ಹೊಟ್ಟೆ ಉಬ್ಬರ ಅಥವಾ ಗ್ಯಾಸ್ಟ್ರಿಕ್. ನೂರಕ್ಕೆ ತೊಂಭತ್ತು ಪರ್ಸೆಂಟ್ ಜನರಲ್ಲಿ ಹೊಟ್ಟೆ ಉಬ್ಬರ ಸಮಸ್ಯೆ ಇರುತ್ತದೆ. ಎಲ್ಲಾ ಎಲ್ಲಾ ವಯಸ್ಸಿನವರು ಈ ಸಮಸ್ಯೆಯಿಂದ ಬಳಲುತ್ತಾರೆ. 5- 6 ವರ್ಷದ ಮಕ್ಕಳಲ್ಲಿಯೂ ಹೊಟ್ಟೆ ಉಬ್ಬರ, ನೂರು ವರ್ಷದ ಮುದುಕರಿಗೂ ಹೊಟ್ಟೆ ಉಬ್ಬರ. ಹಾಗಾದ್ರೆ ಏನಿದು ಹೊಟ್ಟೆ ಉಬ್ಬರ? ಯಾಕ್ ಆಗುತ್ತೆ? ಏನ್ ಸಮಸ್ಯೆ? ತಿಳಿದುಕೊಳ್ಳೋಣ ಬನ್ನಿ.
ಏನೇನೋ ಮೆಡಿಸಿನ್ಸ್ ತಗೋಳೋದು, ಏನೇನೋ ವಿಚಿತ್ರ ಟೆಸ್ಟ್ ಗಳನ್ನ ಮಾಡಿಸೋದು, ಯಾವುದೇ ಟೆಸ್ಟ್ ಮಾಡಿದ್ರೂ ಎಲ್ಲಾ ನಾರ್ಮಲ್ ಬರುತ್ತೆ. ಎಲ್ಲಾ ನಾರ್ಮಲ್ ಇದ್ರುನು ಕೂಡ ಇದ್ಯಾಕೆ ಆಗುತ್ತೆ? ಇದಕ್ಕೆ ಕಾರಣ ಏನು? ಇದಕ್ಕೆ ಲಕ್ಷಣ ಏನು? ಏನಾದ್ರು ಇದಕ್ಕೆ ಮನೆ ಮದ್ದು ಇದೆಯಾ? ಚಿಕಿತ್ಸೆ ಇದೆಯಾ? ಅದನ್ನು ತಿಳಿದುಕೊಳ್ಳೋಣ.
ಹೊಟ್ಟೆ ಉಬ್ಬರ ಇದೆಯಲ್ಲ ಇದು ಅಗ್ನಿಮಾಂದ್ಯದಿಂದ ಆಗುವಂತ ಕಾಯಿಲೆ. ಅಗ್ನಿಮಾಂದ್ಯ ಅಂದ್ರೆ ಏನು? ಜೀರ್ಣ ಶಕ್ತಿ ಕಡಿಮೆ ಆಗೋದು. ಹೊಟ್ಟೆಯಲ್ಲಿ ಅಗ್ನಿ ಇರುತ್ತದೆ. ಅಗ್ನಿ ಅಂದ್ರೆ ಡೈಜೆಸ್ಟೆಂಜಾಯ್ಸ್ ಎಕಾರ್ಡಿಂಗ್ ಟು ಮಾಡರ್ನ್ ಸೈನ್ಸ್, ನಮ್ಮ ಪ್ರಕಾರ ನಾವು ಜಠರಾಗ್ನಿ ಅಂತ ಹೇಳುತ್ತೇವೆ. ಯಾವುದೋ ಕಾರಣದಿಂದ ಹೊಟ್ಟೆಯಲ್ಲಿ ಇರುವಂತಹ ಅಗ್ನಿ ಜಠರಾಗ್ನಿ ಮಾಂದ್ಯ ಆಗಿರತ್ತೆ. ಮಾಂದ್ಯ ಆದಾಗ ಈ ತರಹದ ಹೊಟ್ಟೆ ಉಬ್ಬರ ಸಮಸ್ಯೆ ಬರುತ್ತದೆ.
