ಹೊಸಲಿನ ಮುಂದೆ ಚಪ್ಪಲಿಯನ್ನು ಯಾವ ಕಡೆ ಬಿಟ್ಟರೇ ಏನು ನಡೆಯುತ್ತದೆ ಗೊತ್ತಾ? ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಯಾವುದೋ ಒಂದು ಗ್ರಹಕ್ಕೆ ಅವಿನಾಭಾವ ಸಂಬಂಧವಿರುತ್ತದೆ. ನಾವು ತೊಡುವ ಚಪ್ಪಲಿಗೆ ಸಹ ಸಂಬಂಧವಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಾವು ತೊಡುವ ಚಪ್ಪಲಿಗೆ ಶನಿ ಗ್ರಹದ ಸಂಬಂಧವಿರುತ್ತದೆಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗುತ್ತದೆ.
ಶನಿಗ್ರಹದ ವಕ್ರದೃಷ್ಠಿ ಬಿದ್ದಿರುವವರು ಚಪ್ಪಲಿಯನ್ನು ದಾನಮಾಡಬೇಕೆಂದು ಜ್ಯೋತಿಷ್ಯರು ಹೇಳುತ್ತಾರೆ. ಎಷ್ಟೇ ಪೂಜೆ ಪುನಸ್ಕಾರ ಮಾಡಿದರೂ ಕಷ್ಟಗಳು ಹೆಚ್ಚಾಗುತ್ತಿರುತ್ತವೆ. ನಮ್ಮ ಸಮಸ್ಯೆಗಳಿಗೆ ಕಾರಣ ನಮ್ಮ ಪಾದರಕ್ಷೆಗಳು ಆಗಿರಬಹುದು. ನಮ್ಮ ಪೂರ್ವಿಕರು ಪಾದರಕ್ಷೆಗಳ ಬಗ್ಗೆ ತುಂಬಾ ಹೇಳಿದ್ದಾರೆ. ಮನುಷ್ಯನ ಪಾದಗಳೇ ಅವನ ಗಮ್ಯವನ್ನು ತಿಳಿಸುತ್ತವೆ. ಎರಡು ಪಾದರಕ್ಷೆಗಳು ಒಂದೇ ಸೈಜ್ ನಲ್ಲಿರಬೇಕು.
ಚಪ್ಪಲಿಯನ್ನು ಕಳ್ಳತನ ಮಾಡಿದ್ದಲ್ಲಿ ಅಥವಾ ಯಾರಾದರೂ ಗಿಫ್ಟ್ ಕೊಟ್ಟಿದ್ದನ್ನು ಯಾರು ಹಾಕಿಕೊಳ್ಳಬಾರದು. ಇದು ನಿಮ್ಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಯಾವುದೇ ತರಹದ ಸಹಾಯವನ್ನು ಮಾಡುವುದಿಲ್ಲ. ದುರಾದೃಷ್ಠಕ್ಕೆ ದಾರಿ ಮಾಡಿಕೊಡುತ್ತದೆ. ಸಂದರ್ಶನಕ್ಕೆ ಹೋಗುವ ವೇಳೆ ಕಿತ್ತ ಹೋಗಿರುವ ಶೂ ಅಥವಾ ಹಾಳಾಗಿರುವ ಶೂ ಅನ್ನು ಬಳಸಬಾರದು.
ಅದು ನಿಮ್ಮ ಅದೃಷ್ಠವನ್ನು ದುರಾದೃಷ್ಠವನ್ನಾಗಿ ಮಾಡುತ್ತದೆ. ಕಿತ್ತು ಹೋಗಿರುವ ಶೂ ನಿಮ್ಮ ಅದೃಷ್ಠಕ್ಕೆ ಅಡ್ಡವಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಚಪ್ಪಲಿ ಸ್ಟ್ಯಾಂಡ್ ಇಡುವುದು ಸೂಕ್ತವಲ್ಲ. ಬೆಳಗಿನ ಜಾವ ಸೂರ್ಯ ಕಿರಣಗಳು ಈ ಜಾಗದಲ್ಲಿ ಬೀಳುತ್ತವೆ ಆಗ ಮನೆಯ ಒಳಗಡೆ ಪಾಸಿಟಿವ್ ಎನರ್ಜಿ ಪ್ರವೇಶ ಮಾಡುತ್ತವೆ. ಆದ್ದರಿಂದ ಚಪ್ಪಲಿ ಸ್ಟ್ಯಾಂಡ್ ಅನ್ನು ಬೇರೆ ಕಡೆ ಇಡಬೇಕು.
ಮನೆಗೆ ಪ್ರವೇಶ ಮಾಡಿದ ಮೇಲೆ ಬಲಭಾಗದಲ್ಲಿ ಶೂ ಬಿಚ್ಚಬೇಕು ಮತ್ತು ಮುಖ್ಯವಾದ ವಿಷಯ ಶೂ ಅನ್ನು ಯಾವುದೇ ಕಾರಣಕ್ಕೂ ನೇತಾಕಬಾರದು. ಹೀಗೆ ನೇತಾಕುವುದರಿಂದ ಮೃತ್ಯು ಬರುವ ಸಂಭವವಿದೆ ಹಾಗೂ ನೀವು ಮಾಡುವ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗಬಹುದು. ಕುಟುಂಬ ಸದಸ್ಯರಿಗೆ ಅನಾರೋಗ್ಯ ಕಾಡುತ್ತದೆ. ಒಂದು ಶೂ ಮೇಲೆ ಮತ್ತೊಂದು ಶೂ ಅನ್ನು ಇಡಬಾರದು.
