವರು ತಮ್ಮ ಹೆಸರನ್ನು ಹೇಳದೆ ಇಹಲೋಕ ತ್ಯಜಿಸುವುದಿಲ್ಲ. ಈ ದಿನ ಹುಟ್ಟಿದವರು ಸುಲಭವಾಗಿ ಜಾಗ ಬಿಡುವುದಿಲ್ಲ. ಸಂಪತ್ತಿನ ವಿಷಯದಲ್ಲಿ ನೀವು ತುಂಬಾ ಭಾಗ್ಯಶಾಲಿಗಳು. ನೀವು ಯಶಸ್ಸು ಸಂತೋಷ ಮತ್ತು ಮಹತ್ತ್ವಾಕಾಂಕ್ಷೆಯಾಗಿ ಕಷ್ಟಪಟ್ಟು ಹೋರಾಡಲು ಸಿದ್ಧರಾಗಿರುತ್ತೀರಿ. ಅವರ ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಕೆಲವೊಮ್ಮೆ ದುಃಖ ಎರಡನ್ನು ಅನುಭವಿಸುತ್ತಲೇ ಇರುತ್ತಾರೆ. ನೀವು ಜಗತ್ತನ್ನು ಮುನ್ನಡೆಸುವ ಶಕ್ತಿಯನ್ನು ಹೊಂದಿರುತ್ತೀರಿ. ನೀವು ಯಾವಾಗಲೂ ಪೋಷಕರು ಮತ್ತು ಒಡಹುಟ್ಟಿದವರೊಂದಿಗೆ ಬಿಗಡಾಯಿಸಿದ ಸಂಬಂಧವನ್ನು ಹೊಂದಿರುತ್ತೀರಿ.

Leave a Comment