ಕನ್ಯಾರಾಶಿಯವರಿಗೆ ಶುರುವಾಯ್ತು ಒಳ್ಳೆಯ ಸಮಯ

0

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯವರಿಗೆ 2024ರಲ್ಲಿ ಭಾರಿ ಸಿಹಿ ಸುದ್ದಿ ಬರುತ್ತದೆ ಎಂಬುದನ್ನು ಲೇಖನದಲ್ಲಿ ನೋಡೋಣ. ಈ ರಾಶಿಯವರಿಗೆ 2020 ರಿಂದ ಪಟ್ಟಿರುವ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಎಂದು ಹೇಳಬಹುದು.ಆದರೆ 2024ರಲ್ಲಿ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಕನ್ಯಾ ರಾಶಿಯವರಿಗೆ . ಯಾವ ಯಾವ ಗ್ರಹಗಳು ಯಾವ ರೀತಿ ನಿಮಗೆ ಶುಭ ಫಲ ಕೊಡುತ್ತಾರೆ ಎಂದು ನೋಡೋಣ. ಯಾವ ಗ್ರಹಗಳಿಂದ ನಿಮಗೆ ಬಿಡುಗಡೆ ಸಿಗುತ್ತದೆ, ಹೇಗೆ ಒಳ್ಳೆಯ ದಿನಗಳು ಬರುತ್ತದೆ ,ಎಂಬುದನ್ನು ನೋಡೋಣ.

ಮೊದಲನೆಯದಾಗಿ ಕನ್ಯಾ ರಾಶಿಯವರಿಗೆ 2ನೇ ಸ್ಥಾನದಲ್ಲಿ ಕೇತು ಇದ್ದ 2023ರಲ್ಲಿ. ಧನ ಸ್ಥಾನದಲ್ಲಿ ಕೇತು ಇದ್ದ .ಧನ ಸ್ಥಾನ ಮತ್ತು ಕುಟುಂಬ ಸ್ಥಾನ ಇವೆರಡು ಎಷ್ಟು ಮುಖ್ಯವೆಂದರೆ, ಕುಟುಂಬ ಸ್ಥಾನ ಕೆಟ್ಟಿತು ಅಂದರೆ, ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ. ಕುಟುಂಬದಲ್ಲಿ ವಿಪರೀತ ಖರ್ಚು ನೆಮ್ಮದಿಯ ಕೊರತೆ 2023ರಲ್ಲಿ ಇತ್ತು. ಹಾಗೆನಿಮ್ಮ ರಾಶಿಗೆ ಬರುವುದರಿಂದ ಸಂಸಾರಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ.

ಅದಕ್ಕೆ ಪರಿಹಾರ ಮಾಡಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ. ಕೇತು ನಿಮ್ಮ ರಾಶಿಗೆ ಬರುವುದರಿಂದ ನಿಮ್ಮಲ್ಲಿ ತಾಳ್ಮೆ ಹೆಚ್ಚಾಗುತ್ತದೆ .ದೇವರ ಮೇಲೆ ಭಕ್ತಿ ಹೆಚ್ಚಾಗುತ್ತದೆ. ಉದ್ಯೋಗ ವಿಚಾರದಲ್ಲಿ ಈ ವರ್ಷ ಕೆಲಸ ಹೆಚ್ಚಾಗಿ ಸಿಗುತ್ತದೆ. ಶನಿ ಹೆಚ್ಚಿನ ಕೆಲಸ ಮಾಡಿಸುವುದರ ಮೂಲಕ ಶುಭವನ್ನು ತಂದು ಕೊಡುತ್ತಾನೆ. ನೀವು ಒಬ್ಬರೇ ಇದ್ದಾಗ ನಕಾರಾತ್ಮಕ ಆಲೋಚನೆಗಳು ಬರುತ್ತವೆ. ಏಪ್ರಿಲ್ ವರೆಗೂ ಗುರು ಅಷ್ಟಮದಲ್ಲಿ ಇರುತ್ತಾನೆ ,ಅಷ್ಟಮದಲ್ಲಿರುವ ಗುರು ನಿಮಗೆ ಶುಭ ಫಲವನ್ನು ಕೊಡುತ್ತಾನೆ.