ಇದರಿಂದ ಪಾಸಿಟಿವ್ ಎನರ್ಜಿ ಉಂಟಾಗಿ ತೊಂದರೆ ಸಂಭವಿಸಬಹುದು. ಮನೆಯಲ್ಲಿ ಯಾರಾದರೂ ಸತ್ತು ಹೋದರೇ ಅವರ ಚಪ್ಪಲಿಯನ್ನು ದಾನ ಮಾಡಬೇಕು ಅಥವಾ ಮಣ್ಣಿನಲ್ಲಿ ಹೂಳಬೇಕು. ಅದು ಮನೆಯಲ್ಲಿ ಇರುವುದು ಒಳ್ಳೆಯದಲ್ಲ. ಶೂ ಅಥವಾ ಚಪ್ಪಲಿಯನ್ನು ಬೆಡ್ ಅಥವಾ ಟೇಬಲ್ ಮೇಲೆ ಇಡಬೇಡಿ. ಶೂ ಅಥವಾ ಚಪ್ಪಲಿಯನ್ನು ಹಾಕಿಕೊಂಡು ಊಟ ಮಾಡುವ ಅಭ್ಯಾಸ ಒಳ್ಳೆಯದಲ್ಲ.
ನಾವು ಕಷ್ಟಪಡುವುದು 3 ಹೊತ್ತು ಊಟಕ್ಕೆ ಹಾಗಾಗಿ ನಾವು ತಿನ್ನುವ ಆಹಾರವನ್ನ ದೂರಮಾಡಿಕೊಳ್ಳಬಾರದು. ಏಕೆಂದರೆ ಅನ್ನ ಅನ್ನಪೂರ್ಣೇಶ್ವರಿಗೆ ಸಮಾನ ಆದ್ದರಿಂದ ಶೂ ಬಿಚ್ಚಿ ತಿನ್ನುವುದು ಒಳ್ಳೆಯದು. ಹೊರಗಡೆ ಹೋಗಿ ತಿಂದರೂ ಶೂ ಅನ್ನು ಬಿಚ್ಚಿಟ್ಟು ತಿನ್ನಿ. ಚಪ್ಪಲಿಯನ್ನು ಕಳ್ಳತನ ಮಾಡಿದರೇ ಒಳ್ಳೆಯದು ಆಗುತ್ತದೆಂಬ ಮೂಢನಂಬಿಕೆ ಇದೆ.
ದೇವಸ್ಥಾನದಲ್ಲಿ ಚಪ್ಪಲಿ ಕಳತನವಾದರೇ ಒಳ್ಳೆಯದು ಎನ್ನುತ್ತಾರೆ. ಆದರೇ ಇದು ಚರ್ಮದಿಂದ ತಯಾರಿಸಿದ ಚಪ್ಪಲಿಗಳಿಗೆ ಅನ್ವಯಿಸುತ್ತದೆ. ಏಕೆಂದರೆ ಶನಿ ಗ್ರಹದ ಪ್ರಭಾವ ಚರ್ಮದ ಮೇಲೆ ಹೆಚ್ಚು ಇರುತ್ತದೆ. ಆದ್ದರಿಂದ ಚರ್ಮದಿಂದ ಮಾಡಿದ ಪಾದರಕ್ಷೆಗಳು ಶನಿಗ್ರಹದ ಸ್ಥಾನವಾಗಿದೆ. ಚರ್ಮದಿಂದ ಮಾಡಿದ ಚಪ್ಪಲಿಯನ್ನು ಕಳೆದುಕೊಂಡ ವ್ಯಕ್ತಿ ಶನಿ ಪ್ರಭಾವದಿಂದ ಮುಕ್ತನಾಗುತ್ತಾನೆಂದು ಹೇಳುತ್ತಾರೆ.
ಇದರಿಂದ ಜನರಲ್ಲಿ ಚಪ್ಪಲಿ ಕಳೆದುಹೋದರೇ ಒಳ್ಳೆಯದಾಗುತ್ತದೆಂಬ ನಂಬಿಕೆ ಇದೆ. ಒಂದು ಸಲ ಚಪ್ಪಲಿಯನ್ನು ಹಾಕಿಕೊಂಡು ಮನೆ ಒಳಗೆ ಹೋದರೇ ನಾವೇ ಬ್ಯಾಕ್ಟೇರಿಯಾವನ್ನು ನಾವೇ ಮನೆ ಒಳಗೆ ತೆಗೆದುಕೊಂಡು ಹೋಗುತ್ತಿದ್ದೀವಿ ಎಂದರ್ಥ. ಇದರಿಂದ ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದರೇ ಅವರ ಆರೋಗ್ಯ ಕೆಡುತ್ತದೆ. ನಮ್ಮ ಹಿರಿಯರು ಹೇಳುವುದು ನಮ್ಮ ಒಳ್ಳೆಯದಕ್ಕಾಗಿಯೇ ಅದನ್ನು ನಾವು ಅರ್ಥ ಮಾಡಿಕೊಂಡು ನಡೆದರೇ ನಮಗೇ ಒಳ್ಳೆಯದಾಗುತ್ತದೆ.