ಹೇಗೆ ಬರುತ್ತೆ ಅಂದ್ರೆ, ಅಲ್ಲಿ ಆಕ್ಚುಲಿ ಮೆಕ್ಯಾನಿಸಂ ಏನಾಗುತ್ತೆ ಅಂದ್ರೆ ನಾವು ತಿಂದಂತಹ ಆಹಾರ ಮೂರು ತಾಸಿನ ಒಳಗಡೆ ಜೀರ್ಣ ಆಗ್ಬೇಕು. ಆಗಿಲ್ಲ ಅಂದ್ರೆ ಏನಾಗ್ತದೆ ಅದನ್ನು ಒಂದು ಪ್ರಾಕ್ಟಿಕಲ್ ಆಗಿ ನೀವು ಮಾಡಿ ನೋಡಬಹುದು. ಇವತ್ತು ಮಧ್ಯಾಹ್ನದ ಊಟಕ್ಕೆ ನೀವು ಏನು ಊಟ ಮಾಡ್ತೀರಿ ಉಪ್ಪು, ಉಪ್ಪಿನಕಾಯಿ, ಅನ್ನ, ಸಾಂಬಾರ್, ಚಪಾತಿ, ಪಲ್ಯ, ಚಟ್ನಿ, ಕೋಸಂಬರಿ, ಮೊಸರನ್ನ.
ಮಜ್ಜಿಗೆ ಸಿಂಪಲ್ ಫುಡ್. ಎಲ್ಲವನ್ನು ಒಂದು ಸ್ಟೀಲ್ ಪಾತ್ರೆಯಲ್ಲಿ ಹಾಕಿ ಮುಚ್ಚಿ ಮೂರು ತಾಸು ಇಡಿ. ಪ್ರಿಡ್ಜ್ ನಲ್ಲಿ ಇಡಬೇಡಿ ಹೊರಗೆ ಇಡಿ. ಮೂರು ತಾಸು ಮುಚ್ಚಿಡಿ. ಏನಾಗುತ್ತೆ ಮೂರು ತಾಸಿಗೆ ಕೊಳಿಲಿಕ್ಕೆ ಸ್ಟಾರ್ಟ್ ಆಗುತ್ತೆ ಅದು. ಹೌದಲ್ವಾ ಕೊಳೀತದೆ. ಕೊಳಿತಾದ ಮೇಲೆ ಏನಾಗುತ್ತೆ? ಕೊಳಿತಿರುವಂತಹ ಪದಾರ್ಥಗಳಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಗ್ಯಾಸ್ ಉತ್ಪತ್ತಿಯಾಗಿ ಅಲ್ಲಿ ಡಿಕಾಂಪೋಸ್ ಆಗ್ಬಿಟ್ಟು ಪರ್ಮಲ್ಟೇಶನ್ ಆಗಿ ಅಲ್ಲಿ ಆಸಿಡ್ ಉತ್ಪತ್ತಿಯಾಗುತ್ತದೆ.
ತಿಪ್ಪೆ ನೋಡಿದಿರಾ, ತಿಪ್ಪೆಯಲ್ಲಿ ಏನಾಗುತ್ತೆ ಅಂದ್ರೆ ಕೆಲವೊಮ್ಮೆ ತನ್ನಷ್ಟಕ್ಕೆ ತಾನೇ ಬೆಂಕಿ ಹತ್ಕೊಳುತ್ತೆ. ಯಾಕಂದ್ರೆ ಆ ತಿಪ್ಪೆಯಲ್ಲಿ ಇರತಕ್ಕಂತಹ ಪದಾರ್ಥಗಳು ಕೊಳೆತು ಹೀಟ್ ಪ್ರೊಡ್ಯೂಸ್ ಆಗಿ ತನ್ನಷ್ಟಕ್ಕೆ ತಾನೇ ಬೆಂಕಿ ಹತ್ಕೊಳುತ್ತೆ. ಆತರ ಹೊಟ್ಟೆನಲ್ಲಿ ಹಾಗೆ ಆಗೋದು. ಮೂರು ತಾಸಿನ ಒಳಗಡೆ ಅನ್ನ, ತಿಂದಿರುವಂತಹ ಆಹಾರ ಜೀರ್ಣ ಆಗದೆ ಇದ್ರೆ ಏನಾಗುತ್ತೆ, ಅಲ್ಲಿ ಕೊಳಿಲಿಕ್ಕೆ ಸ್ಟಾರ್ಟ್ ಆಗ್ತದೆ. ಕೊಳ್ತು ಕೊಳ್ತು ಗೋಬರ್ ಗ್ಯಾಸ್ ಉತ್ಪತ್ತಿ ಆಗುತ್ತೆ. ಉತ್ಪತ್ತಿಯಾಗಿರೋ ಗ್ಯಾಸ್ ಹೊರಗಡೆ ಹೋಗಬೇಕು.