ಆದರೆ ಗುರುವಿನ ಜೊತೆಯಲ್ಲಿ ರಾಹು ಇರುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ. ಗುರು ಚಾಂ ಡಾಲ ಯೋಗ ಅನ್ನುವ ಹಾಗೆ ದುಡ್ಡು ಬರುವ ಹಾಗೆ ಅನಿಸುತ್ತದೆ ಆದರೆ ಕೈಗೆ ಸಿಗುವುದಿಲ್ಲ. ಈ ರೀತಿ ಹಣಕಾಸಿನ ವಿಚಾರದಲ್ಲಿ ನಷ್ಟ ಆಗುತ್ತದೆ. ಈ ವರ್ಷ ಏಪ್ರಿಲ್ ವರೆಗೂ ಗುರು ಒಬ್ಬನೇ ಇರುತ್ತಾನೆ. ಗುರುವಿನ ಸಂಪೂರ್ಣ ದೃಷ್ಟಿ ನಿಮ್ಮ ಕುಟುಂಬದ ಮೇಲೆ ಇರುತ್ತದೆ.

ಹಾಗಾಗಿ ಕುಟುಂಬದಲ್ಲಿ ನೆಮ್ಮದಿ ದೊರೆಯುತ್ತದೆ. ಅಭಿವೃದ್ಧಿಯು ಸಹ ಆಗುತ್ತದೆ. ನಂತರ ಗುರು ವೃಷಭಕ್ಕೆ ಹೋಗುತ್ತಾನೆ. ಅಲಿಂದ ನಿಮಗೆ ಒಳ್ಳೆಯ ಸಮಯ ಶುರುವಾಗುತ್ತದೆ. ಅಂದರೆ ವೃಷಭಕ್ಕೆ ಬಂದಂತಹ ಗುರು 9ನೇ ಮನೆಯಲ್ಲಿ ಸ್ಥಿತನಾಗಿರುತ್ತಾನೆ. ಈ ಒಂಬತ್ತನೇ ಮನೆ ಎಂದರೆ ಅದೃಷ್ಟ ಸ್ಥಾನ ಮತ್ತು ಭಾಗ್ಯ ಸ್ಥಾನ ಎಂದು ಹೇಳಲಾಗುತ್ತದೆ. ಭಾಗ್ಯ ಸ್ಥಾನಕ್ಕೆ ಬಂದಂತೆ ಗುರುವಿನ ದೃಷ್ಟಿ ನಿಮ್ಮ ರಾಶಿಯ ಮೇಲೆ ಇರುತ್ತದೆ. ನಿಮ್ಮ ರಾಶಿಯಿಂದ ಪಂಚಮಕ್ಕೆ ಹೋಗುತ್ತಾನೆ.

ಕನ್ಯಾ ರಾಶಿಯವರಿಗೆ ಯಾರು ಯಾರಿಗೆ ವಿವಾಹ ನಿಧಾನವಾಗುತ್ತಿದೆ .ವಿವಾಹಕ್ಕೆ ತಡೆಯಾಗುತ್ತಿದೆ ವಿವಾಹ ವಿಘ್ನವಾಗುತ್ತಿದೆ ಇವೆಲ್ಲ ಬಗೆಹರಿದು ಕನ್ಯಾ ರಾಶಿಯವರಿಗೆ ಮೇ ತಿಂಗಳನಿಂದ ಕಂಕಣ ಬಲ ಕೂಡಿ ಬರುತ್ತದೆ. ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಈ ವರ್ಷದಂದು ವಿದೇಶಕ್ಕೆ ಹೋಗುವ ಅವಕಾಶ ಸಿಗುತ್ತದೆ. ಕನ್ಯಾರಾಶಿ ಅವರಿಗೆ ಶನಿ ಕೂಡ ಶುಭಫಲವನ್ನು ನೀಡುತ್ತಾನೆ.

ಇನ್ನು ರಾಹು ಕೇತುಗಳು ಶುಭ ಅನ್ನುವುದಕ್ಕಿಂತ ಒಳ್ಳೆಯ ಫಲಗಳನ್ನು ನೀಡುತ್ತದೆ.ಹಾಗೆಯೇ ಕೇತುವಿನಲ್ಲಿ ಗುರುವಿನ ದೃಷ್ಟಿ ಬಿದ್ದರೆ ಅಥವಾ ಗುರುವಿನ ಮೇಲೆ ಕೇತುವಿನ ದೃಷ್ಟಿ ಬಿದ್ದರೆ ಅವರು ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಾರೆ. ಮಹಾನ್ ಜ್ಞಾನವನ್ನು ಪಡೆಯುತ್ತಾರೆ .ಈ ಕನ್ಯಾ ರಾಶಿಯು 2024ರಲ್ಲಿ ಎಲ್ಲಾ ಗ್ರಹಗಳಿಂದ ಶುಭಫಲವನ್ನು ಪಡೆಯುತ್ತದೆ ಎಂದು ಹೇಳಲಾಗಿದೆ.

Leave A Reply

Your email address will not be published.