ಮಿಥುನ ರಾಶಿ ನವೆಂಬರ್ ಮಾಸ ಭವಿಷ್ಯ

0

ನವೆಂಬರ್ ತಿಂಗಳಿನ ಮಿಥುನ ರಾಶಿಯ ಮಾಸ ಭವಿಷ್ಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ರಾಹು ಮೀನರಾಶಿಯಲ್ಲಿ ಪರಿವರ್ತನೆಯಾಗುತ್ತಾನೆ. ಕೇತು ಕನ್ಯಾರಾಶಿಯಲ್ಲಿ ಪರಿವರ್ತನೆಯಾಗುತ್ತಾನೆ. ದಶಾಭಾವದಲ್ಲಿ ರಾಹು ಇದ್ದು ಒಳ್ಳೆಯದ್ದನ್ನ ಮಾಡುತ್ತಾನೆ. ಚತುರ್ಥದಲ್ಲಿ ಕೇತು ಇರುತ್ತಾನೆ ಸ್ವಲ್ಪ ಕಿರಿಕಿರಿಯನ್ನು ತಂದರೂ ರಾಹುವಿನಿಂದಾಗಿ ವಿಶೇಷವಾಗಿ

ನಿಮ್ಮ ಕ್ಷೇತ್ರದಲ್ಲಿ ಕಾರ್ಯಸಿದ್ಧಿಯಾಗುತ್ತದೆ. ಮಿಥನ ರಾಶಿಯವರಿಗೆ ಬಹಳಷ್ಟು ಪ್ರಗತಿಯಾಗುವ ಯೋಗವಿದೆ. ಮುನ್ನೆಚ್ಚರಿಕೆಯ ಕ್ರಮವೇನೆಂದರೆ ನೀವು ಯಾವುದೇ ತಪ್ಪುಗಳನ್ನು ಮಾಡಿಕೊಳ್ಳಬೇಡಿ ಮತ್ತು ಹೆಸರು ಕೆಡಿಸಿಕೊಳ್ಳುವಂತಹ ಕೆಲಸಗಳನ್ನು ಮಾಡಿಕೊಳ್ಳಬೇಡಿ. ಮೇಲ್ದರ್ಜೆಯ ಹುದ್ಧೆಯಲ್ಲಿದ್ದರೇ ಯಾವುದೋ ಆಸೆಯಿಂದ ತಪ್ಪುಗಳಿಗೆ ಸಿಲುಕಿಕೊಳ್ಳಬಾರದು. ಕೆಲಸ ಕಾರ್ಯಗಳಲ್ಲಿ ಅದ್ಭುತವಾದ ಯಶಸ್ಸು ಸಿಗುತ್ತದೆ. ಶುಕ್ರ ಮತ್ತು ಬುಧ ಎರಡು ಗ್ರಹಗಳು ಪರಿವರ್ತನೆಯಾಗುತ್ತದೆ.

2ನೇ ತಾರೀಖಿಗೆ ಶುಕ್ರ ಗ್ರಹ ಕನ್ಯಾರಾಶಿಗೆ ಬರುತ್ತದೆ, ನೀಚ ಸ್ಥಾನ ಅದು ಶುಕ್ರ ಸುಖ ಸ್ಥಾನದಲ್ಲಿ ನಿಮಗೆ ಒಳ್ಳೆಯದ್ದನ್ನೇ ಮಾಡುತ್ತದೆ. ಹಾಗೆಯೇ ಬುಧ ಗ್ರಹವು ವೃಶ್ಚಿಕಕ್ಕೆ ಚಲಿಸುತ್ತದೆ. ಬುಧ ಗ್ರಹವು ಯಶಸ್ಸನ್ನು ತಂದುಕೊಡುತ್ತದೆ. ಯೋಜನೆಗಳನ್ನು ರೂಪಿಸಿ ಸಕ್ಸಸ್ ಅನ್ನು ಪಡೆದುಕೊಳ್ಳಲು ಬುಧ ಗ್ರಹವು ಪೂರಕವಾಗಿರುತ್ತದೆ. ನವೆಂಬರ್ ತಿಂಗಳಿನಲ್ಲಿ ಹಂತ ಹಂತವಾಗಿ ಯೋಜನೆಯನ್ನ ರೂಪಿಸಿ

ಕೆಲಸ ಕಾರ್ಯವನ್ನು ಮಾಡುತ್ತೀರ ಮತ್ತು ಕೆಲಸದಲ್ಲಿ ಅಚ್ಚುಕಟ್ಟುತನವಿರುತ್ತದೆ. ಚುರುಕುತನದಿಂದ ಕೆಲಸವನ್ನು ಬಹಳ ಬೇಗ ಮುಗಿಸುತ್ತೀರಿ. ಉದ್ಯೋಗ ಅಥವಾ ಕೆಲಸದಲ್ಲಿ ಯಶಸ್ಸು ಕಾಣಲು ರಾಹು ಅದಕ್ಕೆ ಪೂರಕವಾಗಿರುವಂತೆ ಮಾಡುತ್ತಾನೆ. ಬುಧ ನಿಮ್ಮ ಬುದ್ಧಿ ಒಂದೇ ಕಡೆ ಕೇಂದ್ರೀಕರಣವಾಗುವಂತೆ ಮಾಡುತ್ತಾನೆ. ಬುಧನು ವಿದ್ಯಾರ್ಥಿಗಳಿಗೆ ಓದಲು ಆಸಕ್ತಿ ಮೂಡುವಂತೆ ಮಾಡುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮಾಡುತ್ತಿರುವವರಿಗೆ ಒಳ್ಳೆಯ ಅವಕಾಶವಿದೆ. ಶುಕ್ರನು ನೀಚ ರಾಶಿಯಲ್ಲಿದ್ದರೂ ನಿಮಗೆ ಸಂತೋಷವನ್ನು ತಂದುಕೊಡುತ್ತಾನೆ. ಶುಕ್ರ ಗ್ರಹಕ್ಕೆ ಚತುರ್ಥ ಭಾವದಲ್ಲಿ ಶುಭವನ್ನೇ ಕೊಡುವ ಗುಣವಿದೆ. ಕೇತು ಇರುವುದರಿಂದ ಸ್ವಲ್ಪ ಕಿರಿಕಿರಿ ಉಂಟು ಮಾಡುತ್ತಾನೆ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತಾಯಿಯ ಜೊತೆ ಉತ್ತಮವಾದ ಬಾಂಧವ್ಯವನ್ನು ಹೊಂದುವ ಸಮಯ ಇದಾಗಿರುವುದರಿಂದ ಸುಖ,