ಹೇಗೆ ಅಂದ್ರೆ, ಅಧೋಮಾರ್ಗದಲ್ಲಿ, ಅನುಲೋಮ ಗತಿಯಲ್ಲಿ. ಅಂದ್ರೆ ಕೆಳಗಿನ ಮಾರ್ಗದ ಮುಖಾಂತರ ಆ ಗ್ಯಾಸು ಹೊರಗೆ ಹೋದದ್ದೇ ಆದಲ್ಲಿ ಏನು ತೊಂದರೆ ಇಲ್ಲ. ಆದರೆ ಸರ್ವೇ ಸಾಮಾನ್ಯವಾಗಿ ಈ ಒಂದು ಹೊಟ್ಟೆ ಉಬ್ಬರ ಕಾಯಿಲೆ ಇರುವಂತಹ ಜನರಲ್ಲಿ ಮಲಬದ್ಧತೆ ಇರುತ್ತದೆ. ಅವರಿಗೆ ಮೋಶನ್ನು ಕೂಡ ಕ್ಲಿಯರ್ ಆಗಿ ಪಾಸ್ ಆಗಿರಲ್ಲ. ಕರುಳಿನಲ್ಲಿ ಮಲ ಹಾಗೆ ಕಟ್ಟಿಕೊಂಡಿರುತ್ತೆ.
ಕಟ್ಕೊಂಡಿದ್ದಾಗ ಹೊಟ್ಟೆಯಲ್ಲಿ ಉತ್ಪತ್ತಿ ಆಗಿರುವಂತಹ ವಾಯು, ಗ್ಯಾಸ್ ಇದೆಯಲ್ಲ ಅದು ಕೆಳಗೆ ಹೋಗೋದಕ್ಕೆ ಜಾಗ ಇರೋದಿಲ್ಲ. ಡ್ರೈನೇಜ್ ಪೈಪ್ ಬ್ಲಾಕ್ ಆಗಿರುತ್ತೆ. ಡ್ರೈನೇಜ್ ಪೈಪ್ ಬ್ಲಾಕ್ ಆದಾಗ, ಗ್ಯಾಸು ಕೆಳಗಡೆಯಿಂದ ಹೋಗದೆ ಇದ್ದಾಗ, ಅದೇನ್ ಮಾಡ್ತದೆ ರಿವರ್ಸ್ ಬರ್ತದೆ. ಯಾವುದೋ ಒಂದು ದಾರಿ ಹುಟ್ಕೋಬೇಕಲ್ಲ ಹೊರಗೆ ಬರಲಿಕ್ಕೆ ಅದು.
ಆವಾಗ ರಿವರ್ಸ್ ಬರ್ತದೆ. ರಿವರ್ಸ್ ಬಂದು ಎದೆ ಮುಖಾಂತರ, ಗಂಟಲಿನ ಮುಖಾಂತರ ಎಲ್ಲ ವಾಲ್ವ್ಸ್ ಇರತ್ತೆ. ನಾನ್ ರಿಟರ್ನ್ ವಾಲ್ವ್. ಆಕ್ಚುಲಿ ಅದು ನಾವು ತಿಂದಂತಹ ಆಹಾರ ಒನ್ ವೇ ನಲ್ಲಿ ಹೋಗ್ಬೇಕು, ಕೆಳಗಡೆ ಹೋಗ್ಬೇಕು, ಮೇಲಕ್ಕೆ ಬರಬಾರದು ಅದಕ್ಕೋಸ್ಕರ ಹೊರಕ್ಕೆ ಬರಲ್ಲ. ಯಾಕಂದ್ರೆ ನಾನ್ ರಿಟರ್ನ್ ವಾಲ್ವ್ ಇರ್ತದೆ ಅವುಗಳ ವಿರುದ್ಧ ದಿಕ್ಕಿನಲ್ಲಿ ಗಾಳಿ ಹೊರಗೆ ಬರಲಿಕ್ಕೆ ಟ್ರೈ ಮಾಡುತ್ತೆ. ಹೊರಗೆ ಬರಲಿಕ್ಕೆ ಸರಾಗವಾದ ಜಾಗ ಇರೋದಿಲ್ಲ.
ಸೋ ಒಟ್ಟಿನಲ್ಲಿ ಉತ್ಪತ್ತಿಯಾಗಿರುವಂತಹ ಗಾಳಿಗೆ ಹೊರಗಡೆ ಕೆಳಗಡೆ ಇಂದನು ಹೋಗಲಿಕ್ಕೆ ಸಾಧ್ಯ ಇಲ್ಲ, ಮೇಲ್ಗಡೆ ಹೋಗ್ಲಿಕು ಸಾಧ್ಯ ಇಲ್ಲ. ಅವಾಗ ಏನಾಗುತ್ತೆ, ಹೊಟ್ಟೆ ಬಲೂನ್ ತರ ಉಬ್ಬಿಕೊಳ್ಳತ್ತೆ, ಟೈಟ್ ಆಗುತ್ತೆ, ಟೈಟ್ ಆಗಿ ಮೇಲಕ್ಕೆ ಲಂಗ್ಸ್ ಗೆ ಒತ್ತತ್ತೆ. ಕೆಲವರಿಗೆ ಕೆಮ್ಮು ಬರ್ತದೆ, ಕೆಲವರಿಗೆ ಎದೆಭಾರ ಆಗುತ್ತದೆ, ಕೆಲವರಿಗೆ ಹಾರ್ಟ್ ತೊಂದ್ರೆ ಆಗುತ್ತದೆ, ಕೆಲವರಿಗೆ ಹಾರ್ಟ್ ಹೊಡ್ಕೊಂಡಂಗೆ ಆಗುತ್ತೆ, ಕೆಲವರಿಗಂತೂ ಗಾಳಿ ಹಿಂದಕ್ಕೆ ಹೋದ್ರೆ ಬೆನ್ನು ನೋವು ಬರುತ್ತದೆ,
ಕೆಲವರಿಗೆ ಪಕ್ಕೆ ನೋವು ಬರುತ್ತದೆ. ಇಷ್ಟೆಲ್ಲಾ ಸಮಸ್ಯೆಗಳನ್ನ ಹೊಟ್ಟೆಉಬ್ಬರ ಕ್ರಿಯೇಟ್ ಮಾಡುತ್ತದೆ. ವಿಪರೀತ ನೋವು, ವಿಪರೀತ ಟೈಟ್ನೆಸ್, ವಿಪರೀತ ಅಸಮಾಧಾನ, ವಿಪರಿತ ಸುಸ್ತು, ಆಲಸ್ಯ, ಜೀವನ ಸಾಕಪ್ಪ ಸಾಕು ಅನ್ನುವಷ್ಟು ಹಿಂಡಿ ಹಿಪ್ಪೆ ಮಾಡ್ಬಿಡತ್ತೆ ಈ ಹೊಟ್ಟೆ ಉಬ್ಬರ ಕಾಯಿಲೆ. ಸೊ ಇದು ಮುಖ್ಯ ಕಾರಣ ಹೊಟ್ಟೆ ಉಬ್ಬರಕ್ಕೆ. ಇಲ್ಲಿ ಕಾರಣಾನೂ ಹೇಳಾಯ್ತು,