ಶಾಂತಿ, ನೆಮ್ಮದಿ ಸಿಗುತ್ತದೆ. ಶುಕ್ರ ಗ್ರಹದಿಂದ ಏನೆಲ್ಲಾ ಲಾಭಗಳು ಆಗುತ್ತವೆಂದರೆ ಸ್ನೇಹಿತರೆಲ್ಲರೂ ಒಟ್ಟಾಗಿ ಮಾತನಾಡಿಕೊಂಡು ಹೊರಗಡೆ ಸುತ್ತಾಡುವ ಅವಕಾಶ ಬರಲಿದೆ ಮತ್ತು ಸಣ್ಣ ಪುಟ್ಟ ಹರಟೆಯಿಂದ ಸಂತೋಷ ಸಿಗುತ್ತದೆ. ಜೊತೆಗೆ ಹೊಸ ಸ್ನೇಹಿತರು ನಿಮಗೆ ಸಿಗುವ ತಿಂಗಳು ಇದಾಗಿದೆ ಮತ್ತು ಹಾಸ್ಯ, ಮನೋರಂಜನೆ ಸಿಗುತ್ತದೆ. ರವಿ ಮತ್ತು ಕುಜ ಗ್ರಹಗಳು ಜೊತೆಯಲ್ಲೇ ಸಾಗುತ್ತಿರುತ್ತವೆ.

16ನೇ ತಾರೀಖು ಇವೆರೆಡು ಗ್ರಹಗಳು ಪರಿವರ್ತನೆಯಾಗುತ್ತದೆ. ವೃಶ್ಚಿಕ ರಾಶಿಯಿಂದ ಮಿಥುನ ರಾಶಿಗೆ ಶಷ್ಠ ಭಾವವಾಗುತ್ತದೆ. 16ನೇ ತಾರೀಖಿನ ವರೆಗೆ ಸರ್ಕಾರಿ ಕೆಲಸದಲ್ಲಿ ವಿಳಂಬವಾಗುತ್ತದೆ. ರಿಯಲ್ ಎಸ್ಟೇಟ್, ರಿಜಿಸ್ಟ್ರೇಷನ್ ಗೆ ಒಳ್ಳೆಯ ಸಮಯ ಇದಾಗಿರುವುದಿಲ್ಲ. ಸ್ವಲ್ಪ ಕೆಲಸ ಕಾರ್ಯಗಳು ಮುಂದು ಹೋಗುತ್ತದೆ. 16ನೇ ತಾರೀಖು ಕಳೆದ ನಂತರ ಕೆಲಸ ಕಾರ್ಯಗಳಲ್ಲಿ ಯಶಸ್ಸು,

ಪ್ರಗತಿ ಉಂಟಾಗುತ್ತದೆ. ಸರ್ಕಾರಿ ಕೆಲಸ, ಜಮೀನು, ಆಸ್ತಿ ನೊಂದಣಿ, ವ್ಯಾಜ್ಯಗಳಿಂದ ಬಿಡುಗಡೆ ಸಿಗುವಂತದ್ದು, ನಿಮ್ಮ ಎದುರಾಳಿಗಳನ್ನು ನೀವು ಮಟ್ಟ ಹಾಕುವ ಶಕ್ತಿ ನಿಮ್ಮಲ್ಲಿ ಬರುತ್ತದೆ. ಶತೃ ನಾಶ, ಕೆಲಸ ಕಾರ್ಯಗಳಲ್ಲಿ ಜಯ ಸಿಗುತ್ತದೆ. ಹಣದ ಸಮಸ್ಯೆ ನಿವಾರಣೆಯಾಗಿ ಅರ್ಥಿಕ ಮಟ್ಟ ಸುಧಾರಣೆಯಾಗುತ್ತದೆ. ಗುರುವಿನ ಅನುಗ್ರಹವಿದೆ. ಶನಿ ಭಾಗ್ಯದಲ್ಲಿ ವಕ್ರನಾಗಿರುವುದರಿಂದ ಸ್ವಲ್ಪ ಮಟ್ಟಿಗೆ ಕಿರಿಕಿರಿ ಇರುತ್ತದೆ ಆ ಕಿರಿಕಿರಿಯು ಬಿಡುಗಡೆಯಾಗಿ ನೆಮ್ಮದಿಯೂ ಸಿಗುತ್ತದೆ. 16ನೇ ತಾರೀಖಿನ ನಂತರ ನೀವು ಏನು ಮಾಡಬೇಕೆಂದು ಅಂದುಕೊಂಡಿರುತ್ತೀರೋ ಅದನ್ನೆಲ್ಲಾ ಮಾಡಿದರೇ ಜಯ ಸಿಗುತ್ತದೆ.

Leave A Reply

Your email address will not be published.