ಲಕ್ಷಣಾನೂ ಹೇಳಾಯ್ತು. ಇದಕ್ಕೆಲ್ಲ ಏನಾದರೂ ಪರಿಹಾರ ಇದೆಯಾ? ಖಂಡಿತವಾಗಿಯೂ ಪರಿಹಾರ ಇದೆ. ಅದಕ್ಕೆ ಪರಿಹಾರ ಸುಮ್ಮನೆ ಏನೋ ಒಂದು ಮಾತ್ರೆ ತಗೊಳ್ಳೋದು, ಗ್ಯಾಸ್ಟಿಕ್ ಟ್ಯಾಬ್ಲೆಟ್ಸ್ ನುಂಗೋದು ಮಾಡಿದ್ರೆ ಸಾಕಾಗಲ್ಲ. ನೀವು ಆತರ ಮಾಡ್ತಾ ಹೋದ್ರೆ ಹತ್ತಲ್ಲ, ಇಪ್ಪತ್ತು ವರ್ಷ ಮಾತ್ರ ನುಂಗಿದ್ರೂ ಸರಿ ಹೋಗಲ್ಲ. ಇದಕ್ಕೆ ಚಿಕಿತ್ಸೆ ಏನಪ್ಪಾ ಅಂದ್ರೆ ಅಗ್ನಿ ಮಾಂದ್ಯ ಚಿಕಿತ್ಸೆ.
ದೇಹದಲ್ಲಿ ಅಗ್ನಿ ಮಾಂದ್ಯ ಆಗಿರೋದನ್ನ ವೃದ್ಧಿ ಮಾಡ್ಬೇಕು. ಅಗ್ನಿಯನ್ನ ವೃದ್ಧಿ ಮಾಡ್ಲಿಕ್ಕೆ ಏನು ಚಿಕಿತ್ಸೆ ಇದೆ? ಅದಕ್ಕೆ ಚಿಕಿತ್ಸೆ ನಾಭಿ ಚಿಕಿತ್ಸೆ. ನಾಭಿ ಚಿಕಿತ್ಸೆ ಅಂದ್ರೆ ಹೊಟ್ಟೆಯಲ್ಲಿ ಇರುವಂತಹ ಹೊಕ್ಕಳು ಆಚೆ ಈಚೆ ಸರಿ ಬೇಕು. ಸರಿದಾಗ ಏನಾಗುತ್ತೆ ಅಂದ್ರೆ, ಆ ಒಂದು ಅಗ್ನಿಮಾಂದ್ಯ ಆಗ್ತದೆ. ಹೇಗೆ ಈ ಹೊಕ್ಕಳಿಗೂ, ಅಗ್ನಿ ಮಾಂದ್ಯಕ್ಕೂ ಸಂಬಂಧ? ನೋಡಿ,
ಒಂದು ಸ್ಟವ್ ಇದೆ. ಸ್ಟವ್ ನ ಬರ್ನಲ್ ಇದ್ಯಲ್ಲ ಅದು ಕರೆಕ್ಟ್ 90 ಡಿಗ್ರಿ ಇತ್ತು ಅಂದ್ರೆ ಬ್ಲೂ ಪ್ಲೇಮ್ ಬರ್ತದೆ. ಬ್ಲೂಪ್ಲೆಮಿನಲ್ಲಿ ಅನ್ನವನ್ನು ಇಟ್ಟಾಗ ಚೆನ್ನಾಗಿ ಬೇಯುತ್ತದೆ. ಒಂದು ವೇಳೆ ಸೊಟ್ಟ ಆಗಿ ಬರ್ನಲ್ ಸೊಟ್ಟ ಆದರೆ ರೆಡ್ ಪ್ಲೇಮ್ ಬರುತ್ತದೆ. ರೆಡ್ ಪ್ಲೇಮ್ ನಲ್ಲಿ ಅನ್ನ ಯಾವುದೇ ಕಾರಣಕ್ಕೂ ಸರಿಯಾಗಿ ಬೇಯುವುದಿಲ್ಲ. ಅದೇ ತರ ನಾಭಿ ತನ್ನ ಸ್ವಸ್ಥಾನದಿಂದ ಆಚೆ ಈಚೆ ಸ್ಥಾನಪಲ್ಲಟ ಮಾಡಿದಾಗ ಏನಾಗುತ್ತದೆ ಅಂದ್ರೆ ಅಗ್ನಿಮಾಂದ್ಯ ಆಗ್ತದೆ. ಬ್ಲೂ ಫ್ಲೇಮ್ ಇರಂಗಿಲ್ಲ, ರೆಡ್ ಪ್ಲೇಮ್ ಆಗ್ತದೆ.
ರೆಡ್ ಪ್ಲೇಮ್ ಆದಾಗ ಅಂದ್ರೆ ಅಗ್ನಿ ಮಾಂದ್ಯ ಆದಾಗ ನಾವು ತಿಂದಿರುವಂತಹ ಆಹಾರ ಮೂರು ತಾಸಿನಲ್ಲಿ ಜೀರ್ಣ ಆಗುವುದಿಲ್ಲ. ಅಲ್ಲೇ ತಿಂದಿರುವಂತಹ ಆಹಾರ ಕೊಳೆಯುತ್ತದೆ. ಕೊಳೆತು ಗೋಬರ್ ಗ್ಯಾಸ್ ಉತ್ಪತ್ತಿಯಾಗುತ್ತದೆ. ಕೆಳಗೆ ಹೋಗಲಿಕ್ಕೆ ಜಾಗ ಇರಲ್ಲ, ಮೇಲೆ ಹೋಗಲಿಕ್ಕು ಜಾಗ ಇರಲ್ಲ. ತ್ರಾಸ್ ಕೊಡತ್ತೆ. ಸೋ ಆ ನಾಭೀ ಚಿಕಿತ್ಸೆಯ ಮುಖಾಂತರ ನಾಭಿಯನ್ನ ಕರೆಕ್ಟ್ ಪೋಸಿಶನ್ ಗೆ ಸೆಟ್ ಮಾಡಿದಾಗ ಅಗ್ನಿ ವೃದ್ಧಿಯಾಗುತ್ತದೆ. ಬ್ಲೂ ಫ್ಲೇಮ್ ಆಗುತ್ತದೆ.
ತಿಂದಂತಹ ಆಹಾರ 3 ತಾಸಿನೊಳಗಡೆ ಜೀರ್ಣವಾಗಿ ಕೆಳಗೆ ಕರುಳಿಗೆ ಹೋಗುತ್ತೆ, ಹೊಟ್ಟೆಯಲ್ಲಿ ಇರಲ್ಲ. ಹೊಟ್ಟೆಯಲ್ಲಿ ಏನು ಇಲ್ಲವೇ ಇಲ್ಲ ಅಂದ್ರೆ ಗ್ಯಾಸ್ ಉತ್ಪತ್ತಿ ಹೇಗೆ ಆಗುತ್ತೆ? ಕೊಳೀಲಿಕ್ಕೆ ಆಹಾರವೇ ಇಲ್ಲ ಅಂದ್ರೆ ಗ್ಯಾಸ್ ಉತ್ಪತ್ತಿಯಾಗುವಂತಹ ಒಂದು ಸನ್ನಿವೇಶನೇ ಕ್ರಿಯೇಟ್ ಆಗಲ್ಲ. ಸೋ ನಾಭಿ ಚಿಕಿತ್ಸೆ ದಿ ಬೆಸ್ಟ್ ಟ್ರೀಟ್ಮೆಂಟ್ ಈ ಹೊಟ್ಟೆ ಉಬ್ಬರಕ್ಕೆ. ಆ ನಾಭೀ ಚಿಕಿತ್ಸೆಯನ್ನು ಮಾಡಿಸಿಕೊಂಡ ನಂತರ ಅಗ್ನಿ ವೃದ್ಧಿ ಆಗಲಿಕ್ಕೆ ಕೆಲವೊಂದು ಔಷಧಿಗಳನ್ನು ತಗೋಬಹುದು.
ಔಷಧ ಬೇಡ ಅಂತ ಅಂದ್ರೆ ಮನೆಯಲ್ಲೇ ಸಿಗುವಂತಹ ಮನೆ ಮದ್ದುಗಳನ್ನ ಬಳಸಬಹುದು. ಶುಂಠಿ ಕಾಫಿ, ಶುಂಠಿಯಿಂದ ಮಾಡಿರುವಂತಹ ಕಷಾಯವನ್ನು ಅಂದ್ರೆ ಎರಡು ಲೋಟ ನೀರಿಗೆ ಒಂದು ರೂಪಾಯಿ ಕಾಯಿನ್ ಅಷ್ಟು ಹಸಿ ಶುಂಠಿಯನ್ನು ಹಾಕಿ, ಸ್ವಲ್ಪ ಬೆಲ್ಲವನ್ನು ಹಾಕಿ ಕುದಿಸಿ ಎರಡು ಲೋಟ ನೀರನ್ನು ಒಂದು ಲೋಟ ನೀರಿಗೆ ತರಿಸಿ ಅದನ್ನು ಕುಡಿಯುವುದರಿಂದ ಅಗ್ನಿ ವೃದ್ಧಿಯಾಗುತ್ತದೆ. ಆವಾಗ ನಾವು ತಿಂದಿರುವಂತಹ ಆಹಾರ ಮೂರು ತಾಸಿನ ಒಳಗಡೆ ಜೀರ್ಣವಾಗಿ
ಕರುಳಿಗೆ ಬಂತು ಅಂದ ತಕ್ಷಣ ಅಲ್ಲಿ ಗ್ಯಾಸ್ ಉತ್ಪತ್ತಿ ಆಗಲ್ಲ, ಹೊಟ್ಟೆ ಉಬ್ಬರ ಆಗಲ್ಲ. ಅದಕ್ಕಾಗಿ ಶುಂಠಿ ದಿ ಬೆಸ್ಟ್. ಸೊ ಶುಂಠಿಯನ್ನ ವಿಶ್ವಭೇಷಜ ಅಂತ ಹೇಳ್ತಾರೆ. ಭೇಷಜ ಅಂತಂದ್ರೆ ಔಷಧಿ. ವಿಶ್ವದಲ್ಲೇ ಅತಿ ಪ್ರಾಮುಖ್ಯತೆಯನ್ನು ಪಡೆದಿರುವಂತಹ ಔಷಧಿ ಅಂದ್ರೆ ಶುಂಠಿ ಎಂದು ಒಂದು ಶ್ಲೋಕದಲ್ಲಿ ಎಕ್ಸ್ ಪ್ಲೇನ್ ಮಾಡಲಾಗಿದೆ. ಸೋ ಈ ಶುಂಠಿಯನ್ನ ಬಳಕೆ ಮಾಡುವುದರಿಂದ ಅಗ್ನಿಯನ್ನ ವೃದ್ಧಿ ಮಾಡಬಹುದು. ಬಟ್ ನಾಭಿ ಚಿಕಿತ್ಸೆಯ ನಂತರ ಮಾತ್ರ ಪ್ರಯೋಜನ ಆಗೋದು. ಬಿಫೋರ್ ದೇಟ್ ನೀವು ಪ್ರಯೋಗ ಮಾಡಿದ್ರೆ ತಾತ್ಕಾಲಿಕವಾಗಿ ಶಮನ ಆಗ್ತದೆ, ಆದರೆ ನಂತರ ಮತ್ತೆ ಶುರು ಆಗಬಹುದು. ಅದಕ್ಕೆ ನಮ್ಮ ಆಯುರ್ವೇದದ ಪದ್ಧತಿಯಲ್ಲಿ ನಾಭೀ ಚಿಕಿತ್ಸೆಯನ್ನು ಮಾಡಿಕೊಳ್ಳುವುದರಿಂದ ನಾವು ಹೊಟ್ಟೆ ಉಬ್ಬರವನ್ನು ನಿವಾರಣೆ ಮಾಡ್ಲಿಕ್ಕೆ ಅವಕಾಶ ಇದೆ.